Home KARNATAKA ಕೊನೇ ಚಾನ್ಸ್‌ನಲ್ಲಿ “ಈ ಸಲ ಕಪ್ ನಮ್ದೆ” ಅಂತಾ ಪ್ರೂ ಮಾಡೋಕೆ ಸಜ್ಜಾಗಿದೆ ಕೊಹ್ಲಿಪಡೆ..!!? RCB...

ಕೊನೇ ಚಾನ್ಸ್‌ನಲ್ಲಿ “ಈ ಸಲ ಕಪ್ ನಮ್ದೆ” ಅಂತಾ ಪ್ರೂ ಮಾಡೋಕೆ ಸಜ್ಜಾಗಿದೆ ಕೊಹ್ಲಿಪಡೆ..!!? RCB V\S SRH ಹೈಮೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಸಜ್ಜು…

3295
0
SHARE

ಚಿನ್ನಸ್ವಾಮಿಯಲ್ಲಿ ಆರ್ ಸಿಬಿಗೆ ಸನ್ ರೈಸರ್ಸ್ ಚಾಲೆಂಜ್.ಪ್ಲೇ ಆಫ್ ಕನಸಿನಲ್ಲಿರೋ ಕೊಹ್ಲಿಸೈನ್ಯಕ್ಕೆ ಕಾಡ್ತಿದೆ ಟೆನ್ಷನ್. ಚಿನ್ನಸ್ವಾಮಿ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಮುಖಿಯಾಗಲಿವೆ.ಈಗಾಗ್ಲೆ ನಾಕೌಟ್ ಹಂತಕ್ಕೆ ತಲುಪಿರೋ ಹೈದ್ರಾಬಾದ್ ತಂಡ, ಆರ್ ಸಿಬಿ ವಿರುದ್ಧ ಔಪಚಾರಿಕ ಪಂದ್ಯ ಆಡಲಿದೆ. ಆದ್ರೆ ಪ್ಲೇ ಆಫ್ ಕನಸಿನಲ್ಲಿರೋ ಕೊಹ್ಲಿಪಡೆ ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಗೆ ಶಾಕ್ ನೀಡಿ, ತವರಿನಲ್ಲಿ ವಿಜಯದ ಕೇಕೆ ಹಾಕಲು ಸಜ್ಜಾಗಿದೆ…
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಆರಂಭಿಕ ಪಂದ್ಯಗಳಲ್ಲಿ ಮುಗ್ಗರಿಸಿದ್ದ ಕೊಹ್ಲಿಸೈನ್ಯ ನಿರ್ಣಾಯಕ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ ನಾಕೌಟ್ ಹಂತಕ್ಕೇರಲು ಶತಾಯ-ಗತಾಯ ಪ್ರಯತ್ನ ನಡೆಸುತ್ತಿದೆ. ಅಲ್ಲದೇ ಉಳಿದಿರೋ ಇನ್ನೆರಡು ಪಂದ್ಯಗಳನ್ನ ದೊಡ್ಡ ಮಟ್ಟದಲ್ಲಿ ಗೆಲ್ಲಲೇಬೇಕಾದ ಒತ್ತಡ ಕೊಹ್ಲಿಸೈನ್ಯಕ್ಕೆ ಎದುರಾಗಿದೆ…

ಸೀಸನ್ 11ರಲ್ಲಿ ಹೊಸ ಇತಿಹಾಸ ನಿರ್ಮಿಸಲು ಹಾತೊರಿಯುತ್ತಿದ್ದ ಆರ್ ಸಿಬಿ, ಪ್ರಮುಖ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿ ಸತತ ಸೋಲುಗಳನ್ನ ಕಂಡಿತ್ತು. ಅಲ್ಲದೇ ತಂಡದಲ್ಲಿರೋ ಆಟಗಾರರು ಕೂಡ ಜವಾಬ್ದಾರಿಯನ್ನ ಮರೆತು ದುರ್ಬಲ ಪರ್ಫಾಮೆನ್ಸ್ ನೀಡಿದ್ದರು. ಆದ್ರೀಗ ಎಚ್ಚೆತ್ತುಕೊಂಡಿರೋ ಕೊಹ್ಲಿಪಡೆ ನಿರೀಕ್ಷೆಗೂ ಮೀರಿದ ಹೋರಾಟ ಮುಂದುವರೆಸಿದ್ದು, ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವತ್ತ ಹೆಜ್ಜೆ ಇಟ್ಟಿದೆ…

