Home Crime ಕೊಲೆ ಮಾಡಿ ಶವದ ಜೊತೆ “ಸೆಕ್ಸ್” ಮಾಡಿದ್ದ ವಿಕೃತ ಕಾಮಿ..! ಯುವತಿ ಸತ್ತಿದ್ದಾಳೆ ಅಂತಾ ಗೊತ್ತಾದ್ಮೇಲೆ...

ಕೊಲೆ ಮಾಡಿ ಶವದ ಜೊತೆ “ಸೆಕ್ಸ್” ಮಾಡಿದ್ದ ವಿಕೃತ ಕಾಮಿ..! ಯುವತಿ ಸತ್ತಿದ್ದಾಳೆ ಅಂತಾ ಗೊತ್ತಾದ್ಮೇಲೆ ಇಳಿದಿತ್ತು ನೆತ್ತಿಗೇರಿದ್ದ ಕಾಮ..! ಮುಂದೇನಾಯ್ತು ಸ್ಟೋರಿ ಓದಿ…

2949
0
SHARE

ಅವತ್ತು ಬೆಳ್ಳಂಬೆಳಗ್ಗೆ ದಾವಣೆಗೆರೆಯ ಡಿಸಿ ಆಫೀಸ್ ನ ಹಿಂಭಾಗದಿಂದ ಹೋದ್ರೆ ಎರಡು ಕಿಲೋ ಮೀಟರ್ ದೂರದಲ್ಲಿರೋ ಕೆರೂರು ಅನ್ನೋ ಗ್ರಾಮದಲ್ಲಿ ಜನ ಎಲ್ಲಾ ಕೆಟ್ಟ ಕನಸು ಬಿದ್ದವರಂತೆ ಎದ್ದು ಕೂತಿದ್ರು.ಅಲ್ಲಿ ಹೋಗಿ ನೋಡಿದ್ರೆ ಯುವತಿಯೊಬ್ಬಳ ಕೊಲೆಯಾಗಿ ಹೋಗಿದೆ.ಯಾರು ಏನು ಅನ್ನೋದು ಅಲ್ಲಿದ್ದವರಿಗಾಗಲಿ ಅಥವಾ ಪೊಲೀಸರಿಗಾಗ್ಲಿ ಗೊತ್ತೇ ಇರಲಿಲ್ಲ. ಆ ಬಾಡಿಯನ್ನ ನೋಡ್ತಿದ್ದ ಹಾಗೆ ಪೊಲೀಸ್ರಿಗೆ ನಾನಾ ಯೋಚನೆಗಳು ತಲೆ ಬರೋದಕ್ಕೆ ಶುರುವಾಗಿತ್ತು.ಎಲ್ಲಾ ಮುಗಿತಾ ಇದ್ದ ಹಾಗೆ ಪೊಲೀಸ್ರು ಆ ಬಾಡಿಯನ್ನ ಅಲ್ಲಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ಪೋಸ್ಟ್ ಮಾರ್ಟಂಗಾಗಿ ಕಳುಹಿಸಿದ್ರು.ಆ ಕೊಲೆಯಾದ ಸ್ಥಳದಲ್ಲಿ ಕೊಲೆ ಮಾಡಿದಾತ ಒಂದೇ ಒಂದು ಸಣ್ಣ ಕ್ಲೂ ಅನ್ನ ಬಿಟ್ಟು ಹೋಗಿರಲಿಲ್ಲ. ಅಲ್ಲಿ ಯುವತಿಯೊಬ್ಬಳು ಕೊಲೆಯಾಗಿದ್ದಾಳೆ ಅನ್ನೋದು ಮಾತ್ರವೇ ಗೊತ್ತಾಗಿತ್ತು. ಈ ವೇಳೆ ಪೊಲೀಸ್ರಿಗೆ ಇನ್ನೊಂದು ವಿಷಯವು ಗೊತ್ತಾಗಿತ್ತು ಅದೇನಪ್ಪಾ ಅಂದ್ರೆ ಕೊಲೆಯಾದ ಯುವತಿಯ ಮೇಲೆ ಅತ್ಯಾಚಾರ ನಡೆದಿರೋದು ಅವರ ಗಮನಕ್ಕೆ ಬಂದಿತ್ತು.

