Home Crime ಕೆಲಸ ಹುಡುಕೋ ಹುಡುಗಿರೇ ಹುಷಾರ್..! ಆಮಿಷ ತೋರಿ ಸೆಕ್ಸ್ ದಂಧೆಗೆ ದೂಡುತ್ತೆ ಗ್ಯಾಂಗ್..!

ಕೆಲಸ ಹುಡುಕೋ ಹುಡುಗಿರೇ ಹುಷಾರ್..! ಆಮಿಷ ತೋರಿ ಸೆಕ್ಸ್ ದಂಧೆಗೆ ದೂಡುತ್ತೆ ಗ್ಯಾಂಗ್..!

662
0
SHARE

ಕೆಲಸ ಹುಡ್ಕೋ ಹುಡುಗಿರೇ ಹುಷಾರ್ ಆಗಿರಿ. ಹೆಚ್ಚಿನ ಸಂಬಳದ ಆಮಿಷ ತೊರಿಸೋ ಗ್ಯಾಂಗ್ ನಿಮ್ಮನ್ನು ಸೆಕ್ಸ್ ದಂಧೆಗೆ ದೂಡಿ ನಿಮ್ಮನ್ನು ವೇಶಾವಾಟಿಕೆಕೂ ಕೂಡ ತಳ್ಳುತ್ತಾರೆ.

ಹೀಗೆ ಕೆಲಸ ಕೊಡಿಸಿ ಹೆಚ್ಚಿನ ಸಂಬಂಳದ ಆಸೆ ತೋರಿಸಿ ಯುವತಿಯರನ್ನ ಟಾರ್ಗೆಟ್ ಮಾಡ್ಕೊಂಡು ಹೆಚ್ಚು ಸಂಬಳ ಕೊಡೋ ಕಂಪನಿಯಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ವಂಚಿಸಿದ್ದ ಆರೋಪಿಗಳನ್ನ ಪೊಲೀಸ್ರು ಬಂಧಿಸಿದ್ದು, ಖಾಕಿ ಕ್ಷಿಪ್ರ ಕಾರ್ಯಾಚರಣೆಯಿಂದ ಐವರು ಯುವತಿಯರು ಬಚಾವ್ ಆಗಿದ್ದಾರೆ. ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಅಲ್ಲದಿದ್ರು, ಕಂಪನಿಯಲ್ಲಿ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸಬೇಕು ಅಂತ ಕೆಲಸ ಹುಡುಕುತ್ತಿರೋ ಯುವತಿಯರನ್ನೆ ಟಾರ್ಗೆಟ್ ಮಾಡ್ಕೊಂಡ ಕೆಲ ವಂಚಕರ ತಂಡ.

ಜಾಲತಾಣದ ಲೋಕೆನ್ ಟೋ ಆ್ಯಪ್ ಸರ್ಚ್ ಮಾಡಿದ ಯುವಕರನ್ನ ಟಾರ್ಗೆಟ್ ಮಾಡಿ ಯುವತಿಯರಿಂದ ಲೈಂಗಿಕ ಪ್ರಚೋದನೆ ಮಾಡುವಂತೆ ತಿಳಿಸಿ ಯುವಕರಿಂದ ಹಣ ಗಳಿಸೋ ಉದ್ದೇಶ ಇಟ್ಕೊಂಡಿದ್ದವರು ಅಂದರ್ ಆಗಿದ್ದಾರೆ. ಶ್ರವಣಬೆಳಗೊಳ ಮೂಲದ ದಿನೇಶ್, ಕೆ.ಆರ್.ಪೇಟೆ ಮೂಲದ ಕಿರಣ್ ಮತ್ತು ಪ್ರಜ್ವಲ್ ಮೂವರು ವಂಚಕರನ್ನು ಬಂಧಿಸಿದ್ದಾರೆ. ಇನ್ನೂ ವಿಚಾರಣೆ ನೆಡೆಸದೆ ಲಾಡ್ಜ್ ರೂಂ ನೀಡಿದ ಶ್ರೀನಿವಾಸ್ ಎಂಬುವರನ್ನು ಬಂಧಿಸಲಾಗಿದೆ.

