Home Cinema ಕ್ಯಾನ್ಸರ್ ವಿರುದ್ಧ ಹೋರಾಡಿ ಸ್ವದೇಶಕ್ಕೆ ಬಂದ ಸೋನಾಲಿ ಬೇಂದ್ರೆ..! ಸೋನಾಲಿಯ ಆ ಐದು ತಿಂಗಳು ಹೇಗಿದ್ದವು...

ಕ್ಯಾನ್ಸರ್ ವಿರುದ್ಧ ಹೋರಾಡಿ ಸ್ವದೇಶಕ್ಕೆ ಬಂದ ಸೋನಾಲಿ ಬೇಂದ್ರೆ..! ಸೋನಾಲಿಯ ಆ ಐದು ತಿಂಗಳು ಹೇಗಿದ್ದವು ಗೊತ್ತಾ ?

3230
0
SHARE

ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಬಗ್ಗೆ ಆಘಾತಕಾರಿ ಸುದ್ದಿ ಬಂದಿದೆ. ನಟಿಗೆ ಕ್ಯಾನ್ಸರ್‌ ನಾಲ್ಕನೇ ಹಂತ ತಲುಪಿರುವುದು ಪತ್ತೆಯಾಗಿದ್ದು, ದೇಶದಾದ್ಯಂತ ಅಭಿಮಾನಿಗಳಿಗೆ ಶಾಕ್‌ ನೀಡಿತ್ತು . ಸೋನಾಲಿ ಬೇಂದ್ರೆ ಬಾಲಿವುಡ್‌ನ ಜನಪ್ರಿಯ ನಟಿ. ಇದೀಗ ಅವರಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಕೂಡಲೇ ನ್ಯೂಯಾರ್ಕ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರು ಸೋನಾಲಿ ಸ್ವತಃ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.

‘ನನಗೆ ಕ್ಯಾನ್ಸರ್‌ ಇರುವುದು ಪರೀಕ್ಷೆಯಿಂದ ಗೊತ್ತಾಗಿದೆ. ಹೈ ಗ್ರೇಡ್‌ ಕ್ಯಾನ್ಸರ್‌ ಎಂದು ಪತ್ತೆಯಾಗಿದೆ. ಇದು ಬಂದಿದ್ದೇ ನನ್ನ ಅರಿವಿಗೆ ಬರಲಿಲ್ಲ. ಅನಿರೀಕ್ಷಿತವಾಗಿ ಪರೀಕ್ಷೆಯಲ್ಲಿ ಪತ್ತೆಯಾಯಿತು. ಕ್ಯಾನ್ಸರ್‌ ಅಪಾಯಕಾರಿ ಹಂತದಲ್ಲಿರುವುದರಿಂದ ವೈದ್ಯರು ಕೂಡಲೇ ಚಿಕಿತ್ಸೆಗೊಳಪಡುವಂತೆ ಸೂಚಿಸಿದ್ದಾರೆ. ನಾನೀಗ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಎಂದು ಅವತ್ತು ಸೋನಾಲಿ ಹೇಳಿಕೊಂಡಾಗ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಎದುರಾಗಿತ್ತು. ಈ ಸಂದರ್ಭದಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಕೃತಜ್ಞಳು. ನಾವೆಲ್ಲರೂ ಆಶಾವಾದದಿಂದ ಇದ್ದೇವೆ.

