Home Cinema ಕ್ರೇಜಿಸ್ಟಾರ್ ನಟನೆಯ “ಮಂಜಿನ ಹನಿ” ಎಲ್ಲೋಯ್ತು..?! ಮಂಜಿನ ಹನಿ ಸಿನಿಮಾ ಸುದ್ದಿಯಲ್ಲಿದೆ ವಂಚನೆ ಪ್ರಕರಣದಲ್ಲಿ..!!?

ಕ್ರೇಜಿಸ್ಟಾರ್ ನಟನೆಯ “ಮಂಜಿನ ಹನಿ” ಎಲ್ಲೋಯ್ತು..?! ಮಂಜಿನ ಹನಿ ಸಿನಿಮಾ ಸುದ್ದಿಯಲ್ಲಿದೆ ವಂಚನೆ ಪ್ರಕರಣದಲ್ಲಿ..!!?

2440
0
SHARE

ಗಾಂಧಿನಗರದಲ್ಲಿ ಫಿಲ್ಮ್ ಮಾಡೋರಿಕ್ಕಿಂತ ಮೋಸ ಮಾಡಾರೋ ಜಾಸ್ತಿ ಆಗ್ಬಿಟ್ಟಿದ್ದಾರೆ. 6 ವರ್ಷದ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಂಜಿನ ಹನಿ ಫಿಲ್ಮ್ ಶೂಟಿಂಗ್ ಶುರುವಾಗಿದೆ. 2012ರಲ್ಲಿ ಸ್ಟಾರ್ಟ್ ಆಗಿದ್ದು 2018 ಮುಗಿತಾ ಬಂದ್ರೂ ಫಿಲ್ಮ್ ಕಂಪ್ಲೀಟೇ ಆಗ್ಲಿಲ್ಲ..

ಆದ್ರೆ ಈ ಗ್ಯಾಪ್ ನಲ್ಲಿ ಅವನ್ಯಾವನೋ ಮೂರುನಾಮದ ಮಾಸ್ಟರ್ ನಾಗೇಶ್ ಅನ್ನೋ ನಿರ್ಮಾಪಕ ಇರೋ ಬರೋರಿಗೆಲ್ಲಾ ಮಂಜಿನ ಹನಿ ಫಿಲ್ಮ್ ಹೆಸ್ರಲ್ಲಿ ಮೋಸ ಮಾಡ್ತಾ ಬಂದಿದ್ದಾನೆ. ಈ ಸಾರಿ ನಾಗೇಶ್ ಅನ್ನೋ ಮನೆಮುರಕ ಮೋಸ ಮಾಡಿರೋದ ಬೇರೆ ಯಾರಿಗೂ ಅಲ್ಲಾ ಇದೇ ಚಿತ್ರದಲ್ಲಿ ಕೋ ಆಕ್ಟರ್ ಆಗಿ ನಟಿಸಿರೋ ಚೇತನಾಳಿಗೆ.

ಹೊಸಕೋಟೆ ಮೂಲದ ನಾಗೇಶ್ ಕೋ ಆಕ್ಟರ್ ಚೇತನಾಘೆ ಫಿಲ್ಮ್ ನಲ್ಲಿ ಮೈನ್ ರೋಲ್ ಕೊಡುವುದಾಗಿ ಹೇಳಿ ಲಕ್ಷಲಕ್ಷ ಹಣ ಕಿತ್ತಿದ್ದ. ಕೊನೆಗೆ ಫಿಲ್ಮ್ ಅರ್ದಂಬರ್ದ ಶೂಟಿಂಗ್ ಆಗಿ ತೋಪೆದ್ದು ಹೋಯ್ತು.

ಈ ಟೈಮ್ ನಲ್ಲಿ ನಾಗೇಶ್ ಕೋ ಆಕ್ಟರ್ ಚೇತನಾಳಿಗೆ ವಾಟ್ಸಪ್ ನಲ್ಲಿ ಮೆಸೇಜ್ ಮಾಡೋದಕ್ಕೆ ಶುರು ಮಾಡಿದ್ದ. ಈ ಚಿತ್ರಕ್ಕೆ ಯಾರ್ದೋ ಕಣ್ಣು ಬಿದ್ದಿದೆ, ಒಂದು ಮಗುನಾ ಬಲಿ ಕೊಡ್ಬೇಕು…ಕೊಟ್ರೆ ಫಿಲ್ಮ್ ಕಂಪ್ಲೀಟ್ ಆಗಿ ಫಿಲ್ಮ್ 100 ಡೇಸ್ ಓಡುತ್ತೆ ಅಂತಾ ಹೇಳಿ ಲಕ್ಷ ಲಕ್ಷ ಹಣ ಪೀಕಿದ್ದಾನೆ.

ಕೊನೆಗೆ ಗೌರಿ ಎಂಬ ಡುಬಾಕ್ ಜ್ಯೋತಿಷಿಯನ್ನಾ ಮೀಟ್ ಮಾಡ್ಸಿ ಪೂಜೆ ಮಾಡ್ಸಬೇಕು ಅಂತಾ ಮತ್ತೆ 9 ಲಕ್ಷ ಹಣ ಕಿತ್ತಿದ್ದಾನೆ ಕಿರಾತಕ ನಾಗೇಶ…ಕೊನೆಗೆ ಇವನು ಹೇಳಿದ್ದಲ್ಲಾ ಸುಳ್ಳು ಅಂತಾ ಗೊತ್ತಾದ ಮೇಲೆ ಚೇತನಾ ಗಿರಿನಗರಕ್ಕೆ ಬಂದು ಕಂಪ್ಲೆಂಟ್ ಕೊಟ್ಟಿದ್ದಾಳೆ.

LEAVE A REPLY

Please enter your comment!
Please enter your name here