Home District ಕೊಡಗು, ಕೇರಳ ಭೀಕರ ಪ್ರವಾಹಕ್ಕೆ ಸೋಮಾಲಿ ಜೆಟ್ ಕಾರಣ..!? ಆಫ್ರಿಕಾದ ಮಾರುತಳಿಂದಲೇ ಸಂಭವಿಸಿತು ಅಪಾರ ಸಾವು,...

ಕೊಡಗು, ಕೇರಳ ಭೀಕರ ಪ್ರವಾಹಕ್ಕೆ ಸೋಮಾಲಿ ಜೆಟ್ ಕಾರಣ..!? ಆಫ್ರಿಕಾದ ಮಾರುತಳಿಂದಲೇ ಸಂಭವಿಸಿತು ಅಪಾರ ಸಾವು, ನೋವು

2096
0
SHARE

ಕೇರಳ, ಕೊಡಗಿನ ಮಹಾಮಳೆಯ ಹೆಸರು ಹೇಳಿದ್ರೆ ಜನರು ಬೆಚ್ಚಿ ಬೀಳ್ತಾರೆ. ಕೇರಳದಲ್ಲಿ 230ಕ್ಕೂ ಹೆಚ್ಚು ಮಂದಿ, ಕೊಡಗಿನಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಅದೆಷ್ಟೋ ಮಂದಿ ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಹಾಗಿದ್ರೆ ಈ ವಿಪತ್ತಿಗೆ ಕಾರಣವೇನು ಅನ್ನೋದನ್ನು ಹವಾಮಾನ ತಜ್ಞರು ಕಂಡು ಹಿಡಿದಿದ್ದಾರೆ. ಹೌದು ಇದಕ್ಕೆಲ್ಲ ಸೋಮಾಲಿ ಜೆಟ್ ಕಾರಣವಂತೆ. ದಕ್ಷಿಣ ಆಫ್ರಿಕಾದ ಮಡಗಾಸ್ಕರ್ ದ್ವೀಪ ಸಮೂಹದಲ್ಲಿ ಪ್ರತಿವರ್ಷ ಕಾಣಿಸಿಕೊಳ್ಳೋ ಸೋಮಾಲಿ ಜೆಟ್ ಅನ್ನೋ ಮಾರುತಗಳೇ ಇವಕ್ಕೆಲ್ಲ ಕಾರಣವಂತೆ.

ಈ ಸೋಮಾಲಿ ಜೆಟ್ ಭಾರತದ ಮುಂಗಾರು ಮಳೆಗೆ ಹೆಚ್ಚಿನ ತೀವ್ರತೆ ನೀಡುತ್ತದೆ. ಈ ವರ್ಷ ಅಗಷ್ಟ್ ಮೊದಲ ವಾರದಲ್ಲಿ ಆಗಮಿಸಿದ ಸೋಮಾಲಿ ಜೆಟ್, ಕೇರಳ ಹಾಗೂ ಕೊಡಗಿನ ಮಹಾ ದುರಂತಕ್ಕೆ ಕಾರಣ ಅಂತ ತಜ್ಞರು ಹೇಳ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಭೂ ಕುಸಿತ ಮುಂದುವರೆದಿದ್ದು ಸತೀಶ್ ಭಟ್ ಎಂಬುವರ ಕಾಫಿ ತೋಟದಲ್ಲಿ ಭಾರೀ ಭೂ ಕುಸಿತ ಉಂಟಾಗಿದೆ. ಎನ್.ಆರ್.ಪುರ‌ ತಾಲೂಕಿನ ಖಾಂಡ್ಯ ಬಳಿಯ ಬಿದರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು…

ಸತೀಶ್ ಭಟ್ ಎಂಬುವವರ ಒಂದು ಎಕರೆಯಲ್ಲಿದ್ದ ಅಡಿಕೆ, ಕಾಫಿ ಹಾಗೂ ಮೆಣಸು ಸಂಪೂರ್ಣ ನಾಶಗೊಂಡಿದೆ. ಇನ್ನೂ, ಮಳೆ ನಿಂತರೂ ಗಾಳಿ ನಿಂತಿಲ್ಲದ ಕಾರಣ ಜನರು ಆತಂಕಗೊಂಡಿದ್ದು ಮಲೆನಾಡಿಗರು ಕಂಗಾಲಾಗಿದ್ದಾರೆ…

LEAVE A REPLY

Please enter your comment!
Please enter your name here