ಹೆಜ್ಜೆ ಹೆಜ್ಜೆಗೂ ಇದರ ವಿರುದ್ಧ ಫೈಟ್‌ ಮಾಡಲು ನಾನು ಸಿದ್ಧಳಾಗಿದ್ದೇನೆ’ ಎಂದು ಪೋಸ್ಟ್‌ ಹಾಕಿದ್ದರು. ಸೋನಾಲಿ ಬೇಂದ್ರೆಗೆ ಮದುವೆಯಾಗಿ ಒಬ್ಬ ಮಗ ಇದ್ದಾರೆ. ಈ ಸುದ್ದಿಯಿಂದ ಬಾಲಿವುಡ್‌ ದಿಗ್ಭ್ರಾಂತಿಗೊಳಗಾಗಿತ್ತು.ತಮಗೆ ಕ್ಯಾನ್ಸರ್ ಇದ್ದು ಚಿಕಿತ್ಸೆ ಪಡೆಯುವ ಮಧ್ಯದಲ್ಲಿ  ಕ್ಯಾನ್ಸರ್ ರೋಗಿಗಳಿಗೆ ಆತ್ಮವಿಶ್ವಾಸ  ತುಂಬುವ  ಪ್ರಯತ್ನಕ್ಕೆ ಸೋನಾಲಿ ಕೈ ಹಾಕಿದ್ದರು ಮೆಟಸ್ಟ್ಯಾಟಿಸ್ ಕ್ಯಾನ್ಸರ್‌ಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುವಾಗ  ಸೋನಾಲಿ ಬೇಂದ್ರೆ ನ್ಯೂ ಲುಕ್‌ನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿ, ಆತ್ಮವಿಶ್ವಾಸದ ನುಡಿಗಳಿಂದ ಕ್ಯಾನ್ಸರ್‌ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದಾರೆ.ಅವರ ಮೆಚ್ಚಿನ ಲೇಖಕಿ ಇಸೆಬೆಲ್‌ ಅಲೆಂಡೆಯವರ ಅವರ ಒಂದೆರಡು ಲೈನ್ಸ್ ಬರೆದುಕೊಂಡಿದ್ದರು ಸೋನಾಲಿ ‘(ನಮ್ಮೊಳಗಿನ ಶಕ್ತಿ ಹೊರಬರುವವರಿಗೂ ನಾವು ಎಷ್ಟು ಶಕ್ತಿವಂತರು ಎಂಬುವುದು ಗೊತ್ತಿರುವುದಿಲ್ಲ, ದುರಂತ, ಯುದ್ಧ, ಅವಶ್ಯಕತೆ ಇಂಥ ಸಂದರ್ಭದಲ್ಲಿ ಜನರು ಅದ್ಭುತ ಕಾರ್ಯಗಳನ್ನು ಮಾಡುತ್ತಾರೆ)’ ನುಡಿಗಳನ್ನು ಕೋಟ್‌ ಮಾಡುತ್ತಾ ತನಗೆ ಸಾಂತ್ವನ ಹೇಳಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಪ್ರೀತಿ, ಸಾಂತ್ವನಗಳ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೆ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಹಾಗೂ ಅವರ ಆಪ್ತರು ಅವರ ಸ್ಟೋರಿ ಹೇಳುವ ಮೂಲಕ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ, ಅವರಿಗೆ ತುಂಬಾ ಧನ್ಯವಾದಗಳು. ಆಗಾಗ ಇನ್‍ಸ್ಟಾಗ್ರಾಮ್ ಮೂಲಕ ತನ್ನ ಆರೋಗ್ಯ ಪರಿಸ್ಥಿತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು  ಕಿಮೋಥೆರಪಿ ಚಿಕಿತ್ಸೆ ಪಡೆದಿರುವ ಅವರು ತಮ್ಮ ತಲೆಗೂದಲನ್ನು ಶಾರ್ಟ್ ಮಾಡಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದರು.ಸೋನಾಲಿ ಬೇಂದ್ರೆಗೆ 12 ವರ್ಷದ ಮಗ ರಣವೀರ್ ಇದ್ದು, ಸದ್ಯಕ್ಕೆ ಬೇಸಿಗೆ ರಜೆಗಳ ನಿಮಿತ್ತ ಅಮ್ಮನ ಬಳಿಯೇ ಇದ್ದಾನೆ. ಸಾಮಾನ್ಯವಾಗಿ ಮಕ್ಕಳಿಗೆ ಈ ವಿಷಯ ತಿಳೀಸಬೇಕೆ ಬೇಡವೆ ಎಂಬ ಸಂದಿಗ್ಧತೆ ಎಲ್ಲಾ ತಂದೆತಾಯಿಯನ್ನು ಕಾಡುತ್ತದೆ. ತಾನೂ ಸಹ ಇಂತಹದ್ದೇ ಸಂದಿಗ್ಧ ಪರಿಸ್ಥಿತಿಗೆ ಒಳಗಾದೆ. ತನಗೆ ಕ್ಯಾನ್ಸರ್ ಇರುವುದನ್ನು ಹೇಳುವುದೇ ಸರಿ ಎನ್ನಿಸಿ ಮಗನಿಗೆ ತನ್ನ ಪರಿಸ್ಥಿತಿ, ಚಿಕಿತ್ಸೆ ಬಗ್ಗೆ ತಿಳಿಸಿದ್ದಾಗಿ ಸೋನಾಲಿ ಬೇಂದ್ರೆ ಚಿಕಿತ್ಸೆ ನಡುವೆ ಒಮ್ಮೆ ಹಂಚಿಕೊಂಡಿದ್ದರು.

ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ವಿಷಾದ ವಾಗಿ  ಬರೆದುಕೊಂಡಿದ್ದ ಅವರು, “ಮಗನೊಂದಿಗೆ ನಾವು ಯಾವಾಗಲೂ ಮುಕ್ತ ಮತ್ತು ಪ್ರಾಮಾಣಿಕರಾಗಿದ್ದೇವೆ. ಅವನಿಗೆ ಕ್ಯಾನ್ಸರ್ ಇರುವುದು ತಿಳಿಸಿದಾಗ ಅವನು ಅದನ್ನು ಪ್ರಬುದ್ಧವಾಗಿ ಸ್ವೀಕರಿಸಿದ. ಈಗ ಅವನೇ ನನಗೆ ಶಕ್ತಿ, ಸಕಾರಾತ್ಮಕತೆಯ ಮೂಲ. ಈಗ ಅವನೇ ನನಗೆ ಪೋಷಕರ ಸ್ಥಾನದಲ್ಲಿ ನಿಂತು ಸಹಾಯ ಮಾಡುತ್ತಿದ್ದಾನೆ”ಎಂದಿದ್ದರು.ಇಂತಹ ಪರಿಸ್ಥಿತಿಯ ಬಗ್ಗೆ ಮಕ್ಕಳಿಗೆ ಕಡ್ಡಾಯವಾಗಿ ತಿಳಿಸುವುದು ನನ್ನ ಪ್ರಕಾರ ಸರಿ. ಇದರಿಂದ ನಮಗಿಂತ ಅವರು ಮಾನಸಿಕವಾಗಿ ದೃಢವಾಗಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನು ದೂರ ಇಡುವುದು ಸರಿಯಲ್ಲ, ಜೀವನ ಸತ್ಯಗಳು ಅವರಿಗೂ ಗೊತ್ತಾಗಬೇಕು. ಸದ್ಯಕ್ಕೆ ರಣವೀರ್ ಜತೆಗೆ ಸಮಯ ಕಳೆಯುತ್ತಿದ್ದೇನೆ. ಅವನ ಮುಗ್ಧತೆ ಮತ್ತು ತುಂಟಾಟವೇ ನನಗೆ ಸ್ಫೂರ್ತಿ. ಪ್ರತಿಯೊಬ್ಬರಿಂದಲೂ ಇದನ್ನೇ ಬಯಸುತ್ತೇನೆ ಎಂದು ಪೋಸ್ಟ್  ಮಾಡಿದ್ದರು.

ಚಿಕಿತ್ಸೆಗಾಗಿ ಕೂದಲನ್ನು ಬೋಳಿಸಿರುವ ಸೋನಾಲಿ ಬೇಂದ್ರೆ ‘ಇದು ನಾನು, ಈ ಕ್ಷಣ ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದರೆ ಜನರು ನನ್ನನ್ನು ವಿಚಿತ್ರವಾಗಿ ನೋಡಬಹುದು. ಆದರೆ ಇದು ಸತ್ಯ, ಅದ್ಹೇಗೆ ಎಂದು ಹೇಳುತ್ತೇನೆ, ನಾನೀಗ ಪ್ರತಿಯೊಂದು ಕ್ಷಣವನ್ನೂ ಗಮನಿಸುತ್ತೇನೆ, ಸಂತೋಷವಾಗಿ ಕಳೆಯಲು ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳುತ್ತೇನೆ. ಹೌದು, ನೋವಿದೆ, ನಿಶ್ಯಕ್ತಿಯಿದೆ, ಆದರೂ ನನಗೆ ಇಷ್ಟವಾಗಿದ್ದನ್ನು ಮಾಡುತ್ತೇನೆ. ಸ್ನೇಹಿತರು ನನ್ನ ಶಕ್ತಿ, ಅವರ ಬ್ಯುಸಿ ಶೆಡ್ಯೂಲ್‌ ನಡುವೆಯೂ ನನ್ನ ಭೇಟಿ ಮಾಡಿ, ನನ್ನಲ್ಲಿ ಒಂಟಿತನ ಭಾವನೆ ಬರದಂತೆ ನೋಡಿಕೊಂಡಿದ್ದಾರೆ. ನಿಮ್ಮಂಥ ಸ್ನೇಹಿತರನ್ನು ಪಡೆದ ನಾನು ಅದೃಷ್ಟವಂತೆ ‘ ಎಂದು ಹೇಳಿ ಫ್ರೆಂಡ್ ಶಿಪ್ ಡೇ ಆಚರಣೆ ಮಾಡಿದ್ದ ಫೋಟೋ ಹಂಚಿಕೊಂಡಿದ್ದರು ಆಗಾಗ ತಮ್ಮ ಆರೋಗ್ಯ ಹಾಗು ಸ್ನೇಹಿತರ ಸಹಾಯ ಹಾಗು ಸ್ಫೂರ್ತಿಯ ಬಗ್ಗೆ ನ್ಯೂಯಾರ್ಕ್ ನಿಂದ ಮಾಹಿತಿ ನೀಡುತಿದ್ದರು.

