Home District ಕೇಳೋರೇ ಇಲ್ಲ ಈ ಶಾಲೆಯ ಬಾಲಕಿಯರ ಗೋಳು..!? ಹಾಸ್ಟಲ್ನಲ್ಲಿ ಶೌಚಾಲಯ ಇಲ್ಲ, ಬಾತ್ರೂಮ್ ಇಲ್ಲ, ಮಲಗಲು...

ಕೇಳೋರೇ ಇಲ್ಲ ಈ ಶಾಲೆಯ ಬಾಲಕಿಯರ ಗೋಳು..!? ಹಾಸ್ಟಲ್ನಲ್ಲಿ ಶೌಚಾಲಯ ಇಲ್ಲ, ಬಾತ್ರೂಮ್ ಇಲ್ಲ, ಮಲಗಲು ಬೆಡ್ ಇಲ್ಲ. ಕುಡಿಯಲು ನೀರಿಲ್ಲ…

594
0
SHARE

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ಗ್ರಾಮದಲ್ಲಿರುವ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ನಲ್ಲಿ ವಾರ್ಡನ್ ಹಾಗೂ ಅಧಿಕಾರಿಗಳು ಮಕ್ಕಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೆ ಮಕ್ಕಳ ಹಣವನ್ನು ಗುಳುಂ ಮಾಡಿದ್ದಾರೆ.

ಹಾಸ್ಟಲ್ನಲ್ಲಿ ಶೌಚಾಲಯ ಇಲ್ಲ, ಬಾತ್ರೂಮ್ ಇಲ್ಲ, ಮಲಗಲು ಬೆಡ್ ಇಲ್ಲ. ಕುಡಿಯಲು ನೀರಿಲ್ಲ. ಹೀಗಾಗಿ 50 ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್ ನಲ್ಲಿ 20ರಿಂದ 25 ಮಕ್ಕಳು ಮಾತ್ರ ಊಟ ಮಾಡಿಕೊಂಡು ಹೋಗುತ್ತಿದ್ದಾರೆ ಎನ್ನಲಾಗಿದೆ.

ಉಳಿದ ಮಕ್ಕಳ ಊಟ, ತಿಂಡಿ ಹಾಸ್ಟಲ್ ವಾರ್ಡನ್ ಮತ್ತು ಅಧಿಕಾರಿಗಳ ಹೊಟ್ಟೆಗೆ ಸೇರುತ್ತಿದೆ. ದಾನಿಗಳು ನೀಡಿದ್ದ ಜಾಗ ಹಾಗೂ ಸರ್ಕಾರ ನೀಡಿದ್ದ ಅನುದಾನದಲ್ಲಿ ನೂತನ ಹಾಸ್ಟಲ್ ನಿರ್ಮಾಣವಾಗಿದೆ. ಆದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಸ್ಟಲ್ ಶಿಫ್ಟ್ ಮಾಡುತ್ತಿಲ್ಲ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಈ ಮೂಲಕ ವಿದ್ಯಾರ್ಥಿಗಳಿಗೆ ಸೇರಬೇಕಾದ ಹಣವನ್ನು ತಿಂದು ತೇಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ . ಇದಕ್ಕೆಲ್ಲ ಕಾರಣ ಸ್ಥಳೀಯ ಶಾಸಕ ಪ್ರಭು ಚೌಹಾಣ್ ಅವರ ನಿರ್ಲಕ್ಷ್ಯ ಅಂತ ಊರಿನ ಜನ ಬೊಟ್ಟು…

LEAVE A REPLY

Please enter your comment!
Please enter your name here