Home Crime ಗಂಡನ ಮನೆಯವರಿಂದಲೇ ಮಹಿಳೆಗೆ ಲೈಂಗಿಕ ಕಿರುಕುಳ..?!! ಪ್ರೀತಿಸಿ ಮದೆವೆಯಾದವಳ ಸ್ಥಿತಿ ಈಗ ಬೀದಿಪಾಲು..!!

ಗಂಡನ ಮನೆಯವರಿಂದಲೇ ಮಹಿಳೆಗೆ ಲೈಂಗಿಕ ಕಿರುಕುಳ..?!! ಪ್ರೀತಿಸಿ ಮದೆವೆಯಾದವಳ ಸ್ಥಿತಿ ಈಗ ಬೀದಿಪಾಲು..!!

730
0
SHARE

ಹೆಣ್ಮಕ್ಕಳ ಬದುಕು ಸರಿ ಇದ್ರೆ ಬಚಾವ್, ಇಲ್ಲಾಂದ್ರೆ ಅವರ ಕಷ್ಟ ಯಾರಿಗೂ ಬೇಡ. ಇಲ್ಲೊಬ್ಬ ಹೆಣ್ಣುಮಗಳು ಓದುವಾಗಲೇ ಸಂಬಂಧಿಕನೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮನೆಯವರು ಕೂಡಾ ಇವ್ರ ಪ್ರೀತಿಯನ್ನು ಒಪ್ಕೊಂಡು ಮನೆ ತುಂಬಿಸ್ಕೊಂಡ್ರು. ಎಲ್ಲಾ ಸರಿ ಹೋಗಿದೆ ಅಂದ್ಕೊಳ್ಳುವಾಗ್ಲೇ ವಿಧಿ ಆಕೆಯ ಬದುಕಿನಲ್ಲಿ ಆಟವಾಡಿದೆ. ಮದುವೆಯಾಗಿ ಕೇವಲ 8 ವರ್ಷದಲ್ಲಿಯೇ ಆಕೆಯ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ, ನಂತರ ಆಕೆಯ ಬದುಕಲ್ಲಿ ಬಿರುಗಾಳಿ ಉಂಟಾಗಿದೆ…

ಇರಲು ಸೂರಿಲ್ಲದೆ ತಿನ್ನಲು ಅನ್ನವಿಲ್ಲದೆ ಪರದಾಡುವ ಸ್ಥಿತಿ ಬಂದೊದಗಿದೆ.ಹೀಗೆ ತನ್ನ ಎರಡು ಹೆಣ್ಣುಮಕ್ಕಳನ್ನ ಕರೆದುಕೊಂಡು ನ್ಯಾಯಕೂಡಿಸಿ ಎಂದು ಅಂಗಲಾಚುತ್ತಿರುವ ಯುವತಿಯ ಹೆಸರು ಶೈಲಜಾ. ಕಳೆದ 8 ವರ್ಷಗಳ ಹಿಂದೆ ಸೊರಬ ತಾಲೂಕು ಎಣ್ಣೆಕೊಪ್ಪ ಗ್ರಾಮದ ಶ್ರೀನಿವಾಸ್ ಎಂಬುವವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಆದರೆ ಕಳೆದ ವರ್ಷ ಶೈಲಾಳ ಪತಿ ಶ್ರೀನಿವಾಸ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಇದಾದ ಕೆಲ ದಿನಗಳ ಬಳಿಕ ಗಂಡನ ಮನೆಯಲ್ಲಿ ಆಕೆಗೆ ಕಿರುಕುಳ ಪ್ರಾಂಭವಾಗಿದೆ…

ಮಾವ ಮತ್ತು ಭಾವನಿಂದ ವರದಕ್ಷಿಣೆ ಕಿರುಕುಳ ಜೊತೆಗೆ ಲೈಂಗಿಕ ಕಿರುಕುಳ ಸಹ ನೀಡಿದ್ದಾರೆ. ಆಸ್ತಿಯಲ್ಲಿ ನಿನಗೆ ಪಾಲು ನೀಡಲ್ಲ ಎಂದು ಮನೆಯಿಂದ ಹೊರಹಾಕಿದ್ದಾರೆ. ಇದರಿಂದ ಬೇಸತ್ತ ಶೈಲಜಾ, ತನ್ನ ತವರು ಮನೆಯನ್ನ ಸೇರಿದ್ರೆ ಅಲ್ಲೂ ಕೂಡಾ ಅತ್ತಿಗೆಯರ ಟಾರ್ಚರ್ ಶುರುವಾಗಿದೆ. ಇದರಿಂದ ನೊಂದ ಶೈಲಜಾ, ಕಳೆದೊಂದು ವಾರದಿಂದ ಆನವಟ್ಟಿ ಬಸ್ ಸ್ಟ್ಯಾಂಡ್ ನಲ್ಲಿ ತನ್ನ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾಳೆ…

ಕೆಲ ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದ ಶೈಲಜಾ ಸ್ವಂತ ಮನೆಗಾಗಿ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆಕೆಗೆ ಮನೆ ನೀಡುವಂತೆ ಆದೇಶ ಕೂಡಾ ನೀಡಿತ್ತು. ಆದ್ರೆ ಶೈಲ ಗಂಡನ ಮನೆವರು ಕೋರ್ಟ್ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈ ಬಗ್ಗೆ ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಿಲ್ಲಾ ಪೊಲೀಸ್ ಹೆಚ್ಚುವರಿ ರಕ್ಷಣಾಧಿಕಾರಿ ಮುತ್ತುರಾಜ್‌ಗೆ ದೂರು ನೀಡಿದ್ದಾರೆ…

ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಮುತ್ತುರಾಜ್, ಶೈಲಜಾ ಹಾಗೂ ಮಕ್ಕಳಿಗೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ಜೋಡಿಯ ಬಾಳಿನಲ್ಲಿ ವಿಧಿ ಕ್ರೂರಿಯಾಗಿದ್ದಾನೆ. ಗಂಡನನ್ನು ಕಳೆದುಕೊಂಡ ಶೈಲಜಾಳಿಗೆ ನೆರವು ನೀಡಬೇಕಿದ್ದ ಆಕೆಯ ಕುಟುಂಬದವರೇ ಆಕೆಯನ್ನು ಬೀದಿಗೆ ತಳ್ಳಿರುವುದು ವಿಪರ್ಯಾಸವೆ ಸರಿ…

LEAVE A REPLY

Please enter your comment!
Please enter your name here