Home Crime ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಮಹದೇವಪುರ ಪೊಲೀಸ್ರ ದಾಳಿ.. ಕಿಂಗ್ ಪಿನ್ ಸೇರಿದಂತೆ ಐವರು ಅರೆಸ್ಟ್,...

ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಮಹದೇವಪುರ ಪೊಲೀಸ್ರ ದಾಳಿ.. ಕಿಂಗ್ ಪಿನ್ ಸೇರಿದಂತೆ ಐವರು ಅರೆಸ್ಟ್, ಕ್ಯಾಷ್ ಸೀಸ್…

109
0
SHARE

ಸಿಲಿಕಾನ್ ಸಿಟಿಯಲ್ಲಿ ಸದ್ಯ ಯಾರ ಬಾಯಲ್ಲಿ ಕೇಳಿದ್ರು ಐಪಿಎಲ್ ದೆ ಸದ್ದು. ಅದ್ರಲ್ಲೂ ಕೆಲವ್ರು ಸಿಕ್ಕಿದ್ದೆ ಚಾನ್ಸ್. ಈ ಸೀಸನ್ ನಲ್ಲಿ ಒಂದಷ್ಟು ಕಾಸ್ ಮಾಡಿಕೊಳ್ಬೇಕು ಅಂತ ಬೆಟ್ಟಿಂಗ್ ದಂಧೆ ನಡೆಸ್ತಿದ್ದಾರೆ. ಅಂತಹ ದಂಧೆ ಮೇಲೆ ರೇಡ್ ಮಾಡಿದ ಮಹದೇವಪುರ ಪೊಲೀಸ್ರು ಬೆಟ್ಟಿಂಗ್ ದಂಧೆಯ ಕಿಂಗ್ ಪಿನ್ ಸೇರಿದಂತೆ ಐವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಅವ್ರಲ್ಲಿ ಪ್ರಮುಖ ಆರೋಪಿಯೇ ಈ ಗೌತಮ್…

ಹೊಸಕೋಟೆ ಮೂಲದ ಗೌತಮ್ ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಅಪಾರ್ಟ್ ಮೆಂಟ್ ನ್ನ ಬಾಡಿಗೆಗೆ ತೆಗೆದುಕೊಂಡಿದ್ದ. ಅಲ್ಲೆ ಲ್ಯಾಪ್ ಟಾಪ್ ಗಳನ್ನಿಟ್ಕೊಂಡು ಆಫೀಸ್ ಮಾಡಿಕೊಂಡಿದ್ದ ಗೌತಮ್ ಹೊಸಕೋಟೆ. ಕಾಡುಗೋಡಿ, ಕೆ.ಆರ್.ಪುರಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತನ್ನ ದಂಧೆಯ ಜಾಲ ವಿಸ್ತರಿಸಿದ್ದ…

ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಮಹದೇವಪುರ ಪೊಲೀಸ್ರು ಗೌತಮ್ ನಡೆಸ್ತಿದ್ದ ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ರೇಡ್ ಮಾಡಿದ್ರು. ಆ ವೇಳೆ ಅಲ್ಲಿ ಸೆಟ್ಟಾಪ್ ಆಗಿದ್ದ ಬಂಧನ ಮಾಡಿದ್ದಾರೆ. ಅಷ್ಟೇ ಅಲ್ಲದೇ ದಾಳಿ ವೇಳೆ ಪೊಲೀಸ್ರು, ಕಿಂಗ್ ಪಿನ್ ಗೌತಮ್ ಜೊತೆ ಸಂಪರ್ಕದಲ್ಲಿರೋ ಇತರೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ…

LEAVE A REPLY

Please enter your comment!
Please enter your name here