Home Cinema ಗಂಡಸ್ತನ ಸಾಬೀತು ಮಾಡಲು ಕತ್ತಲಾಗಬೇಕಿಲ್ಲ.. ಸುದೀಪ ಗುಡುಗು..! ಯೋಗ್ಯತೆ ಇಲ್ಲದವರ ಜೊತೆ ಹೋರಾಡಲ್ಲ..ಕಿಚ್ಚನ ಧಿಕ್ಕಾರದ ಕೂಗು..!

ಗಂಡಸ್ತನ ಸಾಬೀತು ಮಾಡಲು ಕತ್ತಲಾಗಬೇಕಿಲ್ಲ.. ಸುದೀಪ ಗುಡುಗು..! ಯೋಗ್ಯತೆ ಇಲ್ಲದವರ ಜೊತೆ ಹೋರಾಡಲ್ಲ..ಕಿಚ್ಚನ ಧಿಕ್ಕಾರದ ಕೂಗು..!

2865
0
SHARE

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಯಾರಿಗೋ ತಮ್ಮ ಖಡಕ್ ಮಾತುಗಳಿಂದಲೇ ಬಿಸಿ ಮುಟ್ಟಿಸಿದ್ದಾರೆ. ಆದರೆ ಆ ಬಿಸಿ ಯಾರಿಗೆ ತಟ್ಟಿದೆ ಎನ್ನುವ ಇಫಾರ್‌ಮೆಷನ್ ಮಾತ್ರ ಸದ್ಯಕ್ಕಿಲ್ಲ. ಕಿಚ್ಚನ ಬಾಣದ ಗುರಿ ಯಾರ ತಲೆಗಿದೆ ಎನ್ನುವ ಕ್ಲಾರಿಟಿಯೂ ಇಲ್ಲ. ಆದರೆ ಗಾಂಧಿನಗರದಲ್ಲಿ ಮಾತ್ರ ಸುದೀಪ್ ಮಾಡಿರೋ ಈ ಒಂದು ಆಶ್ಚರ್ಯಕರ ಟ್ವೀಟ್ ಪಾದರಸದಂತೆ ಓಡಾಡ್ತಿದೆ.

ಈ ಟ್ವೀಟ್‌ನ ಒಳಾರ್ಥವೇನು ಅಂತ ಇಡೀ ಸಿನಿಮಾರಂಗವೇ ತಲೆಕೆಡಿಸಿಕೊಂಡುಬಿಟ್ಟಿದೆ. ಅಷ್ಟಕ್ಕೂ ಸುದೀಪ್ ಮಾಡಿದ ಆ ಬಿಸಿಬಿಸಿ ಟ್ವೀಟ್‌ನ ಅಸಲಿ ವಿಚಾರವನ್ನ ನಾವ್ ಹೇಳ್ತಿವಿ ಕೇಳಿ. ಸ್ಯಾಂಡಲ್‌ವುಡ್‌ನಲ್ಲಿ ಸುದೀಪ್ ಮಾತುಗಳನ್ನ ಫಾಲೋ ಮಾಡೋ ಒಂದು ದೊಡ್ಡ ವರ್ಗವೇ ಇದೆ. ಕಿಚ್ಚನ ಆಲೋಚನೆಗಳೇ ಅಷ್ಟು ಪವರ್‌ಫುಲ್.

