Home Crime ಖಾಸಗಿ ಬಸ್‌ಗೆ ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲಿಯೇ ಸುಟ್ಟು ಕರಕಲು..!

ಖಾಸಗಿ ಬಸ್‌ಗೆ ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲಿಯೇ ಸುಟ್ಟು ಕರಕಲು..!

1076
0
SHARE

ಘಟನೆ ನಡೆದ ಸ್ಥಳದಲ್ಲಿ ಆತಂಕವಾಗಿ ನೋಡುತ್ತಿರುವ ಸಾರ್ವಜನಿಕರು, ಇನ್ನೊಂದೆಡೆ ಬೈಕ್ ಸವಾರ ಸ್ಥಳದಲ್ಲೇ ಹೊತ್ತಿ ಉರಿಯುತ್ತಿರುವಂತಹದ್ದು ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹೊರವಲದಲ್ಲಿ. ಮುಂಜಾನೆ ಖಾಸಗಿ ಬಸ್‍ಗೆ ಬೈಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಾಗೂ ಬೈಕ್ ಸವಾರ ಸ್ಥಳದಲ್ಲಿಯೇ ಸುಟ್ಟು ಕರಕಲಾಗಿದ್ದಾನೆ.

ಮೂರು ಜನ ಯುವಕರು ಬೈಕ್ ಗಳಲ್ಲಿ ಅತಿವೇಗವಾಗಿ ಬೈಕ್ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇನ್ನು ಅಪಘಾತ ನಂತರ ಲಕ್ಷಾಂತರ ಬೆಲೆ ಬಾಳುವ ಯಮಹ ಆರ್ 1 ಬೈಕ್ ಹಾಗೂ ಬೈಕ್ ಸವಾರ ಸ್ಥಳದಲ್ಲೆ ಸುಟ್ಟು ಕರಕಲಾಗಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆಯ ವಿವೇಕಾನಂದ ನಗರದ ಯುವಕ ನೀರಜ್ ಸ್ಥಳದಲ್ಲಿ ಸುಟ್ಟು ಕರಕಲಾಗಿದ್ದಾನೆ., ಇನ್ನುಳಿದ ಎರಡು ಬೈಕ್‍ ಕೂಡ ನಜ್ಜುಗುಜ್ಜಾಗಿದೆ. ಜೊತೆಗೆ ಇಬ್ಬರು ಬೈಕ್ ಸವಾರರು ಅಚ್ಚರಿ ರೀತಿಯಲ್ಲಿ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಇನ್ನು ಸಾವನ್ನಪ್ಪಿದ ಯುವಕ ನೀರಜ್ ಬೆಂಗಳೂರಿನ ಕಾಲೇಜುವೊಂದರಲ್ಲಿ ಇಂಜಿನಿಯರಿಂಗ್ ವಿಧ್ಯಾಬ್ಯಾಸವನ್ನ ಮಾಡುತ್ತಿದ್ದ. ಕ್ರಿಸ್‍ಮಸ್ ರಜೆಯಿಂದಾಗಿ ಮನೆಗೆ ಬಂದಿದ್ದ ಈತ ಮುಂಜಾನೆ ಸ್ನೇಹಿತರ ಜೊತೆಯಲ್ಲಿ ಜಾಲಿ ರೇಡ್ ಹೋಗಿದ್ದು, ಇದಕ್ಕೂ ಮುಂಜೆ ತನ್ನ ತಾಯಿಯ ಬಳಿ, ಕೋಲಾರದ ಹೊಟೆಲ್‍ವೊಂದರಲ್ಲಿ ಬ್ರೇಕ್‍ಫಸ್ಟ್ ಮಾಡಿ ಬರುವುದಾಗಿ ಹೇಳಿ, ಅಮ್ಮನ ಬಳಿ ಹಣವನ್ನ ತೆಗೆದುಕೊಂಡು ಹೊರಟಿದ್ದ ಎನ್ನಲಾಗಿದೆ. ಜೊತೆಗೆ ಇದೇ ಸಂದರ್ಭದಲ್ಲಿ ಮೃತ ಬೈಕ್ ಸವಾರನ ತಂದೆ ಕುಮ್ರೇಶ್ ಮಂಜಿನ ಹನಿ ಹೆಚ್ಚಾಗಿರುವುದರಿಂದ ನೀರಜ್‍ಗೆ ಬೈಕ್‍ನಲ್ಲಿ ಹೊರಹೋಗುವುದಕ್ಕೆ ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.

ಆದ್ರೆ ವಿಧಿಯಾಟ ಬೇರೆಯೇ ಆಗಿತ್ತು, ಪ್ರವಾಸವನ್ನ ಮುಗಿಸಿ ಬಂಗಾರಪೇಟೆಯತ್ತ ವಾಪಸ್ ಆಗುತ್ತಿದ್ದಂತಹ ಬಸ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಅಪಘಾತದಲ್ಲಿ ನೀರಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಒಟ್ನಲ್ಲಿ ಬೆಳ್ಳಂ ಬೆಳಗ್ಗೆ ಎದ್ದು ಜಾಲಿ ರೈಡ್ ಹೊರಟಿದ್ದ ಯುವಕ ವಿಧಿಯಾಟಕ್ಕೆ ಬಲಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಬಂಗಾರಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here