ಕೊನೆಯ ಬಾರಿ ‘ಅಪ್ಪ’ ಎಂದು ಕರೆಯಲೇ?:ನಾನು ನಿಮಗೆ ‘ಅಪ್ಪ’ ಎಂದು ಕರೆಯುವ ಬದಲು ಯಾವಾಗಲೂ ತಲೈವಾರ್ ಎಂದೇ ಕರೆಯುತ್ತಿದ್ದೆ. ನೀವು ನನ್ನ ಪಾಲಿಗೆ ಬಹುದೊಡ್ಡ ನಾಯಕರಾಗಿದ್ದಿರಿ. ಆದರೆ ಒಂದೇ ಒಂದು ಬಾರಿ, ಕೊನೆಯ ಬಾರಿ ನಿಮಗೆ ‘ಅಪ್ಪ’ ಎಂದು ಕರೆಯಲೇ?
“ನೀವು ಎಲ್ಲೇ ಹೊರಟರೂ ನನಗೆ ಒಂದು ಮಾತು ಹೇಳಿ ಹೋಗುತ್ತಿದ್ದಿರಿ. ಆದರೆ ಈ ಬಾರಿ ಯಾಕೆ ನನಗೇನೂ ಹೇಳದೆ ಹೋಗಿದ್ದೀರಿ. ನಮ್ಮನ್ನೆಲ್ಲ ಸಂಕಷ್ಟದಲ್ಲಿ ದೂಡಿ ನೀವೆಲ್ಲಿಗೆ ಹೋಗಿದ್ದೀರಿ?
“ಮೂವತ್ತ್ಮೂರು ವರ್ಷದ ಹಿಂದೆ ನೀವು ಹೇಳಿದ್ದಿರಿ.
ನಿಮ್ಮ ಸಮಾಧಿಯಲ್ಲಿ ಅಕ್ಷರಗಳಿರಬೇಕು ಅಂತ. ‘ಜೀವನಪರ್ಯಂತ ಅವಿಶ್ರಾಂತವಾಗಿ ದುಡಿದ ನಾಯಕ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ನಿಮ್ಮ ಸಮಾಧಿಯ ಮೇಲೆ ಬರೆಯುತ್ತೇವೆ. ನೀವು ನಿಜಕ್ಕೂ ತಮಿಳರಿಗಾಗಿ ಅವಿರತವಾಗಿ ದುಡಿದಿದ್ದೀರಿ.ತಮಿಳು ಸಮುದಾಯಕ್ಕಾಗಿ ನೀವು ಮಾಡಿದ ಕೆಲಸ ನಿಮಗೆ ನಿಜಕ್ಕೂ ಸಂತೃಪ್ತಿ ತಂದಿದೆಯೇ…
ಇಂತಿ ನಿಮ್ಮ ಪ್ರೀತಿಯ ಮಗ
ಸ್ಟಾಲಿನ್…