ಈ ಕನ್ನಡದ ಪೈಲ್ವಾನ ಒಮ್ಮೆ ಮಾತನಾಡಿದ್ರೆ ಅದಕ್ಕೆ ಸಾವಿರಾರು ಅರ್ಥಗಳಿರುತ್ವೆ. ಅಂತದ್ರಲ್ಲಿ ನಿನ್ನೆ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಕಿಚ್ಚ ಬರೆದ ಕೆಲವು ಸಾಲುಗಳು ಈಗ ಭಾರೀ ಸುದ್ಧಿ ಮಾಡ್ತಿದೆ. ಇದು ಸುದೀಪ್ ಮನಸ್ಸಿನ ಪ್ರತಿಬಿಂಬ ಎನ್ನಬಹುದೇನೂ..? ಆದರೆ ಈ ಮೂಲಕ ಸುದೀಪ್ ಯಾರಿಗೋ ಸ್ಪೆಷಲ್ಲಾಗಿ ಟಾಂಗ್ ಕೊಟ್ಟಿದ್ದರಾ ಎನ್ನುವ ಊಹೆಗಳು ಶುರುವಾಗಿಬಿಟ್ಟಿದೆ. ಅಸಲಿಗೆ ಇವು ಯಾರೋ ಬರೆದ ಸಾಲುಗಳು. ಇಷ್ಟುದಿನ ತಮ್ಮ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಬಗ್ಗೆಯೇ ಟ್ವೀಟ್‌ಗಳನ್ನ ಮಾಡೋದ್ರಲ್ಲಿ ಬಿಜಿಯಾಗಿದ್ದ ಸುದೀಪ್ ಈಗ ಒಂದು ಫಿಲಾಸಫಿ ಹಿಂದೆ ಬಿದ್ದಂತಿದೆ. ಈ ಸಾಲುಗಳನ್ನ ಸುದೀಪ್ ಎಲ್ಲೋ ಓದಿದ್ರಂತೆ. ಒಬ್ಬ ಗಂಡಸು ಅಂತ ಪ್ರೂವ್ ಮಾಡೋಕೆ ಆಲ್ಕೋಹಾಲ್ ತೆಗೋಬೇಕಿಲ್ಲ. ಕತ್ತಲಾಗೋಕೆ ಕಾಯಬೇಕಿಲ್ಲ ಇವೇ ರಿಯಲ್ ಮ್ಯಾನ್ ಲಕ್ಷಣಗಳು ಅಂತ ಬಹಳ ಕಾವ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ ಕಿಚ್ಚ ಸುದೀಪ್.

ತಮ್ಮ ಶಾಡೋ ರೀತಿಯ ಫೋಟೊವೊಂದನ್ನ ಪೋಸ್ಟ್ ಮಾಡಿರುವ ಸುದೀಪ ಇನ್ನೊಂದು ಖಡಕ್ ಮೇಸೆಜ್ ಕೊಟ್ಟಿದಾರೆ. ಇದು ಮೇಸೆಜ್ ಅನ್ನೋದಕ್ಕಿಂತ ವಾರ್ನಿಂಗ್ ರೀತಿ ಕೇಳಿಸ್ತಿದೆ. ನಾನು ಯಾರಿಗೋ ಏನನ್ನೋ ಪ್ರೂವ್ ಮಾಡೋಕೆ ಎಂದೂ ಕೂಡ ಫೈಟ್ ಮಾಡಲ್ಲ. ಬದಲಾಗಿ ನನ್ನ ಎದುರಾಳಿಯೂ ಅಷ್ಟೇ ಸ್ಟ್ರಾಂಗ್ ಆಗಿರ್‌ಬೇಕು. ನನ್ನಷ್ಟೇ ಸಾರ್ಮಥ್ಯ ಹೊಂದಿರಬೇಕು.ಹಾಗಾದ್ರೆ ಮಾತ್ರ ಫೈಟ್ ಮಾಡೋಕೆ ಸಾಧ್ಯ ಅಂತ ಇನ್‌ಡೈರೆಕ್ಟ್ ಆಗಿ ಗೂಗ್ಲಿ ಎಸೆದಿದ್ದಾರೆ ಮಿಸ್ಟರ್.ಮಾಣಿಕ್ಯ. ಕಿಚ್ಚನ ಈ ಸಡನ್ ಕಿಕ್ ಎಲ್ಲರಿಗೂ ಲೈಟಾಗಿ ಶಾಕ್ ಕೊಟ್ಟಿದೆ. ಸಾಮಾನ್ಯವಾಗಿ ಈ ರೀತಿಯ ಫಿಲಾಸಫಿಕಲ್ ಟ್ವೀಟ್‌ಗಳನ್ನ ಸುದೀಪ್ ಮಾಡಿದ ಉದಾಹರಣೆಗಳಿಲ್ಲ. ಆದರೆ ಏಕಾಏಕಿ ಈ ಟ್ವೀಟ್ ಮಾಡಿರೋದನ್ನ ನೋಡಿದ್ರೆ ಕಿಚ್ಚನ ಮೂರನೇ ಕಣ್ಣು ಯಾರಮೇಲೊ ಇದೆ ಅಂತಾನೇ ಅರ್ಥ ಎನ್ನಬಹುದು. ಈ ಬಗ್ಗೆ ಸುದೀಪ್ ಮಾತ್ರ ಮೌನ ವಹಿಸಿದ್ದಾರೆ.

