Home District ಕುಮಾರಸ್ವಾಮಿ ಬಾಂಬ್ ಸಿಡಿಸುತ್ತಿದ್ದಂತೆ BJPಯಲ್ಲಿ ಚೆಲ್ಲಾಪಿಲ್ಲಿ..?! “ಕೊಟ್ಟವನು ಕೋಡಂಗಿ,ಇಸಕೊಂಡವನು ಈರಭದ್ರ”

ಕುಮಾರಸ್ವಾಮಿ ಬಾಂಬ್ ಸಿಡಿಸುತ್ತಿದ್ದಂತೆ BJPಯಲ್ಲಿ ಚೆಲ್ಲಾಪಿಲ್ಲಿ..?! “ಕೊಟ್ಟವನು ಕೋಡಂಗಿ,ಇಸಕೊಂಡವನು ಈರಭದ್ರ”

835
0
SHARE

ಆಪರೇಷನ್ ಕಮಲದ ಬಗ್ಗೆ ನಿನ್ನೆ ಸಿಎಂ ಕುಮಾರಸ್ವಾಮಿ ಬಾಂಬ್ ಸಿಡಿಸುತ್ತಿದ್ದಂತೆ ಕಿಂಗ್ ಪಿನ್ ಗಳು, ಮುಖಂಡರು ಚೆಲ್ಲಾಪಿಲ್ಲಿಯಾಗಿದ್ದಾರೆ..ಎಲ್ಲಿ ಯಾವಾಗ ಏನಾಗುತ್ತೊ ಕಥೆ ಅಂತ ಕಿಂಗ್ ಪಿನ್ ಗಳು ಓಟ ಕಿತ್ತಿದ್ರೆ ಮುಖಂಡರು ಕೈ ಕೈ ಹಿಸುಕಿಕೊಳ್ತಾ ಇದ್ದಾರೆ..ಈಗಾಗಲೇ ಅಡ್ವಾನ್ಸ್ ಪೇಮೆಂಟ್ ಕೂಡ ನಡೀತಾ ಇದೆ ಅಂತ ಕುಮಾರಸ್ವಾಮಿ, ಬಾಂಬ್ ಸಿಡಿಸುತ್ತಿದ್ದಂತೆ ಇಸಕೊಂಡವರಿಗೆ ನಮ್ಮ ಬಣ್ಣವೂ ಬಯಲಾಗುತ್ತಾ ಅಂತ ಆತಂಕದಲ್ಲಿದ್ದರು….

ಆದ್ರೆ ಇಸಕೊಂಡವರೆಲ್ಲ ಈಗ ತಮಗೇನೂ ಗೊತ್ತೇ ಇಲ್ಲ ಎಂಬಂತೆ ಪೋಸ್ ಕೊಡುತ್ತಿದ್ದಾರಂತೆ.. ಈಗ ಪರಿಸ್ಥಿತಿ ಹೇಗಿದೆ ಅಂದ್ರೆ ಕೊಟ್ಟವನು ಕೋಡಂಗಿ, ಇಸಕೊಂಡವನು ಈರಭದ್ರ ಅನ್ನೋ ತರಾ ಆಗಿದೆ..ರಾಜಕೀಯ ವಲಯದಲ್ಲಿ ಈ ಸುದ್ದಿ ಕೇಳಿ ಭರ್ಜರಿ ಮಜಾ ತೆಗೆದುಕೊಳ್ಳುತ್ತಿರುವ ವಿಷಯ ಈಗ ಗೊತ್ತಾಗಿದೆ.ಆಪರೇಷನ್ ಕಮಲ-ಅಡ್ವಾನ್ಸ್ ಪೇಮೆಂಟ್ ಮಾಡ್ಸಿದ್ರಂತೆ ನಾಯಕರು…?

ಇಬ್ಬರು,ಮೂವರು ಶಾಸಕರಿಗೆ ಅಡ್ವಾನ್ಸ್ ಕೊಟ್ಟಿದ್ದರೆಂಬ ಗುಸು ಗುಸು.ಕೊಟ್ಟವನು ಕೋಡಂಗಿ,ಇಸಕೊಂಡವನು ಈರಭದ್ರ ಎಂಬ ಪರಿಸ್ಥಿತಿ.ಕೊಟ್ಟವರು ಕೇಳೂವ ಹಾಗೂ ಇಲ್ಲ,ಇಸಕೊಂಡವರು ಕೊಡುವುದೂ ಇಲ್ಲ.ಇಂಗು ತಿಂದ ಮಂಗನಂತಾಗಿರುವ ಕಿಂಗ್ ಪಿನ್ ಗಳು,ಮುಖಂಡರು.ಹಿಂದೆ ಗಂಗಾಜಲ ಹಂಚುತ್ತಿದ್ದ ಮಾಜಿ ಸಚಿವರ ಕ್ಷೇತ್ರದಲ್ಲೂ ಗುಸು ಗುಸು.‘ಕೌರವೇಶ’ ಇಸಕೊಂಡಿದ್ರಾ ಅಂತ ಕಾಂಗ್ರೆಸ್ ನಲ್ಲೇ ಅನುಮಾನವಂತೆ…

ಚುನಾವಣೆ ವೇಳೆ ಮಾಡಿದ್ದ ಸಾಲ ತೀರಿಸಿಕೊಂಡರಂತೆ ಮತ್ತಿಬ್ಬರು!ಕುಮಾರಸ್ವಾಮಿ ಬಾಂಬ್ ಸಿಡಿಸುತ್ತಿದ್ದಂತೆ ಕಿಂಗ್ ಪಿನ್ ಗಳು ಚೆಲ್ಲಾಪಿಲ್ಲಿ.ಅಡ್ವಾನ್ಸ್ ಪೇಮೆಂಟ್ ಮಾಡಿದವರದ್ದು ಸುಟ್ಟುಕೊಂಡ ಬೆಕ್ಕಿನ ಕಥೆ.ಆಪರೇಷನ್ ಕಮಲದ ಬಗ್ಗೆ ಸಿಎಂ ಬಾಂಬ್ ಗೆ ಎಲ್ಲಾ ಚೆಲ್ಲಾಪಿಲ್ಲಿ.ಕಿಂಗ್ ಪಿನ್ ಗಳು ಚೆಲ್ಲಾಪಿಲ್ಲಿ, ಅಡ್ವಾನ್ಸ್ ಕೊಟ್ಟವರು ಗಾಬರಿ.ಕೊಟ್ಟವನು ಕೋಡಂಗಿಯಾದ,ಇಸಕೊಂಡವನು ಈರಭದ್ರನಾದ.ಈಗ ಕೇಳೋ ಹಾಗೂ ಇಲ್ಲ,ಇಸಕೊಂಡವನು ಕೊಡೋದೂ ಇಲ್ಲ.ಸುಟ್ಟುಕೊಂಡ ಬೆಕ್ಕಿನಂತಾಗಿರುವ ಕೆಲ ಮಧ್ಯವರ್ತಿ ಮುಖಂಡರು…

LEAVE A REPLY

Please enter your comment!
Please enter your name here