Home Crime ಗಂಡನ ಆ ಒಂದು ದಾಹವನ್ನು ನೀಗಿಸಲಾಗದೆ ಮದುವೆ ವಾರ್ಷಿಕೋತ್ಸವದಂದೇ ಕೊನೆಯುಸಿರೆಳೆದ ಈ ಪಾಪಿಯ ಮುದ್ದಾದ ಹೆಂಡತಿ

ಗಂಡನ ಆ ಒಂದು ದಾಹವನ್ನು ನೀಗಿಸಲಾಗದೆ ಮದುವೆ ವಾರ್ಷಿಕೋತ್ಸವದಂದೇ ಕೊನೆಯುಸಿರೆಳೆದ ಈ ಪಾಪಿಯ ಮುದ್ದಾದ ಹೆಂಡತಿ

1701
0
SHARE

ಆ ತಂದೆ ತಾಯಿ ಮಗಳು ಚೆನ್ನಾಗಿ, ಸಂತೋಷದಿಂದ ಇರ್ಬೇಕು ಅಂತ ಲಕ್ಷ ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ಮದ್ವೆ ಮಾಡಿಕೊಟ್ಟಿದ್ರು. ಹಾಗೆ ಸಪ್ತಪದಿ ತುಳಿದ ಆ ಹೆಣ್ಣು ಮಗಳು ಪತಿ ನೀಡ್ತಿದ್ದ ಹಿಂಸೆ ಸಹಿಸಿಕೊಂಡೇ ಹತ್ತು ವರ್ಷಗಳನ್ನ ಕಳೆದಿದ್ಲು. ಆದ್ರೆ ನಿನ್ನೆ ನಡೆದ ಜಗಳದಿಂದ ಬೇಸತ್ತು ಮದ್ವೆ ವಾರ್ಷಿಕೋತ್ಸವದಂದೇ ಆತ್ಮಹತ್ಯೆಗೆ ಶರಣಾಗಿದ್ದಾಳೆ…

ಈಕೆ ಹೆಸ್ರು ನವ್ಯ…ಮೂಲತಃ ಕೋಲಾರ ಚಿಂತಾಮಣಿ ಮೂಲದ ಮಂಜುನಾಥ್ ಎಂಬುವವರ ಪುತ್ರಿ. ತನ್ನ ಮಗಳು ಸುಖ ಸಂತೋಷದಿಂದ ಇರ್ಬೇಕು ಅಂತ 10 ವರ್ಷಗಳ ಹಿಂದೆ ಸಾಫ್ಟವೇರ್ ಉದ್ಯೋಗಿ ಶಿಢ್ಲಘಟ್ಟದ ರಮೇಶ್ ಬಾಬು ಎಂಬಾತನ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಇಬ್ಬರ ದಾಂಪತ್ಯ ಜೀವನ ಸಾಕ್ಷಿಯಾಗಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವೂ ಇದೆ.

ಆದ್ರೆ, ಗಂಡ ಅನ್ಸಿಕೊಂಡಿದ್ದ ಈ ರಮೇಶ ಹಣದ ದಾಹಕ್ಕೆ ಬಿದ್ದು, ನೀಡ್ತಿದ್ದ ಹಿಂಸೆಗೆ ಇವತ್ತು ಸಂಸಾರ ಬೆಳಗಿದ ಜ್ಯೋತಿಯೇ ಆರಿದೆ.ಸಂಸಾರ ಅಂದ್ಮೇಲೆ ಸಣ್ಣ ಪುಟ್ಟ ಜಗಳ ಕಾಮನ್. ಆದ್ರೆ, ಇವ್ನ ಸಂಸಾರದಲ್ಲಿ ಸ್ವಲ್ಪ ಢಿಪರೆಂಟ್. ಮದ್ವೆ ಟೈಮ್ ನಲ್ಲಿ ಕಾಲ್ ಕೆ.ಜಿ. ಚಿನ್ನ, 10 ಲಕ್ಷ ದುಡ್ ಕೊಟ್ಟಿದ್ರು. ಆಗಾಗ ಹಣ ಬೇಕು ಅಂತ ಹಿಂಸೆ ಕೋಡ್ತಿದ್ದ…

ಅದನ್ನ ಕಂಡ ನವ್ಯ ಮನೆಯವ್ರು ಅಲ್ಪ ಸ್ವಲ್ಪ ಸಹಾಯ ಮಾಡೋದು ಮಾಡ್ತಿದ್ರಂತೆ. ಆದ್ರೆ, ಈ ರಮೇಶನ ಕಾಟ ಹೆಚ್ಚಾಗಿದ್ದು, ಯಾರೊಂದಿಗೆ ಮಾತನಾಡಿದ್ರು ಅನುಮಾನ ಪಟ್ಟು ಜಗಳ ತೆಗೆಯುತ್ತಿದ್ನಂತೆ. ಈ ಬಗ್ಗೆ ಕಳೆದ ವರ್ಷದ ರಾಜಿ ಸಂಧಾನ ಮಾಡಿದ್ದ ಹಿರಿಯರು ಬುದ್ದಿವಾದ ಹೇಳಿದ್ರಂತೆ.

ಆದ್ರೂ ಇವರ ಇಬ್ಬರ ನಡುವಿನ ಜಗಳ ಕಡಿಮೆ ಆಗಿರಲಿಲ್ಲವಂತೆ.ಅಷ್ಟೆ ಅಲ್ಲದೆ ನಿನ್ನೆ ಸಂಜೆ ನವ್ಯ ತನ್ನ ತಂಗಿಯನ್ನ ಮದ್ವೆ ವಾರ್ಷಿಕೋತ್ಸವ ಹಿನ್ನೆಲೆ ಮನೆಗೆ ಊಟಕ್ಕೆ ಕರೆಯುವುದಾಗಿ ಗಂಡನಿಗೆ ತಿಳಿಸಿದ್ದಾಳಂತೆ. ಅಷ್ಟಕ್ಕೆ ಸಿಟ್ಟಾದ ರಮೇಶ್ ಬಾಬು ಜಗಳ ಮಾಡಿದ್ದು, ಮನ ಬಂದಂತೆ ನಿಂದಿಸಿದ್ನಂತೆ.

ಇದರಿಂದ ಬೇಸತ್ತು ನವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬ ಆರೋಪವನ್ನ ಕುಟುಂಬಸ್ಥರು ಮಾಡುತ್ತಿದ್ದಾರೆ.ಸದ್ಯ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅಮೃತಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನವ್ಯ ಪತ್ನಿ ರಮೇಶ್ ಬಾಬುರನ್ನ ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here