Home Cinema ಕೆರಿಯರ್ ಗಾಗಿ ಮದುವೆ ವಿಚಾರವನ್ನೇ ಮುಚಿಟ್ಟ ಕೇರಳ ಬೆಡಗಿ..!! ಪತ್ನಿ ಮರ್ಯಾದೆ ಹರಾಜಾಗ್ತಿದ್ರು ಗಂಡನ್ಯಾಕೆ ಕಾಣಿಸ್ತಿಲ್ಲ...

ಕೆರಿಯರ್ ಗಾಗಿ ಮದುವೆ ವಿಚಾರವನ್ನೇ ಮುಚಿಟ್ಟ ಕೇರಳ ಬೆಡಗಿ..!! ಪತ್ನಿ ಮರ್ಯಾದೆ ಹರಾಜಾಗ್ತಿದ್ರು ಗಂಡನ್ಯಾಕೆ ಕಾಣಿಸ್ತಿಲ್ಲ ಗೊತ್ತಾ..?

3612
0
SHARE

ಮೀಟು ಈ ಅಭಿಯಾನ ಶುರುವಾದಾಗ ಪುರುಷರಿಂದ ಅನ್ಯಾಯಕ್ಕೆ ಒಳಗಾದ ಕೋಟ್ಯಾಂತರ ಮಹಿಳೆಯರು ಖುಷಿಯಾಗಿದ್ರು. ಪುರುಷ ಸಮಾಜ ವಿರುದ್ಧ ಸಮರ ಸಾರೋದಕ್ಕೆ ಯಾರೋ ಗಟ್ಟಿಗಿತ್ತಿ ಬಂದಿದ್ದಾಳೆ, ಈ ದಬ್ಬಾಳಿಕೆ ಇನ್ನು ನಡೆಯೋದಿಲ್ಲ ಅಂತ ಅಂದುಕೊಂಡಿದ್ರು. ಆದ್ರೆ ಮೀಟು ಅಭಿಯಾನ ಮಾತ್ರ ಸಾಮಾನ್ಯ ಮಹಿಳೆಯರ ಧ್ವನಿಯಾಗಲೇ ಇಲ್ಲ. ಅದು ಸೆಲೆಬ್ರೆಟಿಗಳ ತೆವಲುತನಗಳಿಗೆ ದೊಡ್ಡ ಪರದೆಯಾಯ್ತು. ಅದರಲ್ಲೂ ಸಿನಿಮಾ ರಂಗದ ಜನರ ಬಣ್ಣ ಬಯಲು ಮಾಡೋದಕ್ಕೆ ಅಸ್ತ್ರವಾಗಿ ಹೋಯ್ತು. ಹೀಗೆ ಹೊತ್ತಿದ ಕಿಡಿ ಸ್ಯಾಂಡಲ್ ವುಡ್ ಗೂ ಬೆಂಕಿ ಹೊತ್ತಿಸಿತ್ತು. ಆ ಕಿಡಿ ಹಚ್ಚಿದ್ದು  ಬ್ಯೂಟಿ ಶೃತಿ ಹರಿಹರನ್.

ಕರ್ನಾಟಕದಲ್ಲಿ ವಾಟ್ಸ್ ಹ್ಯಾಪನಿಂಗ್ ಅಂದ್ರೆ, ಶೃತಿ ಹರಿಹರನ್ ಅನ್ನೋ ಹೆಸರು ಕೇಳಿ ಬರುತ್ತೆ. ಒಂದು ವಾರದಿಂದ ಎಲ್ಲಿ ನೋಡಿದ್ರು ಶೃತಿ ಹರಿಹರನ್ ಅನ್ನೋ ನಟಿಯದ್ದೇ ಸುದ್ದಿ. ಆಕೆಯ ಬಗ್ಗೆ ಈಗಾಗ್ಲೇ ನೀವು ತುಂಬಾ ತಿಳ್ಕೊಂಡಿರ್ತೀರಾ. ಆಕೆ ಮಾಡಿರೋ ಆರೋಪದ ಬಗ್ಗೆಯೂ ನಿಮಗೆ ಗೊತ್ತೇ ಇರುತ್ತೆ. ಸಿನಿಮಾದ ಅಂದರ್ ಕೀ ಬಾತ್ ಅನ್ನ ಮಾಧ್ಯಮದ ಮುಂದೆ ಬಂದು ಗಟ್ಟಿಯಾಗಿ ಮೀಟು ಅಂದಾಕೆ ಶೃತಿ ಹರಿಹರನ್. ಆದ್ರೆ ಈ ಶೃತಿ ಹರಿಹರನ್ ಅನ್ನೋ ಬಳುಕೋ ಬಳ್ಳಿಯ ಕಥೆ, ವ್ಯಥೆ ಎಲ್ಲಾ ಈಗ ಹೊರಗಡೆ ಬರ್ತಿದೆ. ಕನ್ನಡ ಸಿನಿಮಾದಲ್ಲಿ ಕನ್ನಡದ ನಟಿಯರಿಗಿಂತ ನಾನೇನು ಕಡಿಮೆ ಇಲ್ಲ ಅನ್ನೋ ಹಾಗೆ ಪರ್ಫಾರ್ಮೆನ್ಸ್ ನೀಡಿದಾಕೆ ಶೃತಿ. ಆದ್ರೆ ಇವತ್ತು ಆಕೆ ಇಡೀ ಚಿತ್ರರಂಗವನ್ನೇ ಗಾಂಧಿನಗರದ ಗಲ್ಲಿಗೆ ತಂದು ನಿಲ್ಲಿಸಿದ್ದಾಳೆ. ಆಕೆ ಮಾಡ್ತಿರೋ ಆರೋಪ ಸತ್ಯವೋ ಸುಳ್ಳೋ ಅಂತ ಅಂದಾಜು ಮಾಡೋದಕ್ಕೆ ಸಾಧ್ಯವೇ ಇಲ್ಲ.ಅದ್ಯಾವಾಗ ಸರ್ಜಾ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ರೋ, ಶೃತಿ ಕೂಡಾ ಕಾನೂನಿನ ಅಸ್ತ್ರದ ಮೂಲಕವೇ ಉತ್ತರ ಕೊಡ್ತೀನಿ ಅಂತ ರೆಡಿಯಾದ್ರು. ಅಷ್ಟೇ ಅಲ್ಲ ಇಲ್ಲಿವರೆಗೂ ಊಟಕ್ಕೆ ಕರೆದಿದ್ರು ಅಂತಿದ್ದ ಶೃತಿ ಮಂಚಕ್ಕೆ ಕರೆದಿದ್ರು ಅಂತ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ರು.

