Home District ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ..BSY ಹತ್ತಿರ ಪಕ್ಷೇತರ ಶಾಸಕನನ್ನು ಕಳಿಸಿದ್ದೇ ಸಿದ್ದರಾಮಯ್ಯ.

ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ..BSY ಹತ್ತಿರ ಪಕ್ಷೇತರ ಶಾಸಕನನ್ನು ಕಳಿಸಿದ್ದೇ ಸಿದ್ದರಾಮಯ್ಯ.

6404
0
SHARE

ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮ್ಯಯ್ಯ ಬಿಡಲ್ಲ ಅಂತ ಮಾಜಿ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ್ ಬಾಂಬ್ ಸಿಡಿಸಿದ್ದಾರೆ..ತಮ್ಮ ವಿರುದ್ಧ ಪಕ್ಷೇತರನಾಗಿ ನಿಂತು ಗೆದ್ದಿರುವ ಶಾಸಕ ಶಂಕರ ಅವರನ್ನು ಯಡಿಯೂರಪ್ಪ ಬಳಿ ಕಳಿಸಿದ್ದೇ ಸಿದ್ದರಾಮಯ್ಯ ಎಂದು ಗಂಭೀರ ಆರೋಪ ಮಾಡಿದ್ದಾರೆ..

ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತ ಇವ್ರಿಗೆ ನಾಚಿಕೆಯಾಗಬೇಕು ಎಂದು ಜಾಡಿಸಿದ್ದಾರೆ.. ಇವ್ರಿಗೆ ಪಕ್ಷದ ಮಹತ್ವ ಕೊಟ್ಟರೆ ಅವನತಿ ಎಂದು ಕೋಳಿವಾಡ್ ಕೆಂಡ ಕಾರಿದ್ದಾರೆ.. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಣೆಬೆನ್ನೂರಿನಲ್ಲಿ ಸೋತ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ್ ಗುಡುಗಿದ್ದಾರೆ..

ತಮ್ಮ ಸೋಲಿಗೆ ಸಿದ್ದರಾಮಯ್ಯನೇ ಕಾರಣ ಎಂದು ಗರಂ ಆಗಿದ್ದಾರೆ..ನಾನು 1969ರಿಂದಲೂ ಅಪ್ಪಟ ಕಾಂಗ್ರೆಸ್ಸಿಗ..ಆದ್ರೆ ಸಿದ್ದರಾಮಯ್ಯ ರಕ್ತ ಕಾಂಗ್ರೆಸ್ಸಿನದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗಬೇಕು..ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಮುಂದಿಟ್ಟುಕೊಂಡರೆ ಯಾವುದೇ ಉಪಯೋಗ ಇಲ್ಲ ಎಂದೂ ಕೋಳಿವಾಡ್ ಅಭಿಪ್ರಾಯಪಟ್ಟಿದ್ದಾರೆ..

ಈಗ ಹೈಕಮಾಂಡ್ ತೀರ್ಮಾನ ಕೈಗೊಂಡಿದ್ದರೂ ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ ಎಂದೂ ಆರೋಪಿಸಿದ್ದಾರೆ..ತಮ್ಮ ವಿರುದ್ಧ ಗೆದ್ದ ಶಾಸಕರನ್ನು ಯಡಿಯೂರಪ್ಪ ಹತ್ತಿರ ಕಳಿಸಿದ್ದೇ ಸಿದ್ದರಾಮಯ್ಯ, ಅವರನಪ್ಪನಾಣೆ ಕುಮಾರಸ್ವಾಮಿಗೆ ಅವಕಾಶ ಕೊಡಲ್ಲ ಎಂದು ದೂರಿದ್ದಾರೆ..

ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತ ಇವ್ರಿಗೆ ನಾಚಿಕೆಯಾಗಬೇಕು ಅಂತ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.ಸಿದ್ದರಾಮಯ್ಯನವರದ್ದು ಸರ್ವಾಧಿಕಾರಿ ಧೋರಣೆ..ಖರ್ಗೆ-ವೀರಪ್ಪ ಮೊಯಲಿ ಅಂಥವರನ್ನೂ ಪಕ್ಷದಲ್ಲಿ ಹಿಂದಕ್ಕೆ ಸರಿಸಿ ಹೈಕಮಾಂಡ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೋಳಿವಾಡ್ ಹೇಳಿದ್ದಾರೆ..

ಖೇಣಿ ಅಂಥವರಿಗೆ ಟಿಕೆಟ್ ಕೊಡೋ ಇವ್ರು ಕಾಂಗ್ರೆಸ್ಸಿಗರಾ ಎಂದು ಸಿಟ್ಟಾಗಿದ್ದಾರೆ.ಕಾಂಗ್ರೆಸ್ ನಲ್ಲಿ ಇವ್ರಿಗೆ ಯಾವ ಸ್ಥಾನ ಮಾನ ಕೊಡಬಾರದು..ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರಿಯಲಿ ಅಥವಾ ಡಿ.ಕೆ.ಶಿವಕುಮಾರ್ ಮತ್ತಿತರೇ ನಾಯಕರನ್ನು ಮಾಡಲಿ ಎಂದು ಕೋಳಿವಾಡ್ ಆಗ್ರಹಿಸಿದ್ದಾರೆ…

LEAVE A REPLY

Please enter your comment!
Please enter your name here