Home Crime ಕೆಲಸಕ್ಕೆ ಹೋದವಳು ತಲುಪಲೇ ಇಲ್ಲ ವಾಪಸ್ ಮನೆ..!ನಿರ್ಜನ ಪ್ರದೇಶದಲ್ಲಿ ಶವವಾಗಿ ಸಿಕ್ಕಿದ್ಲು ಚೆಂದುಳ್ಳಿ ಚೆಲುವೆ…ಪ್ರೀತಿಸಿ ಅರ್ಧಕ್ಕೆ...

ಕೆಲಸಕ್ಕೆ ಹೋದವಳು ತಲುಪಲೇ ಇಲ್ಲ ವಾಪಸ್ ಮನೆ..!ನಿರ್ಜನ ಪ್ರದೇಶದಲ್ಲಿ ಶವವಾಗಿ ಸಿಕ್ಕಿದ್ಲು ಚೆಂದುಳ್ಳಿ ಚೆಲುವೆ…ಪ್ರೀತಿಸಿ ಅರ್ಧಕ್ಕೆ ಕೈ ಕೊಟ್ಟಿದ್ಲು ಸಾಫ್ಟ್ ವೇರ್ ಸುಂದರಿ..ಮೋಸ ಹೋದ ಡ್ರೈವರ್ ಕೊಲೆ ಮಾಡಿ ಆಗಿದ್ದ ಪರಾರಿ..!

4125
0
SHARE

ಪ್ರತಿಯೊಂದು ಪ್ರೀತಿಯ ಪ್ರಾರಂಭದಲ್ಲಿ ಚೆನ್ನಾಗಿಯೇ ಇರುತ್ತೆ. ಆದ್ರೆ ಅದು ನಂಬಿಕೆ ಪೌಂಡೇಷನ್ ಮೇಲೆ ಗಟ್ಟಿಯಾಗಿ ನಿಂತ್ರೆ ಮಾತ್ರ ಬಾಳಿಕೆ ಬರುತ್ತೆ.  ನಂಬಿಕೆ ಕೈಕೊಟ್ರೆ ಅಥವಾ ಪ್ರೀತಿಸಿದವರಲ್ಲಿ ಒಬ್ಬರು ಮನಸ್ಸು ಬದಲಾಯಿಸಿದ್ರೆ ಅಲ್ಲಿ ಕೊನೆಗೆ ಆಗೋದು ಅನಾಹುತವೆ.

ಸಂಬಂಧಗಳನ್ನ ಬೆಳೆಸೋದು ತುಂಬಾನೆ ಈಸಿ. ಆದ್ರೆ ಅದನ್ನ ಕಾಪಾಡಿಕೊಳ್ಳೋದು ತುಂಬಾನೆ ಕಷ್ಟ. ಇಲ್ಲೂ ಕೂಡಾ ಹಾಗೆ ಆಗಿತ್ತು. 7 ವರ್ಷಗಳಿಂದ ಇದ್ದ ಪ್ರೀತಿ ಅವಳ ಮನಸ್ಸು ಬದಲಾಯಿಸುವಿಕೆಯಿಂದ ಈಗ ಕೈ ಕೊಟ್ಟಿತ್ತು. ಇನ್ನೇನು ಮದುವೆಯಾಗಬೇಕು ಅನ್ನೋ ಸಮಯದಲ್ಲಿ ಆಕೆಗೆ ಅವನು ಇಷ್ಟವಿರಲಿಲ್ಲ. ಹೀಗಾಗಿ ಅವರಿಬ್ಬರ ಮಧ್ಯೆ ಜಗಳ ಶುರುವಾಗಿತ್ತು.ಸಾಬಿರ್ ಮತ್ತು ಸ್ಟೆಲ್ಲಾ ಅಕ್ಕ ಪಕ್ಕದ ಮನೆಯವರು. ಹುಬ್ಬಳ್ಳಿಯ ಶಬರಿ ನಗರದ ನಿವಾಸಿಗಳು. ಇವರಿಬ್ಬರು ಒಟ್ಟಿಗೆ ಹೈಸ್ಕೂಲ್ ನಿಂದ ಓದ್ತಿದ್ರು. ಇದೇ ವೇಳೆ ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತು. ಆದ್ರೆ ಅದನ್ನ ಇಬ್ಬರು ಎಲ್ಲೂ ತೋರಿಸಿಕೊಂಡಿರಲಿಲ್ಲ. ಇಬ್ಬರು ಬದುಕು, ಪ್ರೀತಿ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳುವ ಮೊದಲು ಪ್ರೀತಿಯ ಬಲೆಗೆ ಬಿದ್ದಿದ್ರು.

