Home District “ಕುಮಾರಸ್ವಾಮಿಗೆ ಮುಜುಗರ ತರುವ ಕೆಲಸ ಮಾಡಬೇಡ”, H.D.ರೇವಣ್ಣಗೆ ಖಡಕ್ ವಾರ್ನಿಂಗ್ ಕೊಟ್ಟ H.D.ದೇವೇಗೌಡರು..?!

“ಕುಮಾರಸ್ವಾಮಿಗೆ ಮುಜುಗರ ತರುವ ಕೆಲಸ ಮಾಡಬೇಡ”, H.D.ರೇವಣ್ಣಗೆ ಖಡಕ್ ವಾರ್ನಿಂಗ್ ಕೊಟ್ಟ H.D.ದೇವೇಗೌಡರು..?!

418
0
SHARE

ದೋಸ್ತಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರೋ ಹೆಚ್.ಡಿ ರೇವಣ್ಣ ಪ್ರತಿಯೊಂದು ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಅನ್ನೋದು ಹಳೇ ಸುದ್ದಿ. ರೇವಣ್ಣ ಹಸ್ತಕ್ಷೇಪದಿಂದ ಸಹಜವಾಗಿಯೇ ಕಾಂಗ್ರೆಸ್ ನಾಯಕರು ತೀವ್ರ ಬೇಸರ, ಅಸಮಾಧಾನಗೊಂಡಿರೋದು ಬಹಿರಂಗವಾಗಿದೆ..

ಅಧಿಕಾರಿಗಳ ವರ್ಗಾವಣೆಯಲ್ಲೂ ರೇವಣ್ಣ ಮಧ್ಯಪ್ರವೇಶ ಮಾಡುತ್ತಾರೆ ಅಂತಾ ಹಲವು ಸಚಿವರು ಈಗಾಗಲೇ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮೌಖಿಕವಾಗಿ ದೂರು ನೀಡಿದ್ದಾರೆ… ಆದ್ರೆ ಕಾಂಗ್ರೆಸ್ ನಾಯಕರ ಅಸಮಾಧಾನದ ನಡುವೆಯೂ ರೇವಣ್ಣ ಮಾತ್ರ ಎಂದಿನಂತೆ ಎಲ್ಲಾ ಇಲಾಖೆಗಳಲ್ಲಿ ಮೂಗು ತೂರಿಸುತ್ತಾ ದೋಸ್ತಿಗಳಲ್ಲಿ ಕಂದಕ ಸೃಷ್ಟಿಸುತ್ತಿದ್ದಾರೆ.

ಇದನ್ನ ಸ್ವತಃ ಕಾಂಗ್ರೆಸ್ ನಾಯಕರೇ ಒಪ್ಪಿಕೊಳ್ಳುತ್ತಾರೆ…ಇನ್ನು, ರೇವಣ್ಣ ಹಸ್ತಕ್ಷೇಪ ವಿಚಾರ ಇದೀಗ ಪದ್ಮನಾಭನಗರ ಮನೆ ತಲುಪಿದೆ… ಮಾಜಿ ಪ್ರಧಾನಿ ದೇವೇಗೌಡ್ರು, ಮಗನಿಗೆ ಬುದ್ದಿ ಹೇಳುವ ಕೆಲಸ ಮಾಡಿದ್ದಾರೆ ಅನ್ನೋ ಸುದ್ದಿ ದೊಡ್ಡ ಮನೆಯಿಂದ ಹೊರಬಿದ್ದಿದೆ.ಇತ್ತೀಚಿಗೆ ರೇವಣ್ಣ ಅವರನ್ನು ಕರೆಸಿಕೊಂಡ ದೇವೇಗೌಡ್ರು ಮಗನಿಗೆ ಬುದ್ದಿ ಹೇಳಿದ್ದಾರೆ ಎಂದು ಹೇಳಲಾಗಿದೆ…

ಹೇಗೋ ಕಷ್ಟ ಪಟ್ಟು ಸುಮಾರು ವರ್ಷಗಳ ಬಳಿಕ ಪಕ್ಷ ಅಧಿಕಾರಕ್ಕೆ ಬಂದು ಹೆಚ್ಡಿಕೆ ಮುಖ್ಯಮಂತ್ರಿಯಾಗಿದ್ದಾರೆ… ನೀನೂ ಸಚಿವನಾಗಿದ್ದೀಯಾ… ಇದನ್ನ ಹಾಳು ಮಾಡಬೇಡ.. ಅನಗತ್ಯ ಗೊಂದಲ ಸೃಷ್ಟಿಸಿ ಸಿಕ್ಕಿರೋ ಅವಕಾಶವನ್ನ ಕಳೆದುಕೊಳ್ಳಬೇಡ ಎಂದು ದೇವೇಗೌಡ್ರು ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ…

ಯಾವುದೇ ಕಾರಣಕ್ಕೂ ಯಾವ ಇಲಾಖೆ ವಿಚಾರದಲ್ಲೂ ನೀನು ಹಸ್ತಕ್ಷೇಪ ಮಾಡಬೇಡ… ಬರೀ ನಿನ್ನ ಇಲಾಖೆ ಕೆಲಸ ಮಾಡಿಕೊಂಡು ಹೆಚ್ಡಿಕೆಗೆ ಬಲ ತುಂಬು ಎಂದು ದೇವೇಗೌಡ್ರು ರೇವಣ್ಣನಿಗೆ ಸ್ವಲ್ಪ ಖಡಕ್ ಆಗಿಯೇ ಹೇಳಿದ್ದಾರೆ ಎನ್ನಲಾಗಿದೆ.

ದೇವೇಗೌಡ್ರ ಮಾತಿನಿಂದ ವಿಚಲಿತರಾದ ರೇವಣ್ಣ, ತಂದೆ ಮಾತಿಗೆ ಹೆಚ್ಚು ಮಾತನಾಡದೆ ಇದ್ದರೂ, ತಮ್ಮ ಅಸಮಾಧಾನವನ್ನ ಹೊರ ಹಾಕಿ ಬಂದಿದ್ದಾರೆ ಎನ್ನಲಾಗಿದೆ.ಯಾವಾಗಲೂ ನಿಮಗೆ ಹೆಚ್ಡಿಕೆ ಮೇಲೆಯೇ ಪ್ರೀತಿ, ಇನ್ನು ಮುಂದೆ ನಾನು ಯಾರ ವಿಚಾರದಲ್ಲೂ ಮೂಗು ತೂರಿಸುವುದಿಲ್ಲ ಅಂತಾ ಹೇಳಿ ಬೇಸರದಿಂದಲೇ ದೊಡ್ಡಗೌಡ್ರ ಮನೆಯಿಂದ ಹೊರನಡೆದಿದ್ದಾರೆ ಅನ್ನೋದು ಲೇಟೆಸ್ಟ್ ನ್ಯೂಸ್..

LEAVE A REPLY

Please enter your comment!
Please enter your name here