Home Latest ಕೊನೆಯ ವಿಕೆಟ್,,,! ನಾಲ್ಕು ಬಾಲ್… ನಾಲ್ಕು ಸಿಕ್ಸ್ ..*ಇಂಡಿಯನ್ ಡೆವಿಲ್ ಮ್ಯಾಜಿಕ್ **!!!!

ಕೊನೆಯ ವಿಕೆಟ್,,,! ನಾಲ್ಕು ಬಾಲ್… ನಾಲ್ಕು ಸಿಕ್ಸ್ ..*ಇಂಡಿಯನ್ ಡೆವಿಲ್ ಮ್ಯಾಜಿಕ್ **!!!!

526
0
SHARE

ಕ್ರಿಕೆಟ್ ಅನ್ನುವುದೇ ಒಂದು ರೋಚಕ ಆಟ. ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಏನೆಲ್ಲಾ ದಾಖಲೆಗಳು ,ಮ್ಯಾಜಿಕ್ ಗಳು ನಮ್ಮ ಕಣ್ಣ ಮುಂದೆ ಬಂದು ಹೋಗಿವೆ.ಇನ್ನೇನು ಪಂದ್ಯ ಕೈಚೆಲ್ಲಿ ಬಿಡ್ತು ಅನ್ನುವಷ್ಟರಲ್ಲಿ ಅಲ್ಲೊಂದು ಅದ್ಭುತ,ಆಕಸ್ಮಿಕ,ರೋಚಕ,ಇತಿಹಾಸ ಕಣ್ಮುಂದೆ ಬರುತ್ತೆ.ಇಂತಹದ್ದೇ ಒಂದು ರೋಚಕ ದಾಖಲೆಯ ಆಟ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ನಡೆದು ಹಿತಿಹಾಸವಾಗಿದೆ. ಕಪಿಲ್ ದೇವ್ ಸಿಕ್ಸರ್ ಗಳನ್ನು ಬಾರಿಸುವ ರೋಚಕ ವಿಡಿಯೋ ನೋಡಲು ಈ ಸ್ಟೋರಿ ಕೆಳಗೆ ಸ್ಕ್ರಾಲ್ ಮಾಡಿ.

ಅದು 1990ರಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ .ಸಾವಿರದ ಒಂಬೈನೂರ ಎಂಬತ್ತ ಮೂರರಲ್ಲಿ ಭಾರತ ವಿಶ್ವ ವೀರನಾದ ನಂತರ ಭಾರತದ ಜೊತೆ ಪಂದ್ಯವನ್ನು ಆಡುವುದು ವಿಶ್ವದ ಇತರ ಕ್ರಿಕೆಟ್ ಆಡುವ ದೇಶಗಳಿಗೆ ಸವಾಲಿನ ಕೆಲಸ .ಇಂತಹದ್ದೇ ಒಂದು ಸಂದರ್ಭ 1990 ಇಸ್ವಿಯಲ್ಲಿ ಬಂತು .ಇಂಗ್ಲೆಂಡ್ ಪ್ರವಾಸ ಕೈಗೊಂಡ ಭಾರತ ನಾಲ್ಕು ಟೆಸ್ಟ್ ಗಳ ಸರಣಿಯನ್ನು ಆಡಲು ಆಂಗ್ಲರ ನೆಲದಲ್ಲಿ ಸಜ್ಜುಗೊಂಡಿತ್ತು .ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂಗ್ಲೆಂಡ್ನ ಕ್ರಿಕೆಟ್ ಕಾಶಿ ಎಂದೇ ಹೆಸರು ಪಡೆದಿರುವ ಲಾರ್ಡ್ಸ್ ಮೈದಾನದಲ್ಲಿ ನಡೆಯಿತು .ಆ ಕಾಲಕ್ಕೆ ಇಂಗ್ಲೆಂಡ್ ಆಕ್ರಮಣಕಾರಿ ಆಟಗಾರರ ದೊಡ್ಡ ಪಡೆಯನ್ನೇ ಹೊಂದಿತ್ತು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು 653ರನ್ ಗಳ ಬೃಹತ್ ಮೊತ್ತವನ್ನೇ ಕಲೆಹಾಕಿತ್ತು.