ಹೀಗಾಗಿ ಅದನ್ನ ಮನೆಯಲ್ಲಿ ಹೇಳುವ ಧೈರ್ಯ ಇಬ್ಬರಿಗೂ ಇರಲಿಲ್ಲ. ಆದ್ರು ಇಬ್ಬರು ಕದ್ದು ಮುಚ್ಚಿ ಆ ಪ್ರೀತಿಯ ನಡೆಸಿಕೊಂಡು ಬರ್ತಿದ್ರು.ಸ್ಟೆಲ್ಲಾ ಮತ್ತು ಸಾಬಿರ್ ಒಂದೇ ಸ್ಕೂಲ್, ಒಂದೇ ಏರಿಯಾದವರಾದ ಕಾರಣ ಅವರಲ್ಲಿ ಆತ್ಮೀಯತೆ ಹೆಚ್ಚಿತ್ತು. ಅಲ್ಲದೆ ಪ್ರೀತಿಯನ್ನ ಕೂಡಾ ಮಾಡ್ತಿದ್ದರಿಂದ ಅನ್ಯೋನ್ಯವಾಗಿ ಇದ್ರು. ಆದ್ರೆ ಆತ ಮನೆಯ ಹತ್ತಿರ ಹೋದಾಗ, ಏರಿಯಾದಲ್ಲಿ ಇರುವಾಗ ಮಾತ್ರ ಆಕೆಯನ್ನ ಅಕ್ಕ ಅಂತ ಕರೆಯುತ್ತಿದ್ದ. ಅದು ಹೆದರಿಕೆಯಿಂದಲೋ, ಅಥವಾ ಅನುಮಾನ ಬರದೇ ಇರಲಿ ಅನ್ನೋ ಕಾರಣಕ್ಕೂ ಆಕೆಯ ಹಾಗೆಯೇ ಕರೆಯುತ್ತಿದ್ದ. ಅಲ್ಲದೆ ಇಬ್ಬರದ್ದು ಬೇರೆ ಬೇರೆ ಧರ್ಮ. ಆದ್ರೂ ನಮಗೆ ಪ್ರೀತಿಯೊಂದೆ ಧರ್ಮ ಅಂತ ಇಬ್ಬರು ನಂಬಿಕೊಂಡಿದ್ರು. ಸ್ಟೆಲ್ಲಾ ಚೆನ್ನಾಗಿ ಓದ್ತಿದ್ಲು. ಬುದ್ಧಿವಂತ ಹುಡುಗಿ ಹೀಗಾಗಿ ಆಕೆ ಚೆನ್ನಾಗಿಯೇ ಓದ್ಕೊಂಡು ಬಿಸಿಎ ಮಾಡ್ಕೊಂಡಿದ್ಲು.

