Home Cinema ಕೇರಳದಲ್ಲಿನ ಜಲಪ್ರಳಯಕ್ಕೆ ಮಿಡಿಯಿತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮನ..! ಜಲಪ್ರಳಯಕ್ಕೆ ಅಕ್ಷರಷಃ ಸಾಯುತ್ತಿರುವ ಜನರಿಗೆ...

ಕೇರಳದಲ್ಲಿನ ಜಲಪ್ರಳಯಕ್ಕೆ ಮಿಡಿಯಿತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮನ..! ಜಲಪ್ರಳಯಕ್ಕೆ ಅಕ್ಷರಷಃ ಸಾಯುತ್ತಿರುವ ಜನರಿಗೆ ಮಾಡಿದ್ದೇನು ಗೊತ್ತಾ “ಅಪ್ಪು”

4461
0
SHARE

ಕೇರಳದಲ್ಲಿನ ಜಲಪ್ರಳಯಕ್ಕೆ ಮಿಡಿಯಿತು ಪವರ್ ಸ್ಟಾರ್ ಅಪ್ಪು ಮನ..!ಪುನೀತ್ ರಾಜ್‌ಕುಮಾರ್… ದೊಡ್ಮನೆಯ ಹುಡುಗ. ಡಾ.ರಾಜ್‌ರಂತೇ ಸರಳತೆಯನ್ನ ಮೈಗೂಡಿಸಿಕೊಂಡಿರುವ ಅಪ್ಪು ಮನಸು ಮಗುವಿನಂತದ್ದು ಅನ್ನೋದು ಅಭಿಮಾನಿಗಳಿಗೂ ಗೊತ್ತು. ಗಾಂಧಿನಗರಕ್ಕೂ ಗೊತ್ತು. ಕಷ್ಟಗಳನ್ನ ಕಣ್ಣೇದುರು ಕಂಡಾಗ ಆ ಕಷ್ಟಕ್ಕೆ ತಕ್ಷಣಕ್ಕೆ ಮಿಡಿಯುವ ಪುನೀತ್ ಮನಸು ಇದೀಗ ದೇವರನಾಡಿನಲ್ಲಿನ ಜಲಪ್ರಳಯಕ್ಕೆ ಕರಗಿದೆ.

ಹೌದು, ದೇಶದಾಂದ್ಯತ ಅನೇಕ ರಾಜ್ಯಗಳೂ ಮಳೆಗೆ ತತ್ತರಿಸಿವೆ. ಕರ್ನಾಟಕದಲ್ಲಿ ಕೊಡಗು ಮಳೆಯ ಹೊಡೆತಕ್ಕೆ ಇನ್ನಿಲ್ಲದಂತೆ ನಲುಗಿದೆ. ಇನ್ನು ಪಕ್ಕದ ಕೇರಳದ ಸ್ಥಿತಿ ಇನ್ನೂ ಘನಘೋರ. ಮಹಾಮಳೆಗೆ ತತ್ತರಿಸಿರುವ ಕೇರಳದಲ್ಲಿ ಆಗ್ಲೇ ಅನೇಕರು ತಮ್ಮ ಪ್ರಾಣವನ್ನ ಚೆಲ್ಲಿದ್ದಾರೆ. ಬಹುತೇಕರು ತಮ್ಮ ಮನೆಗಳನ್ನ ಕಳೆದುಕೊಂಡಿದ್ದಾರೆ.

ನಿರಾಶ್ರಿತರ ಶಿಬಿರದಲ್ಲಿದ್ದಾರೆ. ಸ್ಥಿತಿ ಹೀಗಿರುವಾಗ, ಚಂದನವನದ ಪವರ್ ಸ್ಟಾರ್ ಪುನೀತ್ ಇದೀಗ ಕೇರಳದ ಕಷ್ಟಕ್ಕೆ ಸಹಾಯದ ಹಸ್ತವನ್ನ ಚಾಚಿದ್ದಾರೆ ಅನ್ನುವ ಸುದ್ದಿಯನ್ನ, ಅಭಿಮಾನಿ ವಲಯ ಹೆಮ್ಮೆನಿಂದ ಹೇಳಿಕೊಳ್ಳುತ್ತಿದೆ. ಹೌದು, ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ಕೇರಳ ಸಿ.ಎಂ. ನಿಧಿಗೆ ಐದು ಲಕ್ಷ ನೀಡಿದ್ದಾರೆ.

ಈ ಮೂಲಕ ಕಷ್ಟದಲ್ಲಿರುವ ಕೇರಳದ ಜನತೆಗೆ ಸಹಾಯ ಮಾಡಿದ್ದಾರೆ ಅಪ್ಪು.ಬರೀ ಪುನೀತ್ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರೀಟಿಗಳು ಕೇರಳದಲ್ಲಿನ ಮಹಾಮಳೆಯಲ್ಲಿ ಸಿಲುಕಿರುವವರ ಸಹಾಯಕ್ಕೆ ಧಾವಿಸಿದ್ದಾರೆ. ಮಲಯಾಳಂ ಸಿನಿಉದ್ಯಮದ ಸ್ಟಾರ್ ನಟರಾಗಿರುವ ಮುಮ್ಮುಟ್ಟಿ ಕೇರಳ ಸಿ.ಎಂ ನಿಧಿಗೆ ಹದಿನೈದು ಲಕ್ಷ ನೀಡಿದ್ದಾರೆ.

ಇನ್ನು ದುಲ್ಕರ್ ಸಲ್ಮಾನ್ ೧೦ ಲಕ್ಷ ನೀಡಿದ್ದರೆ, ಮೋಹನ್ ಲಾಲ್ ೨೫ ಲಕ್ಷ ನೀಡಿದ್ದಾರೆ. ಇನ್ನು ತೆಲುಗು ತಮಿಳು ಚಿತ್ರರಂಗದ ತಾರೆಯರಾದ ಅಲ್ಲು ಅರ್ಜುನ್, ಕಮಲ್ ಹಾಸನ್, ಸೂರ್ಯ, ಕಾರ್ತಿ ಹಾಗೂ ವಿಜಯ್ ಸೇತುಪತಿ ಕೇರಳ ಸಿ.ಎಂ.ನಿಧಿಗೆ ೨೫ ಲಕ್ಷ ಹಣವನ್ನ ನೀಡಿದ್ದಾರೆ. ಈ ಮೂಲಕ ಸಹಾಯದ ಹಸ್ತವನ್ನ ಚಾಚಿದ್ದಾರೆ. ಅಭಿಮಾನಿಗಳಿಗೂ ಮಾದರಿಯಾಗಿ, ಪ್ರೇರಣೆಯಾಗಿ ನಿಂತಿದ್ದಾರೆ.

LEAVE A REPLY

Please enter your comment!
Please enter your name here