Home Cinema ಕೇಕ್ ಕಟ್ ಮಾಡಿ ದರ್ಶನ್ ಕುಣಿದ್ರು ಥೈತಕ..! ಯಜಮಾನನ ಮೆರವಣಿಗೆಗೆ ಇಲ್ಲ ಅಡ್ಡಿ ಆತಂಕ..!

ಕೇಕ್ ಕಟ್ ಮಾಡಿ ದರ್ಶನ್ ಕುಣಿದ್ರು ಥೈತಕ..! ಯಜಮಾನನ ಮೆರವಣಿಗೆಗೆ ಇಲ್ಲ ಅಡ್ಡಿ ಆತಂಕ..!

1562
0
SHARE

ಶಹಬ್ಬಾಶ್ ಯಜಮಾನ. ರಿಯಾಲಿ ಈಟ್ ಇಸ್ ಎ ಯಜಮಾನನ ಹೊಸ ಜಮಾನ. ಹೌದು ಕಣ್ರೀ. ಯಜಮಾನನ ದುನಿಯಾದಲ್ಲಿ ಯಾರ ಆಟನೂ ನಡೆಯೋಲ್ಲ ಅಂತ ಮತ್ತೊಮ್ಮೆ ಪ್ರೂವ್ ಆಗಿಹೋಗಿದೆ.

ದಿನೇ ದಿನೇ ಯೂಟ್ಯೂಬ್‌ನಲ್ಲಿ ದಾಖಲೆಗಳ ಸರಮಾಲೆಯನ್ನೇ ಹಾಕಿಕೊಂಡಿರುವ ಯಜಮಾನನ ಅಬ್ಬರ ನೋಡಿ ಸ್ವತಃ ಯೂಟ್ಯೂಬ್ ಸಂಸ್ಥೆಯೇ ಅಕ್ಷರಶಃ ದಂಗಾಗಿಹೋಗಿದೆ. ಹೌದು, ಯಜಮಾನ ಸಿನಿಮಾದ ಟ್ರೈಲರ್ ಸೃಷ್ಟಿಸಿರುವ ಬಿರುಗಾಳಿಗೆ ಯೂಟ್ಯೂಬ್ ಕೂಡ ಯಜಮಾನ ತೇರಾ ಖೇಲ್ ಕಮಾಲ್ ಹೇ ರೇ ಅಂತ ಕೈ ಮುಗಿದುಬಿಟ್ಟಿದೆ.

ಇದುವರೆಗೂ ಯಜಮಾನ ಸಿನಿಮಾದ ಟ್ರೈಲರ್ ಹನ್ನೊಂದು ಮಿಲಿಯನ್ ವ್ಯೂಗಳನ್ನ ಕಂಡು ಶರವೇಗದಿಂದ ಬೇರೆ ರೆಕಾರ್ಡ್‌ಗಳನ್ನ ಪುಡಿಪುಡಿ ಮಾಡಿದೆ. ಈ ಆಶ್ಚರ್ಯವನ್ನ ಯೂಟ್ಯೂಬ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡು ಶಾಕ್ ಆಗಿದೆ. ಅಲ್ಲದೇ ಯಜಮಾನನ್ನ ಒಬ್ಬ ಅತಿಥಿಗೆ ಹೋಲಿಸಿದ್ದು ಈ ಅತಿಥಿಯ ಗ್ರ್ಯಾಂಡ್ ಎಂಟ್ರಿಗೆ ವಾರ್ಮ್ ವೆಲ್‌ಕಮ್ ಹೇಳಿದೆ. ಇದು ಯಜಮಾನನ ಸರ್ವಾಧಿಕಾರ ಅಲ್ಲದೇ ಮತ್ತಿನ್ನೆನು….

ಇನ್ನು ಯೂಟ್ಯೂಬ್ ಹೊಗಳಿಕೆಗೆ ಕೈ ಜೋಡಿಸಿರುವ ನವರಸನಾಯಕ ಜಗ್ಗೇಶ್ ಯಜಮಾನನ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ ಯಜಮಾನ ಹುಟ್ಟುಹಾಕಿರೋ ಟ್ರೆಂಡ್‌ಗೆ ಜೈಜೈ ಎಂದಿದ್ದಾರೆ. ಹೃದಯತುಂಬಿ ಬಂತು. ಕನ್ನಡ ಚಿತ್ರರಂಗದ ರಹದಾರಿ ಕಂಡು. ಹಾರಲಿ ಏರಲಿ ಕನ್ನಡದ ಬಾವುಟ. ಏನಾದ್ರೂ ಆಗಲಿ ನಾನು ಯಜಮಾನ ಚಿತ್ರವನ್ನ ಥಿಯೆಟರ್‌ನಲ್ಲೇ ನೋಡಿ ಬೆಂಬಲಿಸುವೆ ಅಂತ ಪ್ರಾಮೀಸ್ ಮಾಡಿದಾರೆ.

