Home Crime ಗಂಡನ ಬಿಟ್ಟು ಲವರ್ ಜೊತೆ ಓಡಿ ಹೋದ್ಲು ಮೂರು ಮಕ್ಕಳ ಮಹಾತಾಯಿ..! ನಂಬಿಸಿ, ಕೈ ಕೊಟ್ಟ...

ಗಂಡನ ಬಿಟ್ಟು ಲವರ್ ಜೊತೆ ಓಡಿ ಹೋದ್ಲು ಮೂರು ಮಕ್ಕಳ ಮಹಾತಾಯಿ..! ನಂಬಿಸಿ, ಕೈ ಕೊಟ್ಟ ಲವರ್ ಗಾಗಿ ಮಹಿಳೆಯಿಂದ ಪ್ರತಿಭಟನೆ..!

9291
0
SHARE

ಮೂರು ಮಕ್ಕಳ ತಾಯಿ. ಗಂಡನೊಂದಿಗೆ ಜೀವನ ಸಾಗಿಸುತ್ತಿದ್ದಾಕೆ. ಆದ್ರೆ ಅದ್ಯಾಕೋ ಏನೋ ಹಳೆ ಲವರ್ ಜೊತೆ ಏಕಾಏಕಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಇದೀಗ ಲವರ್ ಕೈ ಕೊಟ್ಟಿದ್ದಾನೆ. ಅತ್ತ ಗಂಡನೂ ಇಲ್ಲ, ಇತ್ತ ಬಾಯ್ ಫ್ರೆಂಡ್ ಇಲ್ಲದೆ ಬೀದಿಪಾಲಾಗಿದ್ದಾಳೆ. ನ್ಯಾಯಕ್ಕಾಗಿ ಪ್ರಿಯತಮನ ಮನೆ ಮುಂದೆ ಹೋರಾಟ ನಡೆಸಿದ್ದಾಳೆ. ಮನೆಮುಂದೆ ಕುಳಿತು‌ ಪ್ರತಿಭಟನೆ ಮಾಡುತ್ತಿರುವ ಈ ಮಹಿಳೆಯ ಹೆಸರು ಯಲಮ್ಮ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದವಳು.

ಮೂರು ಮಕ್ಕಳಿದ್ರು ಗಂಡನ ಬಿಟ್ಟು ಬಾಯಫ್ರೆಂಡ್ ಜೊತೆ ಓಡಿಹೋಗಿದ್ದಳು. ಇದೀಗ ಬಾಯ್ಫ್ರೆಂಡ್ ಕೂಡ ಈಕೆಗೆ ಕೈಕೊಟ್ಟಿದ್ದಾನೆ. ನ್ಯಾಯಕ್ಕಾಗಿ ಯುವಕನ ಮನೆ ಮುಂದೆ ಧರಣಿ ಕುಳಿತಿದ್ದಾಳೆ. ಏಳು ತಿಂಗಳ‌ ಹಿಂದೆ ಯಲಮ್ಮ ಮಡಿಕೇಶ್ವರ ‌ಗ್ರಾಮದ ಪ್ರಭು ಚಲವಾದಿ ಎಂಬ ಯುವಕನ ಜೊತೆ ‌ಮಹಾರಾಷ್ಟದ ಪುಣೆಗೆ ಪರಾರಿಯಾಗಿದ್ದಳು. ಏಳು ತಿಂಗಳ‌ ಕಾಲ ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್ ಜೀವನ ನಡೆಸಿದ್ದರು. ಆದ್ರೆ ಕಳೆದ ಒಂದು ವಾರದ ಹಿಂದೆ ಏಕಾಏಕಿ ಯಲ್ಲಮ್ಮಳನ್ನು ಪ್ರಭು ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಕಂಗಲಾದ ಮಹಿಳೆ ದಲಿತ ಸಂಘಟನೆಗಳ ಜೊತೆಗೆ ಪ್ರಭು ನಿವಾಸದ ಬಳಿ ಧರಣಿ ಕುಳಿತಿದ್ದಾಳೆ.ಮೂಲತಃ ಮಡಿಕೇಶ್ವರ ಗ್ರಾಮದವಳಾದ ಯಲ್ಲಮ್ಮನನ್ನ ವಿಜಯಪುರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. 8 ವರ್ಷಗಳಿಂದ ಗಂಡನೊಂದಿಗೆ ಸುಂದರವಾಗಿ ಸಂಸಾರ ನಡೆಸುತ್ತಿದ್ದಳು.

ಆದ್ರೆ ಕೆಲ‌ ದಿನಗಳ ಹಿಂದೆ ಯಲ್ಲಮ್ಮ ತನ್ನ ತಂದೆ ತಾಯಿಗೆ ಆರೋಗ್ಯ ಸಮಸ್ಯೆ ಉಂಟಾದ ಕಾರಣ, ಪೋಷಕರನ್ನ ನೋಡಿಕೊಳ್ಳಲು ತವರು ಮನೆಗೆ ಬಂದಿದ್ದಳು. ಈ ವೇಳೆ ಪ್ರಭು ಚಲವಾದಿ ಜೊತೆ ಯಲ್ಲಮ್ಮ ಸಂಬಂಧ ಬೆಳೆಸಿದ್ದಾಳೆ. ಬಳಿಕ‌ ಆತನೊಂದಿಗೆ ಮಕ್ಕಳ ಸಮೇತ ಪರಾರಿಯಾಗಿದ್ದಳು. ಪ್ರಭು ಚಲವಾದಿ ಈಕೆಯನ್ನ ಪುಣೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲೇ ಒಟ್ಟಿಗೆ ವಾಸವಿದ್ದಾರೆ. 7 ತಿಂಗಳುಗಳ ಕಾಲ ಒಟ್ಟಾಗಿದ್ದ ಯಲ್ಲಮ್ಮನಿಗೆ ಪ್ರಭು ಚಲವಾದಿ ಕೈಕೊಟ್ಟು ಪರಾರಿಯಾಗಿದ್ದಾನೆ. ಇತ್ತ ಗಂಡನೂ ಇಲ್ಲದೆ, ಅತ್ತ ಬಾಯ್ ಫ್ರೆಂಡ್ ಇಲ್ಲದೆ ಯಲ್ಲಮ್ಮ ಕಂಗಾಲಾಗಿದ್ದಾಳೆ.

ಕೈ ಹಿಡಿದ ಗಂಡನಿಗೆ ಮೋಸ ಮಾಡಿ ಹೋಗಿದ್ದ ಎಲ್ಲಮ್ಮನಿಗೆ ಈಗ ಪ್ರಿಯತಮ ಕೈ ಕೊಟ್ಟಿದ್ದಾನೆ. ಯಲ್ಲಮ್ಮ ಕಂಗಾಲಾಗಿದ್ದಾಳೆ, ಎರಡು ದಿನಗಳಿಂದ ಹೋರಾಟ ನಡೆಸುತ್ತಿದ್ದಾಳೆ, ಯಲ್ಲಮ್ಮನ ಹೋರಾಟಕ್ಕೆ ದಲಿತ ಸಂಘಟನೆಗಳು ಸಾಥ್ ನೀಡಿವೆ.

LEAVE A REPLY

Please enter your comment!
Please enter your name here