ಈ ವಿಷಯ ಗೊತ್ತಾಗ್ತಿದ್ದ ಹಾಗೆ ಈ ಘಟನೆಯಿಂದ ಮುಂದಾಗಬಹುದಾದ ಘಟನೆಗಳ ಬಗ್ಗೆ ಪೊಲೀಸ್ರಿಗೆ ಅದಾಗ್ಲೇ ಒಂದು ಸಣ್ಣ ಮಾಹಿತಿಯೂ ಸಿಕ್ಕಿತ್ತು. ಯಾಕಂದ್ರೆ ಯುವತಿಯ ಮೇಲೆ ಅತ್ಯಾಚಾರ ನಡೆದು ನಂತ್ರ ಕೊಲೆಯಾಗಿದೆ ಅಂದ್ರೆ ಇದು ಸಾಮಾನ್ಯ ಸಂಗತಿಯಲ್ಲ.ಈ ರೇಪ್ ಅಂಡ್ ಮರ್ಡರ್ ಬೇರೆಯದ್ದೇ ದಾರಿ ಹಿಡಿಯುತ್ತೆ ಅನ್ನೋದು ಅವರಿಗೆ ಗೊತ್ತಾಗಿತ್ತು. ಹೀಗಾಗಿ ದಾವಣಗೆರೆ ಎಸ್ಪಿ ಚೇತನ್ ಅವ್ರು ರೇಪ್ ಮರ್ಡರ್ ಆರೋಪಿಯನ್ನ ಬಂಧಿಸೋದಕ್ಕೆ ಅಂತ ಸ್ಪೆಷಲ್ ಟೀಂಗಳನ್ನ ರೆಡಿ ಮಾಡಿದ್ರು. ಈಗ ಖಾಕಿಗಳಿಗೆ ನಿಜವಾದ ಸವಾಲು ಎದುರಾಗಿತ್ತು. ಆಕೆಯನ್ನ ಕೊಲೆ ಮಾಡಿದವರ ಬಗ್ಗೆ ಪೊಲೀಸ್ರಿಗೆ ಸಣ್ಣದೊಂದು ಸಾಕ್ಷಿ ಇಲ್ಲದೇ ಇದ್ದದ್ದು ಅವರಿಗೆ ತನಿಖೆ ನಡೆಸೋದಕ್ಕೆ ಅಡ್ಡಿವುಂಟು ಮಾಡಿತ್ತು.ಆದ್ರೂ ಪೊಲೀಸ್ರು ಸ್ಥಳದಲ್ಲಿ ಸಿಗದೇ ಇರೋ ಸಾಕ್ಷಿಯನ್ನ ಬಿಟ್ಟು ಸೈಂಟಿಫಿಕಲ್ ಎವಿಡೆನ್ಸ್ ಗಾಗಿ ಹುಡುಕಾಟ ನಡೆಸಿದ್ರು. ಅಲ್ಲದೆ ಆ ಏರಿಯಾದ ಮೊಬೈಲ್ ನೆಟ್ ವರ್ಕ್ ಗಳ ಬಗ್ಗೆಯು ತಡಕಾಡೋದಕ್ಕೆ ಶುರುಮಾಡಿದ್ರು.

