Home District ಕೂಸು ಹುಟ್ಟುವ ಮುನ್ನವೇ ಕುಲಾವಿ ಹೋಲಿಸಿದ BSY, ಚುನಾವಣೆ ಮುಗಿಯುವ ಮುನ್ನವೇ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್..!

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೋಲಿಸಿದ BSY, ಚುನಾವಣೆ ಮುಗಿಯುವ ಮುನ್ನವೇ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್..!

753
0
SHARE

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಟೆಂಪಲ್ ರನ್ ಮುಂದುವರಿದಿದೆ. ನಿನ್ನೆ ಬಾಗಲಕೋಟೆ ಜಿಲ್ಲೆಯಲ್ಲಿರೋ ಕೂಡಲಸಂಗಮಕ್ಕೆ ಭೇಟಿ ನೀಡಿದರು. ಆದ್ರೆ,100 ಮೀಟರ್ ಆಳದಲ್ಲಿರೋ ಬಸವಣ್ಣನ ಐಕ್ಯಮಂಟಪಕ್ಕೆ ಅಮಿತ್ ಷಾ ಇಳಿಯಲಿಲ್ಲ. ಮೇಲೆ ನಿಂತು ಕೈ ಮುಗಿದು ತೆರಳಿದರು.. ಬಳಿಕ ಕೂಡಲಸಂಗಮದಿಂದ ಇಳಕಲ್‌ಗೆ ಪ್ರಯಾಣ ಬೆಳಸಿದರು.

ಹುನಗುಂದದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ ಷಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಹುಲ್ ಬಾಬಾ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ ಕುತಂತ್ರದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯ್ತು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿ ಕರ್ನಾಟಕವನ್ನ ದೇಶದಲ್ಲಿ ಮತ್ತೆ ನಂಬರ್ ಒನ್ ರಾಜ್ಯ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ಮೇ 18 ಅಥವಾ 19 ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗದಗ ನಗರದಲ್ಲಿ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದರು. ಅವನದ್ದು ತಲೆತಿರುಕ ಮಾತು. ಅವನ ಸುತ್ತಮುತ್ತ ಇರೋರು ಯಾರು?.ಅವರು ಸೋಲೋದು ಖಾತ್ರಿಯಾಗಿರೋದ್ರಿಂದ ಹತಾಶರಾಗಿ ಮನಬಂದಂತೆ ಮಾತಾಡ್ತುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಗದಗದಲ್ಲಿ ಪ್ರಚಾರ ಬಳಿಕ ಧಾರವಾಡ ಜಿಲ್ಲೆಯ ಕುಂದಗೋಳಕ್ಕೆ ಯಡಿಯೂರಪ್ಪ ಪ್ರಯಾಣ ಬೆಳಸಿದರು.ಇದಾದ ಬಳಿಕ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ, ಡೊಳ್ಳು ಬಾರಿಸಿ ಡಾನ್ಸ್ ಆಡುವ ಮೂಲಕ ಗಮನ ಸೆಳೆದರು.

ಇನ್ನೂ ಇಂದು ಬೆಳಗ್ಗೆ 10.30ಕ್ಕೆ ವಿಜಯಪುರದಿಂದ ಬೆಣ್ಣೆನಗರಿ ದಾವಣಗೆರೆಗೆ ತೆರಳಲಿರುವ ಅಮಿತ್ ಶಾ ನಗರ ದೇವತೆ ದುರ್ಗಾಂಬಿಕೆಗೆ ಪೂಜೆ ಸಲ್ಲಿಸಿ 12.20ರವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಶ್ರೀ ಶೈಲ ಮಠಕ್ಕೆ ಭೇಟಿ ನೀಡಿ ನಂತರ ಅಲ್ಲಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಅಲ್ಲಿ ನೆಹರೂ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಭಾಗಿಯಾಗಿ ಅಲ್ಲಿಂದ ಸಂಜೆ ಕಲ್ಪತರು ನಾಡು ತುಮಕೂರಿಗೆ ಆಗಮಿಸಿಲಿದ್ದಾರೆ. ಸಂಜೆ 5 ಗಂಟೆಯಿಂದ ತುಮಕೂರಿನಲ್ಲಿ ರೋಡ್ ಶೋ ನಡೆಸಿ ನಗರ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಪರ ಅಮಿತ್ ಶಾ ಮತಯಾಚನೆ ಮಾಡಲಿದ್ದಾರೆ.

 

LEAVE A REPLY

Please enter your comment!
Please enter your name here