Home District “ಕುಮಾರಸ್ವಾಮಿ-ದೇವೇಗೌಡರು ಸಮಯ ಸಾಧಕರು..! ಅಪ್ಪ-ಮಕ್ಕಳ ಆಟ ಇನ್ನು ಹೆಚ್ಚು ದಿನ ನಡೆಯೋದಿಲ್ಲ”.. ಸಿಎಂ ಹೆಚ್ಡಿಕೆ ವಿರುದ್ದ...

“ಕುಮಾರಸ್ವಾಮಿ-ದೇವೇಗೌಡರು ಸಮಯ ಸಾಧಕರು..! ಅಪ್ಪ-ಮಕ್ಕಳ ಆಟ ಇನ್ನು ಹೆಚ್ಚು ದಿನ ನಡೆಯೋದಿಲ್ಲ”.. ಸಿಎಂ ಹೆಚ್ಡಿಕೆ ವಿರುದ್ದ BSY ಸಿಡಿಮಿಡಿ

2122
0
SHARE

ಕಬ್ಬು ಬೆಳೆಗಾರರ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಪ್ರತಿಪಕ್ಷ ಬಿಜೆಪಿ ಯೋಜನೆ ರೂಪಿಸಿದೆ. ನಾಳೆ ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

ಪ್ರತಿಪಕ್ಷವಾಗಿ ರೈತರ ಪರ ನಿಲ್ಲುವುದು ನಮ್ಮ ಕರ್ತವ್ಯ ಹಾಗಾಗಿ ರೈತರನ್ನು ಬೆಂಬಲಿಸು ತ್ತಿರುವುದಾಗಿ ಯಡಿಯೂರಪ್ಪ ಘೋಷಣೆ ಮಾಡಿದ್ರು. ಅಷ್ಟೇ ಅಲ್ಲ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಗಳಿಗೆ ತಕ್ಕ ಉತ್ತರ ನೀಡುವುದಾಗಿ ಗುಡುಗಿದ್ರು.ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಸೂಚಿಸಿದೆ…

ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಸರ್ಕಾರದ ವಿರುದ್ದ ಭಾರಿ ಪ್ರತಿಭಟನೆ ನಡೆಸಲು  ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೋಸ್ತಿ ಸರ್ಕಾರದ ದೋರಣೆಯನ್ನ ಖಂಡಿಸಿದ್ರು…ರೈತರ ಪರವಾಗಿ, ರಾಜ್ಯ ಸರ್ಕಾರದ ವಿರುದ್ಧ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸುವುದಾಗಿ ಯಡಿಯೂರಪ್ಪ ತಿಳಿಸಿದ್ರು.

ರಾಜ್ಯದಲ್ಲಿನ ರೈತರು ಸಂಕಷ್ಟದಲ್ಲಿದ್ದಾಗ, ಸರ್ಕಾರ ಏನೂ ಮಾಡದೆ ಸುಮ್ಮನಿದ್ದಾಗ, ಪ್ರತಿಪಕ್ಷವಾಗಿ ಸುಮ್ಮನಿರಲು ಸಾಧ್ಯವಿಲ್ಲ. ಹಾಗಾಗಿ ರೈತರ ಪರ ಬಿಜೆಪಿ ಧ್ವನಿ ಎತ್ತಿದೆ. ರೈತರ ಪ್ರತಿಭಟನೆಯನ್ನೂ ಬೆಂಬಲಿಸುತ್ತಿದೆ ಎಂದು ಯಡಿಯೂರಪ್ಪ ಹೇಳಿದ್ರು.ನಿನ್ನೆ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ವಿರುದ್ದ ಮಾಡಿದ್ದ ಆರೋಪಗಳಿಗೆಲ್ಲಾ ಇಂದು ಯಡಿಯೂರಪ್ಪ ಪ್ರತ್ಯುತ್ತರ ನೀಡಿದ್ರು.

ಸುದ್ದಿಗೋಷ್ಟಿಯುದ್ದಕ್ಕೂ ಕುಮಾರಸ್ವಾಮಿ ವಿರುದ್ದ ಯಡಿಯೂರಪ್ಪ ವಾಗ್ದಾಳಿ ಮಾಡಿದ್ರು. ಧರಂ ಸಿಂಗ್‌ಗೆ ಕೈಕೊಟ್ಟು ಬಂದವರು ನೀವು, ಆ ಬಳಿಕ ನಮಗೂ ಕೈಕೊಟ್ಟಿರಿ. ಇತ್ತೀಚೆಗೆ ಸಿದ್ದರಾಮಯ್ಯ ವಿರುದ್ಧ ಜಿ.ಟಿ.ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಷಡ್ಯಂತ್ರ ಮಾಡಿದ್ರು. ಅಪ್ಪ-ಮಕ್ಕಳು ಇಬ್ಬರು ಅವಕಾಶವಾದಿಗಳು ಮತ್ತು ಸಮಯಸಾಧಕರು ಎಂದು ಗುಡುಗಿದ್ರು.

ಒಟ್ಟಿನಲ್ಲಿ ಆಪರೇಷನ್ ಕಮಲ ಪ್ರಯತ್ನದಿಂದ ಆರಂಭವಾದ ಹೆಚ್.ಡಿ ಕೆ-ಬಿಎಸ್ ವೈ ನಡುವಿನ ಘರ್ಷಣೆ, ಈಗ ರೈತರ ಪ್ರತಿಭಟನೆ ಮೂಲಕ ತಾರಕಕ್ಕೇರಿದೆ. ಮೂರೂ ರಾಜಕೀಯ ಪಕ್ಷಗಳವರು ಈಗ ತಾವು ರೈತಪರ ಎಂದು ಬಿಂಬಿಸಿಕೊಂಡು 2019ರ ಲೋಕಸಭಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here