Home Crime ಕ್ರೂರವಾಗಿ ಅತ್ಯಾಚಾರವೆಸಗಿ ಸುಟ್ಟು ಹಾಕಿದ್ರು ಆ ಗಿಣಿಯಂತಿದ್ದ ವಿದ್ಯಾರ್ಥಿನಿಯನ್ನಾ..!? ಹೊಸ್ತಿಲು ದಾಟಿದ ಹೆಣ್ಮಕ್ಕಳ ಮೇಲೆ ಕಾಮಾಂಧರ...

ಕ್ರೂರವಾಗಿ ಅತ್ಯಾಚಾರವೆಸಗಿ ಸುಟ್ಟು ಹಾಕಿದ್ರು ಆ ಗಿಣಿಯಂತಿದ್ದ ವಿದ್ಯಾರ್ಥಿನಿಯನ್ನಾ..!? ಹೊಸ್ತಿಲು ದಾಟಿದ ಹೆಣ್ಮಕ್ಕಳ ಮೇಲೆ ಕಾಮಾಂಧರ ಅಟ್ಟಹಾಸಕ್ಕೆ ಕೊನೆ ಎಂದು..???

3167
0
SHARE

ಮಾಲೂರಿನ ಬಿಜಿಎಸ್ ಕಾಲೇಜಿನಲ್ಲಿ ಹತ್ತನೇ ತರಗತಿ ಓಡುತ್ತಿದ್ದ ಬಾಲಕಿ ರಕ್ಷಿತಾಳನ್ನ ಕಾಮಾಂಧನೊಬ್ಬ ಮುಕ್ಕಿ ತಿನ್ನೋ ಸಲುವಾಗಿ ಅವಳ ಮೇಲೆರಗಿದ್ದ. ಪ್ರಾಣ ಹೋದ್ರೂ ಮಾನ ಉಳೀಬೇಕು ಅಂತಿದ್ದ ಪಾಪದ ಬಾಲೆ ರಕ್ಷಿತಾ ಆ ಕಾಮುಕನಿಂದ ತಪ್ಪಿಸಿಕೊಳ್ಳೋವಾಗ ಅಟ್ಟಾಡಿಸಿ ಆ ಹುಡುಗಿಯನ್ನ ಕೊಂದೇ ಹಾಕಿದ್ದ. ಅದಾದ ಆ ಆರೋಪಿಯನ್ನ ಮಾಲೂರು ಪೊಲೀಸರು ಅರೆಸ್ಟ್ ಮಾಡಿದ್ದರು. ಆದ್ರೆ.. ಗಿಣಿಯಂತಾ ಮುದ್ದಿನ ಮಗಳನ್ನ ಕಳಕೊಂಡ ರಕ್ಷಿತಾಳ ಹೆತ್ತಮ್ಮನ ಕರುಳ ಕೂಗು ಎಲ್ಲರ ಕರುಳು ಹಿಂಡಿದಂತಾಗಿದಂತೂ ಸತ್ಯ. ಕುಣುಮೆಹಳ್ಳಿಯ ಬ್ರಿಡ್ಜ್ ಮೇಲೆ ಒಂದಷ್ಟು ಜನ ಜಮಾಯಿಸಿದ್ದರು. ಬ್ರಿಡ್ಜ್ ಕೆಳಗೆ ಮತ್ತೊಂದಿಷ್ಟು ಮಂದಿ ಸೇರಿ ಆತಂಕದಿಂದ ನೋಡ್ತಾ ನಿಂತಿದ್ದರು. ಸ್ಥಳಕ್ಕೆ ಹೋಗಿದ್ದ ಪೊಲೀಸರೂ ಸಹ ಮೇಲ್ಸೇತುವೆ ಕೆಳಗೆ ಮೂಗು ಮುಚ್ಚಿಕೊಂಡು ಆ ಒಂದು ಕಡೆ ಪರಿಶೀಲಿಸಿದ್ದರು.

