ಚಂದನವನದಲ್ಲಿ ಡ್ರಗ್ ಮಾಫಿಯಾದ ವಾಸನೆ ಹೆಚ್ಚಾಗುತ್ತಿದೆ. ಸಿಸಿಬಿ ಕೂಡ ಹಲವು ನಟನಟಿಯರನ್ನ ತನ್ನ ಟಾರ್ಗೆಟ್ ಲಿಸ್ಟ್ನಲ್ಲಿ ಭದ್ರವಾಗಿಟ್ಟುಕೊಂಡಿದೆ. ಚಿತ್ರರಂಗದಲ್ಲಿ ಡ್ರಗ್ ಯೂಸ್ ಇದೆ. ಖಂಡಿತ ಮುಂದಿನ ದಿನಗಳಲ್ಲಿ ಅವರೆಲ್ಲರ ಹೆಸರುಗಳನ್ನ ಬಟಾಬಯಲು ಮಾಡ್ತೀನಿ ಅಂತ ಸ್ಯಾಂಡಲ್ವುಡ್ ಅಂಗಳದಲ್ಲಿ ಬಾಂಬ್ ಸೃಷ್ಟಿಸಿದ್ದ ನಿರ್ದೆಶಕ ಇಂದ್ರಜಿತ್ ಲಂಕೇಶ್, ಈಗ ಮತ್ತೆ ಡ್ರಗ್ ಸರ್ಕಲ್ ಕುರಿತಾಗಿ ತಮ್ಮ ನಾಲಿಗೆ ಬಿಚ್ಚಿದ್ದಾರೆ. ಜೊತೆಗೆ ಸ್ಯಾಂಡಲ್ವುಡ್ನ ಪ್ರಸ್ತುತ ಬೆಳವಣಿಗೆಗಳಿಗೂ ತಮ್ಮದೇ ಶೈಲಿಯ ವ್ಯಾಖ್ಯಾನ ನೀಡಿದ್ದಾರೆ.
ತಮ್ಮ ಹುಟ್ಟುಹಬ್ಬವನ್ನ ಬೇರೆ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ಆಸೆಯಿಂದಲೇ ಇಂದು ರೇಸ್ರ್ಕೋಸ್ ಬಳಿಯ ಖಾಸಗಿ ಹೋಟೆಲ್ವೊಂದರಲ್ಲಿ ಪ್ರೆಸ್ಮೀಟ್ ಆಯೋಜಿಸಿದ್ದ ಇಂದ್ರಜಿತ್ ಲಂಕೇಶ್ ಒಂದಷ್ಟು ಬ್ಲಾಸ್ಟಿಂಗ್ ವಿಷಯಗಳನ್ನ ಓಪನ್ ಮಾಡಿದ್ದಾರೆ. ಇಷ್ಟುದಿನಗಳ ಕಾಲ ಇಂದ್ರಜಿತ್ ಕೊಟ್ಟಿದ್ದ ಟಾರ್ಗೆಟ್ ಲಿಸ್ಟ್ನಲ್ಲಿ ಯಾವೆಲ್ಲ ಮಹಾನುಭವರ ಹೆಸರುಗಳು ಬರಬಹುದು ಎನ್ನುವ ಲೆಕ್ಕಚಾರದಲ್ಲೇ ಚಂದನವನ ಮುಳುಗಿಹೋಗಿತ್ತು. ಪ್ರಕರಣ ಇನ್ನು ಕೂಡ ತನಿಖೆ ಹಂತದಲ್ಲಿರೋ ಕಾರಣಕ್ಕೆ ಯಾವ ಹೆಸರನ್ನೂ ಇಂದ್ರಜಿತ್ ಲಂಕೇಶ್ ಬಿಟ್ಟುಕೊಡಲು ಸುತರಂ ಒಪ್ಪಿರಲಿಲ್ಲ. ಆದರೆ ಇಂದು ಆ ಹೆಸರುಗಳ ಹಿಂಟ್ ಕೊಡಲು ಶುರುಮಾಡಿದ್ದಾರೆ ಮಿ.ಇಂದ್ರಜಿತ್ ಲಂಕೇಶ್.
