Home Crime ಕುಡಿದ ಅಮಲಿನಲ್ಲಿ ಲಾರಿ ಚಲಾಯಿಸಿದ ಚಾಲಕ..! ಬಾಲಕನ ಬಲಿ ತೆಗೆದುಕೊಂಡವನಿಗೆ ಹಿಗ್ಗಾಮುಗ್ಗ ಥಳಿತ..!

ಕುಡಿದ ಅಮಲಿನಲ್ಲಿ ಲಾರಿ ಚಲಾಯಿಸಿದ ಚಾಲಕ..! ಬಾಲಕನ ಬಲಿ ತೆಗೆದುಕೊಂಡವನಿಗೆ ಹಿಗ್ಗಾಮುಗ್ಗ ಥಳಿತ..!

317
0
SHARE

ಮದ್ಯಪಾನ ಮೃತ್ಯುವಿಗೆ ಆಹ್ವಾನ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಸರ್ಕಾರ ಪೊಲೀಸರು ಎಷ್ಟೇ ಹೇಳಿದ್ರು ಕೆಲವರು ಕುಡಿದು ವಾಹನ ಚಾಲನೆ ಮಾಡಿ ಜನರ ಪ್ರಾಣಕ್ಕೆ ಕಂಟಕರಾಗುತ್ತಾರೆ.

ಹೀಗೆ ಗುರುತು ಸಿಗದಂತೆ ಜಜ್ಜಿ ಹೋಗಿರೋ ಬಾಲಕನ ಶವ ಮತ್ತೊಂದೆಡೆ. ಬಾಲಕನನ್ನು ಬಲಿ ಪಡೆದು ತಾನು ಶವವಾಗಿ ಮಲಗಿರೋ ಲಾರಿ ಚಾಲಕ ಈ ಘಟನೆ ನಡೆದಿರೋದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಸಮೀಪದ ಅನಂತ ನಗರದಲ್ಲಿ.

ಇನ್ನು ಮೃತ ಬಾಲಕನನ್ನು ಆಹಾನ್ ಖಾನ್ ಹಾಗೂ ಅಸಾಂ ಮೂಲದ ರಾದೇಶಾಮ್ ಎಂದು ಗುರುತಿಸಲಾಗಿದೆ.ನಿನ್ನೆ ಸಂಜೆ ತಂದೆಯೊಂದಿಗೆ ಬೈಕ್’ನಲ್ಲಿ ಹೊರಟಿದ್ದ ಆಹಾನ್ ಖಾನ್’ಗೆ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದ್ದು ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದ .

ಈ ಘಟನೆಯಿಂದ ಸ್ಥಳದಲ್ಲಿದ್ದ ಸ್ರಾವಜನಿಕರು ರೋಚಿಗೆದ್ದು ಸಿಮೆಂಟ್ ಲಾರಿ ಚಾಲಕ ರಾದೇಶಾಮ್’ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದರು ಇನ್ನು ಸ್ಯಾಳಕ್ಕೆ ಆಗಮಿಸಿದ ಹೆಬ್ಬಗೋಡಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಲಾರಿ ಚಾಲಕ ರಾದೇಶಾಮ್ ಸಾವನಪ್ಪಿದ್ದಾನೆ ಇನ್ನು ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಈ ಘಟನೆ ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದೆ.

ಜನರೇ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಚಾಲಕನ ಪ್ರಾಣವೇ ಹೊರಟು ಹೋಗಿದೆ.ಸಿನಿಮಾಗಳಲ್ಲಿ ನಡೆಯುತ್ತಿದ್ದ ಘಟನೆ ಐಟಿಸಿಟಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆಗಿರುವುದು ವಿಷಾದದ ಸಂಗತಿ.

ಒಟ್ಟಿನಲ್ಲಿ ಕುಡಿದ ಅಮಲಿನಲ್ಲಿ ನಡೆದ ಅಪಘಾತಕ್ಕೆ ಎರಡು ಜೀವಗಳು ಬಲಿಯಾಗಿದ್ದು .ಇನ್ನಾದ್ರು ಪೋಲಿಸರು ಕೊಂಚ ಕಾನೂನು ಬಿಗಿ ಮಾಡಿ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ತಡೆಯಬೇಕಿದೆ.

LEAVE A REPLY

Please enter your comment!
Please enter your name here