Home Latest ಕೇಂದ್ರ ಬಜೆಟ್ ಮಂಡನೆ : ಬೆಂಗಳೂರು ಮೆಟ್ರೋಗೆ 14000 ಕೋಟಿ- ನಿರ್ಮಲ ಕೃಪೆ ಕರ್ನಾಟಕಕ್ಕೆ ಕಡಿಮೆ.....

ಕೇಂದ್ರ ಬಜೆಟ್ ಮಂಡನೆ : ಬೆಂಗಳೂರು ಮೆಟ್ರೋಗೆ 14000 ಕೋಟಿ- ನಿರ್ಮಲ ಕೃಪೆ ಕರ್ನಾಟಕಕ್ಕೆ ಕಡಿಮೆ.. ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಬಂಪರ್ ಕೊಡುಗೆ..

434
0
SHARE

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್‌ 2021-22 ನೇ ಸಾಲಿನ ಬಜೆಟ್ ಇಂದು ಮಂಡಿಸಿದರು. ಬಜೆಟ್ ಭಾಷಣದ ಆರಂಭದಲ್ಲಿ ವಿಪಕ್ಷಗಳು ಮಾಮೂಲಿಯಂತೆ ಕೂಗಾಟ ಆರಂಭಿಸಿದ್ದರೂ ತರುವಾಯ ತಮ್ಮ ಕೂಗಾಟ ಚೀರಾಟ ನಿಲ್ಲಿಸಿದರು.ಈ ಬಾರಿ ಬಜೆಟ್ನಲ್ಲಿ ಕೊರೊನಾ ವ್ಯಾಕ್ಸಿನ್ ಗಾಗಿ 35 ಸಾವಿರ ಕೋಟಿ ರು.ಮೀಸಲಿಟ್ಟಿದ್ದಾರೆ. 20 ವರ್ಷ ಹಳೆಯದಾದ ವಾಹನಗಳನ್ನು ಸ್ಕ್ಯಾಪಿಂಗ್ ಮಾಡುವ ಕಾನೂನು ಜಾರಿಗೊಳಿಸುವುದಾಗಿ ವಿತ್ತ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.

ಬಜೆಟ್ ನ ಮುಖ್ಯಾಂಶಗಳು: ಉತ್ಪಾದನಾ ವಲಯಕ್ಕೆ ಒತ್ತು, ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ ಯೋಜನೆ ಘೋಷಣೆ, 7 ಟೆಕ್ಸ್ ಟೈಲ್ ಪಾರ್ಕ್ ಗಳ ಸ್ಥಾಪನೆ, 13 ವಲಯಗಳಲ್ಲಿ ಆತ್ಮನಿರ್ಭರ ಭಾರತ ಯೋಜನೆ ಜಾರಿ.ಭಾರತಕ್ಕೆ ಬರಲಿದೆ ಇನ್ನೂ 2 ವ್ಯಾಕ್ಸಿನ್, ನಗರಗಳಲ್ಲಿ ನೀರಿಗಾಗಿ 87 ಸಾವಿರ ಕೋಟಿ ರೂ. ವಿನಿಯೋಗ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ ಹೆಚ್ಚಳ,

ರೈಲು ಯೋಜನೆಗಳಿಗೆ ಎಷ್ಟು ಹಣ : ರೈಲ್ವೇಯಲ್ಲಿ ಮಿಷನ್- 2030 ಘೋಷಣೆ, ಬೆಂಗಳೂರು ಮೆಟ್ರೋ ಯೋಜನೆಗೆ 14 ಸಾವಿರ ಕೋಟಿ ರೂ. ಅನುದಾನ, ಆಟೋಮೇಟಿಕ್ ರೈಲ್ವೇ ಸುರಕ್ಷಾ ವ್ಯವಸ್ಥೆ ಜಾರಿ, ನಗರಗಳಿಗೆ ವಿಶೇಷ ಅನುದಾನ ಘೋಷಣೆ, ಮೆಟ್ರೋ ರೈಲು ಯೋಜನೆಗಳಿಗೆ 18 ಸಾವಿರ ಕೋಟಿ ರೂ. ಅನುದಾನ, 1,016 ಕಿ.ಮೀ ಮೆಟ್ರೋ ರೈಲು ಮಾರ್ಗ ಶೀಘ್ರವೇ ಆರಂಭ, ಮೆಟ್ರೋ ರೈಲು ಯೋಜನೆಯಲ್ಲಿ ಖಾಸಗಿ ಸಹಭಾಗಿತ್ವ.

ಯಾವುದಕ್ಕೆ ಎಷ್ಟು ಬಂಡವಾಳ ಹೂಡಿಕೆ: ಬಂಡವಾಳ ಹೂಡಿಕೆಗೆ 5.5 ಲಕ್ಷ ಕೋಟಿ ರೂ. 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಸಾಧನೆ ತೋರುವ ಇಲಾಖೆಗಳಿಗೆ 40 ಸಾವಿರ ಕೋಟಿ ರು. ಅನುದಾನ. ತಮಿಳುನಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿ 1.3 ಲಕ್ಷ ಕೋಟಿ ರೂ. ಅನುದಾನ, ಕೇರಳಕ್ಕೆ 65 ಸಾವಿರ ಕೋಟಿ, ಪಶ್ಚಿಮ ಬಂಗಾಳಕ್ಕೆ 25 ಸಾವಿರ ಕೋಟಿ ರೂ. ಅನುದಾನ, 500 ನಗರಗಳು ಅಮೃತ ನಗರಗಳಾಗಿ ಬದಲಾವಣೆ, 35 ಸಾವಿರ ಕೋಟಿ ರೂ. ಕೋವಿಡ್ ಲಸಿಕೆಗಾಗಿ ವಿನಿಯೋಗ, ಏರ್ ಇಂಡಿಯಾ ಖಾಸಗಿಯವರಿಗೆ ಮಾರಾಟ, ಕೃಷಿ ಬೆಂಬಲ ಹೆಚ್ಚಳ, ಗೋಧಿಗಾಗಿ 33 ಸಾವಿರ ಕೋಟಿ ರೂ. ಬೆಂಬಲ ಬೆಲೆ ಕೊಟ್ಟಿದ್ದೇವೆ, ಆಹಾರ ಧಾನ್ಯಗಳ ಖರೀದಿಗಾಗಿ 1 ಲಕ್ಷದ 41 ಸಾವಿರದ 930 ಕೋಟಿ ವೆಚ್ಚ, ಬೇಳೆಕಾಳುಗಳ ಖರೀದಿಗಾಗಿ 10 ಸಾವಿರದ 530 ಕೋಟಿ,

ಎಲ್ಐಸಿ ಯಲ್ಲಿ ಬಂಡವಾಳ ಹಿಂತೆಗೆತ: ಬ್ಯಾಂಕುಗಳಿಗೆ ಮತ್ತಷ್ಟು ಸರ್ಕಾರಿ ದುಡ್ಡು, ಬ್ಯಾಂಕುಗಳಿಗೆ 20 ಸಾವಿರ ಕೋಟಿ ರೂ. ವಿಮೆ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೆಚ್ಚಳ, ಸೋಲಾರ್ ಶಕ್ತಿ ಯೋಜನೆಯಲ್ಲಿ 10 ಸಾವಿರ ಕೋಟಿ ರೂ. ಅನುದಾನ, ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂತೆಗೆತ, ಎಲ್ ಐ ಸಿ ಯಲ್ಲೂ ಬಂಡವಾಳ ಹಿಂತೆಗೆತ ಘೋಷಣೆ.

LEAVE A REPLY

Please enter your comment!
Please enter your name here