ಭಾರತದ ಮಹಮ್ಮದ್ ಅಜರುದ್ದೀನ್ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು .ಭಾರತ ತಂಡದಲ್ಲಿ “ಡೇರ್ ಡೇವಿಲ್” ಎಂದೇ ಹೆಸರು ಪಡೆದಿದ್ದ ಕಪಿಲ್ ದೇವ್ ಇಂಡಿಯಾದ ಸ್ಟಾರ್ ಆಟಗಾರ .ದಿಲೀಪ್ ವೆಂಗ್ ಸರ್ಕಾರ್, ರವಿಶಾಸ್ತ್ರೀ ಅಂತಹ ಅನುಭವಿ ಹಾಗೂ ಯುವ ಆಟಗಾರರ ಸಮ್ಮಿಶ್ರಣದ ಭಾರತ ತಂಡ ಕೂಡ ಬಲಿಷ್ಠ ಆಟಗಾರರ ಪಡೆಯನ್ನೇ ಹೊಂದಿತ್ತು. ಸಚಿನ್ ತೆಂಡೂಲ್ಕರ್ ಎಂಬ ಅಮೂಲ್ ಬೇಬಿ ಭಾರತದ ಕಾಯಂ ಸದಸ್ಯರಾಗಿ ನೆಲೆ ಕಂಡುಕೊಳ್ಳಲು ಇನ್ನೂ ತಿಣುಕಾಡುತ್ತಿದ್ದ ಸಂದರ್ಭ ಅದು .ಇಂಗ್ಲೆಂಡ್ನಲ್ಲೂ ಕೂಡ ರಣ ವೇಗದ ಬಾಲ್ ಎಸೆಯುವ ವೇಗದ ಬೌಲರ್ಗಳೇ ದಂಡೇ ಇತ್ತು.

ಹೇಳಿ ಕೇಳಿ ಲಾರ್ಡ್ಸ್ ಮೈದಾನ ಇಂಗ್ಲೆಂಡ್ ತಂಡದ ತವರು ನೆಲ, ಪುಟಿದೇಳುವ ಪಿಚ್ .ಭಾರತ ತಂಡ ಕೂಡ ತೆವಳುತ್ತಾ 442 ರನ್ ಗಳಿಸುವಷ್ಟರಲ್ಲಿ ಅತ್ಯಮೂಲ್ಯವಾದ ಅನುಭವಿಗಳ ಒಂಬತ್ತು ವಿಕೆಟ್ಗಳನ್ನು ಕಳೆದುಕೊಂಡಿತ್ತು .ಉಳಿದಿರುವುದು ಒಂದೇ ವಿಕೆಟ್ ಇಪ್ಪತ್ತ್ನಾಲ್ಕು ರನ್ಗಳನ್ನು ಗಳಿಸಿದರೆ ಮಾತ್ರ ಭಾರತ ಮೊದಲ ಇನಿಂಗ್ಸ್ನಲ್ಲಿ ಫಾಲೊಆನ್ ನನ್ನ ತಪ್ಪಿಸಿಕೊಳ್ಳಬಹುದು .ಇಂತಹ ಸಂದರ್ಭದಲ್ಲಿ ಗಟ್ಟಿಯಾಗಿ ನೆಲೆ ನಿಂತು ಆಡುತ್ತಿದ್ದುದು ಭಾರತದ ಡೆವಿಲ್ ಆಟಗಾರ ಕಪಿಲ್ ದೇವ್ ಅರ್ಧ ಸೆಂಚುರಿ ಬಾರಿಸಿ ಭರವಸೆಯನ್ನು ಭಾರತ ತಂಡದಲ್ಲಿ ಮೂಡಿಸಿದರು .