ಅಲ್ಲದೆ ಹುಬ್ಬಳ್ಳಿಯ ಸ್ಕೈ ಮೌಂಟ್ ಅನ್ನೋ ಕಂಪನಿಯೊಂದರಲ್ಲಿ ಎಚ್ ಆರ್  ಕೆಲಸ ಮಾಡ್ತಿದ್ಲು. ಇನ್ನು ಸಾಬಿರ್ ತನ್ನ ಓದನ್ನ ಅರ್ಧಕ್ಕೆ  ನಿಲ್ಲಿಸಿಬಿಟ್ಟಿದ್ದ. ಅಲ್ಲದೆ ಹೊಟ್ಟೆಪಾಡಿಗಾಗಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ.ಆದ್ರೂ ಆಕೆ ಬಿಸಿಎ ಮುಗಿಸೋವರೆಗೂ ಅವರಿಬ್ಬರ ಪ್ರೀತಿ ಗಟ್ಟಿಯಾಗಿಯೇ ಉಳಿದಿತ್ತು. ಇವತ್ತು ಪ್ರೀತಿ ಮಾಡಿದವರು ಮೂರು ತಿಂಗಳು ಸರಿಯಾಗಿ ಒಟ್ಟಿಗೆ ಇರೋದೇ ಕಷ್ಟ. ಅಂತಹದ್ದರಲ್ಲಿ ಇವ್ರು ಹಲವು ವರ್ಷ ಅದನ್ನ ಉಳಿಸಿಕೊಂಡಿದ್ರು ಅಂದ್ರೆ ಅದು ನಿಜಕ್ಕೂ ಗ್ರೇಟ್ ಮ್ಯಾಟರ್. ಆದ್ರೆ ಹೀಗೆ ವರ್ಷಗಟ್ಟಲೆ ಪ್ರೀತಿ ಬದುಕಿನ ಬಗ್ಗೆ ಸಾವಿರಾರು ಕನಸು ಕಟ್ಟಿಕೊಂಡವರು ಈಗ ಅದ್ಯಾಕೋ ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಂಡವರ ಹಾಗೆ ಆಡೋದಕ್ಕೆ ಶುರುಮಾಡಿದ್ರು. ಅದ್ರಲ್ಲೂ ಸ್ಟೆಲ್ಲಾ ಓದು ಮುಗಿಸಿ ಕೆಲಸಕ್ಕೆ ಸೇರಿಕೊಳ್ತಿದ್ದ ಹಾಗೆ ತುಂಬಾನೇ ಬದಲಾಗಿ ಹೋಗಿದ್ಲು.

ಅವಳು ಇಷ್ಟು ದಿನ ಪ್ರೀತಿಸ್ತಿದ್ದ ಹುಡುಗನಿಂದ ನಿಧಾನವಾಗಿ ದೂರವಾಗೋದಕ್ಕೆ ಶುರುಮಾಡಿದ್ಲು. ಪಾಪ ಇವಳ ಪ್ರೀತಿಯನ್ನ ನಿಜ ಅಂತ ನಂಬಿಕೊಂಡಿದ್ದ ಸಾಬಿರ್ ಗೆ ಇದ್ಯಾವುದು ಗಮನಕ್ಕೆ ಮೊದಲಿಗೆ ಬರಲೇ ಇಲ್ಲ.ಆದ್ರೆ ಆಕೆ ಇವನನ್ನ ಅವೈಡ್ ಮಾಡ್ತಿರೋದು ನಿಧಾನವಾಗಿ ಗೊತ್ತಾಗೋದಕ್ಕೆ ಶುರುವಾಯ್ತ. ಯಾಕಮ್ಮ ಹೀಗೆ ಮಾಡ್ತೀಯ ಅಂತ ಕೇಳಿದ್ರೆ ಅದಕ್ಕೆ ಅವಳ ಬಳಿ ಉತ್ತರವಿರಲಿಲ್ಲ. ಅವಳು ಹಾಗೆನಿಲ್ಲ ನನ್ನ ಮನಸ್ಸು ಸರಿಯಿಲ್ಲ ಅಂತ ಹೇಳಿ ಅವನಿಂದ ತಪ್ಪಿಸಿಕೊಂಡು ಹೋಗ್ತಿದ್ಲು. ಅಲ್ಲದೆ ಧರ್ಮದ ವಿಚಾರಕ್ಕಾಗಿ ನಾವಿಬ್ರು ಮದುವೆಯಾಗೋದಕ್ಕೆ ಆಗೋದಿಲ್ಲ ಅಂತ ಈಗ ಹೊಸ ವರಸೆಯನ್ನ ಶುರುಮಾಡಿದ್ಲು. ಅದ್ಯಾವಾಗ ಈಕೆ ನನ್ನನ್ನ ಮದುವೆಯಾಗೋದಿಲ್ಲ ಅಂತ ಅಂದಳೋ ಆಗಿನಿಂದ ಆತ ನಿಜಕ್ಕೂ ಹುಚ್ಚಾನಾಗಿ ಹೋಗಿದ್ದ. ಅವನಿಗೆ ಏನು ಮಾಡಬೇಕು ಅನ್ನೋದು ಗೊತ್ತೇ ಆಗಲಿಲ್ಲ.

