Home Crime ಕೊನೇವರೆಗೂ ಹೋರಾಡಿದ ಈ ದಿಟ್ಟ ಮಹಿಳೆಗೊಂದು ಸಲಾಂ..!? ಸರಗಳತನಕ್ಕೆ ಬ್ರೇಕ್ ಹಾಕುವಲ್ಲಿ ಪೊಲೀಸ್ ಇಲಾಖೆ ವಿಫಲ..

ಕೊನೇವರೆಗೂ ಹೋರಾಡಿದ ಈ ದಿಟ್ಟ ಮಹಿಳೆಗೊಂದು ಸಲಾಂ..!? ಸರಗಳತನಕ್ಕೆ ಬ್ರೇಕ್ ಹಾಕುವಲ್ಲಿ ಪೊಲೀಸ್ ಇಲಾಖೆ ವಿಫಲ..

1592
0
SHARE

ಈ ಬೆಂಗಳೂರು ಹೆಣ್ಣು ಮಕ್ಕಳಿಗೆ ಸೇಫ್ ಅಲ್ಲಾ ಅಂತಾ ಪದೇ ಪದೇ ಪ್ರೂವ್ ಆಗ್ತಾನೆ ಇದೆ. ರಾಜರಾಜೇಶ್ವರಿನಗರದಲ್ಲಿ ಇವತ್ತು ಚೈನ್ ಕದಿಯಲು ಬಂದ ದುಷ್ಕರ್ಮಿಗಳಿಬ್ಬರು ನಡು ಬೀದಿಯಲ್ಲೇ ಹೆಣ್ಣಿನ ಮೈ ಮುಟ್ಟಿದ್ದಾರೆ. ಆದರೂ ಬಿಡದ ದಿಟ್ಟ ಮಹಿಳೆ ಆ ಸರಗಳ್ಳರ ಹತ್ರಾ ಹೋರಾಡಿದ್ದಾಳೆ…

ಆಕ್ಚುಲಿ ಆಗಿದ್ದೇನಪ್ಪಾ ಅಂದ್ರೆ ರಾಜರಾಜೇಶ್ವರಿನಗರದದ ನಾಲ್ಕನೇ ಹಂತದಲ್ಲಿ ಮಕ್ಕಳು ಆಟವಾಡ್ತಿದ್ದಾಗ ಇಬ್ರು ಹೆಂಗಸ್ರು ರೋಡ್ ನಲ್ಲಿ ನಿಂತಿದ್ರು. ಆ ಟೈಮ್ ನಲ್ಲಿ ಹೊಂಡಾ ಡಿಯೋ ಗಾಡಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚೈನ್ ಕೀಳೋದಕ್ಕೆ ಟ್ರೈ ಮಾಡಿದ್ದಾರೆ…

ಆ ಟೈಮ್ ನಲ್ಲಿ ಜೊತೆಗಿದ್ದ ಒಂದು ಹೆಂಗಸು ಓಡಿ ಹೋಗ್ತಾಳೆ. ಗಾಡಿಯಿಂದ ಇಳಿದು ಬರೋ ಚೈನ್ ಸ್ನಾಚರ್ ಗೆ ಕೈಯಲ್ಲಿ ಶೆಟಲ್ ಬ್ಯಾಟ್ ಇಟ್ಕೊಂಡಿದ್ದ ಲೇಡಿ ಚೈನ್ ಸ್ನಾಚರ್ ಬ್ಯಾಟ್ ನಿಂದ್ಲೇ ಬೀಸ್ತಾಳೆ. ಆಗ ಗಾಡಿಯಿಂದ ಇಳಿದು ಬಂದ ಇಬ್ಬರು ದುಷ್ಕರ್ಮಿಗಳು ಲೇಡಿಯನ್ನಾ ಕಂಬಕ್ಕೆ ತಳ್ಳಿ ನಡು ಬೀದಿಯಲ್ಲೇ ಬಟ್ಟೆ ಬಿಚ್ಚಲು ಪ್ರಯತ್ನ ಪಡ್ತಾರೆ…

ಕೊನೆಗೆ ಆ ಲೇಡಿ ಮೇಲೆ ಅಟ್ಯಾಕ್ ಮಾಡಿ ಕುತ್ತಿಗೆಯಲ್ಲಿದ್ದ ಸರ ಕೈನಲ್ಲಿದ್ದ ಬಳೆ ಕಿತ್ಕೊಂಡು ಹೋಗ್ತಾರೆ…ಇವೆಲ್ಲಾ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇಷ್ಟೆಲ್ಲಾ ಆಗಿದ್ರೂ ಪೊಲೀಸ್ರು ಎಲೆಕ್ಷನ್ ನಲ್ಲಿ ಬ್ಯುಸಿ ಇದ್ದೀವಿ ಚೈನ್ ಸ್ನಾಚರ್ ಗಳನ್ನಾ ಆಮೇಲೆ ಹಿಡಿದ್ರಾಯ್ತು ಅಂತಾ ಸೈಲೆಂಟ್ ಆಗಿದ್ದಾರೆ…

LEAVE A REPLY

Please enter your comment!
Please enter your name here