Home Life Style ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಇನ್ಮುಂದೆ ಸಿಗಲಿದೆ ಫ್ರೀ ವೈ ಫೈ ಖಾಸಗಿ ಹೈಟೆಕ್ ಬಸ್ ಗಳಿಗೆ ಸೆಡ್ಡು...

ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಇನ್ಮುಂದೆ ಸಿಗಲಿದೆ ಫ್ರೀ ವೈ ಫೈ ಖಾಸಗಿ ಹೈಟೆಕ್ ಬಸ್ ಗಳಿಗೆ ಸೆಡ್ಡು ಹೊಡೆಯಲಿದೆ ಕೆಎಸ್ಆರ್ಟಿಸಿ

203
0
SHARE

ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಯಾಣಿಕರಿಗೆ ಇನ್ನು ಮುಂದೆ ಉಚಿತವಾಗಿ ವೈ ಫೈ ನೀಡಲಿದೆ.. ಕೇವಲ ಹವಾ ನಿಯಂತ್ರಿತ, ವೋಲ್ವೋ, ಲಕ್ಸುರಿ ಬಸ್ ಗಳಿಗೆ ಮಾತ್ರವಲ್ಲದೇ ಕೆಎಸ್ ಆರ್ಟಿಸಿಯ ಸಾಮಾನ್ಯ ಬಸ್ಸಿನ ಪ್ರಯಾಣಿಕರು ವೈ ಫೈ ಭಾಗ್ಯ ದೊರೆಯಲಿದೆ.. ಮಾರ್ಚ್ ತಿಂಗಳೊಳಗೆ ಸುಮಾರು 8,800 ಬಸ್‍ಗಳಿಗೆ ವೈ ಫೈ ಅಳವಡಿಕೆ ‌ಮಾಡಲಾಗುತ್ತಿದೆ.. ಇದ್ದಕ್ಕಾಗಿ ಕೆಎಸ್‍ಆರ್ ಟಿಸಿ ಪೂನಾ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದೆ.. ಇನ್ನು ಗುತ್ತಿಗೆ ಪಡೆದ ಸಂಸ್ಥೆಯೇ, ಕೆಎಸ್ ಆರ್ಟಿಸಿಗೆ ಒಂದು ಬಸ್ ಗೆ 123 ರೂಪಾಯಿ ಹಣ ನೀಡಲಿದೆ.. ಸದ್ಯಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ವಿಭಾಗಗಳಲ್ಲಿ ಇದು ಪ್ರಾಯೋಗಿಕವಾಗಿ ಆರಂಭವಾಗಿದೆ.. ಮುಂದಿನ ತಿಂಗಳಲ್ಲಿ ರಾಜ್ಯದ ಎಲ್ಲಾ ಬಸ್ ಗಳಿಗೆ ವೈ ಫೈ ಸೌಲಭ್ಯ ನೀಡಲಾಗುತ್ತದೆ..

ಇನ್ಮು ಈಗಾಗಲೇ 24 ವಿಭಾಗಗಳಲ್ಲಿ ಕೆಎಸ್ ಆರ್ ಟಿಸಿ ಬಸ್‍ಗಳಿಗೆ ವೈ ಫೈ ನೀಡಲಾಗಿದೆ.. ಮುಂದಿನ ದಿನಗಳಲ್ಲಿ ಈಶಾನ್ಯ, ವಾಯುವ್ಯ, ಆಗ್ನೇಯ ಮತ್ತು ನೈಋತ್ಯ ವಿಭಾಗಗಳ ಬಸ್ ಗಳಿಗೂ ವೈ ಫೈ ಸಿಗಲಿದೆ.. ಇತ್ತ ಖಾಸಗಿ ಬಸ್‍ಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಕೆಎಸ್ ಆರ್ ಟಿಸಿ ವೈ ಫೈ ಭಾಗ್ಯ ನೀಡಿದೆ.. ಕೆಎಸ್ ಆರ್ಟಿಸಿಯ ಸಾಮಾನ್ಯ ಬಸ್ ಗಳಲ್ಲಿ ಪ್ರಯಾಣಿಸೋ ಜನ ಸಾಮಾನ್ಯನೂ ವೈ ಫೈ ಪಡೆಯಲಿದ್ದಾನೆ.. ಹೀಗಾಗಿ ಸ್ಮಾರ್ಟ್ ಪೋನ್ ಬಳಕೆದಾರರೂ ತಮ್ಮ ಸ್ಟಾಪ್ ಬರೋವರೆಗೂ ಉಚಿತವಾಗಿ ನೆಟ್ ಯುಸ್ ಮಾಡಬಹುದು..

ಒಂದೆಡೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಾಗೂ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಲಾಭದತ್ತ ಕೊಂಡಯ್ಯೋಕೆ ಇದು ನೆರವಾಗುತ್ತಾ.. ಜೊತೆಗೆ ಖಾಸಗಿ ಬಸ್ ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಕಡೆ‌‌ ಮುಖ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here