ಪಂಜಾಬ್ ವಿರುದ್ಧ ಮನಮೋಹಕ ಇನ್ನಿಂಗ್ಸ್ ಪ್ರದರ್ಶಿಸಿದ್ದ ಆರ್ ಸಿಬಿ, ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚಿತ್ತು. ಈ ಮೂಲಕ ಉತ್ತಮವಾದ ರನ್ ರೇಟ್ ಕೂಡ ಪಡೆದುಕೊಂಡಿತ್ತು. ಹೀಗಾಗಿ ಹೈದ್ರಾಬಾದ್ ಹಾಗೂ ರಾಜಸ್ತಾನ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಬಿಗ್ ಮಾರ್ಜಿನ್ ನಲ್ಲಿ ಜಯಗೊಳಿಸುವ ಗುರಿಯನ್ನ ಕೊಹ್ಲಿಸೈನ್ಯ ಹೊಂದಿದೆ…

ಪ್ಲೇ ಆಫ್ ಆಸೆಯಲ್ಲಿರೋ ಆರ್ ಸಿಬಿ ಲೀಗ್ ಹಂತದಲ್ಲಿ ಉಳಿದಿರೋ 2 ಪಂದ್ಯಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಲು ಗೇಮ್ ಪ್ಲಾನ್ ಸಿದ್ದಪಡಿಸಿಕೊಂಡಿದೆ. ಅಲ್ಲದೇ ಪರ್ಫಾಮೆನ್ಸ್ ಜೊತೆ ಕೊಹ್ಲಿಸೈನ್ಯಕ್ಕೆ ಅದೃಷ್ಠ ಕೂಡ ಕೊಹ್ಲಿಸೈನ್ಯಕ್ಕೆ ಅವಶ್ಯಕವಾಗಿದ್ದು, ಉಳಿದಿರೋ ಪಂದ್ಯಗಳಲ್ಲಿ ಕೆಕೆಆರ್ ಹಾಗೂ ಪಂಜಾಬ್ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರ ಕೂಡ ಆರ್ ಸಿಬಿಯ ನಾಕೌಟ್ ಪ್ರವೇಶವನ್ನ ನಿರ್ಧರಿಸಲಿವೆ. ಅಲ್ಲದೇ ಉತ್ತಮ ರನ್ ರೇಟ್ ಹೊಂದಿದ್ದರೂ ಇತರೆ ತಂಡಗಳ ಪರ್ಫಾಮೆನ್ಸ್ ಮೇಲೂ ಅವಲಂಬಿಸುವ ಅನಿವಾರ್ಯತೆ ಕೆಂಪುಸೈನ್ಯಕ್ಕೆ ಎದುರಾಗಿದೆ…
ಅಲ್ಲದೇ ನಾಯಕ ವಿಲಿಯಂಸನ್ ಹಾಗೂ ಶಿಖರ್ ಧವನ್ ಅದ್ಭುತ ಫಾರ್ಮ್ ನಲ್ಲಿದ್ದು ರನ್ ಹೊಳೆ ಹರಿಸುತ್ತಿದ್ದಾರೆ. ಬೌಲಿಂಗ್ ನಲ್ಲಿ ಭುವಿ, ಕೌಲ್ ಹಾಗೂ ರಶೀದ್ ಖಾನ್ ವಿಕೆಟ್ ಬೇಟೆಯಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ.ಒಟ್ಟಿನಲ್ಲಿ ಪ್ಲೇ ಆಫ್ ತಲುಪಿರೋ ಸನ್ ರೈಸರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಕಾದಾಡಲು ಸಿದ್ದವಾಗಿದ್ದು, ತವರಿನ ಅಭಿಮಾನಿಗಳ ಮುಂದೆ ವಿಜಯೋತ್ಸವ ಆಚರಿಸಲು ಕೊಹ್ಲಿಸೈನ್ಯ ಸಜ್ಜಾಗಿದೆ…

LEAVE A REPLY

Please enter your comment!
Please enter your name here