ಹೇಗಾದ್ರೂ ಮಾಡಿ ಆದಷ್ಟು ಬೇಗ ಆರೋಪಿ ಕೈಗೆ ಕೋಳ ಹಾಕಬೇಕು ಅಂತ ಪೊಲೀಸ್ರು ರೆಡಿಯಾಗಿದ್ರು.ರಂಜಿತಾ ರೇಪ್ ಅಂಡ್ ಮರ್ಡರ್ ಆಗಿ ಕೆಲವು ದಿನಗಳೇ ಕಳೆದು ಹೋಗಿತ್ತು. ಆದ್ರೆ ಪೊಲೀಸ್ರಿಗೆ ಮಾತ್ರ ಈ ಕೇಸ್ ನಲ್ಲಿ ಯಾವ ಕ್ಲೂ ಸಿಕ್ಕಿರಲಿಲ್ಲ. ದಿನ ಕಳೆದು ಹೋಯ್ತು ಬಿಟ್ರೆ ಆರೋಪಿ ಮಾತ್ರ ಸಿಗಲೇ ಇಲ್ಲ. ಈ ಹೊತ್ತಲ್ಲಿ ರಂಜಿತಾ ಅಪ್ಪ ದ್ಯಾವಣ್ಣ ಪ್ರತಿನಿತ್ಯ ಪೊಲೀಸ್ ಸ್ಟೇಷನ್ ಗೆ ಹೋಗಿ ಸರ್ ಏನಾಯ್ತು ಏನಾಯ್ತು ಆರೋಪಿ ಸಿಕ್ಕಿದ್ನ ಅಂತ ಕೇಳೋದಕ್ಕೆ ಶುರುಮಾಡಿದ್ರು. ಪಾಪಾ ಕೂಲಿ ಮಾಡಿ ಬದುಕೋ ಆ ಕುಟುಂಬ ದುಡಿಯುವ ಕೈಯನ್ನ ಕಳೆದುಕೊಂಡಿತ್ತು. ಅಷ್ಟೇ ಅಲ್ಲ ಕರುಳ ಕುಡಿಯನ್ನ ಕಳೆದುಕೊಂಡಿದ್ದು ಅವರಿಗೆ ಸಹಿಸೋದಕ್ಕೆ ಆಗಿರಲಿಲ್ಲ.

ಆದ್ರೆ ಈ ಬಾರಿ ಮಾತ್ರ ದ್ಯಾವಣ್ಣ ಅನ್ನೋ ಬಡ ಕೂಲಿಕಾರ್ಮಿಕನ ಎದೆಯಲ್ಲಿ ಕೋಪ ರೋಶಾಗ್ನಿಯಾಗಿತ್ತು. ನೇರವಾಗಿ ಸ್ಟೇಷನ್ ಗೆ ಹೋದವರೆ ಆರೋಪಿ ಸಿಕ್ಕಿದ್ದಾನ ಅಂತ ಪ್ರಶ್ನೆ ಮಾಡಿದ್ರು. ಆಗ ಪೊಲೀಸ್ರು ಇನ್ನು ಇಲ್ಲಾರಿ ಅಂತ ಅಂದಾಗ. ನಿಮ್ಮ ಕೈಲಾದ್ರೆ ನೀವು ಹುಡುಕಿ. ಇಲ್ಲ ಅಂದ್ರೆ ಒಂದು ದಿನ ಅವನ ರುಂಡ ಚೆಂಡಾಡಿ ನಾನು ನಿಮ್ಮ ಹತ್ತಿರ ಬರ್ತೀನಿ ಅಂತ ದ್ಯಾವಣ್ಣ ಪೊಲೀಸ್ರ ಮುಂದೆ ಶಪಥ ಮಾಡಿ ಬಂದಿದ್ರು.ಇತ್ತ ದಾವಣೆಗೆರೆಯಲ್ಲಿ ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿನಿಯರು ರಂಜಿತಾ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಅಂತ ರಸ್ತೆಗಿಳಿದು ಪ್ರತಿಭಟನೆ ಮಾಡೋದಕ್ಕೆ ಶುರುಮಾಡಿದ್ರು. ಅಲ್ಲಿಗೆ ಪೊಲೀಸ್ರಿಗೆ ತಲೆ ಕೆಟ್ಟು ಹೋಗಿತ್ತು. ಯಾಕಂದ್ರೆ ಅಷ್ಟೊತ್ತಿಗಾಗ್ಲೇ ಕೊಲೆ ನಡೆದು ಎರಡು ತಿಂಗಳಾಗುತ್ತ ಬಂದಿತ್ತು. ಇನ್ನು ಆರೋಪಿ ಸಿಕ್ಕಿಲ್ಲ ಅಂದ್ರೆ ಅವನೆಷ್ಟು ಕ್ಲವರ್ ಅನ್ನೋದು ಅವರಿಗೆ ಗೊತ್ತಾಗಿತ್ತು. ಆದ್ರೆ ಇವತ್ತಲ್ಲಾ ನಾಳೆ ಅವನನ್ನ ನಾವು ಹಿಡಿದೇ ಹಿಡಿಯುತ್ತೇವೆ ಅನ್ನೋ ಕಾನ್ಫಿಡೆನ್ಸ್ ಮಾತ್ರ ಪೊಲೀಸ್ರಿಗಿತ್ತು.

