Home Cinema ಕುಂದಾಪುರ ಶೆಟ್ರ ಕೈ ತಪ್ಪಿದ ನಕ್ಷತ್ರ, ಹೇಳಿದ್ದ್ಯಾವ ವಿಚಾರ..! “ಶೆಟ್ಟರ ಕೈತಪ್ಪಿದ ನಕ್ಷತ್ರ ಊರು ತುಂಬಾ...

ಕುಂದಾಪುರ ಶೆಟ್ರ ಕೈ ತಪ್ಪಿದ ನಕ್ಷತ್ರ, ಹೇಳಿದ್ದ್ಯಾವ ವಿಚಾರ..! “ಶೆಟ್ಟರ ಕೈತಪ್ಪಿದ ನಕ್ಷತ್ರ ಊರು ತುಂಬಾ ಹೊಳೆಯುತ್ತಿದೆ”…!!!

437
0
SHARE

ರಶ್ಮಿಕಾ ಮಂದಣ್ಣ.. ಕೊಡಗಿನ ಕಿನ್ನರಿ. ಪಡ್ಡೆಗಳ ಪ್ರೀತಿಯ ಸುಂದರಿ. ಅಭಿನಯದ ಜೊತೆ ಅಂದ ಚೆಂದವನ್ನೂ ಹೊಂದಿರುವ ರಶ್ಮಿಕಾ ಮಂದಣ್ಣ ಇದೀಗ ಬರೀ ಕರ್ನಾಟಕಕ್ಕಷ್ಟೇ ಸೀಮಿತವಲ್ಲ. ತೆಲುಗು, ತಮಿಳು ಚಿತ್ರರಂಗದಲ್ಲೂ ಇವ್ರದ್ದೇ ಉತ್ಸವ ನಡೆಯುತ್ತಿದೆ.

ಕನ್ನಡ ಚಿತ್ರರಂಗಕ್ಕಿಂತ, ತೆಲುಗು ಚಿತ್ರರಂಗದಲ್ಲೇ ಕಳೆದು ಹೋಗ್ತಿರುವ ರಶ್ಮಿಕಾ, ಇನ್ನೇನೂ ಡಿಯರ್ ಕಾಮ್ರೇಡ್‌ನೊಂದಿಗೆ ಬರಲು ಸಿದ್ಧವಾಗಿದ್ದಾರೆ. ಅದು, ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ.ಯಸ್, ನಾಲ್ಕು ಭಾಷೆಗಳಲ್ಲಿ ಡಿಯರ್ ಕಾಮ್ರೇಡ್ ಬಿಡುಗಡೆಯಾಗ್ತಿದೆ. ಇದು, ರಶ್ಮಿಕಾ ಮಂದಣ್ಣನ ಇನ್ನಿಲ್ಲದ ಸಂಭ್ರಮಕ್ಕೂ ಕಾರಣವಾಗಿದೆ. ಹಾಗಾಗಿ, ತುಂಬು ಸಂಭ್ರಮದಿಂದನೇ ಕಾಮ್ರೇಡ್ ಕಥೆಯನ್ನ ತೆರೆ ಮೇಲೆ ನೋಡಲು ತುದಿಗಾಲಿನಲ್ಲಿ ನಿಂತಿರುವ ರಶ್ಮಿಕಾ, ಇದೀಗ.. ಇನ್ನೊಂದು ಸಿಹಿಯಾದ ಸುದ್ದಿಯೊಂದಿಗೆ ಸದ್ದು ಮಾಡ್ತಿದ್ದಾರೆ.

ಹೌದು, ರಶ್ಮಿಕಾ ಇದೀಗ ಇನ್ನೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹೀಗೆ ರಶ್ಮಿಕಾ ಆಯ್ಕೆ ಆದ ಚಿತ್ರದ ಹೆಸರೇ ಭೀಷ್ಮ. ಯಸ್.. ರಶ್ಮಿಕಾ ಇದೀಗ ಭೀಷ್ಮನ ಬೆಡಗಿ. ನಿಮಗೆ ಗೊತ್ತಿರಲಿ ಅಸಲಿಗೆ ರಶ್ಮಿಕಾ ನಿನ್ನೆ ಬೆಳ್ಳಂ ಬೆಳ್ಳಿಗ್ಗೆ ಇವತ್ತು ಸಂಜೆ ಒಂದು ಸುದ್ದಿ ಹೇಳ್ತೀನಿ ಕಾಯ್ತಾ ಇರಿ ಆಯ್ತಾ ಅಂಥ ಅಭಿಮಾನಿಗಳಿಗೆ ಹೇಳಿದ್ದರು. ರಶ್ಮಿಕಾ, ಹೀಗೆ ಹೇಳಿದ್ದೇ ತಡ.. ಅಭಿಮಾನಿಗಳೂ ಅದ್ಯಾವಾಗ ಸಂಜೆ ಆಗುತ್ತಪ್ಪ ಅಂಥ ಕಾದು ಕುಂತಿದ್ದರು. ಅಷ್ಟೇ ಅಲ್ಲ ವಿಜಯ್ ದೇವರಕೊಂಡ ಸುತ್ತ ಮುತ್ತ ಹರಿಡಿರುವ ಸುದ್ದಿಯ ಬಗ್ಗೆ ಏನಾದ್ರೂ ಮಾತನಾಡ್ತಾರಾ, ಅನ್ನುವ ಲೆಕ್ಕಾಚಾರನೂ ಹಾಕಿದ್ದರು.

