Home District ಕೊಡಗಿನ ಜೋಡುಪಾಲ ದುರಂತದ ಪ್ರದೇಶದಲ್ಲೀಗ ನೀರವ ಮೌನ..!! ಮನೆ ಉಳಿದುಕೊಂಡಿದೆಯೇ, ಏನಾದ್ರೂ ಹಾನಿಯಾಗಿದೆಯೇ, ಕಳ್ಳರು ನುಗ್ಗಿದ್ದಾರೆಯೇ...

ಕೊಡಗಿನ ಜೋಡುಪಾಲ ದುರಂತದ ಪ್ರದೇಶದಲ್ಲೀಗ ನೀರವ ಮೌನ..!! ಮನೆ ಉಳಿದುಕೊಂಡಿದೆಯೇ, ಏನಾದ್ರೂ ಹಾನಿಯಾಗಿದೆಯೇ, ಕಳ್ಳರು ನುಗ್ಗಿದ್ದಾರೆಯೇ ಅಂತ ಪರಿಶೀಲನೆ..!

713
0
SHARE

ಕೊಡಗಿನ ಜೋಡುಪಾಲ ದುರಂತದ ಪ್ರದೇಶದಲ್ಲೀಗ ನೀರವ ಮೌನ ಆವರಿಸಿದೆ. ಭೂಕುಸಿತದಿಂದ ಕೊಚ್ಚಿಹೋದ ರಸ್ತೆಗಳು, ಮಣ್ಣಿನಡಿಗೆ ಬಿದ್ದ ಮನೆಗಳು ಅಲ್ಲಿನ ಕರುಣಾಜನಕ ಸ್ಥಿತಿಗೆ ಕನ್ನಡಿ ಹಿಡಿಯುತ್ತೆ. ಇದೇ ವೇಳೆ ಮಳೆ ಕಡಿಮೆಯಾಗಿದ್ದರಿಂದ ಕೆಲವು ನಿವಾಸಿಗಳು ತಮ್ಮ ಮನೆಗೆ ಬಂದು ಹೋಗುತ್ತಿದ್ದಾರೆ.

ಮನೆ ಉಳಿದುಕೊಂಡಿದೆಯೇ, ಏನಾದ್ರೂ ಹಾನಿಯಾಗಿದೆಯೇ, ಕಳ್ಳರು ನುಗ್ಗಿದ್ದಾರೆಯೇ ಅಂತ ಪರಿಶೀಲಿಸುತ್ತಿದ್ದಾರೆ. ಜಾನುವಾರುಗಳ ಸ್ಥಿತಿಯನ್ನು ಕಂಡು ಮರುಗುತ್ತಿದ್ದಾರೆ. ಸ್ಫೋಟದ ಸದ್ದು ಕೇಳಿ ಬೆಚ್ಚಿಬಿದ್ದಿರುವ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ.ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ತಗ್ಗಿದ್ದು ಇಂದಿನಿಂದ ಶಾಲಾ ಕಾಲೇಜುಗಳು ಪುನರಾರಂಭವಾಗಲಿದೆ.

ಅತಿವೃಷ್ಟಿಯಿಂದ ತೀವ್ರ ಹಾನಿಗೊಳಗಾಗಿರುವ ಪ್ರದೇಶಗಳ 61 ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ. ಐದು ಸಾವಿರ ಶಾಲಾ ಪುಸ್ತಕ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆ ಆರಂಭಿಸಲಾಗಿದೆ. ಇನ್ನು ಹಾನಿಗೊಳಗಾದ ಪ್ರದೇಶಗಳಲ್ಲಿ ಕಾರ್ಯಚರಣೆ ಮುಂದುವರಿದಿದೆ..

ಇಂದು ಮಡಿಕೇರಿ ನೆರೆ ಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ-ಬೆಳಗ್ಗೆ 11.30ಕ್ಕೆ ಕುಶಾಲನಗರ ಪರಿಹಾರ ಕೇಂದ್ರಕ್ಕೆ ಭೇಟಿ-ಮಧ್ಯಾಹ್ನ 1.30ಕ್ಕೆ ಚಾಮುಂಡೇಶ್ವರಿ ಪರಿಹಾರ ಕೇಂದ್ರಕ್ಕೆ ಭೇಟಿ-ಮಧ್ಯಾಹ್ನ 2.30ಕ್ಕೆ ಇಂದಿರಾನಗರ ಬಡಾವಣೆಗೆ ಸಿದ್ದು ಭೇಟಿ-ಮಧ್ಯಾಹ್ನ 3ಗಂಟೆಗೆ ಕಟಗೇರಿ ರಸ್ತೆ ವೀಕ್ಷಣೆ ಮಾಡಲಿರುವ ಸಿದ್ದರಾಮಯ್ಯ…

LEAVE A REPLY

Please enter your comment!
Please enter your name here