ಶೃತಿ ಹರಿಹರನ್ ಅದ್ಯಾವಾಗ ಅರ್ಜುನ್ ಸರ್ಜಾ ವಿರುದ್ಧ ಆರೋಪಗಳನ್ನ ಮಾಡೋದಕ್ಕೆ ಶುರುಮಾಡಿದ್ರೋ ಆಗ ಇಡೀ ಚಿತ್ರರಂಗ ಅರ್ಜುನ್ ಸರ್ಜಾ ಪರವಾಗಿ ನಿಂತ್ರು. ಅರ್ಜುನ್ ಸರ್ಜಾರನ್ನ 35ವರ್ಷಗಳಿಂದ ನೋಡ್ಕೊಂಡು ಬಂದಿದ್ದ ಚಿತ್ರರಂಗದ ಫ್ಯಾಮಿಲಿ ಅವರನ್ನ ಅಷ್ಟು ಸುಲಭಕ್ಕೆ ಬಿಟ್ಟುಕೊಡೋದಕ್ಕೆ ರೆಡಿಯಿರಲಿಲ್ಲ. ಹೀಗಾಗಿ ಇಡೀ ಚಿತ್ರರಂಗ ಶೃತಿ ವಿರುದ್ಧ ತಿರುಗಿಬಿದ್ದಿತ್ತು. ನಿರ್ಮಾಪತರು, ನಿರ್ಶೇಕರು ಶೃತಿ ವಿರುದ್ಧವೇ ವಾಗ್ದಾಳಿ ನಡೆಸೋದಕ್ಕೆ ಶುರುಮಾಡಿದ್ರು. ಆದಾದ ನಂತ್ರ ಇದ್ಯಾಕೋ ಬೇರೆಯದ್ದೇ ರೂಟ್ ಹಿಡ್ಕೊಂಡು ಹೋಗ್ತಿದೆ ಅಂತ ಹಿರಿಯರೆಲ್ಲಾ ಸೇರಿ ಕಾಂಪ್ರಮೈಸ್ ಮಾಡಿಸೋದಕ್ಕೆ ನೋಡಿದ್ರು. ಆದ್ರೆ ಶೃತಿ ಅಲ್ಲಿ ಸಾರಿ ಕೇಳದೆ ಹೋದ್ರು. ಅಲ್ಲದೆ ನಮ್ಮಿಬ್ಬರ ನಡುವೆ ಏನು ನಡೆದಿದೆ ಅನ್ನೋದು ನಮ್ಮಿಬ್ಬರಿಗೆ ಮಾತ್ರ ಗೊತ್ತು ಅಂತ ಎಲ್ಲರನ್ನ ದಂಗುಬಡಿಸಿದ್ರು.

ಇಷ್ಟೆಲ್ಲಾ ಆದ ಮೇಲೆ ನಾನು ಕಾಂಪ್ರಮೈಸ್ ಆಗೋದಿಲ್ಲ ಅಂತ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲೇರೋದಕ್ಕೆ ರೆಡಿಯಾದ್ರು. ಶೃತಿ ಮೀಟು ಅಭಿಯಾನದ ಹೆಸರಲ್ಲಿ ನನ್ನ ಮಾನನಷ್ಟ ಮಾಡಿದ್ದಾಳೆ ಅಂತ ಕೋರ್ಟ್ ಮೆಟ್ಟಿಲೇರಿದ್ರು. ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ನಾನು ಆಕೆಯ ಜೊತೆ ಅನುಚಿತವಾಗಿ ವರ್ತಿಸಿಲ್ಲ ಅಂತ ಅರ್ಜುನ್ ವಾದವಾಗಿತ್ತು. ಅಲ್ಲದೆ ತನ್ನ ಮಾನಹಾನಿ ಮಾಡಿದ ಶೃತಿಗೆ ಬುದ್ಧಿ ಕಲಿಸೋದಕ್ಕೆ ಅಂತಾನೆ ಸರ್ಜಾ ಕೋರ್ಟ್ ನಲ್ಲಿ ಕೇಸ್ ಹಾಕಿದ್ರು. ಅಲ್ಲದೆ ತನ್ನ ವಿರುದ್ಧ ಇನ್ನೆಲ್ಲೂ ಮಾತನಾಡಬಾರದು ಅಂತ ಶೃತಿಗೆ ಸ್ಟೇ ತರೋದಕ್ಕೂ ಕೂಡಾ ಅರ್ಜಿ ಸಲ್ಲಿಸಿದ್ರು. ಈ ಕೇಸ್ ಅನ್ನ ಇನ್ನು ಕೋರ್ಟ್ ವಿಚಾರಣೆ ನಡೆಸ್ತಿದೆ. ಅಲ್ಲಿದೆ ಆಕ್ಷನ್ ಕಿಂಗ್ ಶೃತಿಗೆ ಮೊದಲ ಪಂಚ್ ನೀಡಿದ್ರು.