ಅದ್ಯಾವಾಗ ಪೊಲೀಸ್ರ ಮೇಲೆ ದಿನದಿಂದ ದಿನಕ್ಕೆ ಒತ್ತಡ ಜಾಸ್ತಿಯಾಯ್ತೋ ಆಗ ಪೊಲೀಸ್ರು ತನಿಖೆಯನ್ನ ಇನ್ನಷ್ಟು ಚುರುಕುಗೊಳಿಸಿದ್ರು. ಆಗಲೇ ನೋಡಿ ಆರೋಪಿ ಪೊಲೀಸ್ರ ಬಲೆಗೆ ಬಿದ್ದಿದ್ದ. ಅವನು ಮತ್ಯಾರು ಆಗಿರಲಿಲ್ಲ. ಅದೇ ಗ್ರಾಮದ ರಂಗಸ್ವಾಮಿ ಅಲಿಯಾಸ್ ಕುಂಟ ರಂಗನಾಗಿದ್ದ. ಭತ್ತ ಕೊಯ್ಯುವ ಮೆಷಿನ್ ಇಟ್ಟುಕೊಂಡಿದ್ದ ರಂಗಸ್ವಾಮಿಯೇ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆಯನ್ನ ಮಾಡಿದ್ದ. ಪೊಲೀಸ್ರಿಗೆ ಮೊದಲಿನಿಂದಲೂ ಆತನ ಮೇಲೆ ಒಂದು ಸಣ್ಣ ಅನುಮಾನವಿತ್ತು. ಅಲ್ಲದೆ ಪೊಲೀಸ್ರಿಗೆ ಸಿಕ್ಕ ಸೈಂಟಿಫಿಕಲ್ ಎವಿಡೆನ್ಸ್ ಕೂಡಾ ಇವನೇ ಅಪರಾಧಿ ಅನ್ನೋದನ್ನ ಸಾರಿ ಹೇಳ್ತಿತ್ತು. ಹೀಗಾಗಿ ಪೊಲೀಸ್ರು ಆತನನ್ನ ಬಂಧಿಸಿ ಬೆಂಡೆತ್ತಿ ಬ್ರೇಕ್ ಹಾಕಿದ್ರು. ಆಗ ಆತ ನಾನೇ ಸರ್ ಆ ಕೊಲೆಯನ್ನ ಮಾಡಿದ್ದು ಅಂತ ಒಪ್ಪಿಕೊಂಡಿದ್ದ. ಅಲ್ಲದೆ ಅವತ್ತು ನಡೆದ ಘಟನೆಯನ್ನ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದ.