ಪರಿಪರಿಯಾಗಿ ಆತ ಆಕೆಯನ್ನ ಕೇಳಿಕೊಂಡಿದ್ದಾನೆ. ಪರಿಪರಿಯಾಗಿ ಆತ ಅವಳನ್ನ ಮದುವೆಗಾಗಿ ಒತ್ತಾಯಿಸಿದ್ದಾನೆ. ಆದ್ರೆ ಆಕೆ ಮಾತ್ರ ನೋ ಅಂತಾನೆ ಹೇಳ್ತಾ ಇದ್ಲು. ಆತ ಆಕೆ ಇವತ್ತು ಸರಿಯಾಗಬಹುದು, ನಾಳೆ ಸರಿಯಾಗಬಹುದು ಅಂತ ಅಂದುಕೊಂಡಿದ್ದ. ಆದ್ರೆ ಆಕೆ ಮಾತ್ರ ಸರಿಯಾಗಲೇ ಇಲ್ಲ. ಅವಳು ಯಾವುದೋ ಒಂದು ವಿಚಾರವನ್ನ ಇವನಿಂದ ಮುಚ್ಚಿಡುತ್ತಲೇ ಬಂದಿದ್ಲು.ಅವತ್ತು ಎಂದಿನಂತೆ ಸ್ಟೆಲ್ಲಾ ತನ್ನ ಆಫೀಸ್ ಗೆ ಬೆಳಗ್ಗೆ 8ಗಂಟೆಗೆ ಹೋಗಿದ್ಲು. ಮನೆಯಿಂದ ಹೋಗುವಾಗ ಅಪ್ಪ ಅಮ್ಮನಿಗೆ ಹೇಳಿ ಹೊರಟಿದ್ಲು. ಆದ್ರೆ ಪ್ರತಿನಿತ್ಯ ಆಕೆ ರಾತ್ರಿ 8ಗಂಟೆಗೆಲ್ಲಾ ಮನೆಗೆ ಬಂದು ಬಿಡ್ತಿದ್ಲು. ಆದ್ರೆ ಅವತ್ತು ಮಾತ್ರ ಆಕೆ 8ಗಂಟೆ ಮನೆಗೆ ಬರಲೇ ಇಲ್ಲ. ಗಂಟೆ ಎಂಟಾಯ್ತು, ಒಂಭತ್ತು ಕಳೆದು ಹೋಯ್ತು. ಮನೆಯವರಿಗೆ ಗಡಿಯಾರ ನೋಡಿ ನೋಡಿ ಸಾಕಾಗಿ ಹೋಯ್ತು. ಆದ್ರು ಮಗಳು ಮನೆ ಸೇರಲಿಲ್ಲ.

