Home District ಕೇಂದ್ರದಿಂದ ಮತ್ತೊಂದು ಸ್ಟ್ರೋಕ್; ಪಿಂಕ್ ನೋಟ್ ಪ್ರಿಂಟಿಂಗ್ ಸ್ಟಾಪ್.! ಅಮಾನ್ಯವಾಯ್ತು; ಮುದ್ರಣ ಸ್ಥಗಿತವಾಯ್ತು ಮೋದಿಜೀ ಮುಂದೇನು?

ಕೇಂದ್ರದಿಂದ ಮತ್ತೊಂದು ಸ್ಟ್ರೋಕ್; ಪಿಂಕ್ ನೋಟ್ ಪ್ರಿಂಟಿಂಗ್ ಸ್ಟಾಪ್.! ಅಮಾನ್ಯವಾಯ್ತು; ಮುದ್ರಣ ಸ್ಥಗಿತವಾಯ್ತು ಮೋದಿಜೀ ಮುಂದೇನು?

664
0
SHARE

ಅಂದು ನವೆಂಬರ್ 8 ನೇ ತಾರೀಖು 2016.. ರಾತ್ರಿ 8ರ ಸಮಯ, ಟಿವಿಯಲ್ಲಿ ಪ್ರತ್ಯಕ್ಷರಾದ ಮೋದಿ ಈ ಮಾತನ್ನ ಹೇಳಿದ್ರು.  ಈ ಮಾತು ಕೇಳುತ್ತಿದ್ದಂತೆ ದೇಶವಾಸಿ ದಗ್ಗನೆ ಎದ್ದು ಕುಳಿತಿದ್ದ, ರಾತ್ರಿ ಊಟ ಮುಗಿಸಿ ಮಲಗಲು ರೆಡಿಯಾಗುತ್ತಿದ್ದ ಪ್ರಜೆಗಳ ಮನಸ್ಸಿನಲ್ಲಿ ಮುಂದೇನು ಅನ್ನೋ ಪ್ರಶ್ನೆ ಬಿಟ್ಟರೆ ಬೇರೆ ಏನು ಇರಲಿಲ್ಲ, ಅಂದು ಮೋದಿ ತೆಗೆದುಕೊಂಡಿದ್ದು ಅಕ್ಷರಶಃ ಕ್ರಾಂತಿಕಾರಕ ನಿರ್ಧಾರ, ದೇಶದಲ್ಲಿ ಹಿಂದೆಂದು ಕಂಡು ಕೇಳರಿಯದ, ಯಾವ ಪ್ರಧಾನಿಯೂ ತೆಗೆದುಕೊಳ್ಳದ ಗಟ್ಟಿ ನಿರ್ಧಾರ, ದೇಶದ ಅರ್ಥ ವ್ಯವಸ್ಥೆಗೆ ಸವಾಲಾಗಿದ್ದ ಪಟ್ಟಭದ್ರ ಹಿತಾಸಕ್ತಿಗಳನ್ನ ಸೆದೆ ಬಡಿಯಲು ತೆಗೆದುಕೊಂಡ ಅಚಾನಕ್ ನಿರ್ಧಾರ. ಆ ನಿರ್ಧಾರ ಬೇರೆ ಯಾವುದು ಅಲ್ಲ ನನ್ ಅದರ್ ದೆನ್ ನೋಟ್ ಬ್ಯಾನ್, ಅರ್ಥಾತ್ ಅಪನಗದೀಕರಣ…