ಅವತ್ತು ಅಕ್ಟೋಬರ್ 9ನೇ ತಾರೀಖು ರಂಜಿತಾ ಕೆಲಸ ಮುಗಿಸಿ ಆಟೋಗಾಗಿ ಸ್ಟ್ಯಾಂಡ್ ಗೆ ಬಂದಿದ್ಲು. ಅದೇ ಹೊತ್ತಿಗೆ ಆಕೆಯನ್ನ ಫಾಲೋ ಮಾಡ್ಕೊಂಡು ರಂಗ ಕೂಡಾ ಬಂದಿದ್ದ. ಆಟೋಗಾಗಿ ಕಾಯ್ತಿದ್ದವಳಿಗೆ ನಾನು ಕೂಡಾ ಊರಿಗೆ ಹೋಗ್ತಿದ್ದೀನಿ ಬಾ ಅಂತ ಕರೆದಿದ್ದಾನೆ. ಮೊದಲೇ ಪರಿಚಯವಿದ್ದ ಕಾರಣ ಆಕೆ ಆತನೊಂದಿಗೆ ಬೈಕ್ ಹತ್ತಿ ಕೂತಿದ್ದಾಳೆ. ಆದ್ರೆ ಊರಿಗೆ ಕರ್ಕೊಂಡು ಹೋಗ್ತಿನಿ ಅಂತ ಬೈಕ್ ಹತ್ತಿಸಿ ಕೂರಿಸಿ ಕೊಂಡವಳು ಆಕೆಯನ್ನ ಡಿಸಿ ಆಫೀಸ್ ಹಿಂಭಾಗದಲ್ಲಿರೋ ಕೆರೂರಿನ ನಿರ್ಜನ ಪ್ರದೇಶಕ್ಕೆ ಕರ್ಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಆದ್ರೆ ಆಕೆ ಒಪ್ಪದೆ ಅದನ್ನ ಪ್ರತಿಭಟಿಸಿದ್ದಾಳೆ.ಆದ್ರೆ ಅವತ್ತು ಕಾಮವನ್ನ ಮೈಗೇರಿಸಿಕೊಂಡಿದ್ದ ಆತ ಆಕೆಯನ್ನ ಸುಮ್ಮನೆ ಹೋಗೋದಕ್ಕ ಬಿಡಲಿಲ್ಲ. ಆಕೆ ಬೇಡ ಅಂತ ನಿರಾಕರಿಸಿದ್ರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆಯ ಪ್ರತಿರೋಧ ಜಾಸ್ತಿಯಾಗ್ತಿದ್ದ ಹಾಗೆ ಆಕೆ ಕೆನ್ನೆಗೆ ಬಾರಿಸಿದ್ದಾನೆ.

ಅಲ್ಲದೆ ಅಲ್ಲೇ ಬಿದ್ದಿದ್ದ ಕಟ್ಟಿಯ ತುಂಡಿನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಆಗ ಆಕೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆದ್ರೆ ಆತನಿಗೆ ಆಕೆ ಸತ್ತಿದ್ದಾಳೆ ಅನ್ನೋದು ಗೊತ್ತಿರಲಿಲ್ಲ. ಆಕೆ ಪ್ರಜ್ಞೆ ತಪ್ಪಿದ್ದಾಳೆ ಅಂತ ಅಂದುಕೊಂಡಿದ್ದ. ಅದ್ಯಾವಾಗ ಆಕೆಯ ಪ್ರತಿರೋಧ ತೋರದೇ ಹೋದ್ಲೋ ಆಗ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಗಂಟೆಗಟ್ಟಲೆ ಆಕೆಯ ಶವವನ್ನ ಸಂಭೋಗಿಸಿ ಮೇಲೆದ್ದಿದ್ದಾನೆ. ಆಗಲೂ ಆಕೆ ಏಳದೇ ಹೋದಾಗ ಆಕೆಯನ್ನ ಪರೀಕ್ಷಿಸಿ ನೋಡಿದ್ದಾನೆ. ಆಗ ಆಕೆ ಮೃತಪಟ್ಟಿರೋದು ಗೊತ್ತಾಗಿತ್ತು.ಅದ್ಯಾವಾಗ ಆಕೆ ಸತ್ತು ಹೋಗಿದ್ದಾಳೆ ಅನ್ನೋದು ಗೊತ್ತಾಯ್ತೋ ಆಗ ಮೈ ತುಂಬಾ ಕಾವೇರಿದ್ದ ಕಾಮ ಸರ್ರನೇ ಇಳಿದು ಹೋಗಿತ್ತು. ಅವನಿಗೆ ಆಗ ತಾನೇನು ಮಾಡಿದ್ದೀನಿ ಅನ್ನೋದು ಅರಿವಾಗಿತ್ತು. ಇನ್ನು ಜಾಸ್ತಿ ಹೊತ್ತು ಇಲ್ಲೇ ಇದ್ರೆ ಕಷ್ಟ ಅಂತ ಆಕೆಯ ಶವವನ್ನ ಅಲ್ಲಿಯೇ ಬಿಟ್ಟು ಬೈಕ್ ಹತ್ತಿ ಊರಿಗೆ ಹೋಗಿದ್ದ. ಅಲ್ಲಿಗೆ ತನಗೇನು ಗೊತ್ತೇ ಇಲ್ಲ ತಾನೇನು ಮಾಡೇ ಇಲ್ಲ ಅನ್ನೋ ಹಾಗೆ ಆತ ಊರು ಸೇರಿಕೊಂಡಿದ್ದ. ಮಾರನೇ ದಿನ ಇಡೀ ಊರಿಗೆ ಊರೇ ಆ ಶವವನ್ನ ನೋಡೋದಕ್ಕೆ ಹೋದಾಗ ಅದರೊಂದಿಗೆ ಅವನು ಹೋಗಿದ್ದ. ಯಾಕಂದ್ರೆ ಅಲ್ಲೇನಾದ್ರು ತನ್ನ ಮೇಲೆ ಯಾರಿಗಾದ್ರು ಅನುಮಾನ ಬರುತ್ತ ಅಂತ ತಿಳಿದುಕೊಳ್ಳೋದಕ್ಕೆ.

