Home Crime ಖಾಕಿ ಡ್ರೆಸ್‌ನಲ್ಲೇ ವಿವಾಹಿತ ಮಹಿಳೆಯೊಂದಿಗೆ ಪಲ್ಲಂಗವೇರಿದ ಹಿರಿಯ IPS ಅಧಿಕಾರಿ..!? ರಂಗಿನಾಟದ ವಿಡಿಯೋ, ಪೋಟೋಗಳು ಫುಲ್...

ಖಾಕಿ ಡ್ರೆಸ್‌ನಲ್ಲೇ ವಿವಾಹಿತ ಮಹಿಳೆಯೊಂದಿಗೆ ಪಲ್ಲಂಗವೇರಿದ ಹಿರಿಯ IPS ಅಧಿಕಾರಿ..!? ರಂಗಿನಾಟದ ವಿಡಿಯೋ, ಪೋಟೋಗಳು ಫುಲ್ ವೈರಲ್..!?

5346
0
SHARE

ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಗುಳೇದ್ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ದಾವಣಗೆರೆ ಮೂಲದ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿರುವುದು ಈಗ ಬಹಿರಂಗವಾಗಿದೆ. ದಾವಣಗೆರೆಯಲ್ಲಿ ಎಸ್ಪಿ ಆಗಿದ್ದ ವೇಳೆ ಭೀಮಾಶಂಕರ್ ಗುಳೇದ್ ಮತ್ತು ಮಹಿಳೆಗೆ ಪರಿಚಯವಾಗಿ, ನಂತರ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿದೆ.

ಇನ್ನು ಪೊಲೀಸ್ ಯೂನಿಫಾರ್ಮ್ ನಲ್ಲೇ ಗುಳೇದ್ ರಾಸಲೀಲೆ ನಡೆಸಿದ್ದು, ಪಲ್ಲಂಗ ಪುರಾಣದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಇದೀಗ ನೊಂದ ಪತಿ ತನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮದವರ ಮುಂದೆ ಮೊರೆ ಇಟ್ಟಿದ್ದಾನೆ. ಆದರೆ ಈ ಆರೋಪವನ್ನು ಭೀಮಾಶಂಕರ್ ಎಸ್ ಗುಳೇದ್ ತಳ್ಳಿ ಹಾಕಿದ್ದಾರೆ.ಇನ್ನು ತಮ್ಮ ಪತ್ನಿ ಜೊತೆಗೆ ಐಪಿಎಸ್ ಅಧಿಕಾರಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿರುವ ಘಟನೆ ನಡೆದಿದೆ.

ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕೇಳಿದಾಗ ಐಪಿಎಸ್ ಅಧಿಕಾರಿ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದಾವಣಗೆರೆ ಮೂಲದ ಇವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು 2010ರಲ್ಲಿ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದರು…

ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಸಹ ಮಕ್ಕಳಾಗಲಿಲ್ಲವೆಂದು ಬೇಸತ್ತು ಮಹಿಳೆ ತನ್ನ ತಾಯಿಯ ಮನೆಯಲ್ಲಿ ವಾಸವಿರಲಾರಂಭಿಸಿದರು. ಪತಿ, ಪತ್ನಿಗೆ ಒಂದೂವರೆ ಕೋಟಿ ರೂಪಾಯಿ ನೀಡಿ ದಾವಣಗೆರೆಯಲ್ಲಿ ಗ್ರಾಫಿಕ್ ಡಿಸೈನಿಂಗ್ ಸ್ಟುಡಿಯೊ ಇಡುವಂತೆ ಸಲಹೆ ನೀಡಿದ್ದರು, ಅದರಂತೆ ಉದ್ಯಮ ಆರಂಭಿಸಿದ್ದರು. ಕಳೆದ ವರ್ಷ ಮೇ 22ರಂದು ಸ್ಟುಡಿಯೊಗೆ ಭೇಟಿ ನೀಡಿದ್ದ ಐಪಿಎಸ್ ಅಧಿಕಾರಿ ತನ್ನ ಅವಳಿ ಹೆಣ್ಣು ಮಕ್ಕಳ ಹುಟ್ಟುಹಬ್ಬದ ಪಾರ್ಟಿಗೆ ಬಂದು ಫೋಟೋ, ವಿಡಿಯೊ ಮಾಡುವಂತೆ ಕೇಳಿಕೊಂಡಿದ್ದರು.

ಸ್ಟುಡಿಯೊದಲ್ಲಿ ಸ್ವಲ್ಪ ಹೊತ್ತು ಕಳೆದು ಮಾತನಾಡಿ ಹೆಚ್ಚು ಪರಿಚಿತರಾಗಿಬಿಟ್ಟರು. ಇದಾದ ಬಳಿಕ ಇಬ್ಬರೂ ಸ್ನೇಹಿತರಾಗಿ ಹತ್ತಿರವಾಗತೊಡಗಿದರು. ಈ ವಿಷಯ ಪತಿಗೆ ಗೊತ್ತಾದಾಗ ಇಬ್ಬರ ಮಧ್ಯೆ ಅಕ್ರಮ ಸಂಬಂಧವಿದೆಯೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಅವರಿಗೆ ದೂರು ನೀಡಿದ್ದರು.

ಆದರೆ ಪೊಲೀಸ್ ಮಹಾ ನಿರ್ದೇಶಕಿ ಕೇಸು ದಾಖಲಿಸಿಕೊಳ್ಳಲಿಲ್ಲ.ನಿನ್ನೆ ಮಾಧ್ಯಮದಲ್ಲಿ ಐಪಿಎಸ್ ಅಧಿಕಾರಿ ಮತ್ತು ಮಹಿಳೆ ಸಂಬಂಧದ ಕುರಿತು ವಿಡಿಯೊ ಬಹಿರಂಗವಾದ ನಂತರ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಈ ಕುರಿತು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಂದ ಪ್ರಕರಣ ಬಗ್ಗೆ ವರದಿ ಕೇಳಿದ್ದಾರೆ ಎನ್ನಲಾಗಿದೆ.

ಇನ್ನು ಐಪಿಎಸ್ ಅಧಿಕಾರಿ, ಈ ಆರೋಪಗಳೆಲ್ಲ ನಿರಾಧಾರವಾದದ್ದು. ವಾಹಿನಿಗಳಲ್ಲಿ ಪ್ರಸಾರವಾದ ವಿಡಿಯೊವನ್ನು ತಿರುಚಲಾಗಿದೆ.ಸಾಗರ್ ಒಬ್ಬ ಮನೋವಿಕೃತನಾಗಿದ್ದು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ. ಆತ ತನಗೆ ಕಿರುಕುಳ ನೀಡುತ್ತಿರುವುದರಿಂದ ಅವನನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ಆತನ ಪತ್ನಿ ನನಗೆ ಹೇಳಿದ್ದಳು. ಆಕೆ ಸಹ ಆತನ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ದಳು.

ಆದರೆ ಇದು ಕೌಟುಂಬಿಕ ಕಲಹವಾಗಿರುವುದರಿಂದ ದೂರು ನೀಡುವುದು ಬೇಡವೆಂದು ನಾನು ಸಲಹೆ ನೀಡಿದ್ದೆ ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಲಾವಣ್ಯ, ಕೋರ್ಟಿನಲ್ಲಿ ತಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಇದರಿಂದಾಗಿ ತನ್ನ ಪತಿ ಮಾಧ್ಯಮಕ್ಕೆ ವಿಡಿಯೊವನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here