Home Cinema “ಕೆ.ಜಿ.ಎಫ್” ದಾಖಲೆ ಮುರಿದನಂತೇ “ಯಜಮಾನ”..! “ಡಿ” ಬ್ರ್ಯಾಂಡ್‌ಗೆ “ತೆಲುಗು, ತಮಿಳೀನಲ್ಲೂ”ಬೇಡಿಕೆ..! ಅಂದು “ಹಾಡುಗಳ ಮೆರವಣಿಗೆ, ಇಂದು...

“ಕೆ.ಜಿ.ಎಫ್” ದಾಖಲೆ ಮುರಿದನಂತೇ “ಯಜಮಾನ”..! “ಡಿ” ಬ್ರ್ಯಾಂಡ್‌ಗೆ “ತೆಲುಗು, ತಮಿಳೀನಲ್ಲೂ”ಬೇಡಿಕೆ..! ಅಂದು “ಹಾಡುಗಳ ಮೆರವಣಿಗೆ, ಇಂದು “ಟ್ರೇಲರ್” ತಾಂಡವ..!

674
0
SHARE

ಯಜಮಾನ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿರುವ ಮೋಸ್ಟ್ ಅವೇಟೆಡ್ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ.. ಸಾಂಗ್ ಮತ್ತು ಟೀಸರ್ ಮೂಲಕ ಸಿಕ್ಕಾಪಟ್ಟೆ ಕ್ರೇಝ್ ಹುಟ್ಟು ಹಾಕಿರುವ ಸಿನಿಮಾದ ಅಂಗಳದಿಂದ ಹೊಚ್ಚ ಹೊಸ ಟ್ರೇಲರ್ ತೂರಿಬಂದಿದೆ.

ಆನೆ ನಡೆದಿದ್ದೆ ದಾರಿ ಎಂದು ಎದ್ದು ಬಂದಿದ್ದಾನೆ ಒನ್ ಅಂಡ್ ಓನ್ಲಿ ಡಿ- ಬಾಸ್. ಅವರ್ರೇ ಕರುನಾಡ ಪ್ರೀತಿಯ ನಯಾ ಯಜಮಾನ.ಯಸ್.. ರಿಲೀಸ್‌ಗೂ ಮುನ್ನವೇ ಭಾರಿ ಹೈಪ್ ಕ್ರಿಯೇಟ್ ಮಾಡಿರೋ ಯಜಮಾನ ಚಿತ್ರದ ಜ್ವಾಲಾಮುಖಿಯಂತಹ ಟ್ರೇಲರ್ ರಿಲೀಸ್ ಆಗಿದೆ. ಆಕಾಶಕ್ಕೆ ತಲೆಕೊಟ್ಟು ಭೂಮಿಗೆ ಬೆವರಿಳಿಸಿ ನಿಯತ್ತಿನಿಂದ ಕಟ್ಟಿರುವ ಸ್ವಂತ ಬ್ರ್ಯಾಂಡೋ ಎಂದು ಖಡಕ್ ಡೈಲಾಗ್ ಹೊಡೆಯುತ್ತಾ ದರ್ಶನ್ ಟ್ರೇಲರ್‌ನಲ್ಲಿ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ಧಾರೆ.