ನರೇಂದ್ರ ಮೋದಿ ಅಂದು ತೆಗೆದು ಕೊಂಡ ನಿರ್ಧಾರವನ್ನ ದೇಶವಾಸಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ, ನೋಟ್ ಬ್ಯಾನ್ ನಂತರದ ಯಾತನೆಗಳು, ದೇಶಕ್ಕಾಗಿ ಕ್ಯೂ ನಿಂತ ಪ್ರಜೆಗಳು, ಎಲ್ಲಿ ನೋಡಿದ್ರು ಬ್ಯಾಂಕ್ ಮುಂದೆ ನೋ ಕ್ಯಾಶ್ ಅನ್ನೋ ಬೋರ್ಡುಗಳು, ಬ್ಯಾಂಕ್ ಮುಂದೆ ಕಿಲೋ ಮೀಟರ್ ಗಟ್ಟಲೇ ಸಾಲುಗಳು, ಪೊಲೀಸರ ಕೈಯಲ್ಲಿ ಲಾಠಿಯಿಂದ ತಿಂದ ಒದೆಗಳು, ನೋಟ್ ಬ್ಯಾನ್ ಕುರಿತಾದ ಚರ್ಚೆಗಳು, ವಿರೋಧ ಪಕ್ಷಗಳ ಚೀರಾಟ, ಆಡಳಿತ ಪಕ್ಷದ ಸಮರ್ಥನೆ, ದಿನ ಬೆಳಗಾದ್ರೆ ಒಂದೊಂದು ಬ್ಯಾಂಕ್ ರೂಲ್ಸ್ ಗಳು, ನೋಟ್ ಎಕ್ಸೆಂಚ್ ಮಾಡಿದ ಮೇಲೆ ಬೆರಳಿಗೆ ಹಚ್ಚುತ್ತಿದ್ದ ಇಂಕು, ಬದಲಾದ ಗುಲಾಬಿ ನೋಟಿನೊಂದಿಗೆ ಸೆಲ್ಫಿ, 2000 ನೋಟಿನ ಮೇಲಿರೋ ಮೈಕ್ರೋ ಚಿಪ್ಪಿನ ವದಂತಿ ಹೀಗೆ ಹೇಳುತ್ತಾ ಹೋದ್ರೆ ನೋಟ್ ಅನ್ನೋ ನಿರ್ಧಾರದ್ದೆ ಒಂದು ದೊಡ್ಡ ಅಧ್ಯಾಯವಾಗಿ ಬಿಡುತ್ತೆ.

ಮೋದಿ ತೆಗೆದುಕೊಂಡ ಈ ನಿರ್ಧಾರಕ್ಕೆ ಕಾಳಧನಿಕರು, ತೆರಿಗೆ ಕಳ್ಳರು ಗಢ ಗಢ ನಡುಗುತ್ತಾರೆ ಅಂತಾ ಭಾವಿಸಲಾಗಿತ್ತು, ಸರ್ಕಾರಕ್ಕೆ ಕಣ್ಣು ತಪ್ಪಿಸಿ ಇಟ್ಟಿದ್ದ ಕಳ್ಳ ದುಡ್ಡು ಹೊರ ಬರುತ್ತೆ ಅಂತಾನೇ ಹೇಳಲಾಗಿತ್ತು,. ದೇಶಕ್ಕೆ ದೇಶವೇ ಅಚ್ಚೆದಿನ್ ಆನೇವಾಲಿಯೇ ಅಂತಾ ಸಂತಸ ಪಟ್ಟಿತ್ತು.ಹಳೆಯ ಐನೂರು ಮತ್ತು ಸಾವಿರದ ನೋಟುಗಳು ಇತಿಹಾಸದ ಕಾಲಗರ್ಭದಲ್ಲಿ ಕಣ್ಮರೆಯಾಗಿತ್ತು. ಆಗ ಚಲಾವಣೆಗೆ ಬಂದ ಹೊಸ ನೋಟೇ ಈ ಪಿಂಕ್ ಕಲರ್ ಎರಡು ಸಾವಿರದ ನೋಟು.ಎರಡಪ ಸಾವಿರ ನೋಟು ಬಂದಾಗಿನಿಂದ ಒಂದಲ್ಲ ಒಂದು ರೀತಿಯ ಚರ್ಚೆಗೆ ಗ್ರಾಸವಾಗಿತ್ತು. ಕೆಲವು ಅರ್ಥಿಕ ತಜ್ಞರು ಎರಡು ಸಾವಿರ ನೋಟು ಚಲಾವಣೆಗೆ ತಂದಿದ್ದು ತಪ್ಪು ಅನ್ನೋ ನಿರ್ದಾರಕ್ಕೂ ಬಂದಿದ್ರು, ಅಷ್ಟೆ ಅಲ್ಲ ಎರಡು ಸಾವಿರದ ನೋಟು ಕಾಳ ಧನಿಕರಿಗೆ ವರವಾಗುವ ಸಾಧ್ಯತೆ ಹೆಚ್ಚಾಗಿದೆ ಅಂತಾ ವಾದಿಸಿದ್ರು,

