Home KARNATAKA ಕೊರೋನಾ ನಿರ್ಮೂಲನೆಗೆ ವಿನಯ್ ಅವಧೂತರ ಅಗ್ನಿ ದೀಕ್ಷೆ..!

ಕೊರೋನಾ ನಿರ್ಮೂಲನೆಗೆ ವಿನಯ್ ಅವಧೂತರ ಅಗ್ನಿ ದೀಕ್ಷೆ..!

2490
0
SHARE

ಕೊರೋನಾ..! ಮಾನವ ಸಂಕುಲದ ಸರ್ವನಾಶಕ್ಕಾಗಿಯೇ ಉದಯಿಸಿದಂತಹ ವೈರಸ್ ಇದಾ..? ಅನ್ನುವ ಅನುಭವ ಎಲ್ಲರಲ್ಲೂ ಆಗ್ತಾಇದೆ. ಜಗತ್ತಿನ ಸುಪ್ರಸಿದ್ದ ಪ್ರವಾಸಿ ನಗರಿ ಇಟಲಿ, ಈಗಾಗಲೇ ಸಾವಿನ ನಗರಿಯಾಗಿದೆ. ಭಾರತಕ್ಕೂ ಈ ಮಹಾಮಾರಿ ಬಂದಾಗಿದೆ.

ನಮ್ಮವರ ಪ್ರಾಣಗಳು ಹೋಗುತ್ತಿವೆ. ಸಾತ್ವಿಕ ನೆಲಗಟ್ಟಿನ ಭಾರತದ ಮಣ್ಣಿನಲ್ಲೇ ಇಂಥಾ ರೋಗಾಣುಗಳನ್ನ ನಾಶಮಾಡುವ ಶಕ್ತಿ ಅಡಗಿದೆ ಅನ್ನುವ ಸಮಯ ಈಗ ನಮ್ಮೆದುರಿಗಿದೆ.ಸಾವಿರಾರು ವರ್ಷಗಳ ಹಿಂದೆಯೇ, ನಮ್ಮ ಋಷಿಮುನಿಗಳು ಸರ್ವರೋಗಕ್ಕೂ ಗಿಡಮೂಲಿಕೆಗಳಲ್ಲಿ ಮದ್ದಿದೆ ಅನ್ನುವುದನ್ನ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅದೇ ಗಿಡಮೂಲಿಕೆಗಳನ್ನೇ ಈಗ ಪರರಾಷ್ಟ್ರದವರು ನಮ್ಮಿಂದ ಆಮದು ಮಾಡಿಕೊಂಡು, ವಾಪಾಸ್ ನಮಗೆ, ಮಾತ್ರೆಗಳ ಮೂಲಕ ನಮ್ಮ ಮದ್ದನ್ನ ನಮಗೆ ಕುಡಿಸುತ್ತಿದ್ದಾರೆ.

ಇಂಥಾ ಸಂರ್ದಭದಲ್ಲಿ, ಈಗ ಕೊರೋನಾ ಬಂದಿದೆ. ಅದಕ್ಕೆ ಪರಿಹಾರ ಕೂಡಾ, ಇಡಿ ಜಗತ್ತಿಗೆ ಸಾರುವ ಅವಕಾಶ ನಮ್ಮ ಮುಂದಿದೆ. ಅದೇ.. ಅಗ್ನಿ ಹೋತ್ರಾ..!!! ಬೆಳಿಗ್ಗೆ :- ಓಂ ಸೂರ್ಯಾಯಾ ಸ್ವಾಹಾ, ಓಂ ಸೂರ್ಯಾಯಾ ಇದಂ ನಮಹಃ ಓಂ ಪ್ರಜಾಪತಯೇ ಸ್ವಾಹಾ, ಓಂ ಇದಂ ನಮಃ..! ಸಂಜೆ :- ಓಂ ಅಗ್ನಿಯೇ ಸ್ವಾಹಾ, ಓಂ ಅಗ್ನಿಯೇ ಇದಂ ನಮಃ ಓಂ ಪ್ರಜಾಪತಯೇ ಸ್ವಾಹಾ, ಓಂ ಪ್ರಜಾಪತಯೇ ಇದಂ ನಮಃ…!

ಈ ಅಗ್ನಿಹೋತ್ರ ಯಾಗವನ್ನ ತಮ್ಮ ಮನೆಗಳ ಆವರಣದಲ್ಲಿಯೇ ಆಚರಿಸಿದರೆ, ಪರಿಶುದ್ದ ಗಾಳಿ ನಿರ್ಮಾಣವಾಗಲಿದೆ. ಹಸುವಿನ ಭರಣಿ ಮತ್ತು ಹಸಿವಿನ ತುಪ್ಪವನ್ನ ಸುರಿದು ಅಗ್ನಿಹೋತ್ರ ಅನುಸರಿಸಿದರೆ, ಅದರಿಂದ ಬಿಡುಗಡೆಯಗುವ ಆಕ್ಸಿಜನ್ ಅಶುದ್ದ ಗಾಳಿಯನ್ನ ನಿರ್ಮೂಲನೆ ಮಾಡುವ ಶಕ್ತಿ ಹೊಂದಿದೆ. ಈ ಸಂದಿಗ್ಧ ಸಮಯದಲ್ಲಿ ನಮ್ಮನ್ನ ಹಾಗೂ ಭಾರತವನ್ನ ಕಾಪಾಡುವ ಅಗತ್ಯ ನಮ್ಮೆಲ್ಲರ ಮೇಲಿದೆ. ಹಿಗಾಗಿ, ಗಾಂಧಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಶ್ರೀ ಅವಧೂತ ವಿನಯ್ ಗುರೂಜಿಯವರು ಈ ಅಗ್ನಿ ಹೊತ್ರ ಯಾಗವನ್ನ 48 ದಿನಗಳ ಕಾಲ ಆಚರಿಸುವಂತೆ ಮನವಿ ಮಾಡಿದ್ದಾರೆ.

ಜೊತೆಗೆ, ಸ್ವತಃ ವಿನಯ್ ಗೂರೂಜಿಯವರೇ, ಚಿಕ್ಕಮಗಳೂರಿನ ಗೌರಿ ಗದ್ದೆಯ ಆಶ್ರಯದಲ್ಲಿ ಇಂದಿನಿಂದಲೇ ಈ ಯಾಗ ಆರಂಭಿಸಿದ್ದಾರೆ.ಪುರಾತನ ಗ್ರಂಥಗಳಲ್ಲೂ ಇದರ ಉಲ್ಲೇಖವಿದೆ. ನಾಸ್ತಿಕವಾದದ ವಾದಕರೂ ಕೂಡಾ ಇದನ್ನ ಪರೀಕ್ಷಿಸಬಹುದಾಗಿದೆ. ನಮ್ಮೆಲ್ಲರ ಬದುಕು ಹಾಗೂ ಜೀವದ ಉಳಿವಿಗಾಗಿ ಇದೊಂದು ಪ್ರಾರ್ಥನೆ..!

LEAVE A REPLY

Please enter your comment!
Please enter your name here