ಆಕ್ಷನ್ & ಥ್ರಿಲ್ಲ್ ಪ್ಯಾಕ್ಡ್ ಆಗಿರುವ ಟ್ರೇಲರ್ ಸಖತ್ ಕಿಕ್ ಕೊಡೊದ್ರ ಜೊತೆಗೆ ಇಂಟ್ರೆಸ್ಟಿಂಗಾಗಿ ಮೂಡಿಬಂದಿದೆ. ಚಿತ್ರದ ಫಸ್ಟ್ ಲುಕ್ ಮತ್ತು ನಾಲ್ಕು ಅದ್ಬುತವೆನ್ನಿಸುವ ಸಾಂಗ್ ಮೂಲಕ ಬ್ಯಾಂಡ್ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಟ್ರೆಂಡ್ ಕ್ರಿಯೇಟ್ ಮಾಡಿರುವ ಚಿತ್ರ ಯಜಮಾನ. ಹಾಡುಗಳೇ ಈ ಪರಿ ಸದ್ದು ಮಾಡ್ತಿರುವಾಗ ಇನ್ನು ಚಿತ್ರ ಹೇಗೆ ಮೂಡಿಬಂದಿರುತ್ತೆ ಎಂದು ಕಾದುಕುಳಿತಿದ್ದ, ಅಭಿಮಾನಿಗಳು ಟ್ರೇಲರ್ ನೋಡಿ ಫುಲ್ ದಿಲ್ ಖುಷ್ ಆಗಿದ್ದಾರೆ. ಮಿಠಾಯಿ ತಿಂದಷ್ಟೇ ಸಂತಸ ವ್ಯಕ್ತಪಡಿಸ್ತಿದ್ದಾರೆ.

ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿದ್ದಾರೆ ಡಿ ಭಕ್ತಗಣ.ಹೌದು.. ದಾಸನ ಈ ನಯಾ ಟ್ರೇಲರ್‌ನಲ್ಲಿ ಎಲ್ಲಾ ಎಲಿಮೆಂಟ್ಸ್‌ಗಳ ಹೂರಣವಿದೆ. ಆಕ್ಷನ್, ಖಡಕ್ ಡೈಲಾಗ್‌ಗಳ ಅಬ್ಬರವಿದೆ. ದಚ್ಚು ಅಭಿಮಾನಿಗಳಿಗೆ ಏನೆಲ್ಲಾ ಅಂಶಗಳು ಬೇಕೋ ಅದೆಲ್ಲವೂ ಚಿತ್ರದ ಟ್ರೇಲರ್‌ನಲ್ಲಿ ಚಿತ್ರತಂಡ ಅಡಕವಾಗಿಸಿದೆ. ಜೊತೆಗೆ ಮನೆ ಹುಡುಗನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಎಲಿಮೆಂಟ್ ಕಂಟೆಂಟ್ ಒಳಗೊಂಡಿರುವ ಚಿತ್ರದಲ್ಲಿ ದರ್ಶನ್ ಮಾಸ್ ಲುಕ್ ಜೊತೆಗೆ ಕ್ಲಾಸ್ ಲುಕ್‌ನಲ್ಲಿ ಕಣ್ಣು ಕುಕ್ಕುತ್ತಿದ್ದಾರೆ.

ದರ್ಶನ್‌ಗೆ ಜೋಡಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ರೋಮ್ಯಾನ್ಸ್ ಮಾಡಿದ್ದಾರೆ. ಮಾಡ್ರನ್ ಹುಡುಗಿಯಾಗಿ ನಟಿಸಿರುವ ರಶ್ಮಿಕಾ ಕ್ಯೂಟ್ ಕ್ಯೂಟ್ ಮಾತುಗಳಿಂದ ಚೆಂದುಳ್ಳಿ ಚೆಲುವೆ ಅಭಿಮಾನಿಗಳಲ್ಲಿ ಇನ್ನಷ್ಟು ಕಾಡಲಿದ್ದಾರೆ. ಸ್ವಜರ್ ಲ್ಯಾಂಡ್‌ನ ಸುಂದರ ತಾಣಗಳಲ್ಲಿ ಚಿತ್ರೀರಕಣಗೊಂಡಿರುವ ಹಾಡಿನಲ್ಲಿ ರಶ್ಮಿಕಾ ಮತ್ತು ದಚ್ಚು ಲುಕ್ ಕೂಡ ಟ್ರೇಲರ್‌ನಲ್ಲಿ ಸೊಗಸಾಗಿ ಮೂಡಿಬಂದಿದೆ.ಟ್ರೇಲರ್ ಬಿಡುಗೆಯಾದ ಕೇವಲ ೮ ನಿಮಿಷದಲ್ಲಿ ಒಂದು ಲಕ್ಷ ವೀಕ್ಷಣೆಯನ್ನು ಟ್ರೇಲರ್ ಪಡೆದುಕೊಂಡಿದೆ.