ಅಷ್ಟೇ ಅಲ್ಲದೆ ಆಕೆಯನ್ನ ರೇಪ್ ಅಂಡ್ ಮರ್ಡರ್ ಮಾಡಿದ್ದ ಆತ ಊರನ್ನ ಬಿಟ್ಟು ಹೋಗಿರಲಿಲ್ಲ. ಯಾಕಂದ್ರೆ ಇದ್ದಕ್ಕಿದ್ದಂತೆ ಊರು ಬಿಟ್ಟು ಹೋದ್ರೆ ಯಾರಿಗಾದ್ರು ಡೌಟ್ ಬರುತ್ತೆ ಅನ್ನೋ ಕಾರಣಕ್ಕೆ ಆತ ಎಲ್ಲೂ ಹೋಗದೆ ಮನೆಯಲ್ಲೇ ಇದ್ದ. ಅಲ್ಲದೆ ಊರಲ್ಲೇ ಇದ್ರೆ ಪೊಲೀಸ್ರಿಗೂ ತನ್ನ ಮೇಲೆ ಅನುಮಾನ ಬರೋದಿಲ್ಲ ಅಂತ ಅಂದುಕೊಂಡಿದ್ದ. ಅದ್ಯಾವಾಗ ದಿನಗಳು ಉರುಳುತ್ತಾ ಹೋಯ್ತೋ ಅವನಿಗೂ ಸಮಾಧಾನವಾಗಿತ್ತು. ಇನ್ನು ಪೊಲೀಸ್ರಿಗೆ ನನ್ನ ಬಗ್ಗೆ ಅನುಮಾನ ಬರೋದಿಲ್ಲ. ಅಲ್ಲದೆ ನನ್ನನ್ನ ಬಂಧಿಸೋದಕ್ಕ ಪೊಲೀಸ್ರಿಗೆ ಯಾವುದೇ ಸಾಕ್ಷಿ ಇಲ್ಲ ಅಂತ ಗೊತ್ತಾದ ಮೇಲೆ ಅವನು ಮೊದಲಿಗಿಂತಲೂ ಧೈರ್ಯವಾಗಿ ಓಡಾಡೋದಕ್ಕೆ ಶುರುಮಾಡಿದ್ದ.ಆದ್ರೆ ಪೊಲೀಸ್ರು ಅವತ್ತು ಯಾವುದೇ ಸಾಕ್ಷಿಗಳು ಸಿಗದೇ ಇದ್ದ ಕಾರಣ ಮೊಬೈಲ್ ನೆಟ್ ವರ್ಕ್ ನ ಮೊರೆ ಹೋಗಿದ್ರು. ಅಲ್ಲದೆ ಆಕೆಯ ಪೋಸ್ಟ್ ಮಾರ್ಟಂ ರಿಪೋರ್ಟ್ ಕೂಡಾ ಆರೋಪಿಯನ್ನ ಹಿಡಿಯೋದಕ್ಕೆ ಸಹಾಯ ಮಾಡಿತ್ತು. ಅವತ್ತು ಪೊಲೀಸ್ರು ಕುಂಟ ರಂಗ ಹೇಳಿದ್ದ ಕಥೆಯನ್ನ ಕೇಳಿ ಬೆಚ್ಚಿ ಬಿದ್ದಿದ್ರು. ಅಲ್ಲದೆ ಆತ ಶವದ ಜೊತೆ ಸಂಭೋಗ ಮಾಡಿದ್ದನ್ನ ಕೇಳಿ ಏನು ಮಾಡಬೇಕು ಅಂತ ತಿಳಿಯದೆ ಸುಮ್ಮನೆ ಒಂದು ಕ್ಷಣ ಕುಳಿತು ಬಿಟ್ಟಿದ್ರು. ಇಷ್ಟೆಲ್ಲಾ ಕಥೆಯನ್ನ ಏತ ಯಾವುದೇ ಪಶ್ಚಾತ್ತಾಪವಿಲ್ಲದೆ ತಣ್ಣಗೆ ಪೊಲೀಸ್ರ ಮುಂದೆ ಹೇಳುತ್ತಾ ಹೋಗಿದ್ದ.

