Home District ಕುಮಾರಸ್ವಾಮಿ ಮಿತವ್ಯಯದ ಪಾಠ ಮಾಡುತ್ತಲೇ ದುಂದುವೆಚ್ಚ..!? ಸಂಸದರು, ಶಾಸಕರಿಗೆ ಐಫೋನ್, ಸೂಟ್‌ಕೇಸ್ ಗಿಫ್ಟ್…

ಕುಮಾರಸ್ವಾಮಿ ಮಿತವ್ಯಯದ ಪಾಠ ಮಾಡುತ್ತಲೇ ದುಂದುವೆಚ್ಚ..!? ಸಂಸದರು, ಶಾಸಕರಿಗೆ ಐಫೋನ್, ಸೂಟ್‌ಕೇಸ್ ಗಿಫ್ಟ್…

775
0
SHARE

ಸಂಸದರಿಗೆ ಬ್ರೀಫ್ ಕೇಸ್ ಹಾಗೂ ಐಫೋನ್ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಫೋನ್ ಕೊಡಲು ನಾನು ಯಾರಿಗೂ ಸೂಚನೆ ನೀಡಿಲ್ಲ. ಅಧಿಕೃತವಾಗಿ ಸಿಎಂ ಕಚೇರಿಯಿಂದ ಐಫೋನ್ ಹೋಗಿಲ್ಲ, ಅನಧಿಕೃತವಾಗಿ ಹೋಗಿರಬೇಕು…

ಈ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಇನ್ನು, ಕಣ್ಣೀರು ಹಾಕಿರುವ ವಿಚಾರ ಸಂಬಂಧ ಸ್ವತಃ ಅವರೇ ಮಾತನಾಡಿ, ಕಣ್ಣೀರು ಹಾಕಿದ್ದನ್ನ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ನನ್ನ ಕಣ್ಣೀರಿಗೂ ಸಮ್ಮಿಶ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಾನೊಬ್ಬ ಭಾವನಾತ್ಮಕ ಜೀವಿ ಎಂದಿದ್ದಾರೆ.ರಾಜ್ಯದ ಎಲ್ಲ ಶಾಸಕರಿಗೂ 5000 ರೂ. ಬೆಲೆಯ ಭ್ರೀಫ್ ಕೇಸ್ ಕೊಟ್ಟಿದ್ದಾಯ್ತು…

ಈಗ ಎಲ್ಲ ಸಂಸದರಿಗೂ ಐ ಫೋನ್ ಉಡುಗೊರೆ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.ಮಿತ ವ್ಯಯದ ಮಾತನಾಡುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಈಗ ಸಂಸದರನ್ನು ಒಲಿಸಿಕೊಳ್ಳಲು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಆಪಲ್ ಐ ಫೋನ್ ಗಳನ್ನು ಉಡುಗೊರೆ ಕೊಡಲು ಮುಂದಾಗಿದ್ದಾರೆ. ಅದರಲ್ಲೂ ನಾಳೆ ದೆಹಲಿಯಲ್ಲಿ ಸಂಸದರ ಸಭೆ ವೇಳೆಯಲ್ಲಿ ಎಲ್ಲ ಸಂಸದರಿಗೂ ಐಫೋನ್ ಗಳನ್ನು ವಿತರಣೆ ಮಾಡಲಾಗುತ್ತದೆ ಎನ್ನಲಾಗಿದೆ…

ಈ ಮೊದಲು ರಾಜ್ಯದ ಎಲ್ಲ 224 ಶಾಸಕರಿಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಭ್ರೀಫ್ ಕೇಸ್ ಗಳನ್ನು ಕೊಡಲಾಗುತ್ತಿತ್ತು. ಆದರೆ, ಈ ಬಾರಿ ವಿಧಾನಸಭಾಧ್ಯಕ್ಷರ ಗಮನಕ್ಕೆ ಬರದಂತೆ ವಿಧಾನಸಭೆ ಕಾರ್ಯದರ್ಶಿಯವರೇ 3000 ರೂ.ಬೆಲೆಯ ಬ್ರಿಟೀಷ್ ಕ್ರಾಪ್ಟ್ ಸಂಸ್ಥೆಯ ಭ್ರೀಫ್ ಕೇಸ್ ಗಳನ್ನು ,5000 ರೂ.ಬೆಲೆಗೆ ಖರೀಧಿಸಿ ತಂದಿಟ್ಟಿದ್ದರು. ಇದನ್ನು ಗಮನಿಸಿದ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಭ್ರೀಫ್ ಕೇಸ್ ವಿತರಣೆಗೆ ತಡೆಯೊಡ್ಡಿ ಆಂತರಿಕ ತನಿಖೆಗೆ ಆದೇಶಿಸಿದ್ದರು…

LEAVE A REPLY

Please enter your comment!
Please enter your name here