Home KARNATAKA ಕೂಲ್ ಧೋನಿ ಈಸ್ ಬ್ಯಾಕ್..! ಸಿಡ್ನಿಯಲ್ಲಿ ನಾಳೆ ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯ..! ಟೆಸ್ಟ್ ಸರಣಿ ಸೋತ...

ಕೂಲ್ ಧೋನಿ ಈಸ್ ಬ್ಯಾಕ್..! ಸಿಡ್ನಿಯಲ್ಲಿ ನಾಳೆ ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯ..! ಟೆಸ್ಟ್ ಸರಣಿ ಸೋತ ಆಸೀಸ್ ಗೆ ತಿರುಗೇಟು ನೀಡೋ ಛಲ..!

455
0
SHARE

ಸಿಡ್ನಿಯಲ್ಲಿ ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯ ನಡೆಯಲಿದೆ. ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಬೀಗುತ್ತಿರೋ ಕೊಹ್ಲಿಪಡೆ, ಏಕದಿನ ಸರಣಿಯಲ್ಲೂ ವಿಜಯ ಪತಾಕೆ ಹಾರಿಸುವ ತವಕದಲ್ಲಿದೆ. ಅತ್ತ ಟೆಸ್ಟ್ ಸರಣಿ ಸೋಲಿನಿಂದ ಕಂಗೆಟ್ಟಿರೋ ಆತಿಥೇಯ ಆಸೀಸ್ ಒನ್ ಡೇ ಸಿರೀಸ್ ನಲ್ಲಿ ಭಾರತಕ್ಕೆ ತಿರುಗೇಟು ನೀಡಲು ಸಜ್ಜಾಗಿದೆ.

ಆಸೀಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯನ್ನ ಗೆದ್ದು ದಾಖಲೆ ಬರೆದಿದ್ದ ಕೊಹ್ಲಿಪಡೆ, ಇದೀಗ ಏಕದಿನ ಸರಣಿಗೆ ಭರ್ಜರಿಯಾಗಿ ಸಜ್ಜಾಗಿದೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಒನ್ ಡೇ ಸಿರೀಸ್ ಇದಾಗಿದ್ದು, ಸಿಡ್ನಿಯಲ್ಲಿ ನಾಳೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದಕ್ಕಾಗಿ ಉಭಯ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿವೆ.

ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ತೋರಿದ ಸಂಘಟಿತ ಪ್ರದರ್ಶನ ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿಯ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ. ಹೀಗಾಗಿ ಇದೇ ವಿನ್ನಿಂಗ್ ಫಾರ್ಮುಲವನ್ನೆ ಏಕದಿನ ಸರಣಿಯಲ್ಲೂ ಬಳಸಿಕೊಂಡು ಆತಿಥೇಯರನ್ನ ಬಗ್ಗುಬಡಿಯಲು ಕೊಹ್ಲಿ ಮತ್ತು ರವಿಶಾಸ್ತ್ರಿ ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸಿಕೊಂಡಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಧೋನಿ ತಂಡಕ್ಕೆ ಮರಳಿರೋದು ಆನೆ ಬಲ ಬಂದಂತಾಗಿದೆ.. ಟೆಸ್ಟ್ ಸರಣಿಯಿಂದ ಹೊರಗುಳಿದ್ದ ಶಿಖರ್ ಧವನ್ ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದು, ರೋಹಿತ್ ಜೊತೆ ಆರಂಭಿಕರಾಗಿ ಇನ್ನಿಂಗ್ಸ್ ಶುರುಮಾಡಲಿದ್ದಾರೆ. ಇವರ ಜೊತೆಗೆ ವಿರಾಟ್ ಕೊಹ್ಲಿ, ಅಂಬಾಟಿ ರಾಯುಡು, ಕೇದಾರ್ ಜಾಧವ್ ಕಣಕ್ಕಿಳಿಯಲಿದ್ದಾರೆ., ಧೋನಿ ಜೊತೆ ರಿಶಬ್ ಪಂತ್, ಭುವಿ, ಖಲೀಲ್ ಅಹ್ಮದ್ ಕುಲ್ದೀಪ್ ಯಾದವ್ ಮತ್ತು ಚಾಹಲ್ ಕೂಡ ಪ್ಲೇಯಿಂಗ್ ಇಲೆವನ್ ನಲ್ಲಿ ಇರುವ ಸಾಧ್ಯತೆ ಇದೆ.

ಆಸೀಸ್ ನೆಲದಲ್ಲಿರುವ ಭಾರತಕ್ಕೆ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ..ಇನ್ನೂ ಟೆಸ್ಟ್ ಸರಣಿ ಸೋತು ಕಂಗಾಲಾಗಿರೋ ಆಸೀಸ್ ತಂಡಕ್ಕೆ ಒನ್ ಡೇ ಸರಣಿ ಅತಿ ಮುಖ್ಯವಾಗಿದೆ…

ಸ್ಟಾರ್ ಆಟಗಾರರಾದ ಸ್ಮಿತ್, ವಾರ್ನರ್ ಸೇವೆ ಕಳೆದುಕೊಂಡಿರೋ ಆಸ್ಟ್ರೇಲಿಯಾ ದುರ್ಬಲವಾಗಿದ್ದು,  ಭಾರತಕ್ಕೆ ತಿರುಗೇಟು ನೀಡುವ ಸಾಧ್ಯತೆಗಳು ಕಡಿಮೆ… ಆದ್ರೆ ತವರು ನೆಲದಲ್ಲಿ ಆಡುತ್ತಿರೋ ಕಾಂಗರೂಗಳು ಪುಟಿದೇಳುವ ಚಾನ್ಸ್ ಇದೆ… ನಾಯಕ ಫಿಂಚ್ ಮತ್ತು ಮ್ಯಾಕ್ಸ್ ವೆಲ್ ಮೇಲೆ ಆಸೀಸ್ ತಂಡ ಅತಿ ಹೆಚ್ಚು ಅವಲಂಬಿತವಾಗಿದೆ.. ಬೌಲರ್ ಗಳು ನಿರೀಕ್ಷಿತ ಫಾರಂ ನಲ್ಲಿ ಇಲ್ಲದಿರೋದು ತಂಡಕ್ಕೆ ತಲೆನೋವಾಗಿದೆ…

LEAVE A REPLY

Please enter your comment!
Please enter your name here