ಹೀಗಾಗಿ ಆಕೆಗೆ ಫೋನ್ ಮಾಡಿದ್ದಾರೆ. ಆದ್ರೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಫೋನ್ ಸ್ವಿಚ್ ಆಫ್ ಆಗಿ ಆಕೆ ಮನೆಗೆ ಬರಲಿಲ್ಲ ಅಂದ್ರೆ ಅದು ಯಾವ ಪೋಷಕರಿಗಾದ್ರು ಭಯ ಹುಟ್ಟಿಸುವ ವಿಷಯವೇ ಆಗಿರುತ್ತೆ. ಇದೇ ರೀತಿ ಆಕೆಯ ಪೋಷಕರು ಫುಲ್ ಟೈನ್ ಷನ್ ಮಾಡ್ಕೊಂಡಿದ್ರು.ಆದ್ರೆ ರಾತ್ರಿ ಕಳೆದು ಬೆಳಗ್ಗೆಯಾದ್ರು ಆಕೆಯ ಪತ್ತೆಯೇ ಇರಲಿಲ್ಲ. ಇನ್ನು ನಾವು ಲೇಟ್ ಮಾಡೋದು ಬೇಡ ಅಂತ ಹೇಳಿ ಅವ್ರು ಪೊಲೀಸ್ ಠಾಣೆಗೆ ಹೋಗಿ ದೂರನ್ನ ನೀಡಿದ್ರು.ಇತ್ತ ಅದೇ ದಿನ ಬೆಳಗ್ಗೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ಒಂದು ಫೋನ್ ಕಾಲ್ ಬಂದಿತ್ತು. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಒಂದು ಯುವತಿಯ ಶವ ಬಿದ್ದಿದೆ ಅಂತ ಸ್ಥಳೀಯರು ಫೋನ್ ಹೇಳಿದ್ರು. ಈ ವಿಷಯ ಗೊತ್ತಾಗ್ತಿದ್ದ ಹಾಗೆ ಇನ್ಸ್ ಪೆಕ್ಟರ್ ಎಸ್ ಬಿ ಮಾಳಗೊಂಡ ತಮ್ಮ ಟೀಂ ಕರ್ಕೊಂಡು ಅದರಗುಂಚಿ ಗ್ರಾಮಕ್ಕೆ ಹೋಗಿದ್ರು. ಅಲ್ಲಿ ಹೋಗಿ ನೋಡಿದ್ರೆ ನಿರ್ಜನ ಪ್ರದೇಶದಲ್ಲಿ  ಯುವತಿಯ ಶವವೊಂದು ಬಿದ್ದಿತ್ತು.

ಪೊಲೀಸ್ರು ಆ ಶವವನ್ನ ಪರೀಕ್ಷೆ ಮಾಡಿ ನೋಡಿದಾಗ ಆಕೆಯ ಕತ್ತನ್ನ ಕೊಯ್ದು ಕೊಲೆ ಮಾಡಿರೋದು ಗೊತ್ತಾಗಿತ್ತು. ಆದ್ರೆ ಸತ್ತವಳು ಯಾರು ಅವಳದ್ದು ಯಾವ ಊರು ಇದ್ಯಾವುದು ಆ ಕ್ಷಣಕ್ಕೆ ಪೊಲೀಸ್ರಿಗೆ ಗೊತ್ತಾಗಲಿಲ್ಲ.ಹೀಗಾಗಿ ಪೊಲೀಸ್ರು ಆ ಬಾಡಿಯನ್ನ ಆಸ್ಪತ್ರೆಗೆ ಸಾಗಿಸಿ ಒಂದು ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ರು. ಇತ್ತ ಸ್ಟೆಲ್ಲಾ ಪೋಷಕರು ಪೊಲೀಸ್ರಿಗೆ ದೂರು ನೀಡಿ ಕಣ್ಣೀರು ಹಾಕುತ್ತಾ ಬಂದಿದ್ರು. ನಂತ್ರ ಕೊಲೆಯಾದ ಯುವತಿಯ ಫೋಟೋವನ್ನ ತೆಗೆದು ಪೊಲೀಸ್ರು ಎಲ್ಲಾ ಕಡೆ ಕಳುಹಿಸಿದ್ರು. ಆಗ ಇದೇ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಅವರಿಗೆ ಇಲ್ಲೊಬ್ಬಳು ಹುಡುಗಿ ಕಾಣೆಯಾಗಿದ್ದಾಳೆ ಅನ್ನೋ ಮಾಹಿತಿ ಸಿಕ್ಕಿತ್ತು. ಹೀಗಾಗಿ ದೂರು ಕೊಟ್ಟಿದ್ದ ಸ್ಟೆಲ್ಲಾಳ ಪೋಷಕರಿಗೆ ಏನಕ್ಕೂ ಒಂದು ಸಾರಿ ಆ ಅನಾಮಿಕ ಯುವತಿಯ ಬಾಡಿಯನ್ನ ನೋಡ್ಕೊಂಡು ಬರೋದಕ್ಕೆ ಪೊಲೀಸ್ರು ಹೇಳಿದ್ರು.

