Home Crime ಕೊಟ್ಟ ಹಣ ವಾಪಾಸ್ ಬರೋಲ್ಲ ಅಂತಾ ಇಬ್ಬರು ಕಂದಮ್ಮರನ್ನು ಉಸಿರುಗಟ್ಟಿ ಸಾಹಿಸಿ ಮನೆ ಮಂದಿ ಆತ್ಮಹತ್ಯೆ..!?

ಕೊಟ್ಟ ಹಣ ವಾಪಾಸ್ ಬರೋಲ್ಲ ಅಂತಾ ಇಬ್ಬರು ಕಂದಮ್ಮರನ್ನು ಉಸಿರುಗಟ್ಟಿ ಸಾಹಿಸಿ ಮನೆ ಮಂದಿ ಆತ್ಮಹತ್ಯೆ..!?

604
0
SHARE

ಅವರು ಇದ್ದ ಹಣದಲ್ಲಿ ಒಂದು ಸುಂದರ ಮನೆಯೊಂದನ್ನ ನಿರ್ಮಿಸಿ ಬದುಕು ಕಟ್ಟಿಕೊಳ್ಳಬೇಕೆಂದು ಕನಸು ಕಟ್ಟಿದ್ದರು. ಆದ್ರೆ ಜವರಾಯನ ಅಟ್ಟಹಾಸವೋ ಅಥವಾ ವಿಧಿಯ ವೈಪರಿತ್ಯವೋ ಏನೋ ಕುಟುಂಬದ ಅಷ್ಟೂ ಜನ ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಪೋಟೋದಲ್ಲಿರುವ ವ್ಯಕ್ತಿಗಳ ಹೆಸ್ರು ಜನಾರ್ಧನ್, ಸುಮಿತ್ರ, ಸುಧಾರಾಣಿ ಹಾಗೂ ಮೋನಿಕಾ.

ಮೂಲತಹ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರ ನಿವಾಸಿಗಳು. ಈ ಒಂದೇ ಕುಟುಂಬದ ಸದಸ್ಯರು ಏನಾಯ್ತೋ ಏನೋ… ಕಳೆದ ನಾಲ್ಕು ದಿನಗಳ ಹಿಂದೆ ಸುಧಾರಾಣಿ ತನ್ನ ಮಗಳಾದ ಮೋನಿಕಾಳನ್ನ ಪ್ಲಾಸ್ಟಿಕ್ ಕವರ್ ನಿಂದ ಉಸಿರುಗಟ್ಟಿ ಸಾಯಿಸಿದ್ದಾಳೆ. ನಂತರ ತಾನೂ ಸಹ ತಂದೆ ತಾಯಿಯೊಂದಿಗೆ ಮಾತ್ರೆ ಸೇವಿಸಿ ಆತ್ಮಹತ್ಯೆ ಶರಣಾಗಿದ್ದಾಳೆ.

ಸುಧಾರಾಣಿ 5 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬಾತನ್ನ ವಿವಾಹವಾಗಿದ್ದು ಹೆಣ್ಣು ಮಗು ಇತ್ತು. ಗಂಡ ಮಲ್ಲಿಕಾರ್ಜುನ್ ಮೆಡಿಕಲ್ ಶಾಪ್ ಒಂದನ್ನ ನಡೆಸುತ್ತಿದ್ದರು. ಸುಧಾರಾಣಿ ತಂದೆ ಖಾಸಗಿ ಕ್ಯಾಬ್ ಒಂದರ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸುಧಾರಾಣಿ ಕಳೆದ ನಾಲ್ಕು ದಿನಗಳ ಹಿಂದೆ ಮದುವೆ ಇದೆ ಅಂತೇಳಿ ದೊಡ್ಡಬೊಮ್ಮಸದ್ರದ ತಂದೆ ತಾಯಿ ಮನೆಗೆ ಬಂದಿದ್ದಳು. ಈ ವೇಳೆ ಅದೇನಾಯ್ತೋ ಏನೋ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಲ್ಲಿಕಾರ್ಜುನ್ ಮನೆ ನಿರ್ಮಿಸುವ ಸಲುವಾಗಿ 25 ಲಕ್ಷ ಹಣವನ್ನ ಮನಯಲ್ಲಿಟ್ಟಿದ್ದ. ಆ ಹಣವನ್ನ ಗಂಡ ಮಲ್ಲಿಕಾರ್ಜುನ್‌ಗೆ ತಿಳಿಯದ ಹಾಗೆ ಸುಧಾರಾಣಿ ತಂದೆ ತಾಯಿಗೆ ನೀಡಿದ್ದಾಳೆ. ತಂದೆ ಜನಾರ್ಧನ್ ಆ ಹಣವನ್ನ ಮತ್ಯಾರಿಗೋ ಸಾಲವಾಗಿ ನೀಡಿದ್ದು, ಆ ವ್ಯಕ್ತಿ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದಾನೆ.

ಕೊಟ್ಟ ಸಾಲದ ಹಣ ವಾಪಸ್ಸು ಬರುವುದಿಲ್ಲವೆಂದು ಗೊತ್ತಾಗಿದೆ. ಸುಧಾರಾಣಿ, ಗಂಡನ ಭಯದಿಂದಾಗಿ ಮನನೊಂದು ತಂದೆ ತಾಯಿ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾಗಿರು ವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾಳೆ.ಸದ್ಯ ಮೃತ ದೇಹಗಳನ್ನ ಎಂ.ಎಸ್. ರಾಮಯ್ಯ ಶವಾಗಾರಕ್ಕೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರ ಪೋಲೀಸ್ರು ಮಲ್ಲಿಕಾರ್ಜುನ್ ನನ್ನ ವಿಚಾರಣೆಗೊಳಪಡಿಸಿ ತನಿಖೆ ಕೈಗೊಂಡಿದ್ದಾರೆ…

LEAVE A REPLY

Please enter your comment!
Please enter your name here