ಅದ್ಯಾವಾಗ ಸರ್ಜಾ ಕೋರ್ಟ್ ಮೊರೆ ಹೋದ್ರೋ ಶೃತಿಯೊಳಗಿದ್ದ ಹೆಣ್ಣತನ ಕೂಗಲಾರಂಭಿಸಿತ್ತು. ನೀನು ಹೆಣ್ಣು ನೀನು ಮನಸ್ಸು ಮಾಡಿದ್ರೆ ಆ ರೀಲ್ ಹೀರೋನ ಮಕಾಡೆ ಮಲಗಿಸೋದು ಎಷ್ಟು ಹೊತ್ತು ಅಂತ ಹೂಂಕರಿಸಿತ್ತು. ಆಗಲೇ ಶೃತಿ ಸರ್ಜಾರನ್ನ ಮುಗಿಸೋದಕ್ಕೆ ಪ್ಲಾನ್ ಮಾಡಿಬಿಟ್ಲು. ಸರ್ಜಾ ವಿರುದ್ಧ ತಿರುಗಿಬಿದ್ದಿದ್ದ ಶೃತಿ ಈಗ ಕಾನೂನು ಹೋರಾಟಕ್ಕೆ ರೆಡಿ ಮಾಡ್ಕೊಂಡಿದ್ಲು. ತಾನು ಕೇಸ್ ಹಾಕಿದ್ರೆ ಏಟಿಗೆ ಎದಿರೇಟು ಹೇಗಿರುತ್ತೆ ಅನ್ನೋದು ಗೊತ್ತಾಗುತ್ತೆ ಅನ್ನೋದನ್ನ ಇವತ್ತು ಶೃತಿ ಹರಿಹರನ್ ಸರ್ಜಾಗೆ ತೋರಿಸಿಕೊಟ್ಟಿದ್ಲು.ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ ಗೆ ತನ್ನ ವಕೀಲರ ಜೊತೆ ಆಗಮಿಸಿದ ಶೃತಿ ಸರ್ಜಾ ವಿರುದ್ಧ ಬ್ರಹ್ಮಾಸ್ತ್ರವನ್ನೇ ಬಿಟ್ಟಿದ್ಲು. ಅದೇನಪ್ಪಾ ಅಂದ್ರೆ 2015ರಲ್ಲಿ ವಿಸ್ಮಯ ಶೂಟಿಂಗ್ ವೇಳೆ ಅರ್ಜುನ್ ನನಗೆ ಲೈಂಗಿಕ ಕಿರುಕುಳ ನೀಡಿದ್ರು ಅಂತ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಲು. ಅದು ಸುಮ್ಮನೆ ನೀಡಿದ್ದ ದೂರಾಗಿರಲಿಲ್ಲ. ಅರ್ಜುನ್ ಸರ್ಜಾರನ್ನ ಚಕ್ರವ್ಯೂಹದೊಳಗೆ ಸಿಲುಕಿಸೋ ಪ್ಲಾನ್ ಅದಾಗಿತ್ತು. ಹೀಗಾಗಿ ಅರ್ಜುನ್ ಗೆ ಚಕ್ರವ್ಯೂಹ ಬೇಧಿಸಿಕೊಂಡು ಹೊರಗೆ ಬರದೇ ಇರೋ ಹಾಗೆ ಪ್ಲಾನ್ ಮಾಡಿದ್ಲು. ತನಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ. ಅವರು ನನ್ನನ್ನ ಲೈಂಗಿಕವಾಗಿ ಉಪಯೋಗಿಸಿಕೊಳ್ಳೋದಕ್ಕೆ ನೋಡಿದ್ರು ಅಂತ ದೂರಿನಲ್ಲಿ ತಿಳಿಸಿದ್ರು. ಅಲ್ಲಿಗೆ ಕಬ್ಬನ್ ಪಾರ್ಕ್ ಪೊಲೀಸ್ರು ದೂರು ಪಡೆದು ಐಪಿಸಿ ಸೆಕ್ಷನ್ 354 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ರು.

