Home Crime ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರಿಗೆ ಅಪಘಾತ..!!! ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ ಎಂದು...

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರಿಗೆ ಅಪಘಾತ..!!! ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ ಎಂದು ಟ್ವೀಟ್…

277
0
SHARE


ನಿನ್ನೆ ರಾತ್ರಿ ಹಾವೇರಿ ಬಳಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರಿಗೆ ಅಪಘಾತವಾಗಿದ್ದು ಬೆಂಗಾಲು ವಾಹನ ನಜ್ಜುಗುಜ್ಜಾಗಿದೆ…

 

ಲಾರಿ ಚಾಲಕ ನಾಸೀರ್ ಎಂಬಾತ ಕಾರಿಗೆ ಡಿಕ್ಕಿಹೊಡೆದು ಓಡಿ ಹೋಗಲು ಯತ್ನಿಸಿದ್ದಾರೆ. ಬಳಿಕ ಅವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ…

 

ಈ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ 6 ಬಾರಿ ಟ್ವೀಟ್ ಮಾಡಿದ್ದು ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ…

 

ಇನ್ನು ಪೊಲೀಸರ ವಿಚಾರಣೆ ವೇಳೆ ಲಾರಿ ಚಾಲಕ ನಾಸೀರ್ ನಾನು ಫೋನಿನಲ್ಲಿ ಮಾತನಾಡಿಕೊಂಡು ಹೋಗುತ್ತಾ ದಾರಿ ತಪ್ಪಿದೆ…

 

ಅಕಸ್ಮಾತ್ತಾಗಿ ಸಚಿವರ ಕಾರಿಗೆ ಡಿಕ್ಕಿಯಾಗಿದೆ. ಅವರನ್ನು ನಾನು ನೋಡಿಯೇ ಇಲ್ಲ.. ನಾನು ಹತ್ಯೆಗೆ ಸಂಜು ನಡೆಸಿಲ್ಲ ಎಂದು ಹಾವೇರಿ ಎಸ್ಪಿ ಪರಶುರಾಮ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ…

 

ಇನ್ನು ಈ ಕುರಿತು ಸಂಸದ ಪ್ರತಾಪ್ ಸಿಂಹ ಕೂಡ ಟ್ವೀಟ್ ಮಾಡಿದ್ದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಹಿಂದೂ ಹುಲಿಯ ಹತ್ಯಗೆ ಸಂಚು ರೂಪಿಸಿದ್ದಾರೆ. ಅವರನ್ನು ರಾಜಕೀಯವಾಗಿ ಹಣಿಯಲು ಪ್ರಯತ್ನಿಸಿ. ಈ ರೀತಿ ಕೊಲೆ ಯತ್ನ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ…

LEAVE A REPLY

Please enter your comment!
Please enter your name here