ಹೀಗಾಗಿ ಇನ್ನು ಯೋಚನೆ ಮಾಡ್ತ ಕೂತ್ಕೊಂಡ್ರೆ ಆಗೋದಿಲ್ಲ ಅಂತ ಎಲ್ಲ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗಿ ಆ ಯುವತಿಯ ಬಾಡಿಯನ್ನ ನೋಡಿದ್ದಾರೆ. ಆ ಮೃತ ದೇಹವನ್ನ ನೋಡ್ತಿದ್ದ ಹಾಗೆ ಅವರಿಗೆ ಜೀವವೇ ಹೋದ ಹಾಗೆ ಅನಿಸಿತ್ತು. ಯಾಕಂದ್ರೆ ಆ ಶವಾಗಾರದಲ್ಲಿ ಇದ್ದ ಹೆಣ ಬೇರೆ ಯಾರದ್ದೋ ಆಗಿರಲಿಲ್ಲ. ಅದು ಸ್ಟೆಲ್ಲಾಳದ್ದೇ ಆಗಿತ್ತು. ಅಂತಹ ದೃಶ್ಯವನ್ನ ಯಾವ ಪೋಷಕರು ಕೂಡಾ ನೋಡೋದಕ್ಕೆ ಆಗೋದಿಲ್ಲ. ತಾವೇ ಹೆತ್ತು ಹೊತ್ತ ಮಗಳು ಈಗ ಕಣ್ಣೆದುರಿಗೆ ಶವವಾಗಿ ಹೋಗಿದ್ದಾಳೆ ಅಂದ್ರೆ ಅದನ್ನ ಆ ಹೆತ್ತ ಕರುಳು ತಡೆದುಕೊಳ್ಳುತ್ತಾ ಹೇಳಿ.ಈ ಕೇಸ್ ನಲ್ಲಿ ಕೊಲೆಗಾರ ಯಾರು ಅನ್ನೋ ಕಣ್ಣಾಮುಚ್ಚಾಲೆ ಆಟ ಜಾಸ್ತಿದಿನ ನಡೆಯಲೇ ಇಲ್ಲ. ಯಾಕಂದ್ರೆ ಸ್ಟೆಲ್ಲಾಳ ಪೋಷಕರೇ ಇವನೇ ಆರೋಪಿ ಅಂತ ಬೆರಳು ಮಾಡಿ ತೋರಿಸಿದ್ರು. ಪೊಲೀಸ್ರಿಗೆ ಆರೋಪಿ ಇವನೇ ಅಂತ ಗೊತ್ತಾದ ಮೇಲೆ ಖಾಕಿ ಟೀಂ ನೇರವಾಗಿ ಆತನ ಮನೆಗೆ ಹೋಗಿತ್ತು.

