Home Crime ಕುಮಾರಸ್ವಾಮಿ ತಲೆಗೆ ಕಟ್ಟಿದ್ದ ರೈತ ಆತ್ಮಹತ್ಯೆ ಕೇಸ್ ಗೆ ದಿಢೀರ್ ಟ್ವಿಸ್ಟ್..!? ಕೊನೆಗೂ ಬಯಲಾಯ್ತು ಅಮ್ಮ...

ಕುಮಾರಸ್ವಾಮಿ ತಲೆಗೆ ಕಟ್ಟಿದ್ದ ರೈತ ಆತ್ಮಹತ್ಯೆ ಕೇಸ್ ಗೆ ದಿಢೀರ್ ಟ್ವಿಸ್ಟ್..!? ಕೊನೆಗೂ ಬಯಲಾಯ್ತು ಅಮ್ಮ ಮಗನ ಕಣ್ಣೀರಿನ ಅಸಲಿ ಕಹಾನಿ..! “ಗೌಡ ಸತ್ತಿದ್ದಲ್ಲ… ಸಾಯ್ಸಿದ್ದು..!”

1043
0
SHARE

ತಮ್ಮ ಲಾಭಕ್ಕೋಸ್ಕರ ಜನರು ಎಂಥ ಹೀನ ಕೆಲಸಕ್ಕೂ ಇಳಿಯುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ… ಇಲ್ಲೊಬ್ಬಳು ತನ್ನ ಸುಖಕ್ಕೋಸ್ಕರ ತನ್ನನ್ನು ರಾಣಿಯಂತೆ ನೋಡಿಕೊಂಡಿದ್ದ ಗಂಡನನ್ನೇ ಕೈಲಾಸಕ್ಕೆ ಕಳುಹಿಸಿದ್ದಾಳೆ.. ತನ ಹಾದರಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ತಿಳಿದು ಮಗನ ಜೊತೆ ಸೇರಿ ಪತಿಯನ್ನು ಪರಲೋಕಕ್ಕೆ ಕಳಿಸಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ.. ನೋಡಿ ನಮ್ಮ ಜನ ಸ್ವಾರ್ಥಕ್ಕಾಗಿ ಏನೇಲ್ಲಾ ಹೈಡ್ರಾಮಗಳನ್ನು ಮಾಡ್ತಾರೆ ಅಂತಾ…

ಹಾದರಕ್ಕಾಗಿ ಸಪ್ತಪದಿ ತುಳಿದ ಗಂಡನಿಗೆ ಚಟ್ಟಕಟ್ಟಿ ಬಳಿಕ ಮಗನೊಂದಿಗೆ ಸೇರಿ ಸಾಲಬಾಧೆಯಿಂದ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೈಡ್ರಾಮಾ ಮಾಡಿದ್ದಾಳೆ ಈ ಪಾಪಿ.ಹಾಸನ ಜಿಲ್ಲೆಯ ಬೇಲೂರು ತಾಲೂಕು ಮತ್ತಾವರ ಅನ್ನೋ ಗ್ರಾಮದ ಯೋಗೇಶ ಎಂಬ ರೈತ ಕಳೆದ ಜೂನ್ 8 ರ ರಾತ್ರಿ ತನ್ನ ಮನೆಯ ರೂಮ್‌ನಲ್ಲಿ ಹೆಣವಾಗಿ ಬಿದ್ದಿದ್ದ. ಮಾರನೇ ದಿನವೇ ಅರೇಹಳ್ಳಿ ಪೊಲೀಸ್ ಠಾಣೆಗೆ ದೌಡಾಯಿಸಿದ ಪತ್ನಿ ಗಾಯತ್ರಿ, ನನ್ನ ಗಂಡ ಯೋಗೇಶ್ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಟಕವಾಗಿ, ರೈತ ಆತ್ಮಹತ್ಯೆ ಪ್ರಕರಣದ ಅಡಿಯಲ್ಲಿ 5 ಲಕ್ಷ ರೂ. ಪರಿಹಾರ ಪಡೆಯಲೂ ಹೊಂಚು ಹಾಕಿದ್ದಳು…

ಆದರೆ ಯೋಗೇಶನ ಮರೋಣತ್ತರ ಪರೀಕ್ಷೆ ರಿಪೋರ್ಟ್ ಹೊರ ಬಂದಾಗ ಎಲ್ಲರೂ ಶಾಕ್ ಆಗಿದ್ರು…ಯಾಕಂದ್ರೆ ಯೋಗೇಶ್, ಆತ್ಮಹತ್ಯೆ ಮಾಡಿಕೊಂಡಿಲ್ಲ ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ರಿಪೋರ್ಟ್ ಬಂದಿತ್ತು. ಅಲ್ಲೀವರೆಗೂ ಯುಡಿಆರ್ ಕೇಸು ದಾಖಲಿಸಿಕೊಂಡು ಸುಮ್ಮನಿದ್ದ ಅರೇಹಳ್ಳಿ ಪೊಲೀಸರು, ಅನುಮಾನಗೊಂಡು ಮರು ತನಿಖೆ ಮಾಡಿದಾಗ ಗಾಯತ್ರಿ ಹಾಗೂ ಆಕೆಯ ಮಗ ದರ್ಶನ್ ಸಿಕ್ಕಿ ಬಿದ್ದಿದ್ದಾರೆ…

ಕಳೆದ 20 ವರ್ಷಗಳ ಹಿಂದೆ ಯೋಗೇಶ್ ನನ್ನು ಮದುವೆಯಾಗಿದ್ದ ಗಾಯತ್ರಿಗೆ ಇಬ್ಬರು ಗಂಡು ಮಕ್ಕಳಿದ್ದರೂ, ಅನೇಕ ಪರಪುರುಷರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದ್ದು, ಈ ವಿಷಯ ಗಂಡನಿಗೆ ಗೊತ್ತಾದ್ರೆ ಅನಾಹುತವಾಗಲಿದೆ ಎಂದುಕೊಂಡು, ಮಗನ ಬ್ರೈನ್ ವಾಶ್ ಮಾಡಿ, ಊಟಕ್ಕೆ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ…

ಇಷ್ಟೆಲ್ಲಾ ಆದ ನಂತರ ಇನ್ನೊಬ್ಬ ಮಗ ಶಶಾಂಕ್ ಗೆ ಈ ವಿಷಯವನ್ನು ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡೋ ಬೆದರಿಕೆ ಹಾಕಿದ್ರು.ಒಟ್ನಲ್ಲಿ ತನ್ನ ಅನೈತಿಕ ಸಂಬಂಧಗಳನ್ನು ಮುಂದುವರಿಸುವುದಕ್ಕೋಸ್ಕರ ತನ್ನ ಗಂಡನಿಗೆ ಚಟ್ಟ ಕಟ್ಟಿದ್ದಾಳೆ. ಸದ್ಯ ತಪ್ಪು ಮಾಡಿದ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕೆನ್ನುವುದು ಕುಟುಂಬಸ್ಥರ ಆಗ್ರಹವಾಗಿದೆ…

LEAVE A REPLY

Please enter your comment!
Please enter your name here