ಈ ಹಿಂದೆ ಇದ್ದ ಎಲ್ಲಾ ರೆಕಾರ್ಡ್‌ಗಳು ಧೂಳಿ ಪಟಮಾಡಿದ್ದು. ಸೋಷಿಯಲ್ ಮೀಡಿಯಾದಲ್ಲಿ ನಂ ಒನ್ ಟ್ರೆಂಡಿಂಗ್‌ನಲ್ಲಿದೆ. ಅಲ್ಲದೆ ವಿಶ್ವವ್ಯಾಪಿ ರಿಲೀಸ್ ಆಗುವ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಕೆ.ಜಿ.ಎಫ್ ದಾಖಲೆಯನ್ನು ಯಜಮಾನ ಮೂಲೆ ಗುಂಪು ಮಾಡಿದ್ದಾರೆ. ಗೆದ್ದು ಬೀಗುವ ಮುನ್ಸೂಚನೆಯನ್ನು ನೀಡ್ತಿದ್ದಾನೆ. ರಶ್ಮಿಕಾ ಮಂದಣ್ಣ, ತಾನ್ಯ ಹೂಪೆ, ಧನಂಜಯ್, ಠಾಕೂರ್ ಅನೂಪ್ ಸಿಂಗ್ ಹಾಗೂ ರವಿ ಶಂಕರ್ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

ದೇವರಾಜ್, ಸಾಧುಕೋಕಿಲಾ, ಶಿವರಾಜ್ ಕೆ.ಆರ್ ಪೇಟೆ, ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಶೈಲಜಾ ನಾಗ್ ಮತ್ತು ಬಿ. ಸುರೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ವಿ.ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಷನ್ ೨೫ನೇ ಚಿತ್ರ ಇದಾಗಿದ್ದು. ಚಿತ್ರದ ಹೈಪ್ ದಿನದಿಂದ ದಿನಕ್ಕೆ ಹೆಜ್ಜಾಗ್ತಿದೆ. ಟ್ರೇಲರ್‌ನಲ್ಲಿ ಸಿನಿಮಾದ ಬಿಡುಗಡೆಯ ದಿನಾಂಕ ಕೂಡ ಚಿತ್ರತಂಡ ರಿಲೀಸ್ ಮಾಡಿದೆ.

ಒಟ್ನಲ್ಲಿ ಯಜಮಾನ ಪಕ್ಕಾ ಔಟ್ ಅಂಡ್ ಔಟ್ ಮಸಾಲ ಎಂಟಟೈನರ್ ಆಗಿರಲಿದ್ದು. ಚಿತ್ರದ ಫಸ್ಟ್ ಲುಕ್. ಮೇಕಿಂಗ್, ಟೀಸರ್ ಮೂಲಕವೇ ಸದ್ದು ಮಾಡುತ್ತಿರೋ ಯಜಮಾನ ಸದ್ಯ ಟ್ರೇಲರ್ ಮೂಲಕ ಬ್ಯಾಂಗ್ ಮಾಡ್ತಿದ್ದು. ಮಾರ್ಚ್೧ಕ್ಕೆ ತೆರೆಗೆ ಅಪ್ಪಳಿಸಲಿದೆ. ಅಲ್ಲವರೆಗೂ ಪವರ್ ಪ್ಯಾಕ್ಡ್ ಚಿತ್ರದ ಟ್ರೇಲರ್ ನೋಡಿ ಎಂಜಾಯ್ ಮಾಡ್ತೀರಿ.

LEAVE A REPLY

Please enter your comment!
Please enter your name here