ಆದ್ರೆ ಇದನ್ನೆಲ್ಲಾ ತಲೆ ಕೆಳಗಾಗಿಸಿದ ರಶ್ಮಿಕಾ.. ಭೀಷ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನ ಅಭಿಮಾನಿಗಳಿಗಾಗಿ ಸಂಜೆ ಹಂಚಿಕೊಂಡರು. ಇದು, ರಶ್ಮಿಕಾ ಅಭಿಮಾನಿಗಳಿಗೆ ಗುಲಾಬ್ ಜಾಮೂನ್ ತಿಂದಷ್ಟೇ ಖುಷಿಯನ್ನ ತಂದು ಕೊಟ್ಟಿದೆ.ಇನ್ನೂ ರಶ್ಮಿಕಾ ತನ್ನ ಸಿನಿವೃತ್ತಿಯ ಆರಂಭದಿಂದ್ಲೂ ದೊಡ್ಡ ದೊಡ್ಡ ನಾಯಕರೊಂದಿಗೆ ತೆರೆ ಹಂಚಿಕೊಂಡಾಕೆ. ಇಂಥ ರಶ್ಮಿಕಾ ಇಲ್ಲಿ ಜಯಂ ಖ್ಯಾತಿಯ ನಿತಿನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಇನ್ನೂ ಚಿತ್ರದ ಅಡಿ ಬರಹ ಸಿಂಗಲ್ ಫಾರ್ ಎವರ್. ಅಲ್ಲಿಗೆ ಒಂಟಿ ಹುಡುಗನ ಸುತ್ತ ಸಿನಿಮಾ ಸುತ್ತಲಿದೆ ಅನ್ನುವದಷ್ಟೇ ಸದ್ಯದ ಮಾಹಿತಿ.ಭೀಷ್ಮನಿಗೆ ವೆಂಕಿ ಕುದುಮಲಾ ನಿರ್ದೇಶನವಿರಲಿದೆ. ಅಂದ ಹಾಗೇ ನಿಮಗೆ ಗೊತ್ತಿರಲಿ, ಇದೇ ವೆಂಕಿ ಕುದುಮಲಾ ರಶ್ಮಿಕಾ ಕನ್ನಡದಿಂದ ಕಾಣೆಯಾಗುವಲ್ಲಿ ಮಹತ್ತರ ಪಾತ್ರ ವಹಿಸಿದ ನಿರ್ದೇಶಕ. ಹೌದು, ಕಿರಿಕ್ ಪಾರ್ಟಿಯ ಬಳಿಕ, ರಶ್ಮಿಕಾ ಮೊದಲು ಬಿದ್ದಿದ್ದೇ ನಿರ್ದೇಶಕ ವೆಂಕಿ ಕುದುಮಲಾ ಕಣ್ಣಿಗೆ.

ರಶ್ಮಿಕಾ ಅಭಿನಯಕ್ಕೆ ಅಂದೇ ಕ್ಲೀನ್ ಬೋಲ್ಡ್ ಆಗಿದ್ದ ವೆಂಕಿ ಕುದುಮಲಾ, ಚಲೋ ಅಂಥ ರಶ್ಮಿಕಾರನ್ನ ತೆಲುಗು ಚಿತ್ರರಂಗಕ್ಕೆ ಕರೆದೊಯ್ದಿದ್ದರು. ನಂತ್ರದ್ದೆಲ್ಲಾ ಇದೀಗ ಇತಿಹಾಸ. ಇಂಥ ವೆಂಕಿ ಕುದುಮಲಾ ಇದೀಗ ರಶ್ಮಿಕಾಗೆ ಆಫ್ಟರ್ ಚಲೋ ಮತ್ತೆ ಆಕ್ಷನ್ ಕಟ್ ಹೇಳ್ತಿರೋದು ವಿಶೇಷ.ಅದೇನೆ ಇರ‍್ಲಿ, ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ತಿರುವ ರಶ್ಮಿಕಾ, ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದತ್ತ ತಿರುಗಿ ನೋಡ್ತಾರಾ.. ಅನ್ನುವ ಕೂತುಹಲ ಇದೀಗ ಮತ್ತೆ ಗರಿಗೇದರಿದೆ.

ಕಾರಣ, ರಶ್ಮಿಕಾ ಬೆಳೆದ ಹಾಗೂ ಬೆಳೆಯುತ್ತಿರುವ ಪರಿಯೇ ಆಗಿದೆ. ರಶ್ಮಿಕಾಳ ಇದೇ ಬೆಳವಣಿಗೆಯನ್ನ ನೋಡ್ತಿದ್ದರೆ, ನಮ್ಮ ಕುಂದಾಪುರ ಶೆಟ್ಟರ ಕೈತಪ್ಪಿದ ನಕ್ಷತ್ರ ಊರು ತುಂಬಾ ಹೊಳೆಯುತ್ತಿದೆ ಅಂಥ ನಿಮಗೆ ಅನಿಸಿದ್ರೇ ಅದ್ರಲ್ಲಿ ಅಚ್ಚರಿ ಇಲ್ಲ.

LEAVE A REPLY

Please enter your comment!
Please enter your name here