ಅಂದ್ರೆ ಅರ್ಜನ್ ಸರ್ಜಾರನ್ನ ಪೊಲೀಸ್ರು ಬಂಧಿಸೋ ಹಾಗೆ ಆಕೆ ದೂರನ್ನ ನೀಡಿದ್ಲು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನ ಐಪಿಸಿ ಸೆಕ್ಷನ್ 354ರ ಪ್ರಕಾರ ಬಂಧಿಸಬೇಕು, ಅಲ್ಲದೆ ಅದು ನಾನ್ ಬೆಲಬಲ್ ಅಫೆನ್ಸ್ ಕೂಡಾ ಹೌದು. ಹೀಗಾಗಿ ಶೃತಿ ಲೈಂಗಿಕ ದೌರ್ಜನ್ಯ ಪ್ರಕರಣವನ್ನ ದಾಖಲಿಸಿದ್ಲು. ಅಲ್ಲದೆ 2015ರಲ್ಲಿ ವಿಸ್ಮಯ ಸಿನಿಮಾ ವೇಳೆ ಏನೆಲ್ಲಾ ನಡೆಯಿತು ಅನ್ನೋದನ್ನ ಪುಟಗಟ್ಟಲೆ ವಿವರವಾಗಿ ದೂರಿನಲ್ಲಿ ಬರೆದಿದ್ಲು.2015ರಲ್ಲಿ ವಿಸ್ಮಯ ಅನ್ನೋ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿತ್ತು. ಈ ಸಿನಿಮಾದಲ್ಲಿ ನಾನು ಅರ್ಜುನ್ ಸರ್ಜಾರಿಗೆ ಪತ್ನಿಯಾಗಿ ಅಭಿನಯಿಸಿದ್ದೇನೆ. ಈ ವೇಳೆ  ಹೆಬ್ಬಾಳ ಬಳಿಯ ಬಂಗಲೆಯೊಂದರಲ್ಲಿ ಚಿತ್ರೀಕರಣವಿತ್ತು. ನಂತ್ರ ದೇವನಹಳ್ಳಿಯಲ್ಲಿ ಚಿತ್ರೀಕರಣವಿತ್ತು.  ಈ ವೇಳೆ ರೋಮ್ಯಾನ್ಸ್ ಸೀನ್ ನಲ್ಲಿ ಅರ್ಜುನ್ ಪದೇ ಪದೇ ರಿಹರ್ಸಲ್ ನೆಪದಲ್ಲಿ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ರು. ಅಲ್ಲದೆ ಹಿಂದಿನಿಂದ ನನ್ನ ದೇಹವನ್ನ ಮುಟ್ಟುತ್ತಿದ್ರು. ಇದು ನನಗೆ ಅಸಹ್ಯವಾಗಿದ್ರಿಂದ ನಾನು ರಿಹರ್ಸಲ್ ಗೆ ಹೋಗೋದನ್ನ ನಿಲ್ಲಿಸಿದ್ದೆ. ಅಲ್ಲದೆ ಇದಾದ ಬಳಿಕ ಯುಬಿ ಸಿಟಿಯಲ್ಲಿ ಶೂಟಿಂಗ್ ಇತ್ತು. ಈ ವೇಳೆ ಸರ್ಜಾ ನನ್ನ ಹತ್ತಿರ ಬಂದು ತಮ್ಮ ರೂಂಗೆ ಕರೆದಿದ್ರು. ಅಲ್ಲದೆ ಪ್ರೈವೇಟ್ ಆಗಿ ಟೈಮ್ ಸ್ಪೆಂಡ್ ಮಾಡೋಣ ಅಂತ ಹೇಳಿದ್ರು. ಅಲ್ಲದೆ ಈ ವಿಷಯವನ್ನ ಯಾರಿಗಾದ್ರೂ ಹೇಳಿದ್ರೆ ನಿನ್ನ ಕೆರಿಯರ್ ಹಾಳು ಮಾಡೋದಾಗಿ ಬೆದರಿಕೆ ಹಾಕಿದ್ರು. ನಂತ್ರ ನನ್ನ ಗೆಳತಿ ಯಶಸ್ವಿನಿಗೆ ಹೇಳಿದ್ದೆ.

ಆದ್ರೆ ಆಕೆ ಇವರ ವಿರುದ್ಧ ಮಾತನಾಡಿದ್ರೆ ನಿನ್ನೆ ಕರಿಯರ್ ಹಾಳಾಗುತ್ತೆ ಅಂತ ಹೇಳಿದ್ಲು. ಹಾಗಾಗಿ ನಾನು ಆಗ ಈ ವಿಚಾರವನ್ನ ಎಲ್ಲಿಯೂ ಹೇಳಿರಲಿಲ್ಲ. ಅಲ್ಲದೆ ಒಮ್ಮೆ ಶೂಟಿಂಗ್ ಸಮಯದಲ್ಲಿ ನಾನು ದೇವನಹಳ್ಳಿಯಿಂದ ಕಾರ್ ನಲ್ಲಿ ಬರುವಾಗ ಸರ್ಜಾ ಕೂಡಾ ನನ್ನ ಕಾರ್ ಫಾಲೋ ಮಾಡ್ಕೊಂಡು ಬಂದಿದ್ರು. ನಂತ್ರ ಕಾರ್ ನಿಲ್ಲಿಸಿ ರೆಸಾರ್ಟ್ ಗೆ ಹೋಗೋಣ ಬಾ ಅಂತ ಕರೆದಿದ್ರು. ಈ ವೇಳೆ ಬೋರೆಗೌಡ ಮತ್ತು ಕಿರಣ್ ಅನ್ನೋರು ನನ್ನ ಜೊತೆಯಿದ್ರು. ಸರ್ಜಾ ಅವ್ರು ನನ್ನನ್ನ ಲೈಂಗಿಕವಾಗಿ ಬಳಸಿಕೊಳ್ಳೋದಕ್ಕಾಗಿ ಸಾಕಷ್ಟು ಪ್ರಯತ್ನಪಟ್ರು. ಇದರಿಂದ ನಾನು ಡಿಪ್ರೆಷನ್ ಗೆ ಹೋಗಿದ್ದೆ. ಸಾಕಷ್ಟು ದಿನ ನಾನು ನಿದ್ದೆ ಮಾಡದೇ ರಾತ್ರಿಯನ್ನ ಕಳೆದಿದ್ದೇನೆ.ಹೀಗೆ ಶೃತಿ ಹರಿಹರನ್ ತನ್ನ ದೂರಿನಲ್ಲಿ ವಿಸ್ಮಯ ಸಿನಿಮಾ ಸಮಯದ ಏನು ನಡೆಯಿತು ಅನ್ನೋದನ್ನ ಹೇಳಿದ್ದಾರೆ. ಆದ್ರೆ ಇಲ್ಲೊಂದು ವಿಷಯ ಅಂದ್ರೆ ಶೃತಿ ಇದ್ಯಾವುದಕ್ಕೂ ದಾಖಲೆಗಳನ್ನಾಗಲಿ, ಸಾಕ್ಷಿಗಳನ್ನಾಗಲಿ ಇಟ್ಟಿಲ್ಲ. ಸರ್ಜಾ ಅವ್ರು ಮೆಸೆಜ್ ಮಾಡಿರೋದಾಗ್ಲಿ ಅಥವಾ ಕಾಲ್ ಮಾಡಿರೋದಾಗ್ಲಿ ಯಾವುದು ಆಕೆಯ ಬಳಿಯಿಲ್ಲ. ಆದ್ರೆ ಮೀಟು ಮೂಲಕ ಶುರುಮಾಡಿದ ಆರೋಪವನ್ನ ಈಗ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ತೀನಿ ಅಂತ ಮುಂದೆ ಬಂದಿದ್ದಾರೆ. ಸರ್ಜಾ ವಿರುದ್ಧ ಸಾಕಷ್ಟು ಆರೋಪ ಮಾಡಿರೋ ಶೃತಿಗೆ ಅದನ್ನ ಪ್ರೂವ್ ಮಾಡಿಕೊಳ್ಳೋದಕ್ಕೆ ಬೇಕಾದ ಯಾವ್ಯಾವ ಡಾಕ್ಯುಮೆಂಟ್ ಗಳನ್ನ ಪೊಲೀಸ್ರಿಗೆ ಕೊಡ್ತಾರೆ ಅನ್ನೋದು ಮಾತ್ರ ಬಹಿರಂಗವಾಗಿಲ್ಲ.