ಖ್ಯಾತ ನಿರ್ದೆಶಕರೊಬ್ಬರ ಮಗನನ್ನ ಯಾಕೆ ಸ್ವಾಮಿ ಅರೆಸ್ಟ್ ಮಾಡಲಿಲ್ಲ ಅಂತ ಪ್ರಶ್ನೆ ಹಾಕುತ್ತ ಆ ಖ್ಯಾತ ನಿರ್ದೆಶಕನ ಗುರುತನ್ನ ರಿವೀಲ್ ಮಾಡಿದ್ದಾರೆ. ಇನ್ನು ಈಗಾಗಲೇ ನ್ಯಾಯಂಗ ಬಂಧನದಲ್ಲಿರೋ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯ ಪೊಲಿಟಿಕಲ್ ಎಂಟ್ರಿಯ ಬಗ್ಗೆಯೂ ಇಂದ್ರಜಿತ್ ಚಕಾರವೆತ್ತಿದ್ದಾರೆ. ಈಕೆ ಮಾಡಿದ ಸಾಧನೆಯಾದರೂ ಏನು..? ಯಾವ ಕಾರಣಕ್ಕೆ ಸಿನಿಮಾನಟಿ ರಾಗಿಣಿಗೆ ರಾಜಕೀಯವಲಯದಲ್ಲಿ ಜಾಗ ಸಿಕ್ಕಿತ್ತು ಎನ್ನುವ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಇಂದ್ರಜಿತ್ ಲಂಕೇಶ್ ಇಲ್ಲಿ ಒಂದು ಹೊಸ ವಿಷಯದ ಬಗ್ಗೆಯೂ ಬಾಯಿ ತೆರೆದಿದ್ದಾರೆ. ಅದೇ ಲವ್ ಜಿಹಾದ್. ಡ್ರಗ್ ಮಾಫಿಯಾದಲ್ಲಿ ಲವ್ ಜಿಹಾದ್ ಹೇಗೆ ಬಂತು ಅಂತ ಪ್ರಶ್ನೆಹಾಕಿ ಪ್ರಕರಣದ ಗತಿ ಎತ್ತ ಸಾಗುತ್ತಿದೆ ಎಂಬುದನ್ನ ತೋರಿಸಿದ್ದಾರೆ.
ಇತ್ತೀಚೆಗೆ ನಖ್ರಾರಾಣಿ ಸಂಜನಾ ಮದುವೆಯಾಗೊದಕ್ಕೆ ಇಸ್ಲಾಂ ಧರ್ಮಕ್ಕೆ ಮತಂತಾರಗೊಂಡಿದ್ದು ಸಿಕ್ಕಪಟ್ಟೆ ಸುದ್ಧಿಯಾಗಿತ್ತು. ಆದರೆ ಇಲ್ಲಿ ಇಂದ್ರಜಿತ್ ಹೇಳ್ತಿರೋದೆ ಬೇರೆ, ಡ್ರಗ್ ಮಾಫಿಯಾ ವಿಚಾರವನ್ನ ಸೈಡ್ ಲೈನ್ ಮಾಡಿ ಬೇರೆಯಾದೇ ಬಣ್ಣ ಹಚ್ಚೋಕೆ ಕೆಲವು ಶಕ್ತಿಗಳು ಟ್ರೈ ಮಾಡ್ತಿವೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಅಂತ ಎಚ್ಚರಿಸಿದ್ದಾರೆ.ಇನ್ನು ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಬಿಜೆಪಿ ಸರ್ಕಾರಕ್ಕೂ ಇಂದ್ರಜಿತ್ ಇದೇ ಸಮಯದಲ್ಲಿ ಹೊಸ ಚುರುಕು ಮುಟ್ಟಿಸಿದ್ದಾರೆ. ಇವರ ಮಧ್ಯೆ ಏನೂ ಸರಿಯಿಲ್ಲ, ನಾಟ್ ಎವರಿಥಿಂಗ್ ಫರ್ಫಕ್ಟ್ ಎನ್ನುತ್ತ ಸ್ಯಾಂಡಲ್ವುಡ್ ಡ್ರಗ್ ಮಾಫಿಯಾದಲ್ಲಿ ರಾಜ್ಯಸರ್ಕಾರ ಹೇಗೆ ಎಡವಿಬಿದ್ದಿದೆ ಎನ್ನುವುದರ ಡಿಸ್ಪ್ಲೇ ತೋರಿಸಿದ್ದಾರೆ.
