Home District ಕುಮಾರಸ್ವಾಮಿ ಕಣ್ಣೀರಿಗೆ ಪ್ರತಿಪಕ್ಷ ನಾಯಕರಿಂದ ಟೀಕೆಗಳ ಸುರಿಮಳೆ..!? “ಅಳ್ತಾರೆ ಒಂದು ಗಂಟೆ,ಜನರನ್ನು ಮರಳು ಮಾಡೋದಕ್ಕೆ!!”

ಕುಮಾರಸ್ವಾಮಿ ಕಣ್ಣೀರಿಗೆ ಪ್ರತಿಪಕ್ಷ ನಾಯಕರಿಂದ ಟೀಕೆಗಳ ಸುರಿಮಳೆ..!? “ಅಳ್ತಾರೆ ಒಂದು ಗಂಟೆ,ಜನರನ್ನು ಮರಳು ಮಾಡೋದಕ್ಕೆ!!”

265
0
SHARE

ನಾನು ಸಂತೋಷದಲ್ಲಿಲ್ಲ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ಕಣ್ಣೀರು ಹಾಕಿರುವುದು ಈಗ ಟೀಕೆಗೆ ಗುರಿಯಾಗಿದೆ..ತಂದೆಯ ಮಾರ್ಗದರ್ಶನದಂತೆ ಕುಮಾರಸ್ವಾಮಿ ನಡೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ..ಜನರ ಮರಳು ಮಾಡುವಂತ ಅಳು ಎಂದು ಕೇಂದ್ರ ಸಚಿವ ಸದಾನಂದಗೌಡ ಟೀಕಿಸಿದ್ದಾರೆ…

ಮುಖ್ಯಮಂತ್ರಿ ಅಳಬಾರದು,ಕಾಂಗ್ರೆಸ್ ಕುಮಾರಸ್ವಾಮಿಯವರಿಗೆ ಅಮೃತವನ್ನಂತೂ ಕೊಟ್ಟಿದೆ ಎಂದು ಕಾಂಗ್ರೆಸ್ ಶಾಸಕ ಡಾಕ್ಟರ್ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ..ಸಮಸ್ಯೆಗಳು ಬಂದೇ ಬರ್ತವೆ, ಅದನ್ನು ಹೇಳಿಕೊಂಡ್ರೆ ಒಳ್ಳೆ ಸಂದೇಶ ರವಾನೆಯಾಗಲ್ಲ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಸಲಹೆ ನೀಡಿದ್ದಾರೆ..ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಕಣ್ಣೀರು ಹಾಕಿರುವುದು ಈಗ ಟೀಕೆಗೂ ವಿಮರ್ಶೆಗೂ ಗುರಿಯಾಗಿದೆ…

ನಾನು ಸಂತೋಷದಲ್ಲಿಲ್ಲ, ನನ್ನೊಳಗಿನ ನೋವನ್ನು ವಿಷಕಂಠನಾಗಿ ನುಂಗ್ತಾ ಇದ್ದೇನೆ ಅಂತ ನಿನ್ನೆ ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು..ಕುಮಾರಸ್ವಾಮಿ ಕಣ್ಣೀರು ಹಾಕಿರುವುದನ್ನು ಪ್ರತಿಪಕ್ಷ ನಾಯಕರು ಟೀಕಿಸಿದ್ದಾರೆ..ದೇವೇಗೌಡರೂ ಅನೇಕ ಬಾರಿ ಕಣ್ಣೀರು ಹಾಕಿದ್ದಾರೆ, ಅದನ್ನು ಕುಮಾರಸ್ವಾಮಿ ಮುಂದುವರಿಸುತ್ತಾ ಇದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ…

ಒಂದು ನಿಮಿಷ ಉದ್ವೇಗದಲ್ಲಿ ಹನಿ ಹಾಕುವುದು ಸಹಜ..ಆದ್ರೆ ಒಂದೊಂದು ಗಂಟೆ ಅಳ್ತಾರೆ ಅಂದ್ರೆ ಜನರನ್ನು ಮರಳು ಮಾಡುವಂತದ್ದು ಎಂದು ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯ ಮಾಡಿದ್ದಾರೆ..ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರಿಗೆ ಅಮೃತ ಕೊಟ್ಟಿದೆ ಎಂದು ಶಾಸಕ ಡಾಕ್ಟರ್ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ…

ಆರುವರೆ ಕೋಟಿ ಜನರ ಕಣ್ಣೀರು ಒರೆಸುವ ಸಿಎಂ ಆಗಬೇಕು..ಮುಖ್ಯಮಂತ್ರಿ ಅಳಬಾರದು ಎಂದು ಅವರು ಹೇಳಿದ್ದಾರೆ..ಮೈತ್ರಿ ಸರ್ಕಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು..ಕೆಲವು ಸಮಸ್ಯೆಗಳು ಬಂದೇ ಬರುತ್ತವೆ..ಆದ್ರೆ ಅದನ್ನು ಹೇಳಿಕೊಂಡ್ರೆ ಜಾತ್ಯಾತೀತ ಪಕ್ಷಗಳಿಗೆ ಬೆಂಬಲ ನೀಡಿದವರಿಗೆ ಸೂಕ್ತ ಸಂದೇಶ ನೀಡಿದ ಹಾಗೆ ಆಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ…

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜೆಡಿಎಸ್ ವರಿಷ್ಠ ದೇವೇಗೌಡ ಹೆಚ್.ಡಿ.ಕೆ ಕಣ್ಣೀರು ಹಾಕಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.ಒಟ್ಟಿನಲ್ಲಿ ಕುಮಾರಸ್ವಾಮಿಯವರು ಬಹಿರಂಗವಾಗಿ ಕಣ್ಣೀರು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ..ಬೆಂಬಲ ಕೊಟ್ಟ ಕಾಂಗ್ರೆಸ್ ಪಕ್ಷದ ಅನೇಕರಿಗೂ ಇದ್ರಿಂದ ತಪ್ಪು ಸಂದೇಶ ರವಾನೆಯಾಗಬಹದೆಂಬ ಅಭಿಪ್ರಾಯ ಬಂದಿದೆ…

LEAVE A REPLY

Please enter your comment!
Please enter your name here