ಇಂಗ್ಲೆಂಡ್ನ ವೇಗದ ದಾಳಿಯನ್ನು ಕಪಿಲ್ ದೇವ್ ಸಮರ್ಥವಾಗಿ ಎದುರಿಸಿ ಕ್ರೀಸ್ನಲ್ಲಿ ನೆಲೆ ನಿಂತಿದ್ದರೆ ಇನ್ನೊಂದೆಡೆ ಭಾರತದ ವಿಕೆಟ್ಗಳು ಉದುರುತ್ತಿದ್ದವು.ಎಂಟನೇ ವಿಕೆಟ್ ರೂಪದಲ್ಲಿ ಸಂಜಯ್ ಶರ್ಮಾ ಸೊನ್ನೆಗೆ ಔಟ್ ಆದರೆ ನಂತರದ ಬಾಲಿನಲ್ಲಿ ವಿಕೆಟ್ ಕೀಪರ್ ಕಿರಣ್ ಮೋರೆ ಅವರು ಕೂಡ ಡಕ್ಟ್ ಔಟ್ ಆದ್ರೂ.ಈ ಸಂದರ್ಭದಲ್ಲಿ ಭಾರತ ತಂಡದ ಮೊತ್ತ 430/9. ಒಂದು ಕಡೆ ಕಪಿಲ್ ದೇವ್ ಹನ್ನೊಂದನೇ ಆಟಗಾರರಾಗಿ ಫೀಲ್ಡ್ ಗೆ ಬಂದಿದ್ದು ನರೇಂದ್ರ ಹಿರ್ವಾನಿ .ಈ ಸಂದರ್ಭದಲ್ಲಿ ಭಾರತ ಫಾಲನ್ ಆನ್ ತಪ್ಪಿಸಿಕೊಳ್ಳಲು ಇಪ್ಪತ್ತ್ನಾಲ್ಕು ರನ್ ಗಳಿಸಬೇಕಾಗಿತ್ತು. ಜವಾಬ್ದಾರಿ ಆಟಗಾರ ಕಪಿಲ್ ದೇವ್ ಮೇಲೆ ಇಡೀ ಭಾರತ ತಂಡ ನೆಚ್ಚಿಕೊಂಡಿತ್ತು. ಇನ್ನೊಂದೆಡೆ ಆಫ್ ಕ್ರೀಸ್ ನಲ್ಲಿದ್ದ ನರೇಂದ್ರ ಇರ್ವಾನಿ .ಇವರು ಸ್ಟ್ರೈಕ್ಗೆ ಬಂದ್ರೆ ಔಟಾಗುವ ಅಪಾಯ.

ಕಪಿಲ್ ದೇವ್ ಸ್ಟ್ರೈಕ್ ಬ್ಯಾಟ್ ಬೀಸಲು ರೆಡಿಯಾಗಿದ್ದರು ಇಂಗ್ಲೆಂಡ್ ಪರ ಬೌಲ್ ಮಾಡಲು ಬಂದಿದ್ದು ಆಫ್ ಸ್ಪಿನ್ನರ್ ಎಡ್ಡಿ ಹಮ್ಮಿಂಗ್. ಕಪಿಲ್ ದೇವ್ ಮೊದಲನೇ ಬಾಲನ್ನು ಅದ್ಭುತವಾಗಿ ಗ್ರೌಂಡ್ನ ಆಚೆ ಕಳುಹಿಸಿದರು.. ಸಿಕ್ಸ್.. ಸಿಕ್ಸ್ … ಎರಡನೇ ಬಾಲ್ ಸಿಕ್ಸ್ ಸಿಕ್ಸ್ ಸಿಕ್ಸ್ ಸಿಕ್ಸ್ ನಾಲ್ಕು ಸತತ ಸಿಕ್ಸ್ ಗಳನ್ನು ಕಪಿಲ್ ದೇವ್ ಬಾರಿಸುತ್ತಿದ್ದಂತೆ ಭಾರತ ತಂಡದಲ್ಲಿ ಉಲ್ಲಾಸ ಉತ್ಸಾಹ .ಭಾರತದ ತಂಡ ಫಾಲೋ ಆನ್ ನಿಂದ ಬಚಾವ್.ಲಾರ್ಡ್ಸ್ ಮೈದಾನದ ದೊಡ್ಡ ಬೋರ್ಡಿನಲ್ಲಿ ಭಾರತ ಫಾಲೋ ಆನ್ ಇಂದ ಬಚಾವ್ ಆಯಿತು ಎಂದು ಪದಗಳು ಇಂಗ್ಲಿಷ್ನಲ್ಲಿ ಬರುತ್ತಿದ್ದಂತೆ ಪಂದ್ಯ ಗೆದ್ದ ಉತ್ಸಾಹ .

ಕಪಿಲ್ ದೇವ್ ನಾಲ್ಕು ಬಾಲ್ಗಳಲ್ಲಿ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿ ಭಾರತ ತಂಡದ ಹೀರೋ ಆಗಿ ಹೊರಹೊಮ್ಮಿದರು. ನಂತರದ ಓವರ್ ನಲ್ಲಿ ಸ್ಟ್ರೈಕ್ ತೆಗೆದುಕೊಂಡ ನರೇಂದ್ರ ಮೊದಲ ಬಾಲ್ ನಲ್ಲೇ ಬೋಲ್ಡ್ ಔಟ್ ಆದ್ರು .ನಂತರ ಈ ಪಂದ್ಯ ಡ್ರಾ ಆಗಿದ್ದು ಇತಿಹಾಸ.

LEAVE A REPLY

Please enter your comment!
Please enter your name here