Home KARNATAKA ಕುರುಬರ ST ಹೋರಾಟ ಸಮಿತಿ ಕರ್ನಾಟಕ ನಿಯೋಗದಿಂದ ಕೇಂದ್ರ ಸಚಿವರ ಭೇಟಿ..

ಕುರುಬರ ST ಹೋರಾಟ ಸಮಿತಿ ಕರ್ನಾಟಕ ನಿಯೋಗದಿಂದ ಕೇಂದ್ರ ಸಚಿವರ ಭೇಟಿ..

985
0
SHARE

ಇಂದು ನವದೆಹಲಿಯಲ್ಲಿ ಕೇಂದ್ರ ಬುಡಕಟ್ಟು ಜನಾಂಗದ ವ್ಯವಹಾರಗಳ ಸಚಿವರಾದ ಶ್ರೀರೇಣುಕಾ ಸಿಂಗ್ ಸರುತಾರವರನ್ನು ಭೇಟಿ ಮಾಡಿ ST ಬೇಡಿಕೆಯ ಮನವಿ ಸಲ್ಲಿಸಲಾಯಿತು. ಶ್ರೀಶ್ರೀಶ್ರೀ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀಮಠ ಕಾಗಿನೆಲೆ ಕನಕಗುರುಪೀಠ ಕಾಗಿನೆಲೆ ಮತ್ತು ಹೊಸದುರ್ಗ ಕಾಗಿನೆಲೆ ಕನಕಗುರುಪೀಠ ಶಾಖಾಮಠದ ಶ್ರೀಶ್ರೀಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಶ್ರೀಶ್ರೀಶ್ರೀ ಶಿವಾನಂದಪುರಿ ಮಹಾಸ್ವಾಮಿಗಳು ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು..

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು, ಮಾಜಿ ಸಚಿವರು ಮತ್ತು ವಿಧಾನಪರಿಷತ್ *ಸದಸ್ಯರಾದ ಶ್ರೀ ಹೆಚ್. ವಿಶ್ವನಾಥ್, ಶಾಸಕರಾದ ಶ್ರೀ ಬಂಡೆಪ್ಪ ಕಾಶ್ಯಂಪೂರ್, ಹಾಗೂ ಮಾಜಿ ಸಂಸದರು ಮತ್ತು ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ವಿರುಪಾಕ್ಷಪ್ಪನವರು ಹಾಗೂ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಕೆ.ಮುಕುಡಪ್ಪರವರು, ಕುರುಬರ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ, ಹಾಗೂ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಡಿ ವೆಂಕಟೇಶಮೂರ್ತಿ, ಸಮಿತಿ ಖಜಾಂಚಿಯಾದ ಶ್ರೀ ಕೆ.ಈ. ಕಾಂತೇಶ, ಟಿ.ಬಿ.ಬಳಗಾವಿ, ಶ್ರೀ ಪುಟ್ಟಸ್ವಾಮಿ ಮತ್ತು ಸಮಿತಿ ಪ್ರಧಾನ ಕಾರ್ಯದರ್ಶಿಯಾದ ಆನೇಕಲ್ ದೊಡ್ಡಯ್ಯ ಹಾಗೂ ವಿವಿಧ ಪದಾಧಿಕಾರಿಗಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here