ಈಗ ಕ್ಯಾನ್ಸರ್ ಗಾಗಿ ಚಿಕಿತ್ಸೆ ಮುಗಿಸಿಕೊಂಡು  ಸೋನಾಲಿ ಬೇಂದ್ರೆ ಐದು ತಿಂಗಳ ಬಳಿಕ ತಮ್ಮ ತವರು ಮುಂಬೈಗೆ ಮರಳಿದ್ದಾರೆ ತಾನು ಸಂತಸದಿಂದ ಮತ್ತೆ ಮುಂಬೈಗೆ ಮರಳುತ್ತಿದ್ದೇನೆ” ಎಂದು ಸೋನಾಲಿ ಸಾಮಾಜಿಕ ತಾಣದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ “ಹೋರಾಟವು ಇನ್ನೂ ಮುಗಿದಿಲ್ಲ”  ಎಂದೂ ಅವರು  ಹೇಳಿದ್ದಾರೆ.ಉನ್ನತ ಹಂತ ತಲುಪಿದ ಕ್ಯಾನ್ಸರ್‌ ಗೆ ಕೆಮೋಥೆರಪಿ ಮತ್ತಿತರ ಬಗೆಯ ಅತ್ಯಾಧುನಿಕ ಚಿಕಿತ್ಸೆಯನ್ನು  ಪಡೆಯುವಲ್ಲಿ ತಲೆಬೋಳಾಗುವುದು ಸಹಜವೇ ಆಗಿದ್ದು ಸೊನಾಲಿ ಬೇಂದ್ರೆ ವಾಸ್ತವತೆಯನ್ನು ಮರೆ ಮಾಚದೆ ಧೈರ್ಯ ಮತ್ತು ನಗುಮೊಗದಿಂದ ಕ್ಯಾಮೆರಾ ಎದುರಿಸಿರುವುದು ಕ್ಯಾನ್ಸರ್‌ ಗೆಲ್ಲುವ ಅವರಿಗೆ  ಸಂಕಲ್ಪ ಶಕ್ತಿಗೆ ಸಾಕ್ಷಿಯಾಯಿತು.ಅಂದ ಹಾಗೆ ಸೋನಾಲಿ ಬೇಂದ್ರೆ ಸಾಮಾಜಿಕ ಜಾಲ ತಾಣದಲ್ಲಿ ಸ್ಫೂರ್ತಿದಾಯಕ ಪೋಸ್ಟ್‌ಗಳನ್ನು ಹಾಕಿದ್ದು ಕ್ಯಾನ್ಸರ್‌ ವಿರುದ್ಧದ ತನ್ನ ಹೋರಾಟದ ಕುರಿತು ಬರೆದಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಸೋನಾಲಿ ಅವರನ್ನು ಬಾಲಿವುಡ್‌ ಮಿತ್ರರಾದ ಪ್ರಿಯಾಂಕಾ ಚೋಪ್ರಾ, ಸುಸಾನ್‌ ಖಾನ್‌, ಹೃತಿಕ್‌ ರೋಶನ್‌, ಅಕ್ಷಯ್‌ ಕುಮಾರ್‌, ನೀತು ಕಪೂರ್‌ ಮೊದಲಾಗಿ ಅನೇಕ ತಾರೆಯರು ಭೇಟಿ ಮಾಡಿ ಧೈರ್ಯ ಉತ್ಸಾಹ ತುಂಬಿದ್ದರು.”ಸೋನಾಲಿ ಬೇಂದ್ರೆ ಕ್ಷೇಮವಾಗಿದ್ದಾರೆ. ಅವರು ಗುಣಮುಖರಾಗುತ್ತಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ಮುಗಿದಿದೆ. ಆದರೆ ಈ ಕಾಯಿಲೆ ಮತ್ತೆ ಮತ್ತೆ ಬರುವ ಸಾಧ್ಯತೆ ಇರುವುದರಿಂದ ನಿಯಮಿತವಾಗಿ ತಪಾಸಣೆ ಮಾಡಿಸುವುದು ಅನಿವಾರ್ಯ” ಎಂದು ಸೋನಾಲಿ ಬೇಂದ್ರೆ ಅವರ ಪತಿ ಗೋಲ್ಡಿ ಬೆಹ್ಲ್ ತಿಳಿಸಿದ್ದಾರೆ.ಆದರೆ ಕಳೆದ ಜುಲೈನಿಂದ ನಿರಂತರವಾಗಿ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಸದ್ಯಕ್ಕೆ ಗುಣಮುಖರಾಗಿ ಸ್ವದೇಶಕ್ಕೆ ಮರಳಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here