ಆದ್ರೆ ಆತ ಅಲ್ಲಿ ಇರಲಿಲ್ಲ. ಅವನು ಕಳೆದ ಆರನೇ ತಾರೀಖಿನಿಂದ ಮನೆಗೆ ಬಂದಿಲ್ಲ ಅಂತ ಪೋಷಕರು ಹೇಳಿದ್ರು. ಅಲ್ಲದೆ ಅವನ ಮೊಬೈಲ್ ನಂಬರ್ ಗೆ ಟ್ರೈ ಮಾಡಿದ್ರೆ ಅದು ಕೂಡಾ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಪೊಲೀಸ್ರಿಗೆ ಇವನು ಎಲ್ಲಿದ್ದಾನೆ ಅನ್ನೋದು ಗೊತ್ತಿರಲಿಲ್ಲ. ಕೊನೆಗೆ ಪೊಲೀಸ್ರು ಸ್ಟೆಲ್ಲಾಳ ನಂಬರ್ ಗೆ ಟ್ರೈ ಮಾಡಿದಾಗ ಅದು ಆನ್ ನಲ್ಲಿರೋದು ಗೊತ್ತಾಗಿತ್ತು. ಹೀಗಾಗಿ ಪೊಲೀಸ್ರು ಆ ನಂಬರ್ ಅನ್ನ ಟ್ರೇಸ್ ಮಾಡಿದ್ರು. ಆಗ ಈ ನಂಬರ್  ಗುಜರಾತ್ ಮತ್ತು ಅಹ್ಮದಬಾದ್ ನಲ್ಲಿ ಆಕ್ಟೀವ್ ಆಗಿರೋದು ಗೊತ್ತಾಗಿತ್ತು.ಪೊಲೀಸ್ರಿಗೆ ಈ ಕೇಸ್ ನಲ್ಲಿ ಏನಾಗಿದೆ ಅನ್ನೋದು ಕ್ಲಿಯರ್ ಆಗಿ ಗೊತ್ತಿರಲಿಲ್ಲ. ಅದ್ಯಾವಾಗ ಸಾಬಿರ್ ನನ್ನ ಕರ್ಕೊಂಡು ವಿಚಾರಣೆ ನಡೆಸಿದ್ರೋ ಆಗ ಆತ ಅವರಿಬ್ಬರ ಕಥೆಯನ್ನ ಎಳೆಎಳೆಯಾಗಿ ಹೇಳೋದಕ್ಕೆ ಶುರುಮಾಡಿದ್ದ.

ಸರ್ ನಾವಿಬ್ರು ಹೈಸ್ಕೂಲ್ ನಿಂದ ಲವ್ ಮಾಡ್ತಿದ್ವಿ. ಆದ್ರೆ ಅವಳು ಬಿಸಿಎ ಮುಗಿಸಿ ಕೆಲಸಕ್ಕೆ ಸೇರಿದ ಮೇಲೆ ನನ್ನನ್ನ ಅವೈಡ್ ಮಾಡೋದಕ್ಕೆ ಶುರುಮಾಡಿದ್ಲು. ನಾನು ಡ್ರೈವರ್ ಅನ್ನೋ ಕಾರಣಕ್ಕೆ ಆಕೆ ನನ್ನನ್ನ ಅವೈಡ್ ಮಾಡ್ತಿದ್ಲು. ನಾನು ಸಾಕಷ್ಟು ಬಾರಿ ಈ ಬಗ್ಗೆ ಅವಳನ್ನ ಕೇಳಿ ಅವಳಿಗೆ ಬುದ್ಧಿ ಹೇಳಿದ್ದೆ. ಆದ್ರೆ ಅವಳು ಅದನ್ನ ಕೇಳಿರಲಿಲ್ಲ. ಅಲ್ಲದೆ ಆಕೆ ಬೇರೊಬ್ಬ ಹುಡುಗನ ಜೊತೆ ಚಾಟ್ ಮಾಡ್ತಿದ್ಲು. ಈ ವಿಚಾರಕ್ಕೆ ನಮ್ಮಿಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು ಅಂತಾನು ಆತ ಪೊಲೀಸರ ಮುಂದೆ ಹೇಳಿದ್ದ. ಅವಳು ನನ್ನನ್ನ ಅವೈಡ್ ಮಾಡಿ ಬೇರೊಬ್ಬನ ಜೊತೆ ಲವ್ ಶುರುಮಾಡಿದ್ಲು. ಇದೇ ಕಾರಣಕ್ಕೆ ನಾನು ಅವಳನ್ನ ಮುಗಿಸಿದೆ ಅಂತ ಯಾವುದೇ ಪಶ್ಚತ್ತಾಪವಿಲ್ಲದೆ ಆತ ಹೇಳಿದ್ದ.

 

LEAVE A REPLY

Please enter your comment!
Please enter your name here