ಯಾಕಂದ್ರೆ.. ಕುಣಿಮೆಹಳ್ಳಿ ಬ್ರಿಡ್ಜ್ ಕಳೆಗೆ ಪತ್ತೆಯಾಗಿತ್ತು ಹುಡುಗಿಯೊಬ್ಬಳ ಅರೆಬರೆ ಸುಟ್ಟೋಗಿದ್ದ ಮೃತದೇಹ. ಕಾಲೇಜಿಗೆ ಹೋದ ರೇಣುಕಾ ನಿಗೂಢವಾಗಿ ನಾಪತ್ತೆಯಾಗಿ ಮೂರು ದಿನಗಳ ನಂತರ ಕೊಲೆಯಾದ ಸ್ಥಿತಿಯಲ್ಲಿ ಅವಳ ಮೃತದೇಹ ಪತ್ತೆಯಾಗಿತ್ತು. ಅಂದ ಹಾಗೆ, ರೇಣುಕಾಳ ಬರ್ಬರ ಕೊಲೆ ಹಿಂದೆ ಕೇಳಿ ಬರ್ತಾ ಇರೋದು ಅತ್ಯಾಚಾರದ ಶಂಕೆ.ಪ್ರತಿದಿನ ತನ್ನೂರಿನಿಂದ ಬಸ್ಸಲ್ಲಿ ಕಾಲೇಜಿಗೆ ಹೋಗಿ ಸಂಜೆ ಆಗೋ ಹೊತ್ತಿಗೆ ಮನೆ ಸೇರ್ಕೊಳ್ತಿದ್ದ ರೇಣುಕಾ, ಮೊನ್ನೆ ಸೋಮವಾರ ಮನೆ ಸೇರ್ಕೊಂಡಿರಲಿಲ್ಲ.

ಎಂದಿನಂತೆ ಕಾಲೇಜಿಗೆ ಹೋಗಿದ್ದವಳು ಕತ್ತಲಾದರೂ ಮನೆಗೆ ಬಾರದಕ್ಕೆ ಗಾಭರಿಗೊಂಡಿದ್ದ ರೇಣುಕಾಳ ತಂದೆ ತಾಯಿ ಹಾಗೂ ಮನೆಮಂದಿ ಆಕೆಯ ಮೊಬೈಲ್ ನಂಬರಿಗೆ ಕಾಲ್ ಮಾಡಿದ್ರು. ಆದ್ರೆ.. ಆಕೆಯ ಮೊಬೈಲ್ ನಂಬರ್ ಸ್ವಿಚ್ ಆಫ್ ಬರ್ತಿತ್ತು. ಹೀಗಾಗಿ ಆಕೆಯ ಸ್ನೇಹಿತೆಯರು, ಕಾಲೇಜಲ್ಲಿ ವಿಚಾರಿಸಿದ್ರೆ ಬೆಳಗ್ಗೆ ಬಂದು ಕಾಲೇಜಿಗೆ ಬಂದಿದ್ದಳು ಅಂತ ಹೇಳಿದ್ದರು. ಹೀಗಾಗಿ ಮತ್ತಷ್ಟು ಗಾಭರಿಯಾದವರೇ ಎಲ್ಲಾ ಕಡೆ ಹುಡುಕಾಡೋದಕ್ಕೆ ಶುರು ಮಾಡಿದ್ದರು. ಆದ್ರೆ ಎಲ್ಲೂ ಕೂಡ ರೇಣುಕಾಳ ಸುಳಿವೇ ಪತ್ತೆಯಾಗಿರಲಿಲ್ಲ. ಹೀಗಿರಬೇಕಾದ್ರೆ ಮೂರು ದಿನಗಳ ನಂತರ ಕುಣಿಮೆಹಳ್ಳಿ ಬ್ರಿಡ್ಜ್ ಕೆಳಗೆ ರೇಣುಕಾಳ ಮೃತದೇಹ ಮತ್ತೆಯಾಗಿತ್ತು ಹಾಗೂ ಅವಳು ಬರ್ಬರವಾಗಿ ಕೊಲೆಯಾಗಿ ಹೋಗಿದ್ದಳು.

