Home Crime ಕೊಪ್ಪಳದಲ್ಲಿ ಮಧುಚಂದ್ರದ ರಾತ್ರಿಯೇ ಮಧುಮಗಳ ಕಿಡ್ನಾಪ್.!! ಫಸ್ಟ್ ನೈಟ್ ಕನಸು ಕಾಣುತ್ತಿದ್ದ ಮಧುಮಗನಿಗೆ ಬಿಗ್ ಶಾಕ್..?!

ಕೊಪ್ಪಳದಲ್ಲಿ ಮಧುಚಂದ್ರದ ರಾತ್ರಿಯೇ ಮಧುಮಗಳ ಕಿಡ್ನಾಪ್.!! ಫಸ್ಟ್ ನೈಟ್ ಕನಸು ಕಾಣುತ್ತಿದ್ದ ಮಧುಮಗನಿಗೆ ಬಿಗ್ ಶಾಕ್..?!

1215
0
SHARE

ಮಕ್ಕಳಿಗೆ ಮದುವೆಯಾಯ್ತು, ಸುಖಿಸಂಸಾರ ನಡೆಸ್ತಾರೆ ಅಂತಾ ಆ ಕುಟುಂಬಸ್ಥರು ಕನಸು ಕಂಡಿದ್ರು. ಇನ್ನು ಪೋಷಕರ ಕನಸಿನಂತೆ ಮದುವೆ ಮುಗಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ವರನಿಗೆ ಫಸ್ಟ್ ನೈಟ್ ದಿನವೇ ಶಾಕ್ ಕಾದಿತ್ತು.. ಕಿರಾತಕರು ನವವಧುವನ್ನು ಕಿಡ್ನಾಪ್ ಮಾಡಿದ್ದಾರೆ. ಇದ್ರಿಂದ ಕಂಗಲಾದ ಪತಿ ದಯವಿಟ್ಟು ನನ್ನ ಹೆಂಡತಿಯನ್ನು ಪತ್ತೆ ಹಚ್ಚಿ ಅಂತಾ ಪೊಲೀಸ್ ಠಾಣೆಯಲ್ಲಿ 6 ಜನ್ರ ವಿರುದ್ದ ಕೇಸ್ ದಾಖಲು ಮಾಡಿದ್ದಾನೆ.

ಮದುವೆ ಮುಗಿಸಿಕೊಂಡು ಫಸ್ಟ್ ನೈಟ್ ಗೆ ಸಿದ್ದವಾಗುತ್ತಿದ್ದ ಮದುಮಗನ ಕನಸು ನುಚ್ಚುನೂರಾಗಿದೆ… ನವವಧು ಮೊದಲ ರಾತ್ರಿ ವರನ ರೂಮ್ಗೆ ಹೋಗುವ ಮುನ್ನಾ ವಧು ಸಿನೀಮಿಯ ಮಾದರಿಯಲ್ಲಿ ಕಿಡ್ನಾಪ್ ಆಗಿದ್ದಾಳೆ.ಈ ಅಚ್ಚರಿ ಘಟನೆ ನಡೆದಿದ್ದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗುಡೂರು ಗ್ರಾಮದಲ್ಲಿ.. ಅಂದಹಾಗೇ ಕಳೆದ ಸೆಪ್ಟೆಂಬರ್ 24 ರಂದು ಮಲ್ಲನಗೌಡ ಮತ್ತು ಗಾಯಿತ್ರಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು..

ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ 2 ಕುಟುಂಬಗಳ ಪರಸ್ಪರ ಒಪ್ಪಿಗೆಯಿಂದಲೇ ಮದುವೆ ನಡೆದಿತ್ತು.ಆದರೆ, ಆ ಮೊದಲ ರಾತ್ರಿ ದಿನ ನಡೆದಿದ್ದೆ ಬೇರೆ. ಆ ದಿನದ ಎಲ್ಲಾ ಸಾಂಪ್ರದಾಯಿಕ ಕಾರ್ಯಕ್ರಮಗಳ ನಂತರ ವಧು ಇನ್ನೇನು ವರ ಇದ್ದ ಕೊಠಡಿಗೆ ತೆರಳಬೇಕಿತ್ತು… ಅಷ್ಟರೊಳಗೆ ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಒಂದು ಟೀಂ ವಧು ಗಾಯಿತ್ರಿಯನ್ನು ಕಿಡ್ನಾಪ್ ಮಾಡಿಕೊಂಡು ಪರಾರಿಯಾಗಿದೆ.

ಗುಡೂರು ಗ್ರಾಮದ ಬಳಿ ಇರುವ ಸೋಮನಾಳ ಗ್ರಾಮದ ಅಂಜುಕುಮಾರ್ ರೆಡ್ಡಿ ಮತ್ತು 6 ಜನ ಸಹಚರರು ಸೇರಿ ವಧುವನ್ನು ಕಿಡ್ನಾಪ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ಇದನ್ನು ತಡೆಯಲು ಯತ್ನಿಸಿದ್ರೂ ಅದು ಸಾಧ್ಯವಾಗಿಲ್ಲ. ಘಟನೆ ಕಳೆದ 7 ರಂದು ನಡೆದಿದ್ರೂ ಕಾರಟಗಿ ಪೊಲೀಸರು ಮಾತ್ರ ಕಾಟಾಚಾರಕ್ಕೆ ಎಂಬಂತೆ ದೂರು ಸ್ವೀಕರಿಸಿ ತನಿಖೆ ಕೈಗೊಳ್ಳದೆ ಕೂತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ..

ಈ ಬಗ್ಗೆ ಎಸ್ಪಿ ಅವರನ್ನು ಕೇಳಿದ್ರೆ, ಈಗಾಗಲೇ ತನಿಖೆ ಚುರುಕುಗೊಳಿಸಿದ್ದೇವೆ. ನವವಧು ಎಲ್ಲಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಗಾಯಿತ್ರಿ ಸಿಕ್ಕ ತಕ್ಷಣ ಪ್ರಕರಣದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಅಂತಾರೆ.ಮೊದಲ ರಾತ್ರಿಯ ದಿನವೇ ನವವಧು ಕಿಡ್ನಾಪ್ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗಾಯಿತ್ರಿ ಮತ್ತು ಆರೋಪಿ ಅಂಜುಕುಮಾರ್ ಮೊದಲಿಗೆ ಪರಿಚಯವಿತ್ತಾ..? ಅಥವಾ ಲವ್ನಲ್ಲಿ ಬಿದ್ದಿದ್ರಾ.. ಹೀಗಾಗಿ ಗಾಯಿತ್ರಿ ಅಪಹರಣಕಾರರ ಜೊತೆ ಓಡಿಹೋದ್ಳಾ ಅನ್ನೋದು ತನಿಖೆಯಿಂದ ಮಾತ್ರ ಬೆಳಕಿಗೆ ಬರಬೇಕು… ಇತ್ತ ವರ ಮತ್ತು ಆತನ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ…

LEAVE A REPLY

Please enter your comment!
Please enter your name here