ಬೆಂಗಳೂರು ಹೊರವಲಯದಲ್ಲಿರುವ ಕುಣಿಗಲ್ ಬೈಪಾಸ್ನಲ್ಲಿರೋ ವುಡ್ ಲ್ಯಾಂಡ್ ಲಾಡ್ಜ್ ನಲ್ಲಿ ನೆಲಮಂಗಲ ಟೌನ್ ಪೊಲೀಸ್ರು ದಾಳಿ ನೆಡೆಸಿ ಐವರು ಯುವತಿಯನ್ನ ರಕ್ಷಿಸಿದ್ದಾರೆ.ಇನ್ನೂ ಪೊಲೀಸರಿಂದ ರಕ್ಷಿಸಲ್ಪಟ್ಟ ಐವರು ಯುವತಿಯರು ಶಿವಮೊಗ್ಗ, ಭದ್ರಾವತಿ ಹಾಗೂ ಆಂಧ್ರಪ್ರದೇಶದ ಮೂಲದವರಾಗಿದ್ದು, ಜಾಲಹಳ್ಳಿ ಕ್ರಾಸ್ ಸಮೀಪದಲ್ಲಿರೋ ಕಾಲ್ ಸೆಂಟರ್ ವೋದ್ರಲ್ಲಿ ಕೆಲದಿನಗಳು ಕೆಲಸ ನಿರ್ವಹಿಸಿದ್ರಂತೆ. ಬಳಿಕ ಆ ಕೆಲಸ ಬೇಡವೆಂದು ವಿರೋಧ ಮಾಡಿದ ಬಳಿಕ ಯುವತಿಯರನ್ನ ನೆಲಮಂಗಲದ ಲಾಡ್ಜ್ ನಲ್ಲಿ ರೂಂ ಬಾಡಿಗೆ ಪಡೆದು ಕೂಡುಹಾಕಿದ್ದ ವೇಳೆ ಹೆಲ್ಪ್ ಲೈನ್ ಮೂಲಕ ಯುವತಿಯರೇ ನೆಲಮಂಗಲ ಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದು,

ಖಚಿತ ಮಾಹಿತಿ ಪಡೆದ ನೆಲಮಂಗಲ ಪೊಲೀಸ್ರು ಲಾಡ್ಜ್ ಮೇಲೆ ದಾಳಿ ನೆಡೆಸಿ ವಂಚಕರನ್ನ ವಶಕ್ಕೆ ಪಡೆದು ಐವರು ಯುವತಿಯನ್ನ ರಕ್ಷಿಸಿದ್ರು.ಬಳಿಕ ಆರೋಪಿಗಳನ್ನ ತನಿಖೆಗೊಳಪಡಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.ಇನ್ನೂ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಅವಕಾಶಕ್ಕಾಗಿ ಸಿಲಿಕಾನ್ ಸಿಟಿಗೆ ಹರಸಿ ಬರೋ ಎಷ್ಟೋ ಯುವಕ, ಯುವತಿಯರಿಗೆ ಕೆಲ ಜಾಬ್ ಏಜೆನ್ಸಿಗಳು ಕೆಲಸ ಕೊಡಿಸೋದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ಉಂಡೆ ನಾಮ ಹಾಕಿರೋ ಪ್ರಕರಣಗಳು ಸಾಕಷ್ಟು ನೋಡುದ್ರು, ಎಚ್ಚೆತ್ತುಕೊಳ್ಳದ ನಮ್ಮ ಯುವ ಪೀಳಿಗೆಯ ಬುದ್ದಿಗೇಡಿತನಕ್ಕೆ ಏನ್ಹೇಳಬೇಕೋ ಆ ದೇವರಿಗೆ ಗೊತ್ತು…

LEAVE A REPLY

Please enter your comment!
Please enter your name here