ಈ ಹೊಸ ನೋಟಿನಿಂದ ಬಡವರಿಗೆ ಯಾವುದೇ ಉಪಯೋಗವಿಲ್ಲ, ಶ್ರೀಮಂತರಿಗೆ ಮಾತ್ರ ಅನ್ನೋ ಮಾತುಗಳು ಆಗ ಕೇಳುತ್ತಿದ್ವು. ಆದ್ರೀಗ ಆ ಎಲ್ಲಾ ಮಾತುಗಳಿಗೂ ಮಾತ್ರವಲ್ಲ ಎರಡು ಸಾವಿರ ನೋಟಿಗೂ ಬ್ರೇಕ್ ಬಿದ್ದಿದೆ.ಅಪನಗದೀಗರಣ ಪ್ರಕ್ರಿಯೆಯ ಸಂದರ್ಭದಲ್ಲಿ ಚಲಾವಣೆಗೆ ಬಂದಿದ್ದ 2 ಸಾವಿರ ರು. ಮೌಲ್ಯದ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಅತ್ಯಂತ ಕನಿಷ್ಠ ಎನ್ನಬಹುದಾದ ಪ್ರಮಾಣಕ್ಕೆ ಇಳಿಸಿದೆ. ಹಾಗೆಂದು 2 ಸಾವಿರ ರು. ಮೌಲ್ಯದ ನೋಟುಗಳ ಚಲಾವಣೆ ನಿಲ್ಲುವುದಿಲ್ಲ. ಇದರ ಬದಲಾಗಿ ಇವುಗಳ ಚಲಾವಣೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಹಿಂದೆ ಮುದ್ರಿಸುತ್ತಿದ್ದ ಪ್ರಮಾಣಕ್ಕಿಂತ ಅತೀ ಕಡಿಮೆ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆ.

ಅಷ್ಟೆ ಅಲ್ಲ ಬ್ಯಾಂಕ್ ಗಳಿಗೆ ವಾಪಸ್ಸಾಗುತ್ತಿರೋ ನೋಟುಗಳನ್ನ ಮತ್ತೆ ಚಲಾವಣೆಗೆ ಬಿಡುತ್ತಿಲ್ಲ. ಇದ್ರಿಂದಾಗಿ ವರ್ಷದಿಂದ ವರ್ಷಕ್ಕೆ ಚಲಾವಣೆಗೆ ಬರುತ್ತಿರೋ ಎರಡು ಸಾವಿರ ನೋಟಿನ ಪ್ರಮಾಣ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಈ ನೋಟುಗಳು ಬರೀ ಫೋಟೋದಲ್ಲಿ ಮಾತ್ರ ನೋಡಿಕೊಳ್ಳಬೇಕು. ಏಕೆಂದ್ರೆ ನಿಧಾನ ಗತಿಯಲ್ಲಿ ಪಿಂಕ್ ಕಲರ್ ನೋಟ್ ಕಣ್ಮರೆಯಾಗುತ್ತವೆ.2 ಸಾವಿರ ರೂಪಾಯಿಯ ದೊಡ್ಡ ಮೌಲ್ಯದ ನೋಟುಗಳನ್ನು ಅಪನಗದೀಕರಣದಿಂದ ಆದ ಕರೆನ್ಸಿ ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತರಲಾಗಿತ್ತು. ಆದರೆ ಬರುಬರುತ್ತ ಇವು ಕಾಳಧನಿಕ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣ ಆರಾಮವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಎಂಬ ಕಾರಣಕ್ಕೆ ಕಾಳಧನಿಕರು ಈ ನೋಟು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಗುಮಾನಿ ಮೋದಿ ಸರ್ಕಾರಕ್ಕೆ ಇದೆ.

ಈ ಹಿನ್ನೆಲೆಯಲ್ಲಿ 2 ಸಾವಿರ ರೂಪಾಯಿ ಮೌಲ್ಯದ ನೋಟುಗಳ ಮುದ್ರಣವನ್ನು ಕಡಿತಗೊಳಿಸಿ, ಬಳಿಕ ನಿಧಾನವಾಗಿ ಅವುಗಳನ್ನು ಚಲಾವಣೆಯಿಂದ ಹಿಂಪಡೆದು, ಕಮ್ಮಿ ಮೌಲ್ಯದ ನೋಟುಗಳ ಚಲಾವಣೆಯನ್ನು ಸರ್ಕಾರ ಹೆಚ್ಚಿಸಲಿದೆ.ಹೊಸ ನೋಟು ಚಲಾವಣೆಗೆ ಬಂದು ಎರಡು ವರ್ಷ ಪೂರ್ತಿಯಾಗಿದೆ. ಈ ಎರಡು ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ 2000 ಸಾವಿರ ನೋಟಿನ ಚಲಾವಣೆ ಕಣ್ಮರೆಯಾಗಿದೆ ಅನ್ನೋದನ್ನ ನೋಡೋದ್ ಆದ್ರೆ.ದೇಶದಲ್ಲಿ ಜನಸಾಮಾನ್ಯರಿಗೆ ವ್ಯವಹರಿಸೋದಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ 2 ಸಾವಿರ ನೋಟನ್ನು ಚಲಾವಣೆಗೆ ತರುವ ನಿರ್ಧಾರ ತೆಗೆದುಕೊಂಡಿತ್ತು. ಆಗ ಶೇಕಡಾ 86ರಷ್ಟು 2000 ನೋಟುಗಳು ಚಲಾವಣೆಯಲ್ಲಿದ್ದವು.