ಸ್ಥಳ ಪರಿಶೀಲನೆ ಮಾಡಿದ್ದ ಪೊಲೀಸರು ಹುಡುಗಿಯೊಬ್ಬಳು ಮಿಸ್ಸಿಂಗ್ ಆಗಿದ್ದಾಳನ್ನೋ ಸುದ್ದಿ ಕಲೆಹಾಕಿ ಆಕೆಯ ಪೋಷಕರನ್ನ ಸ್ಥಳಕ್ಕೆ ಕರೆಸಿದಾಗ ಕೊಲೆಯಾಗಿ ಪತ್ತೆಯಾಗಿದ್ದು ರೇಣುಕಾಳೇ ಅನ್ನೋದು ಗುರುತು ಪತ್ತೆಯಾಗಿತ್ತು. ಗಿಣಿಯಂತಿದ್ದ ಮನೆ ಮಗಳನ್ನ ಆ ಸ್ಥಿತಿಯಲ್ಲಿ ಕಂಡ ಆಕೆಯ ಮನೆಯವರಿಗೆ ಕರುಳು ಹಿಂಡಿದಂತಾಗಿತ್ತು. ಹೀಗಾಗಿ ನಾಪತ್ತೆ ಕೇಸನ್ನ ಕಿಡ್ನಾಪ್ ಕೇಸ್ ಅಂತ ಮಾಡ್ಕೊಂಡು ನಂತರ ಕೊಲೆ ಕೇಸ್ ದಾಖಲಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಹಾವೇರಿ ಎಸ್ಪಿ ಪರಶುರಾಮ್ ಸಾಹೇಬ್ರು ಮೂರು ವಿಶೇಷ ತಂಡಗಳನ್ನ ಹಂತಕರ ಪತ್ತೆಗಾಗಿ ಫೀಲ್ಡಿಗಿಳಿಸಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರೇಣುಕಾ ಪಾಟೀಲ್ ನಿಗೂಢ ಕೊಲೆಯ ಸುತ್ತಾ ಹತ್ತಾರು ಸಂಶಯಗಳು ಸುಳಿದಾಡ್ತಿವೆ. ಅದೂ ಸಹ ರೇಣುಕಾಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಅನ್ನೋ ಅನುಮಾನ ಪೊಲೀಸರಿಗೆ ಬಂದಿದೆ. ಆದ್ರೆ.. ಅದು ಇನ್ನೂ ಕನ್ಫರ್ಮ್ ಆಗಿಲ್ಲ ಬಿಡಿ. ಆದ್ರೂ.. ಮೃತದೇಹ ಪತ್ತೆಯಾದ ಸ್ಥಿತಿ, ಹಾಗೂ ಅಕ್ಕಪಕ್ಕದಲ್ಲಿನ ದೃಶ್ಯಗಳು ಅಂತಹದೊಂದು ಅನುಮಾನಕ್ಕೆ ಪುಷ್ಠಿ ನೀಡ್ತಿವೆಯಂತೆ. ಮುಂದೆ ಅದು ಪೊಲೀಸರ ತನಿಖೆಯಂದಷ್ಟೇ ಗೊತ್ತಾಗಬೇಕಿದೆ. ಆದ್ರೆ, ರೇಣುಕಾಳ ಡೆಡ್ಬಾಡಿ ಇದ್ದ ಪರಿಸ್ಥಿತಿ ಹಾಗೂ ಸೀನ್ ಆಫ್ ಕ್ರೈಂ ಅನ್ನ ನೋಡಿದ್ರೆ ಕೊಲೆ ಹೇಗೆ ನಡೆದಿರಬಹುದು ಅಂತ ಪೊಲೀಸರು ಅಂದಾಜಿಸಿದ್ದಾರೆ.