ಶೃತಿಯನ್ನ ಇಲ್ಲಿನ ಸಿನಿಮಾ ರಂಗ ಮನೆ ಮಗಳ ಹಾಗೆ ನಡೆಸಿಕೊಂಡಿದೆ. ಬೇರೆ ರಾಜ್ಯದವಳು ಅನ್ನೋ ಭಾವನೆಯನ್ನ ಯಾವತ್ತು ತೋರಿಸಿಲ್ಲ. ಆದ್ರೆ ಇದೇ ಶೃತಿ ತನ್ನೆಲ್ಲಾ ಪರ್ಸನಲ್ ವಿಷಯವನ್ನ ಗೌಪ್ಯವಾಗಿ ಇಟ್ಟಿದ್ಲು. ಅಲ್ಲದೆ ಆಕೆಯ ತೀರ ಆಪ್ತರಿಗೂ ಶೃತಿ ಮಿಸಸ್ ಅನ್ನೋದು ಗೊತ್ತಿರಲಿಲ್ಲ.ಶೃತಿ ಹರಿಹರನ್ ಆಕೆಯ ಸೌಂದರ್ಯವನ್ನ ವರ್ಣಿಸೋದಕ್ಕೆ ಪದಗಳಿಗೂ ಕೊರತೆ ಕಾಣಿಸುತ್ತೆ ಅನ್ಸುತ್ತೆ. ಡ್ಯಾನ್ಸರ್ ಆಗಿದ್ದ ಚೆಲುವೆ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ಲು. ಈಕೆಯ ಚೆಲವು, ಮನೆ ಹುಡುಗಿಯಂತಹ ಭಾವನೆ ಇವೆಲ್ಲವೂ ಕೆಲವೇ ದಿನಗಳಲ್ಲಿ ಆಕೆಗೆ ದೊಡ್ಡ ಅಭಿಮಾನಿ ಬಳಗವನ್ನ ಸೃಷ್ಠಿಸಿತ್ತು. ಪಡ್ಡೆ ಹುಡುಗರೆಂತು ಶೃತಿ ಅಂದ್ರೆ ಸಾಕು ಮುಗಿಬೀಳ್ತಿದ್ರು. ಪಕ್ಕದ ರಾಜ್ಯದಿಂದ ಬಂದ್ರು ಆಕೆ ನಮ್ಮವಳಲ್ಲ ಅಂತ ಯಾವತ್ತು ಅನಿಸಿರಲಿಲ್ಲ. ಆಕೆಯ ಸ್ಪಷ್ಟ ಕನ್ನಡ ಎಲ್ಲವೂ ಆಕೆ ನಮ್ಮವಳೇ ಅನ್ನೋ ಫೀಲ್ ಹುಟ್ಟು ಹಾಕಿತ್ತು. ಶೃತಿ ಹರಿಹರನ್ ಗೆ ಅದೆಷ್ಟು ಯುವಕರು ಫಿದಾ ಆಗಿದ್ದಾರೋ ಗೊತ್ತಿಲ್ಲ. ನನ್ನ ಹುಡುಗಿ ಇದ್ರೆ ಹೀಗೆ ಇರಬೇಕು ಅಂತ ಒಂದಷ್ಟು ಹುಡುಗರು ಕನಸುಕಟ್ಟಿಕೊಂಡಿದ್ರು.