ಫುಲ್‌ಕನ್ ಫ್ಯೂಶನ್‌ನಲ್ಲಿರೋ ಅಭಿಮಾನಿಗಳು ಯಾವ ವಿಷಯಕೋಸ್ಕರ ಸುದೀಪ್ ಈ ಟ್ವೀಟ್ ಮಾಡಿದ್ರು ಎನ್ನುವ ಗೊಂದಲದಲ್ಲಿ ಮುಳುಗಿಹೋಗಿದ್ದಾರೆ. ಸುದೀಪ್ ದೃಷ್ಟಿ ಯಾರ ಮೇಲಿದೆ ಎನ್ನುವುದಂತೂ ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆ. ಕೆಲವರಂತೂ ಇದು ಯಾವ ಸ್ಟಾರ್‌ಗೂ ಹೇಳಿದ ಮಾತಲ್ಲ, ಕಿಚ್ಚನಿಗೆ ಈ ಸಾಲುಗಳು ಇಷ್ಟವಾಗಿದೆಯಷ್ಟೇ ಅಂತ ಸುದೀಪ್ಪರ ಬ್ಯಾಟಿಂಗ್ ಮಾಡಿದ್ದಾರೆ. ಟ್ವೀಟ್‌ನ ಕಡೇಭಾಗದಲ್ಲಿ ಪೈಲ್ವಾನ್ ಎನ್ನುವ ಪದವೂ ಇರೋಕಾರಣಕ್ಕೆ ಇಂತಹ ಸಾಲುಗಳು ಸಿನಿಮಾದಲ್ಲಿರುತ್ತೆ ಎನ್ನುವ ಸಂದೇಶವನ್ನ ಸುದೀಪ್ ಹೇಳಿದ್ದರಾ ಅದೂ ಗೊತ್ತಿಲ್ಲ. ಆದರೆ ಕಿಚ್ಚನ ಈ ಸಾಲುಗಳಲ್ಲಿ ಒಂದು ಗಾಢವಾದ ಮಿನಿಂಗ್ ಇದೆ. ಯಾವ ಸಂದರ್ಭಕ್ಕಾದ್ರೂ ಈ ಲೈನ್‌ಗಳು ಅನ್ವಯವಾಗುತ್ವೆ.

ಹಾಗಾಗಿಯೇ ಸುದೀಪ್ ಯಾರನ್ನೋ ಟಾರ್ಗೆಟ್ ಮಾಡಿ ಈ ಟ್ವೀಟ್ ಮಾಡಿದ್ದಾರೆ ಅಂತ ಹೇಳೋದು ಸ್ವಲ್ಪ ಕಷ್ಟ. ಸ್ಟಾರ್‌ವಾರ್ ಹಾಗೂ ನಂಬರ್ ಗೇಮ್‌ಗಳಿಂದ ದೂರವಿದ್ದು, ತಾವಾಯ್ತು ತಮ್ಮ ಕೆಲಸವಾಯ್ತು ಎನ್ನುವ ಪ್ರಿನ್ಸಿಪಲ್ ಇಟ್ಕೊಡಿರೋ ಕಿಚ್ಚನ ಕಣ್ಣಲ್ಲಿ ಯಾರಿದ್ದಾರೆ ಅನ್ನೋದೆ ಸದ್ಯದ ಬಿಗ್ ಕ್ವಚ್ಚೆನ್

LEAVE A REPLY

Please enter your comment!
Please enter your name here