ಪೊಲೀಸರ ಪ್ರಕಾರ ರೇಣುಕಾಳ ಹತ್ಯೆ ಅವೊತ್ತು ರಾತ್ರಿಯೇ ಅಂದರೆ ಆಕೆ ನಾಪತ್ತೆಯಾದ ದಿನದ ರಾತ್ರಿಯೇ ನಡೆದಿರಬಹುದು ಅಂತ ಅಂದಾಜು ಮಾಡಿದ್ದಾರೆ.ಕಾಲೇಜಿಗೆ ಹೋಗಿದ್ದ ರೇಣುಕಾಳನ್ನ ಆಗಂತುಕರು ಕಿಡ್ನಾಪ್ ಮಾಡಿದ್ದರೋ ಅಥವಾ ತನಗೆ ಪರಿಚಯ ಇರೋವ್ರ ಜೊತೆ ಹೋಗಿದ್ದಳೋ ಸದ್ಯಕ್ಕಂತೂ ಗೊತ್ತಿಲ್ಲ. ಅದು ಪೊಲೀಸರಿಗೂ ಸಹ. ಆದ್ರೆ ಆ ಕೊಲೆ ಯಾವ ರೀತಿ ನಡೆದಿದೆ ಅಂತ ಅಂದಾಜಿಸಿದ್ದಾರೆ. ಬಹುಶಃ ರೇಣುಕಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿರೋ ದುಷ್ಕರ್ಮಿಗಳು ನಂತರ, ಗುರುತು ಸಿಗಬಾರದು ಅಂತ ಆಕೆಯ ಮುಖಕ್ಕೆ ಮಾತ್ರ ಬೆಂಕಿ ಹಚ್ಚಿ ಸುಟ್ಟಾಕಿದ್ದಾರೆ. ಅರೆಬರೆ ಸುಟ್ಟ ಆ ಮೃತದೇಹ ಪತ್ತೆಯಾಗಿದ್ದಯ ಮೂರು ದಿನಗಳ ನಂತರ. ಹೀಗಾಗಿ ಮೃತದೇಹ ಕೊಳೆಯಲಾರಂಭಿಸಿದೆ.

ಎಷ್ಟು ಸುಂದರವಾಗಿದ್ದ ರೇಣುಕಾ ಮುಖಾರವಿಂದ ಇದೀಗ ನೋಡೋದಕ್ಕೂ ಸಾಧ್ಯವಾಗದಷ್ಟು ಭೀಕರವಾಗಿ ಮಾರ್ಪಟ್ಟಿತ್ತು. ನಾಯಿ ನರಿ ಹೆಗ್ಗಣಗಳು ಮೃತದೇಹವನ್ನ ಕಿತ್ತು ತಿಂದಿರೋ ಹಾಗೆ ಕಾಣ್ತಿತ್ತು. ತಲೆಗೆ ಮಾತ್ರ ಬೆಂಕಿ ಇಟ್ಟ ಪರಿಣಾಮ ಮುಖ ಗುರುತು ಪತ್ತೆ ಹಚ್ಚೋಕೆ ಸಾಧ್ಯವೇ ಆಗ್ತಿರಲಿಲ್ಲ. ಆದ್ರೆ ಆಕೆಯ ಮೈಮೇಲಿದ್ದ ಕಾಲೇಜು ಯೂನಿಫಾರ್ಮ್ ನಿಂದಾಗಿ ಕೊಲೆಯಾಗಿರೋದು ಒಬ್ಬಳು ಸ್ಟೂಡೆಂಟ್ ಅಂತ ಗೊತ್ತಾಗ್ತಿತ್ತು. ಅದೇ ತರ ಗುರುತು ಪತ್ತೆ ಹಚ್ಚೋಕೆ ಮುಂದಾಗಿದ್ದ ಪೊಲೀಸರಿಗೆ ಅಲ್ಲಿ ಕೊಲೆಯಾಗಿ ಪತ್ತೆಯಾಗಿರೋದು ರೇಣುಕಾನೇ ಅಂತ ಕೆಲವೇ ಗಂಟೆಗಳಲ್ಲಿ ಗೊತ್ತಾಗಿತ್ತು.