ಆದ್ರೆ ಈಗ ಹೇಳ್ತೀವಿ ಕೇಳಿ ಅದರಲ್ಲೂ ವಯಸ್ಸಿಗೆ ಬಂದ ಹುಡುಗರ ಹಾರ್ಟ್ ಒಡೆದು ಹೋಗುವ ವಿಷಯ. ಶೃತಿ ಹೆಸರನ್ನ ಹೇಳ್ಕೊಂಡು ಕನಸು ಕಾಣ್ತಿದ್ದವರ ಕನಸೆಲ್ಲಾ ಒಡೆದು ಹೋಗುತ್ತೆ ನೋಡಿ. ಯಾಕಂದ್ರೆ ಶೃತಿ ಮಿಸ್ ಶೃತಿ ಅಲ್ಲ. ಮಿಸಸ್ ರಾಮ್. ಅಂದ್ರೆ ರಾಮ್ ಅನ್ನೋ ವ್ಯಕ್ತಿಯ ಪತ್ನಿಯೇ ಶೃತಿ ಹರಿಹರನ್. ರಾಮ್ ಬೆಂಗಳೂರಿನಲ್ಲಿ ಕೇರಳದ ಸಮರ ಕಲೆ ಕಲರಿಪಟ್ಟು ಕ್ಲಾಸ್ ನಡೆಸ್ತಾರೆ. ಅವರ ಜೊತೆ ಶೃತಿ ಹರಿಹರನ್ ವಿವಾಹವಾಗಿದೆ. ಆದ್ರೆ ಈ ವಿಷಯ ಚಿತ್ರರಂಗದಲ್ಲಿ ಬಹುತೇಕರಿಗೆ ಗೊತ್ತೇ ಇಲ್ಲ. ಯಾಕಂದ್ರೆ ಮದುವೆ ವಿಷಯ ಗೊತ್ತಾದ್ರೆ ತನಗೆ ಸಿನಿಮಾದಲ್ಲಿ ಛಾನ್ಸ್ ಸಿಗೋದಿಲ್ಲ ಅನ್ನೋ ಕಾರಣಕ್ಕೆ ಆಕೆ ಎಲ್ಲೂ ತನಗೆ ಮದುವೆ ಆಗಿರೋದರ ಬಗ್ಗೆ ಹೇಳಿಕೊಳ್ಳಲೇ ಇಲ್ಲ. ಆದ್ರೆ ಯಾವಾಗ ಅರ್ಜುನ್ ಸರ್ಜಾ ವಿರುದ್ಧ ದೂರು ನೀಡೋದಕ್ಕೆ ಹೋದ್ರೋ ಆಗ ಶೃತಿ ವೈಫ್ ಆಫ್ ರಾಮ್ ಅನ್ನೋ ಅಡ್ರೆಸ್ ನಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಶೃತಿಗೆ ಮದುವೆಯಾಗಿದೆಯಾ ಅಯ್ಯೋ ನಮಗೆ ಇದು ಗೊತ್ತೇ ಇರಲಿಲ್ಲ ಅಂತ ಆಕೆಯನ್ನ ಬಲ್ಲವರು ಮಾತನಾಡ್ತಿದ್ದಾರೆ.

ಶೃತಿ ನೋಡೋದಕ್ಕೆ ಮಾತ್ರ ಚೆಂದ. ಆದ್ರೆ ಆಕೆ ಸಮಯಸಾಧಕಿ ಅನ್ನೋದು ತನ್ನ ಗಂಡನ ವಿಚಾರ ಮುಚ್ಚಿಟ್ಟಾಗಲೇ ಗೊತ್ತಾಗಿತ್ತು ಅಂತ ಈಗ ಗಾಂಧಿನಗರದ ಜನ ಮಾತನಾಡಿಕೊಳ್ತಿದ್ದಾರೆ. ಆಕೆ ಮದುವೆಯಾಗಿರೋದನ್ನ ಯಾರಿಗೂ ಹೇಳಿಯೇ ಇಲ್ಲ. ಆಕೆಯ ಬಗ್ಗೆ ತೀರ ಗೊತ್ತಿದ್ದವರಿಗೂ ಆಕೆಯ ವೈವಾಹಿಕ ಸಂಬಂಧದ ಬಗ್ಗೆ ಮಾಹಿತಿಯಿಲ್ಲ. ಹೀಗೆ ತನ್ನ ಗಂಡನ ಬಗ್ಗೆಯೇ ಯಾರಿಗೂ ಹೇಳಿಕೊಳ್ಳದೆ ಆಕೆ ಸಾಕಷ್ಟು ವರ್ಷಗಳಿಂದ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾಳೆ. ಅಲ್ಲದೆ ರಾಮ್ ಕೂಡಾ ಇಲ್ಲಿವರೆಗೂ ಎಲ್ಲಿಯೂ ಶೃತಿ ಜೊತೆ ಕಾಣಿಸಿಕೊಂಡಿಲ್ಲ. ಇಡೀ ದೇಶಕ್ಕೆ ದೇಶವೇ ಶೃತಿಯನ್ನ ವಿರೋಧಿಸ್ತಿದ್ರು ಆಕೆಯ ಪತಿ ರಾಮ್ ಮಾತ್ರ ಎಲ್ಲೂ ತನ್ನ ಪತ್ನಿಯ ಪರವಾಗಿ ಮಾತನಾಡಿರೋದನ್ನ ಜನ ನೋಡಿಲ್ಲ. ಅಲ್ಲದೆ ತನ್ನ ಸಪೋರ್ಟ್ ಗೆ ಈಗ ನನ್ನ ಗಂಡ ಬರರ್ತಾನೆ ಅಂತಾನು ಶೃತಿ ಎಲ್ಲೂ ಹೇಳಿಲ್ಲ. ಹೀಗಾಗಿ ತನಗೆ ಮದುವೆಯಾಗಿರೋ ವಿಷಯ ಮುಚ್ಚಿಟ್ಟು ಆಕೆ ಸಾಧಿಸೋದಾದ್ರೂ ಏನು ಅನ್ನೋ ಪ್ರಶ್ನೆ ಕಾಡುತ್ತೆ.