ಇದೇ ಖುಷಿಯನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮದೇ ಸ್ಟೈಲ್‌ನಲ್ಲಿ ಆಚರಿಸಿದ್ದಾರೆ. ಇಂದು ಬೆಳಿಗ್ಗೆ ಯಜಮಾನ ಚಿತ್ರತಂಡ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಮೂಲಕ ಯಜಮಾನನ ಈ ಯಶಸ್ಸಿಗೆ ಕಿಚ್ಚು ಹಚ್ಚಿದಾರೆ. ದರ್ಶನ್ ಕೇಕ್ ಕತ್ತರಿಸಿ ನಿರ್ಮಾಪಕಿ ಶೈಲಾಜಾ ನಾಗ್ ಬಾಯಿಗಿಟ್ಟ ಆ ಕ್ಷಣ ನಿಜಕ್ಕೂ ಅನ್‌ಫರ್‌ಗೆಟಬಲ್. ಬಿಡುಗಡೆಗೂ ಮುಂಚೆಯೇ ಈ ಪಾಟಿ ಸಕ್ಸಸ್ ಕಂಡ ಚಿತ್ರತಂಡಕ್ಕೆ ಇನ್ನೇನು ಬೇಕು ಅಲ್ವಾ?

ಯಜಮಾನ ಯೂಟ್ಯೂಬ್‌ನಲ್ಲಿ ತನ್ನ ನಾಗಾಲೋಟವನ್ನ ಮುಂದುವರೆಸಿದ ಬೆನ್ನಲ್ಲೇ ಕೆಲವು ಚಿತ್ರಗಳು ನಿರ್ಮಿಸಿದ್ದ ರೆಕಾರ್ಡ್‌ಗಳು ಚಿಂದಿ ಚಿತ್ರಾನ್ನ ಆಗಿದೆ. ಅತೀ ಹೆಚ್ಚು ವ್ಯೂ ಲೆಕ್ಕಚಾರವನ್ನ ನೋಡಿದ್ರೆ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರವನ್ನೇ ಯಜಮಾನ ಸೈಡಿಗೆ ತಳ್ಳಿಬಿಟ್ಟಿದಾನೆ. ಇನ್ನು ನಮ್ಮ ಕನ್ನಡ ಸಿನಿಮಾಗಳಾದ ಅಂಜನಿಪುತ್ರ, ಕಿರಿಕ್ ಪಾರ್ಟಿ, ಮಾಸ್ತಿಗುಡಿ, ಸೀತಾರಾಮಕಲ್ಯಾಣ, ನಟಸಾರ್ವಭೌಮ ಚಿತ್ರಗಳನ್ನ ಹಿಂದಿಟ್ಟು ಯಜಮಾನ ತನ್ನ ಹೆಜ್ಜೆಯನ್ನ ಮುಂದಿಟ್ಟಿದಾನೆ.

ಹೀಗೆ ಮುಂದುವರೆದ್ರೆ ಕೆಜಿಎಫ್ ಸಿನಿಮಾ ದಾಖಲೆಯನ್ನೂ ಯಜಮಾನ ಧೂಳಿಪಟ ಮಾಡುವ ಎಲ್ಲ ಲಕ್ಷಣಗಳು ಕಾಣಿಸ್ತಿದೆ.ಇಷ್ಟು ವರ್ಷ ಸ್ಯಾಂಡಲ್‌ವುಡ್‌ನಿಂದ ಯೂಟ್ಯೂಬ್‌ನಲ್ಲಿ ಈ ರೀತಿಯ ಬೆಳವಣಿಗೆಗಳು ಕಂಡಿರಲಿಲ್ಲ. ಮಿಲಿಯನ್ ವ್ಯೂ ದಾಟೋಕೆ ಕನ್ನಡ ಸಿನಿಮಾದ ಟ್ರೈಲರ್ ತಿಂಗಳುಗಟ್ಟಲೆ ತೆಗೆದುಕೊಳ್ತಿತ್ತು. ಆದರೆ ಈಗ ನಿಧಾನವಾಗಿ ಕನ್ನಡ ಚಿತ್ರಗಳು ತನ್ನ ಖದರ್ ಏನು ಅಂತ ತೋರಿಸ್ತಿದೆ.

ಕೆಲವೇ ನಿಮಿಷಗಳಲ್ಲಿ ರೆಕಾರ್ಡ್‌ಗಳು ಉಡೀಸ್ ಆಗುತ್ವೆ. ಯಜಮಾನನ ಈ ಗತ್ತುಗಮ್ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನವನ್ನ ಹುಟ್ಟುಹಾಕಿರೋದಂತೂ ಸುಳ್ಳಲ್ಲ. ಕನ್ನಡ ಸಿನಿಮಾಗಳು ಅಂದ್ರೆ ಅಷ್ಟಕಷ್ಟೇ ಎಂದು ಮುಗುಮುರಿಯುತ್ತಿದ್ದ ಕೆಲವು ಸೋಕಾಲ್ಡ್ ಬುದ್ಧಿವಂತರಿಗೆ ಯಜಮಾನ ಸರಿಯಾಗೇ ಬಿಸಿ ಮುಟ್ಟಿಸಿದ್ದಾನೆ. ಕನ್ನಡ ಸಿನಿಮಾದ ನಿಜವಾದ ತಾಕತ್ ಏನು ಅಂತ ನಿರೂಪಿಸಿದ್ದಾನೆ. ನಾವು ಕೂಡ ಯಾರಿಗೂ ಕಮ್ಮಿ ಇಲ್ಲ ಅಂತ ಬೇರೆ ಚಿತ್ರರಂಗದವರು ಮುಟ್ಟಿನೋಡ್ಕೊಳೊ ಹಾಗೆ ತನ್ನ ವಿಜಯಾಯಾತ್ರೆಯನ್ನ ಮುಂದುವರೆಸಿದಾನೆ ಎಲ್ಲರ ಪ್ರೀತಿಯ ಯಜಮಾನ.

LEAVE A REPLY

Please enter your comment!
Please enter your name here