SHARE

ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ದರ್ಶನ ಮಾಡೋಕೆ ಅಭಿಮಾನಿಗಳು ಗಂಟೆಗಟ್ಟಲೆ ಕಾಯೋದು ಕಾಮನ್. ಆದರೆ ಸ್ವತಃ ದರ್ಶನ್ನೇ ಯಾರೋ ಸ್ಪೆಷಲ್ ಗೆಸ್ಟ್‌ಗೋಸ್ಕರ ಸಿಕ್ಕಾಪಟ್ಟೆ ವೈಟ್ ಮಾಡಿದಾರೆ. ಅಲ್ಲದೇ ಈ ವಿಶೇಷ ಅತಿಥಿಯನ್ನ ದರ್ಶನ್ ತುಂಬಾ ಪ್ರೀತಿಸುತ್ತಾರಂತೆ. ಅವರಿಗಾಗಿ ಚಳಿಯಲ್ಲಿ ಕಾದುಕೂರೋಕು ನಾನ್ ರೆಡಿ ಅಂತಾರೆ ಡಿ ಬಾಸ್. ಒಂದೊಂದು ಸಲ ಮನುಷ್ಯರಿಗಿಂತ ಪ್ರಾಣಿ-ಪಕ್ಷಿಗಳ ಸಾಂಗತ್ಯನೇ ಎಷ್ಟೋ ಮೇಲು ಅನ್ಸೋದು ಸಹಜ.

ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಮಾತನ್ನ ತಮ್ಮ ಜೀವನದಲ್ಲಿ ಬಹಳ ಡೀಪಾಗಿ ಅಳವಡಿಸಿಕೊಂಡಿರೋ ಹಾಗಿದೆ. ಮುಂಚೆಯಿಂದಲೂ ದರ್ಶನ್‌ಗೆ ಪ್ರಾಣಿ-ಪಕ್ಷಿಗಳು ಅಂದ್ರೆ ಸ್ವಲ್ಪ ಪ್ರೀತಿ ಜಾಸ್ತಿನೇ. ಇನ್ನು ದರ್ಶನ್ ಮೈಸೂರಿನಲ್ಲಿ ಪ್ರಾಣಿಗಳನ್ನ ಅಕ್ಕರೆಯಿಂದ ಸಾಕ್ತಿರೋ ಸ್ವೀಟ್ ಮ್ಯಾಟರ್ ಇಡೀ ಕರ್ನಾಟಕಕ್ಕೆ ಗೊತ್ತು ಬಿಡಿ. ಪ್ರಾಣಿಗಳಲ್ಲಿ ಅಪಾರವಾದ ಮಮತೆಯನ್ನಟ್ಟಿರೋ ದರ್ಶನ್ ಪ್ರಾಣಿ ಪ್ರೀತಿಯ ಬಗ್ಗೆ ಎಷ್ಟು ಹೇಳಿದ್ರೂ ಕೊಂಚ ಕಡಿಮೆನೇ.

ಸಿನಿಮಾ ಶೂಟಿಂಗ್‌ನಲ್ಲಿ ಎಷ್ಟೇ ಬ್ಯೂಸಿಯಿದ್ರೂ ದರ್ಶನ್ ತಮ್ಮ ಪ್ರಾಣಿ-ಪಕ್ಷಿಗಳ ಜೊತೆಗಿನ ಮಿಟಿಂಗ್ ಮಾತ್ರ ತಪ್ಪಿಸೋ ಚಾನ್ಸೆ ಇಲ್ಲ. ’ಯಜಮಾನ ಹಾಗೂ ಒಡೆಯ’ ಸಿನಿಮಾಗಳ ಬ್ಯುಸಿ ಶೆಡ್ಯುಲ್ ಮಧ್ಯೆಯೂ ದರ್ಶನ್ ತಮ್ಮ ಮನದಾಳದ ಪ್ರಾಣಿ ಪ್ರೀತಿಯನ್ನ ಮೆರೆದು ಒಂದು ಹೆಜ್ಜೆ ಮುಂದಕ್ಕೆ ಹೋಗಿದಾರೆ. ಮೊನ್ನೆ ಮಂಡ್ಯದ ನಗುವನಹಳ್ಳಿಗೆ ದರ್ಶನ್ ’ವಿತ್‌ಔಟ್ ಇನ್ಫರ್‌ಮೆಷನ್’ ಸಡನ್ನಾಗಿ ಎಂಟ್ರಿಕೊಟ್ಟಿದಾರೆ.ಸ್ಟೈಲಿಶ್ ಆದ ಮಿಲಿಟರಿ ಕೋಟ್ ಹಾಕೊಂಡು, ಕೈಯಲ್ಲಿ ಕ್ಯಾಮೆರಾ ಹಿಡಿದು ಡಿಬಾಸ್ ಕಾವೇರಿ ನದಿಯ ದಂಡೆಯಲ್ಲಿ ಫೊಟೋ ಶೂಟ್ ಮಾಡೋಕೆ ಗಂಟೆಗಟ್ಟಲೆ ವೈಟ್ ಮಾಡಿದ್ರಂತೆ.