ಇನ್ನೊಂದು ವಿಷಯ ಶೃತಿಗೆ ಮಗುನು ಇದೆ ಅದು ಮೈಸೂರಿನಲ್ಲಿ ಓದ್ತಿದೆ ಅಂತ ಆಕೆಯ ಆಪ್ತರು ಈಗ ಗುಸುಗುಸು ಮಾತನಾಡಿಕೊಳ್ತಿದ್ದಾರೆ. ಇಲ್ಲಿಗೆ ಆಕೆಯ ವೈವಾಹಿಕ ಸಂಬಂಧದ ರಹಸ್ಯ ಮುಗಿಯೋದಿಲ್ಲ. ಈ ಹಿಂದೆ ಮಲೆಯಾಳಂ ಸಿನಿಮಾ ಮಾಡುವ ಸಮಯದಲ್ಲಿ ಶೃತಿಗೆ ನಿರ್ಮಾಪಕನೊಬ್ಬನ ಜೊತೆ ಲವ್ ಆಗಿರುತ್ತೆ. ಆದ್ರೆ ಆತ ಪ್ರೊಡ್ಯೂಸ್ ಮಾಡಿದ್ದ ಸಿನಿಮಾ ತೋಪೆದ್ದು ಹೋಗಿರುತ್ತೆ. ಅಲ್ಲದೆ ಬಂಡವಾಳ ಹಾಕಿದ್ದ ಇನ್ನೊಬ್ಬ ಸ್ನೇಹಿತನಿಗೂ ಶೃತಿ ಬಾಯ್ ಫ್ರೆಂಡ್ ಪ್ರೊಡ್ಯೂಸರ್ ಗೂ ಗಲಾಟೆಯಾಗಿ ಅಲ್ಲೊಂದು ಕೊಲೆಯಾಗಿರುತ್ತೆ. ಅಲ್ಲದೆ ಆ ನಿರ್ಮಾಪಕ ಜೈಲು ಕೂಡಾ ಸೇರಿರ್ತಾನೆ. ಅದ್ಯಾವಾಗ ಆತ ಅಂದರ್ ಆದ್ನೋ ಆಗ ಶೃತಿ ಗಾಂಧಿನಗರಕ್ಕೆ ವಲಸೆ ಬಂದಿರ್ತಾಳೆ. ಈ ವಿಷಯಗಳು ಕೂಡಾ ಶೃತಿಯ ಬ್ಲಾಕ್ ಅಂಡ್ ವೈಕ್ ಲೈಫ್ ನ ಕಥೆ ಹೇಳುತ್ತೆ.

ಶೃತಿ ಸರ್ಜಾ ಮೇಲೆ ಆರೋಪ ಮಾಡಿದಾಗ ಆಕೆ ರೆಡಿಯೋ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಡಿಯೋ, ವೀಡಿಯೋಗಳನ್ ಸಾಕಷ್ಟು ವೈರಲ್ ಆಗಿತ್ತು. ಅದರಲ್ಲಿ ರೆಡಿಯೋ ಜಾಕಿ ನಿಮಗೆ ಯಾವ ಸೆಕ್ಸ್ ಪೊಸಿಷನ್ ಇಷ್ಟ ಅಂತ ಕೇಳಿದಾಗ ಆಕೆ ಡಿಪೆಂಡ್ ಅಪ್ ಆನ್ ಪರ್ಸನ್ ಅನ್ನೋ ಬೋಲ್ಡ್ ಆನ್ಸರ್ ಕೊಟ್ಟಿರ್ತಾಳೆ. ಅಂದ್ರೆ ಆ ಮಾತಿನ ಅರ್ಥವನ್ನ ನೀವೇ ಆಳವಾಗಿ ಯೋಚಿಸಿ ನೋಡಿ. ಹೀಗೆ ಶೃತಿ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ಹಾಕ್ತಿದ್ದ ಹಾಗೆ ಶೃತಿ ಲೈಫ್ ನ ಇಂಟರೆಸ್ಟಿಂಗ್ ವಿಷಯಗಳೇ ಹೊರಗೆ ಬರ್ತಿದೆ. ಶೃತಿ ತನ್ನ ಪರ್ಸನಲ್ ಲೈಫ್ ಸಾಕಷ್ಟು ವಿಚಾರಗಳನ್ನ ಮುಚ್ಚಿಟ್ಟು ಇಲ್ಲಿ ಮದುವೆಯಾಗಿಲ್ಲ ಅಂತ ನಟನೆ ಮಾಡ್ತಿದ್ದಾಳೆ ಇದರ ಅವಶ್ಯಕತೆ ಏನಿದೆ ಅನ್ನೋದು ಗೊತ್ತಿಲ್ಲ ಅಂತಾರೆ. ಅಲ್ಲದೆ ಮದುವೆಯಾಗಿದ್ರು ಈಕೆಗೆ ಪ್ರತಿಭೆ ಇದ್ರೆ ಅವಕಾಶಗಳಿಗೆ ಇಲ್ಲಿ ಬರವಿರಲಿಲ್ಲ. ಆದ್ರೆ ಆಕೆ ಅವಕಾಶಕ್ಕಾಗಿ ತನ್ನ ಗಂಡನ ಬಗ್ಗೆಯೇ ಸುಳ್ಳು ಹೇಳ್ತಿದ್ದಾಳೆ. ಇನ್ನು ಅದೇ ಅವಕಾಶಕ್ಕಾಗಿ ಅರ್ಜುನ್ ಸರ್ಜಾ ಮೇಲೆ ಕೂಡಾ ಗೂಬೆ ಕೂರಿಸ್ತಿದ್ದಾಳೆ ಅನ್ನೋ ಅಭಿಪ್ರಾಯ ಹೊಂದಿದ್ದಾರೆ.