ಇದೀಗ ಪೊಲೀಸ್ರು ರಂಗಸ್ವಾಮಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅವನಿಗೆ ಆ ಹೊತ್ತಿನ ಕಾಮವನ್ನ ತೀರಿಸೋದಕ್ಕೆ ಒಂದು ಹೆಣ್ಣು ಬೇಕಾಗಿತ್ತು ಅಷ್ಟೇ. ಆದ್ರೆ ಆ ಮನೆಯ ನೋವು ನಲಿವು, ಕಷ್ಟ ಸುಖ ಯಾವುದು ಅವನ ಕಣ್ಣೆದುರಿಗೆ ಬಂದಿರಲಿಲ್ಲ. ಹೀಗಾಗಿ ಆ ಕಾಮಪಿಶಾಚಿ ಆಕೆಯ ಕಾಲಿಗೆ ಬಿದ್ದು ಬೇಡಿಕೊಂಡ್ರು ಆಕೆಯನ್ನ ಬಿಟ್ಟಿರಲಿಲ್ಲ.ಬೆಳಗ್ಗೆ ಎದ್ದು ಹೆಣ್ಣು ದೇವರಿಗೆಲ್ಲಾ ಕೈ ಮುಗಿದು ನಂತ್ರ ಅದೇ ಹೆಣ್ಣನ್ನ ಇಷ್ಟೊಂದು ಕ್ರೂರವಾಗಿ ಕಾಮಕ್ಕಾಗಿ ಹಿಂಸಿಸ್ತಾರೆ ಅಂದ್ರೆ ಅದಕ್ಕೆ ಏನೆನ್ನಬೇಕೋ ಗೊತ್ತಿಲ್ಲ. ಇಲ್ಲಿ ಯಾರು ಯಾರನ್ನ ತಿದ್ದಬೇಕಾಗಿದೆ ಅನ್ನೋದಕ್ಕಿಂತ ಅವರವರಿಗೆ ಹೆಣ್ಣಿನ ಬಗ್ಗೆ ಒಂದು ಗೌರವ ತಮ್ಮ ಹೃದಯದಲ್ಲೇ ಹುಟ್ಟಬೇಕು ಆಗಲೇ ಇಂತಹ ಅಮಾನುಷ ಕೃತ್ಯಗಳು ನಡೆಯೋದು ಕಡಿಮೆಯಾಗಬಹುದು ಅಂತ ಅನಿಸುತ್ತೆ.

LEAVE A REPLY

Please enter your comment!
Please enter your name here