ಬಣ್ಣಬಣ್ಣದ ಮಿಂಚುಳ್ಳಿ ಹಕ್ಕಿಗಳನ್ನ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯೋಕೆ ಕಾದಿದ್ದ ದರ್ಶನ್ ಬೆಳಗಿನ ಕೊರೆಯೋ ಚುಮುಚುಮು ಚಳಿಗೂ ಡೊಂಟ್‌ಕೇರ್ ಎಂದು ಬಿಟ್ರು. ಆ ಸುಂದರ ಮಿಂಚುಳ್ಳಿ ಹಕ್ಕಿಗಳ ಒಂದೇ ಒಂದು ಲುಕ್‌ಗೋಸ್ಕರ ಚಾಲೆಂಜಿಂಗ್ ಸ್ಟಾರ್ ಕಾದು ಕೂತಿದ್ದು ಬರೋಬ್ಬರಿ ಮೂರು ಗಂಟೆ. . !

ದರ್ಶನ್ ಲೈಫ್‌ನಲ್ಲಿ ಒಂದುಸಲ ಕೈ ಹಾಕಿದ ಕೆಲಸವನ್ನ ಅರ್ಧದಲ್ಲಿ ಕೈ ಬಿಟ್ಟ ಹಿಸ್ಟರಿನೇ ಇಲ್ಲ ಬಿಡಿ. ಕಡೆಗೂ ದರ್ಶನ್ ಸುದೀರ್ಘ ವೈಟಿಂಗ್ ಬಳಿಕ ಮಿಂಚುಳ್ಳಿ ಹಕ್ಕಿಗಳನ್ನ ನೋಡಿ ಕಣ್ತುಂಬಿಕೊಂಡಿದಾರೆ. ಸಾಲದಕ್ಕೆ ಮಿಂಚುಳ್ಳಿ ಹಕ್ಕಿಯ ನಿಜವಾದ ಸೌಂದರ್ಯವನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದಾರೆ. ಅಲ್ಲಿಯ ಫ್ಯಾನ್‌ಗಳ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಕೇಕ್‌ನಂತೆ ವೈರಲ್ ಆಗಿಹೋಗಿದೆ.

ಕರ್ನಾಟಕ ವನ್ಯಸಂರಕ್ಷಣೆಯ ರಾಯಭಾರಿಯಾಗೀರೊ ದರ್ಶನ್ ತಾವು ಇದಕ್ಕೆ ಅರ್ಹ ಅಂತ ಪರಿಪೂರ್ಣವಾಗಿ ಪ್ರೂವ್ ಮಾಡಿದಾರೆ. ಈ ಹಿಂದೆ ಕೂಡ ಅರಣ್ಯದ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ದರ್ಶನ್ ಮಾನವೀಯತೆ ಮೆರೆದಿದ್ರು. ತಮ್ಮ ಬ್ಯುಸಿ ಲೈಫ್‌ನಲ್ಲೂ ತಮ್ಮ ಇಷ್ಟವಾದ ಹವ್ಯಾಸಗಳಿಗೆ ಟೈಮ್ ಕೊಟ್ಟರೇ ಚೆಂದ ಎನ್ನೋಕೆ ದರ್ಶನ್ ಒಳ್ಳೆ ಉದಾಹರಣೆ. ದರ್ಶನ್‌ರ ಈ ನಿಶ್ಕಲಮಶ ಪ್ರಾಣಿ ಪ್ರೀತಿ ಹೀಗೆ ಸದಾ ಕಾಲ ಮುಂದುವರೆದು ಕೊಂಡು ಹೋಗಲಿ ಅನ್ನೋದೆ ದಚ್ಚು ಅಭಿಮಾನಿಗಳ ಇಷ್ಟಾರ್ಥ.

LEAVE A REPLY

Please enter your comment!
Please enter your name here