ಸದ್ಯ ಅವುಗಳ ಸಂಖ್ಯೆ 37.3ಕ್ಕೆ ಕುಸಿದಿದೆ. 2017ರ ಮಾರ್ಚ್‌ ಅಂತ್ಯದ ವೇಳೆಗೆ ದೇಶದಲ್ಲಿ 2000 ಬೆಲೆಯ 328 ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. 2018 ಮಾರ್ಚ್‌  31 ರವೇಳೆಗೆ ಇವುಗಳ ಸಂಖ್ಯೆ 336 ಕೋಟಿಗೆ ತಲುಪಿತ್ತು. ಸದ್ಯ ಮಾರುಕಟ್ಟೆಯಲ್ಲಿ 336.3 ಕೋಟಿ 2 ಸಾವಿರ ರೂಪಾಯಿಯ ಮುಖಬೆಲೆಯ ನೋಟು ಹಾಗೂ 6.73 ಲಕ್ಷ ಕೋಟಿ ಮೌಲ್ಯದ ಇತರ ನೋಟುಗಳಿಗವೆ. ಹೀಗೆ, ನೋಟುಗಳ ಪ್ರಿಂಟ್‌ ಜಾಸ್ತಿ ಆದ್ರೂ ದೇಶದಲ್ಲಿ ಅವುಗಳ ಚಲಾವಣೆ ಮಾತ್ರ ಕಡಿಮೆಯಾಗ್ತಿದೆ. ಈ ನಿಟ್ಟಿನಲ್ಲಿ ಆರ್‌ಬಿಐ 2000 ನೋಟುಗಳ ಮುದ್ರಣವನ್ನು ಕಡಿಮೆ ಮಾಡಲು ಮುಂದಾಗಿದೆ.

ಸೋ 2017ರಲ್ಲಿ ಶೇಕಡ 50.2 ರಷ್ಟು ಚಲಾವಣೆಯಲ್ಲಿದ್ದ  ಎರಡು ಸಾವಿರದ ನೋಟುಗಳು, 2018ಕ್ಕೆ  ಶೇಕಡ 37.3 ಕ್ಕೆ ಇಳಿದಿದೆ. ಅಲ್ಲಿಗೆ ಎರಡು ಸಾವಿರದ ನೋಟು ದಿನದಿಂದ ದಿನಕ್ಕೆ ಚಾಲಾವಣೆಯಲ್ಲಿ ಕಡಿಮೆ ಆಗುತ್ತಿದೆ, ಇನ್ನೇನು ಕೆಲವೇ ದಿನದಲ್ಲಿ ಇದ್ರ ಪ್ರಮಾಣ ಸಂಪೂರ್ಣವಾಗಿ ಕಡಿಮೆ ಆಗಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಪಿಂಕ್ ಕಲರ್ ನೋಟ್ ಕಾಣ ಸಿಗುವುದೇ ಇಲ್ಲ. ಇದ್ರಿಂದ ದೇಶದ ಅರ್ಥಿಕ ವ್ಯವಹಾರದಲ್ಲಿ ಐನೂರು ಮುಖ ಬೆಲೆಯ ನೋಟ್ ಅತಿ ದೊಡ್ಡ ನೋಟಾಗಿರಲಿದೆ. ನರೇಂದ್ರ ಮೋದಿ ಸರ್ಕಾರ ಏನೋ ಮಾಡಲು ಹೋಗಿ ಇನ್ನೇನೋ ಮಾಡುವಂತೆ ಕಾಣುತ್ತಿದೆ. ಒಂದು ಬಾರಿ ನೋಟ್ ಬ್ಯಾನ್ ಮಾಡಿ ಕೈ ಸುಟ್ಟುಕೊಂಡಿದೆ. ಈಗ ಮತ್ತೊಂದು ಬಾರಿ ಎರಡು ಸಾವಿರ ನೋಟಿಗೆ ಅಂಕುಶ ಹಾಕುತ್ತಿದೆ. ಮೋದಿಯ ಈ ನೀತಿಯನ್ನ ಪ್ರತಿ ಪಕ್ಷಗಳು ತುಘ್ಲಕ್ ದರ್ಬಾರ್ ಗೆ ಹೋಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here