ಆಪರೇಷನ್ ಕಮಲದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಆಡಿಯೋ ಬಾಂಬ್ ಸಿಡಿಸಿದ್ದ ಸಿಎಂ ಗೆ ತಿರುಗೇಟು ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ..ಹಿಂದೊಂಮ್ಮೆ ಎಂ ಎಲ್ ಸಿ ಮಾಡಲು ಕುಮಾರಸ್ವಾಮಿ 25 ಕೋಟಿ ಕೇಳಿರುವ ವಿಡಿಯೋವನ್ನು ಸೋಮವಾರ ವಿಧಾನಸಭೆಯಲ್ಲೇ ರಿಲೀಸ್ ಮಾಡಲು ಬಿಜೆಪಿ ಮುಂದಾಗಿದೆ..
ಇಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಆಡಿಯೋ ವಿಡಿಯೋ ಸಮರದಲ್ಲಿ ನಿರತರಾಗಿದ್ದರೆ,ಅತ್ತ ಕಾಂಗ್ರೆಸ್ ನ ಅತೃಪ್ತ ನಾಲ್ವರು ಶಾಸಕರು ಮಾತ್ರ ಅತಂತ್ರರಾಗಿದ್ದಾರೆ.ಶಾಸಕರೊಬ್ಬರನ್ನು ಸೆಳೆಯಲು ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿ ಶುಕ್ರವಾರ ಸಿಎಂ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು..ಬಜೆಟ್ ಗು ಮುನ್ನ ಆಡಿಯೋ ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿದ್ದರು..
ಆದ್ರೆ ಯಡಿಯೂರಪ್ಪ ಆ ಆಡಿಯೋವನ್ನು ಫೇಕ್ ಅಂತ ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದರು..ಈಗ ಸಿಎಂ ವಿರುದ್ಧ ವಿಡಿಯೋ ಬಿಡುಗಡೆ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ.ಹಿಂದೆ ಕುಮಾರಸ್ವಾಮಿಯವರು ಒಬ್ಬರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು 25 ಕೋಟಿ ಕೇಳಿದ ವಿಡಿಯೋ ನಮ್ಮಲ್ಲಿದೆ.ಅದನ್ನು ಸೋಮವಾರ ಸದನದಲ್ಲಿ ಯಡಿಯೂರಪ್ಪನವರು ಪ್ರಸ್ತಾಪಿಸಲಿದ್ದಾರೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ..
ಆ ವಿಡಿಯೋವನ್ನು ಮಾನ್ಯ ಸಭಾಧ್ಯಕ್ಷರಿಗೆ ಕೊಡಲಾಗುವುದು..ಆಗ ಮುಖ್ಯಮಂತ್ರಿಯವರು ಅದನ್ನು ಖುದ್ದಾಗಿ ನೋಡಬಹುದು ಅಂತ ಹೇಳಿದ್ದಾರೆ..ಅಲ್ಲಿಗೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಡುವೆ ಆಡಿಯೋ ವಿಡಿಯೋ ಸಮರ ಮುಂದುವರೆಯುವುದು ಖಚಿತವಾಗಿದೆ.ಇತ್ತ ಆಪರೇಷನ್ ಕಮಲದ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಡುವೆ ಆಡಿಯೋ ವಿಡಿಯೋ ಸಮರ ನಡೆಯುತ್ತಿದ್ದರೆ ಅತ್ತ ನಾಲ್ವರು ಅತೃಪ್ತ ಶಾಸಕರು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ..
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ,ಡಾಕ್ಟರ್ ಉಮೇಶ್ ಜಾಧವ್ ಮತ್ತು ನಾಗೇಂದ್ರ ಮುಂದಿನ ನಡೆ ಕಷ್ಟವಾಗಿದೆ..ರಾಜೀನಾಮೆ ಕೊಟ್ರು ಸರ್ಕಾರಕ್ಕೆ ಏನೂ ಧಕ್ಕೆ ಇಲ್ಲ, ಮರಳಿ ಬರಲು ಇಷ್ಟವೂ ಇಲ್ಲ ಎಂಬ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.ಈ ನಡುವೆ ಮುಂಬೈಗೆ ಹೋಗಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಹ ವಾಪಸ್ ಆಗಿದ್ದು, ಹೆಚ್ಚಿನ ಸಂಖ್ಯೆಯ ಶಾಸಕರು ಬಿಜೆಪಿ ಕಡೆ ಮುಖ ಮಾಡದೇ ನಿರಾಶರಾಗಿದ್ದಾರೆ ಎಂದು ತಿಳಿದು ಬಂದಿದೆ..
ಆದ್ರೆ ತಮ್ಮ ಮುಂಬೈ ಭೇಟಿಗೂ ಆಪರೇಷನ್ ಕಮಲಕ್ಕೂ ಸಂಬಂಧ ಇಲ್ಲ ಅಂತ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.ಸೋಮವಾರ ಅಧಿವೇಶನವೂ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಗುವುದು ಖಚಿತವಾಗಿದೆ..ಇನ್ನು ಬಜೆಟ್ ಮೇಲಿನ ಚರ್ಚೆ ನಡೆಯುವುದು ಅಷ್ಟಕಷ್ಟೇ ಅನ್ನೋ ಲಕ್ಷಣ ಕಾಣುತ್ತಿದೆ..