ಡ್ರಗ್ ಜಾಲದಲ್ಲಿ ನಟನಟಿಯರು ಹಾಗೂ ಪ್ರಭಾವಿ ರಾಜಕಾರಣಿಗಳ ಮಕ್ಕಳ ಹೆಸರು ತಳುಕಿಹಾಕಿಕೊಂಡಿದ್ದೇ ತಡ, ಇಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರವನ್ನೂ ಇಂದ್ರಜಿತ್ ಲಂಕೇಶ್ ಪಾಯಿಂಟ್ ಔಟ್ ಮಾಡಿದ್ದಾರೆ. ಸಿಬಿಐ ತನಿಖೆಯಿಂದ ಹೊರಬಂದ ಕೆಲವು ನಗ್ನಸತ್ಯಗಳನ್ನ ಇಲ್ಲಿ ವಿವರಿಸಿದ್ದಾರೆ. ಅಲ್ಲದೇ ಇಲ್ಲೂ ಕೂಡ ಸಿಬಿಐ ಹಸ್ತಾಕ್ಷೇಪ ಮಾಡಿದ್ರೆ ಕೆಲವರ ಮುಖವಾಡಗಳು ಜನರ ಮುಂದೆ ಬರೋದು ಗ್ಯಾರಂಟಿ ಎಂದಿದ್ದಾರೆ ಇಂದ್ರಜಿತ್. ಅಂತೂ ಇಂದ್ರಜಿತ್ ಮತ್ತೊಮ್ಮೆ ಡ್ರಗ್ ಜಾಲದಲ್ಲಿ ನಮ್ಮ ಚಿತ್ರರಂಗ ಹಾಗೂ ಸೋ ಕಾಲ್ಡ್ ಸೆಲೆಬ್ರೆಟಿಗಳು ಹೇಗೆ ತಗುಲಿಹಾಕಿಕೊಂಡಿದ್ದಾರೆ ಎಂಬುದರ ಬಗ್ಗೆ ತಮ್ಮ ಓಪಿನಿಯನ್ ತಿಳಿಸಿದ್ದಾರೆ. ರಾಗಿಣಿ ದ್ವೀವೇದಿ ಹಾಗೂ ಸಂಜನಾ ಈಗ ಮುದ್ದೆ ಮುರಿತಿರೋ ಈ ಬ್ಯಾಡ್ ಟೈಮ್ನಲ್ಲಿ ಸ್ಯಾಂಡಲ್ವುಡ್ನ ಮತ್ತಷ್ಟು ಸ್ಟಾರ್ಗಳಿಗೆ ಹೊಸ ನಡುಕ ಶುರುವಾಗಿದೆ.
ರಾಗಿಣಿ ಹಾಗೂ ಸಂಜನಾ ಜಾಮೀನು ಸಿಕ್ಕೆ ಸಿಗುತ್ತೆ ಅಂತ ಕನಸು ಕಾಣುತ್ತಿದ್ದರೂ ಅದು ಎಟುಕಲಾಗದ ದ್ರಾಕ್ಷಿಯಂತೆ ಕಾಣಿಸುತ್ತಿದೆ. ಅಲ್ಲದೇ ಈಗಾಗಲೇ ಕೆಲವು ಸ್ಟಾರ್ಗಳಿಗೆ ವಾಟ್ಸ್ಪ್ ಮೂಲಕವೇ ನೋಟಿಸ್ ಜಾರಿ ಮಾಡ್ತಿರೋ ಕೇಂದ್ರಅಪರಾಧ ವಿಭಾಗ ಕೂಡ ಮುಂದಿನ ದಿನಗಳಲ್ಲಿ ಯಾವ ಶಾಕಿಂಗ್ ಸ್ಟೆಪ್ ತೆಗೆದುಕೊಳ್ಳುತ್ತೋ ಗೊತ್ತಿಲ್ಲ. ಆದರೆ ಇಂದ್ರಜಿತ್ ಮಾತುಗಳ ಅರ್ಥ ಮಾತ್ರ ಬೇರೆ ಏನನ್ನೋ, ಯಾರನ್ನೋ ಟಾರ್ಗೆಟ್ ಮಾಡ್ತಿದೆ ಅನ್ನೋದಂತೂ ೧೦೦ ಪ್ರಸೆಂಟ್ ಫಿಕ್ಸ್.
-ಫಿಲಂ ಡೆಸ್ಕ್ .ಪ್ರಜಾಟಿವಿ