Home Crime ಕೈಲಾಗದ ತಾಯಿಯನ್ನು ನೋಡಿಕೊಳ್ಳಲಾಗಲ್ಲ ಅಂತ ವೃದ್ದೆಯನ್ನ ಜಮೀನಿನಲ್ಲಿ ಎಸೆದು ಹೋದ ಮಕ್ಕಳು…

ಕೈಲಾಗದ ತಾಯಿಯನ್ನು ನೋಡಿಕೊಳ್ಳಲಾಗಲ್ಲ ಅಂತ ವೃದ್ದೆಯನ್ನ ಜಮೀನಿನಲ್ಲಿ ಎಸೆದು ಹೋದ ಮಕ್ಕಳು…

233
0
SHARE

ಹೆತ್ತವರು ಮಕ್ಕಳು ಚೆನ್ನಾಗಿರಲಿ ಅಂತ ಹೊಟ್ಟೆ-ಬಟ್ಟೆ ಕಟ್ಟಿ ಅವರನ್ನು ಸಾರಕಿ-ಸಲುಹುತ್ತಾರೆ. ಆದ್ರೆ ಕೆಲ ಮಕ್ಕಳು ಮಾತ್ರ ಹೆತ್ತವರನ್ನು ನೋಡಿಕೊಳ್ಳುವ ರೀತ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಇವರು ಮನುಷ್ಯರೋ ಅಥವಾ ರಾಕ್ಷಸರು ಅನ್ಸುತ್ತೆ. ಇಂತದ್ದೇ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

 

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಿಂಗಟಾಲೂರಿನ ನಿವಾಸಿ 90 ವರ್ಷದ ದ್ಯಾಮವ್ವಾ ಎಂಬ ವೃದ್ದೆಯನ್ನು ಅವಳ ಹೆತ್ತಮಕ್ಕಳೇ ಅಮಾನುಷವಾಗಿ ಜಮೀನಿನಲ್ಲಿ ಎಸೆದು ಹೋಗಿದ್ದಾರೆ. ಹಾವೇರಿ ನಗರದ‌ ಹೊರವಲಯದಲ್ಲಿ ವೃದ್ಧೆ ದ್ಯಾಮವ್ವಾಳನ್ನು ಎಸೆದುಹೋಗಿದ್ದು,ನೀರು ಸಿಗದೇ ನಿತ್ರಾಣಗೊಂಡ ವೃದ್ಧೆ ರಾತ್ರಿಯಿಡೀ ಜಮೀನಿನಲ್ಲಿ ನರಳಾಡಿದ್ದಾಳೆ. ಅಮ್ಮಾ….ಅಮ್ಮಾ….ಎಂದು ಗೋಳಾಡಿದ್ದಾಳೆ. ವೃದ್ದೆಯನ್ನು ಕಂಡ ಸ್ಥಳೀಯರು ಅಂಬುಲೆನ್ಸ್‌ಗೆ ಕರೆ ಮಾಡಿ ಆಕೆಯನ್ನು ರಕ್ಷಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

 

LEAVE A REPLY

Please enter your comment!
Please enter your name here