ಶೃತಿ ಹರಿಹರನ್ ಮೇಲೆ ನಿಜಕ್ಕೂ ಅರ್ಜುನ್ ಲೈಂಗಿಕ ದೌರ್ಜನ್ಯವೆಸಗಿದ್ರೆ ಶೃತಿ ಅದನ್ನ ಅವತ್ತೆ ಪ್ರತಿಭಟಿಸಬೇಕಿತ್ತು. ಆತ ಎಷ್ಟೇ ಪ್ರತಿಭಾವಂತ, ಪ್ರಸಿದ್ಧನಾದ್ರೂ ಇಡೀ ಕರ್ನಾಟಕದ ಜನತೆ ಶೃತಿಯ ಪರವಾಗಿ ನಿಲ್ತಿದ್ರು. ಆದ್ರೆ ಶೃತಿ ಎಷ್ಟೇ ವರ್ಷಗಳ ನಂತ್ರ ಗಾಳಿಯಲ್ಲಿ ಗುಂಡು ಹಾರಿಸುವಂತೆ ಸರ್ಜಾ ಮೇಲೆ ಆರೋಪ ಮಾಡಿರೋದನ್ನ ನೋಡಿದ್ರೆ ಇದೆಲ್ಲಾ ಕಟ್ಟುಕತೆ ಅನ್ಸುತ್ತೆ. ಶೃತಿಗೆ ನಿಜವಾಗಿಯೂ ಸರ್ಜಾರಿಂದ ತೊಂದರೆಯಾಗಿದ್ರೆ ಆಕೆಯ ಶ್ರೇಯೋಭಿಲಾಷಿಗಳು ಆಕೆಯ ಪರ ನಿಲ್ಲಲೇಬೇಕು. ಅಥವಾ ಆಕೆ ಮಾಡ್ತಿರೋ ಆರೋಪಗಳು ಸುಳ್ಳಾಗಿದ್ರೆ ಖಂಡಿತವಾಗಿಯೂ ಅದು ಇಡೀ ಸಮಾಜವೇ ಖಂಡಿಸಬೇಕಾದ ವಿಷಯ. ಅವಕಾಶಕ್ಕಾಗಿಯೋ ಅಥವಾ ಸ್ವಹಿತಾಸಕ್ತಿಗಾಗಿಯೋ ಒಬ್ಬ ವ್ಯಕ್ತಿಯನ್ನ ಹಣಿಯೋದು ಇಬ್ಬರಿಗೂ ಒಳ್ಳೆಯದಲ್ಲ. ಅದು ಕನ್ನಡ ಚಿತ್ರರಂಗಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ.

ಸದ್ಯಕ್ಕೆ ಶೃತಿ ಹರಿಹರನ್ ಮಾಡಿರೋ ಆರೋಪಗಳಿಂದ, ಮಾಡ್ಕೊಂಡಿರೋ ಗದ್ದಲಗಳಿಂದ ಆಕೆಗೆ ಸ್ಯಾಂಡಲ್ ವುಡ್ ನ ಬಾಗಿಲು ಮುಚ್ಚೋ ರೀತಿ ಕಾಣಿಸ್ತಿದೆ. ಅಲ್ಲದೆ ಪೊಲೀಸ್ ತನಿಖೆಯಲ್ಲಿ ಆಕೆ ಮಾಡಿರೋ ಆರೋಪಗಳು ಸುಳ್ಳು ಅಂತ ಗೊತ್ತಾದ್ರೆ ಸಿನಿಮಾ ರಂಗವೇ ಆಕೆಯನ್ನ ದೂರಯಿಡುತ್ತೆ. ಇಲ್ಲಿ ಶೃತಿ ಅದೇನೋ ಮಾಡೋದಕ್ಕೆ ಹೋಗಿ ಇನ್ನೇನೋ ಮಾಡ್ಕೊಂಡ ಹಾಗೆ ಕಾಣುತ್ತೆ. ಒಟ್ನಲ್ಲಿ ಆಕೆಗೆ ಅನ್ಯಾಯವಾಗಿದ್ರೆ ಖಂಡಿತವಾಗಿಯೂ ನ್ಯಾಯಾಲಯದಲ್ಲಿ ಆಕೆಗೆ ನ್ಯಾಯ ಸಿಗಲಿ. ಅಥವಾ ಆಕೆಯ ಅವಕಾಶವಾದಿತನಕ್ಕೆ ನಾಯಕ ನಟನೊಬ್ಬನ ಹೆಸರನ್ನ ಹಾಳು ಮಾಡಿದ್ರೆ ಅದಕ್ಕು ತಕ್ಕ ಶಿಕ್ಷೆಯಾಗಲಿ ಅನ್ನೋದು ಎಲ್ಲರ ಆಶಯ.ಮೀಟು ವೇದಿಕೆಯಲ್ಲಿ ಶೃತಿ ಧ್ವನಿ ಎತ್ತಿರೋದು ನಿಜಕ್ಕೂ ಮಹಿಳಾ ಸಮುದಾಯವೇ ಹೆಮ್ಮೆಪಡುವಂತಹದ್ದು. ಆದ್ರೆ ಆ ಆರೋಪ ನಿಜವಾಗಿದ್ರೆ ಮಾತ್ರ ಅದಕ್ಕೊಂದು ಅರ್ಥ ಬರುತ್ತೆ. ಅಥವಾ ಸಿನಿಮಾ ವ್ಯವಹಾರದಲ್ಲಿ ನಡೆದಿರೋ ವಯಕ್ತಿಕ ಸಮಸ್ಯೆಗಳಿಗೆ ಆಕೆ ಈ ವೇದಿಕೆಯನ್ನ ದುರುಪಯೋಗ ಮಾಡಿಕೊಂಡಿದ್ರೆ ಆಕೆಯದ್ದು ಅಕ್ಷಮ್ಯ ಅಪರಾಧ.

LEAVE A REPLY

Please enter your comment!
Please enter your name here