ಹಾವೇರಿಯಲ್ಲಿ ಕುಡುಕನೋರ್ವ ಕಂಠಪೂರ್ತಿ ಕುಡಿದು ಚರಂಡಿ ಬಳಿ ಕುಳಿತು ಅದೇ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಹಾವೇರಿ ನಗರದ ರೈಲ್ವೆ ಸ್ಟೇಷನ್ ಬಳಿ ಘಟನೆ ನಡೆದಿದ್ದು 33 ವರ್ಷದ ಮೌನೇಶ್ ಬಡಿಗೇರ್ ಸಾವಾನ್ನಪ್ಪಿದ್ದಾನೆ.
ಮೃತನು ಹಾವೇರಿಯ ನಾಗೇಂದ್ರನಮಟ್ಟಿಯ ನಿವಾಸಿಯಾಗಿದ್ದು ಕುಡಿದ ಅಮಲಿನಲ್ಲಿ ನೀರಿದ್ದ ಚರಂಡಿಗೆ ಮೌನೇಶ ಬಿದ್ದಿದ್ದಾನೆ. ಚರಂಡಿಯಲ್ಲಿ ಮೃತನ ತಲೆಭಾಗ ಸಿಲುಕಿದ್ದು ಸಾವಿನ ಭೀಕರತೆ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಡಿದ ಅಮಲಿನಲ್ಲಿ ನೀರಿದ್ದ ಚರಂಡಿಗೆ ಬಿದ್ದಿದ್ದ ಮೌನೇಶ,ಮೇಲೆಳದೆ ಚರಂಡಿ ನೀರಿನಲ್ಲೆ ಒದ್ದಾಡಿ ಒದ್ದಾಡಿ ಸಾವು.ರಾತ್ರಿ ವೇಳೆ ಚರಂಡಿ ಪಕ್ಕದಲ್ಲಿ ಕುಳಿತು ಬ್ಯಾಲೆನ್ಸ್ ಸಿಗದೆ ಬಿದ್ದಿರುವ ಕುಡುಕ ಚರಂಡಿಯಲ್ಲಿ ಸಿಲುಕಿರುವ ಮೃತನ ತಲೆಭಾಗ,ಸಾವಿನ ಬೀಕರತೆ ಕಂಡು ಥೂ ಕುಡಕರ ಜನ್ಮಕ್ಕಿಷ್ಟು ಅಂತಾ ಶಾಪ ಹಾಕಿದ ಸ್ಥಳೀಯರು.