Home Crime ಕುಡಿಯಲು ಹಣ ನೀಡದ್ದಕ್ಕೆ ಬೆಂಕಿ ಹಚ್ಚಿಕೊಂಡು ಪತ್ನಿ ತಬ್ಬಿಕೊಂಡ ಪತಿ…! ದುರಂತದಲ್ಲಿ ಪತಿ ಸಾವು, ಸಾವು-ಬದುಕಿನ...

ಕುಡಿಯಲು ಹಣ ನೀಡದ್ದಕ್ಕೆ ಬೆಂಕಿ ಹಚ್ಚಿಕೊಂಡು ಪತ್ನಿ ತಬ್ಬಿಕೊಂಡ ಪತಿ…! ದುರಂತದಲ್ಲಿ ಪತಿ ಸಾವು, ಸಾವು-ಬದುಕಿನ ನಡುವೆ ಪತ್ನಿ ನರಳಾಟ…!

2757
0
SHARE

ಆತ ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡ.. ಅವ್ನಿಗೆ ಕುಡಿಯೋಕೆ ದುಡ್ಡು ಬೇಕಂದ್ರೆ ಏನ್ ಬೇಕಾದ್ರೂ ಮಾಡ್ತಿದ್ದ.. ಮನೆಯಲ್ಲಿರೋ ವಸ್ತುವನ್ನೆಲ್ಲಾ ಮಾರಿ ತನ್ನ ಚಟ ತೀರಿಸಿಕೊಳ್ತಿದ್ದ.. ಅವ್ನಿಗೆ ಕುಡಿಯೋಕೆ ದುಡ್ಡು ಕೊಡ್ಲಿಲ್ಲಾ ಅಂತಾ ಕಟ್ಟಿಕೊಂಡ ಹೆಂಡ್ತಿಯನ್ನ ಕೊಲ್ಲೋಕೂ ಮುಂದಾಗಿದ್ದ.ಹೀಗೆ, ಅರೆಬರೆ ಸುಟ್ಟ ಗಾಯಗಳಿಂದ ನರಕಯಾತನೆ ಪಡ್ತಿರೋ ಈ ಮಹಿಳೆಯ ಕಣ್ಣೀರಿಗೆ ಕಾರಣವಾಗಿರೋದು ತನ್ನ ಪತಿರಾಯ…

ಜೀವನದುದ್ದಕ್ಕೂ ಕೈ ಹಿಡಿದು ಬಾಳಸ್ತೀನಿ ಎಂದು ಸಪ್ತಪದಿ ತುಳಿದು, ತಾಳಿ ಕಟ್ಟಿ ಕರೆದುಕೊಂಡು ಬಂದಾತ, ಕುಡಿತದ ಚಟಕ್ಕೆ ದಾಸನಾಗಿ ತನ್ನ ಹೆಂಡಿಯನ್ನೇ ಕೊಲ್ಲಲು ಮುಂದಾಗಿ ಇದೀಗ ತಾನೇ ಶವವಾಗಿದ್ದಾನೆ.ಹೌದು, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕರೇದುಗ್ಗನಹಳ್ಳಿ ಗ್ರಾಮದ 40 ವರ್ಷದ ಲೋಕೇಶ್ ತನ್ನ ಪತ್ನಿ ಬಳಿ ಹಣ ಕೇಳಿದ್ದಾನೆ.

ಹಣ ಕೊಡದೇ ಇದ್ದದ್ದಕ್ಕೆ ನಿನ್ನೆ ಸಂಜೆ 4ಗಂಟೆ ಸುಮಾರಿಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತನ್ನ ಹೆಂಡತಿ ಮರಿಸುಬ್ಬಮ್ಮನನ್ನ ತಬ್ಬಿಕೊಂಡು ಕೊಲ್ಲಲು ಯತ್ನಿಸಿದ್ದಾನೆ. ಘಟನೆ ವೇಳೆ ಮನೆಯಲ್ಲೇ ಇದ್ದ ಲೋಕೇಶನ ತಂದೆ-ತಾಯಿ ಕೂಡಲೇ ಬೆಂಕಿ ನಂದಿಸಿ ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಲೋಕೇಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಪತ್ನಿ ಮರಿಸುಬ್ಬಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.ಕುಡಿತದ ದಾಸನಾಗಿದ್ದ ಲೋಕೇಶ, ಹಣ ಇಲ್ಲವೆಂದು ಮನೆಯಲ್ಲಿದ್ದ ದನ, ಎಮ್ಮೆಗಳನ್ನ ಕಮ್ಮಿ ಬೆಲೆಗೆ ಮಾರಿ ಹಣ ಪಡೆದುಕೊಳ್ತಿದ್ದ. ಅಷ್ಟೇ ಅಲ್ಲದೇ, ಊರವರ ವಿರೋಧವೂ ಕಟ್ಟಿಕೊಂಡಿದ್ದ.

ಈತನ ಈ ವರ್ತನೆ ಇತ್ತೀಚಿಗೆ ಮಿತಿಮೀರಿತ್ತು. ಗ್ರಾಮಸ್ಥರ ಸಮ್ಮುಖದಲ್ಲೇ ನ್ಯಾಯ ಪಂಚಾಯ್ತಿ ಮಾಡಿದ್ರೂ ಈತನ ಕಾಟ ಕಮ್ಮಿಯಾಗಿರಲಿಲ್ಲ. ಇದೇ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಏನೇ ಮಾಡಿದ್ರೂ ಈತನ ಕುಡಿತ ಮಾತ್ರ ಕಡಿಮೆಯಾಗಿರಲಿಲ್ಲ.ಒಟ್ನಲ್ಲಿ, ಮದ್ಯದ ಅಮಲು ಒಂದು ಸಂಸಾರದ ಸಂತೋಷವನ್ನೇ ಕಿತ್ತುಕೊಳ್ಳುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

LEAVE A REPLY

Please enter your comment!
Please enter your name here