ಈ ಹೆಣ್ಮಗಳನ್ನ ಕೊಂದ ಆ ಕಿರಾತಕರು ಯಾರು ಅಂತ ಸದ್ಯಕ್ಕಂತೂ ಗೊತ್ತಿಲ್ಲ. ಆದ್ರೆ ಸೀನ್ ಆಫ್ ಕ್ರೈಂ ಹೇಗೆ ನಡೆದಿದೆ ಅಂತ ಪೊಲೀಸರು ಒಂದು ಹಂತಕ್ಕೆ ಅಂದಾಜಿಸಿದ್ದಾರೆ. ಇಲ್ಲೊಂದು ಮುಖ್ಯವಾದ ವಿಚಾರ ಏನಂದ್ರೆ ರೇಣುಕಾಳ ಕೊಲೆ ಅದು ಬರೀ ಕೊಲೆಯಾಗಿಲ್ಲ, ಕೊಲೆಯಾಗೋದಕ್ಕೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದಾ ಅನ್ನೋ ಬಲವಾದ ಸಂಶಯ ಪೊಲೀಸರಿಗೆ ಕಾಣ್ತಾ ಇದೆ. ಯಾಕಂದ್ರೆ.. ಕೊಲೆಯಾಗಿ ಪತ್ತೆಯಾಗಿದ್ದ ರೇಣುಕಾಳ ಶವದಲ್ಲಿ ಟಾಪ್ ಮಾತ್ರ ಪತ್ತೆಯಾಗಿದೆ. ಆಕೆ ಧರಿಸಿದ್ದ ಪ್ಯಾಂಟ್ ಅಲ್ಲಿ ಕಂಡಿರಲಿಲ್ಲ. ಅಷ್ಟೇ ಅಲ್ಲ, ಯಾರಿಗೂ ಕಾಣದಂತಾ ಸೇತುವೆ ಕೆಳಗಿನ ಜಾಗದಲ್ಲಿ ಆಕೆಯ ಶವ ಪತ್ತೆಯಾಗಿದೆ ಅಂದ್ರೆ..

ಪರಿಚಿತರೇ ಆ ಹುಡುಗಿಯನ್ನ ಪುಸಲಾಯಿಸಿ ಅಲ್ಲಿಗೆ ಕರ್ಕೊಂಡು ಬಂದು ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಂದು ಮುಗಿಸಿದ್ದಾರಾ ಅನ್ನೋ ಅನುಮಾನ ಪೊಲೀಸರದ್ದು. ಅಥವಾ ಯಾರೊ ಅಪರಿಚಿತ ದುಷ್ಕರ್ಮಿಗಳು ರೇಣುಕಾಳನ್ನ ಕಿಡ್ನಾಪ್ ಮಾಡಿ ಅಂತ ನೀಚ ಕೃತ್ಯ ಎಸದ್ರಾ ಅನ್ನೋ ಆಂಗಲಿಂದಾನೂ ಪೊಲೀಸ್ ತಂಡಗಳು ತನಿಖೆ ನಡೆಸಿವೆ.ಆದ್ರೆ ಈಗಷ್ಟೇ ತನಿಖೆ ಆರಂಭಿಸಿರೋ ಹಾವೇರಿ ಪೊಲೀಸರು ಹಂತಕರ ಸುಳಿವಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಪರಚಿತರೇ ಆಕೆಯನ್ನ ಕೊಲೆ ಮಾಡಿದ್ದಾರೆ ಅನ್ನೋದಾದ್ರೆ ರೇಣುಕಾಳ ಮೊಬೈಲ್ ನಂಬರ್ ಕಾಲ್ ಲಿಸ್ಟ್ ತೆಗೆಸಿ ಶಂಕಿತರ ಜಾಡನ್ನು ಜಾಲಾಡ್ತಿದ್ದಾರೆ.

