Home Elections 2018 ಕೊನೆಗೂ ದ್ವೇಷ ಸಾಧಿಸಿದ HDK..?! ಮಾಧ್ಯಮದವರಿಗೆ ಮುಜುಗರ ಸೃಷ್ಟಿಸಿದ ಕುಮಾರಸ್ವಾಮಿ…

ಕೊನೆಗೂ ದ್ವೇಷ ಸಾಧಿಸಿದ HDK..?! ಮಾಧ್ಯಮದವರಿಗೆ ಮುಜುಗರ ಸೃಷ್ಟಿಸಿದ ಕುಮಾರಸ್ವಾಮಿ…

3337
0
SHARE

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಮಾಧ್ಯಮಗಳ ಮೇಲೆ ಬುಸುಗುಡುತ್ತಲೇ ಬಂದಿರುವ ಕುಮಾರಸ್ವಾಮಿ ಕೊನೆಗೂ ತಾವು ಅಂದುಕೊಂಡಂತೆ ಮಾಡಿದ್ದಾರೆ..ಮಾಧ್ಯಮಗಳನ್ನು ಮೂಲೆ ಗುಂಪು ಮಾಡುವ ಮತ್ತು ಸರ್ಕಾರದ ಚಟುವಟಿಕೆಗಳು ಮಾಧ್ಯಮಗಳ ಗಮನಕ್ಕೆ ಬಾರದಂತೆ ತಡೆಯುವ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ..

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮೊದಲಿನಿಂದಲೂ ಮೀಸಲಿಡಲಾಗಿದ್ದು ಕೊಠಡಿಯನ್ನು ಬದಲಾಯಿಸಿದ್ದಾರೆ..ಮಹತ್ವದ ಸಭೆ ನಡೆಯುವ ಮತ್ತು ಸಚಿವರ ಕೊಠಡಿಗಳಿರುವ, ಸಾಮಾನ್ಯವಾಗಿ ಎಲ್ಲರೂ ಸುಲಭವಾಗಿ ಲಭ್ಯವಾಗುವ ಜಾಗದಿಂದ ಮಾಧ್ಯಮಗಳನ್ನು ನಿರ್ಬಂಧಿಸಿದ್ದಾರೆ..ಮೊದಲನೇ ಮಹಡಿಯಿಂದ ಮಾಧ್ಯಮ ಪ್ರತಿನಿಧಿಗಳನ್ನು ನೆಲ ಮಹಡಿಗೆ ತಳ್ಳಿದ್ದಾರೆ.

ಮೊದಲು ಮೂರನೇ ಮಹಡಿಯ ಸಮ್ಮೇಳನ ಸಭಾಂಗಣ ಪಕ್ಕದಲ್ಲೇ ಮಾಧ್ಯಮ ಪ್ರತಿನಿಧಿಗಳಿಗೆ ಕೊಠಡಿ ಮೀಸಲಿಡಲಾಗಿತ್ತು..ಆದ್ರೆ ನಿಮಗೊಂದು ಸೂರು ಒದಗಿಸುತ್ತೇನೆ ಅಂತ ಹಿಂದೊಂಮ್ಮೆ ದೂರಕ್ಕೆ ತಳ್ಳುವ ಕುಮಾರಸ್ವಾಮಿ ಅದನ್ನು ಮೌನವಾಗಿ, ಅಷ್ಟೇ ನಾಜೂಕಾಗಿ ಮಾಡಿ ಮುಗಿಸಿದ್ದಾರೆ..

ಮಹತ್ವದ ಸಭೆ, ಸಚಿವರ ಆಗಮನ, ಶಾಸಕರ ಭೇಟಿ, ಅಧಿಕಾರಿಗಳ ಚಲವನವೆಲ್ಲ ಗೊತ್ತಾಗದಂತೆ ನೆಲಮಹಡಿಯಲ್ಲಿ ಶಾಸ್ತ್ರಕ್ಕೆಂಬಂತೆ ಒಂದು ಕೊಠಡಿ ಕೊಟ್ಟು ಸಾಗ ಹಾಕಿದ್ದಾರೆ..ಹೇಳಿ ಕೇಳಿ ಮಹಿಳಾ ಶೌಚಾಲಯದ ಪಕ್ಕದಲ್ಲೇ ಮಾಧ್ಯಮ ಪ್ರತಿನಿಧಿಗಳು ಕ್ಯಾಮರಾ ತೆಗೆದುಕೊಂಡು ಓಡಾಡುವ ಪರಿಸ್ಥಿತಿ ತಂದಿಟ್ಟಿದ್ದಾರೆ..ಅಷ್ಟೇ ಅಲ್ಲ ಅಲ್ಲಿ ಶೌಚಾಲಯಕ್ಕೆ ಹೋಗುವ ಮಹಿಳೆಯರಿಗೂ ಒಂದು ರೀತಿ ಮುಜುಗರವಾಗುವಂತೆ ಮಾಡಲಾಗಿದೆ…

ದೇವರಾಜ ಅರಸು ಅವರ ಕಾಲದಿಂದಲೂ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಇಟ್ಟಿದ್ದ ಕೊಠಡಿಯಿಂದ ತೆರವು ಮಾಡಿ ನೆಲ ಮಹಡಿಗೆ ತಳ್ಳಿ ಕುಮಾರಸ್ವಾಮಿ ತಮ್ಮ ಒಳಗೆ ಇದ್ದ ಅಗೋಚರ ದ್ವೇಷವನ್ನು ತೋರ್ಪಡಿಸಿಕೊಂಡಿದ್ದಾರೆ..ಯಾರ ಅಭಿಪ್ರಾಯವನ್ನೂ ಪಡೆಯದೇ ಈ ರೀತಿ ಏಕಾ ಏಕಾ ನಿರ್ಧಾರ ಕೈಗೊಂಡಿರುವುದು ಅವರ ದರ್ಬಾರಿಗೆ ಸಾಕ್ಷಿಯಾಗಿದೆ..

LEAVE A REPLY

Please enter your comment!
Please enter your name here