ಕಾಲೇಜಿನಲ್ಲಿ ಆಕೆಯ ಸ್ನೇಹಿತರು, ಕಾಲೇಜು ಹೊರಗೆ ಕಾಟ ಕೊಡೋ ಚಪ್ಪರ್ ಹುಡುಗರ ಬಗ್ಗೆಯೂ ಮಾಹಿತಿ ಕಲೆ ಹಾಕ್ತಿದ್ದಾರೆ. ಆರೋಪಿಗಳು ಸಿಕ್ಕಿಬೀಳೋವರೆಗೂ, ಹಾಗೂ ಮೆಡಿಕಲ್ ರಿಪೋರ್ಟ್ ಬರೋವರೆಗೂ ಪೊಲೀಸರು ಯಾವ ನಿರ್ಧಾರಕ್ಕೂ ಬರುವಂತಿಲ್ಲ. ಹೀಗಾಗಿ ಪಾಪದ ಹುಡುಗಿ ರೇಣುಕಾಳ ಬರ್ಬರ ದಾರುಣ ಹಾಗೂ ನಿಗೂಢ ಹತ್ಯೆಯ ಹಿಂದೆ ಹತ್ತಾರು ಸಂಶಯಗಳು ಹರಿದಾಡ್ತಿರೋದಂತೂ ಸತ್ಯ.

ನಾಪತ್ತೆಯಾಗಿ ನಿಗೂಢವಾಗಿ ಕೊಲೆಯಾಗಿ ಪತ್ತೆಯಾಗಿರೋ ರೇಣುಕಾಳ ಸಾವಿನ ಸುತ್ತಾ ಹತ್ತಾರು ಸಂಶಯಗಳು ಸುಳಿದಾಡ್ತಿರೋದಂತೂ ಸತ್ಯ. ಈ ಹೆಣ್ಮಗಳನ್ನ ಯಾರು, ಯಾವ ಕಾರಣಕ್ಕೆ ಕೊಂದಿದ್ದಾರೆ ಅನ್ನೋದು ಸದ್ಯಕಂತೂ ತಿಳಿದುಬಂದಿಲ್ಲ. ಮೂರು ವಿಶೇಷ ತಂಡಗಳು ಹಂತಕರ ಸುಳಿವು ಪತ್ತೆಗೆ ಇಳಿದು ಎಲ್ಲಾ ಆಯಾಮಗಳಿಂದಲೂ ಇನ್ವೆಸ್ಟಿಗೇಟ್ ಮಾಡ್ತಿವೆ. ಇವೊತ್ತಲ್ಲಾ ನಾಳೆ ಆ ರಾಕ್ಷಸರು ಸಿಕ್ಕಿಬೀಳೋದಂತೂ ಸತ್ಯ. ಆದ್ರೆ, ಒಬ್ಬ ಅಮಾಯಕ ಹೆಣ್ಮಗಳ ಭವಿಷ್ಯ ಬೆಳಗೋ ಮುನ್ನವೇ ಕಮರಿ ಹೋಗಿರೋದು ದುರಂತವೇ ಸರಿ.ರೇಣುಕಾ ತುಂಬಾನೇ ಡೀಸೆಂಟ್ ಹುಡುಗಿ. ತನ್ನ ಅಂದಚೆಂದಕ್ಕೆ ತಕ್ಕಂತೆ ಓದಲ್ಲೂ ಮುಂದ್ದಿದ್ದು ಸೈ ಎನ್ನಿಸಿಕೊಂಡಿದ್ದವಳು.

LEAVE A REPLY

Please enter your comment!
Please enter your name here